ಮಾವಿನ ಕಾಯಿ - ಚಿಕ್ಕದು-೧ ಬೇಯಿಸಿದ್ದು
ಹಸಿಮೆಣಸಿನ ಕಾಯಿ-೨
ಎಣ್ಣೆ ೧ ಚಮಚ
ಕರಿಬೇವು- ೪-೫ ಎಲೆ
ಇಂಗು
ಉಪ್ಪು
೧/೨ ಚಮಚ ಸಕ್ಕರೆ
ಸಾಸಿವೆ ೧ ಚಮಚ
ಬೇಯಿಸಿದ ಮಾವಿನಕಾಯಿಯನ್ನು ಹಿಸುಕಿ. ಓಟೆಯನ್ನು, ಸಿಪ್ಪೆಯನ್ನು ಪ್ರತ್ಯೇಕಿಸಿ. ರಸವನ್ನು ತೆಗದಿಡಿ.
ಒಗ್ಗರಣೆ: ಎಣ್ಣೆಗೆ ಸಾಸಿವೆ+ ಹಸಿಮೆಣಸು+ ಕರಿಬೇವು+ ಇಂಗು ಹಾಕಿ ಒಗ್ಗರಣೆ ತಯಾರಿಸಿ. ಒಗ್ಗರಣೆಯನ್ನು ಮಾವಿನ ಕಾಯಿ ರಸಕ್ಕೆ ಹಾಕಿ. ಇದಕ್ಕೆ ಉಪ್ಪು ಸಕ್ಕರೆ ಸೇರಿಸಿ.
ಬೇಕೆನಿಸಿದರೆ ಇದಕ್ಕೆ ತೆಂಗಿನ ಹಾಲನ್ನು ಸೇರಿಸಿ.
ಮಲೆನಾಡಿನಲ್ಲಿ ಊಟದ ಕೊನೆಯ ಪದಾರ್ಥಗಳ ಸಾಲಿನಲ್ಲಿ ಅಪ್ಪೆಹುಳಿ ಇಲ್ಲಾಂದ್ರೆ....!
- ಜ್ವರದಿಂದ ಊಟ ಸೇರದೆ ಇದ್ದಾಗ ಊಟಕ್ಕೆ ಒಂದು ರುಚಿಯನ್ನು ಕೊಡುವ ಶಕ್ತಿ ಇದಕ್ಕಿದೆ.
- ಯಾವದಾದ್ರು ಸಮಾರಂಭಗಳಿಗೆ ಹೋಗಿ ಹೊಟ್ಟೆ ಭರ್ತಿ ಆಗಿ... ತೊಂದರೆಯಲ್ಲಿ ಇದ್ದಾಗ ಈ ಅಪ್ಪೆಹುಳಿಯನ್ನು ಕುಡಿಯಿರಿ. ಜೀರ್ಣ ಸರಾಗ....
- ಊಟಕ್ಕೊಂದು ಸಂಪೂರ್ಣತೆ ನೀಡುವ ಸಾಮರ್ಥ್ಯ ಇದಕ್ಕಿದೆ.
ಅಪ್ಪೆ ಹುಳಿಯಾದರೂ... ಉದರಕ್ಕೆ ಸಿಹಿಯೇ...
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ