29 ಡಿಸೆಂಬರ್ 2011

ಮರಗೆಣಸಿನ ಪಲ್ಯ- ಭಾಜಿ

ಮರಗೆಣಸು- ಬೇಯಿಸಿದ್ದು-೨ ಹಿಸುಕಿಡಿ.
ಹಸಿಮೆಣಸು-೨ ಹೆಚ್ಚಿದ್ದು
ಈರುಳ್ಳಿ-೨ ಹೆಚ್ಚಿಡಿ.
ಅರಿಸಿನ
ಸಾಸಿವೆ-೧ ಚಮಚ
ಎಣ್ಣೆ-೨ ಚಮಚ
ಉಪ್ಪು
ತೆಂಗಿನ ತುರಿ- ೧/೪ ಬಟ್ಟಲು
ಕರಿಬೇವು- ೫-೬ ಎಲೆಗಳು
ನಿಂಬೆ ರಸ -1ಚಮಚ






ಮರಗೆಣಸಿನ ಗಟ್ಟಿ ಸಿಪ್ಪೆಯನ್ನು ತೆಗೆದು. ಬೇಯಿಸಿ. ಚೆನ್ನಾಗಿ ಬೆಂದ ಗೆಣಸನ್ನು ಹಿಸುಕಿಡಿ.
ಬಾಣಲೆಗೆ ಎಣ್ಣೆ ಸಾಸಿವೆ, ಈರುಳ್ಳಿ ಹಸಿಮೆಣಸು ಕರಿಬೇವನ್ನು ಹಾಕಿ. ಈರುಳ್ಳಿ ಬೆಂದ ಮೇಲೆ ಹಿಸುಕಿಟ್ಟ ಗೆಣಸು+ ಉಪ್ಪು ಸೇರಿಸಿ.
ಪಲ್ಯವಾದರೆ ನೀರಿನ ಅಗತ್ಯ ಇಲ್ಲ. ರೊಟ್ಟಿ ಚಪಾತಿಗೆ ಭಾಜಿ ಮಾಡುವದಾದರೆ ೧/೨ ಬಟ್ಟಲು ನೀರನ್ನು ಸೇರಿಸಿ.
ಕೊನೆಯಲ್ಲಿ ತೆಂಗಿನ  ತುರಿ+ ನಿಂಬೆ ರಸ ಸೇರಿಸಿ.

ಸ್ವಾದ.... ಅಡುಗೆ ಮನೆಯಲ್ಲಿ....



ಚಂದ್ರಿಕಾ ಹೆಗಡೆ

28 ಡಿಸೆಂಬರ್ 2011

ರೊಟ್ಟಿ -೧

ಮೈದಾ- ೧ ಕಪ್
ಚಿರೋಟಿ ರವ- ೧/೨ ಕಪ್
ಅಕ್ಕಿ ಹಿಟ್ಟು- ೧/೪ ಕಪ್
ಹಸಿಮೆಣಸು-೨
ಕರಿಬೇವು- ೫-೬ ಎಲೆಗಳು
ಈರುಳ್ಳಿ ಹೆಚ್ಚಿದ್ದು ೧/೨ ಕಪ್
ಎಣ್ಣೆ ಬೇಯಿಸಲು
ಉಪ್ಪು
ಮಜ್ಜಿಗೆ ೧/೨ ಕಪ್

ಎಲ್ಲ ಹಿಟ್ಟು + ರವ+ ಹಸಿಮೆಣಸು- ಕರಿಬೇವನ್ನು ಹೆಚ್ಚಿ  + ಉಪ್ಪು+ ಈರುಳ್ಳಿ  + ಮಜ್ಜಿಗೆ ಸೇರಿಸಿ ಕಲಸಿ. ಇನ್ನು ನೀರಿನ ಅಂಶ ಬೇಕೆನಿಸಿದರೆ ನೀರನ್ನು ಸೇರಿಸಿ. ಉಂಡೆ ಮಾಡಿ  ಕೈಗೆ ಎಣ್ಣೆ ಹಚ್ಚಿ  ರೊಟ್ಟಿ ತಟ್ಟಿ. ತವಾದ ಮೇಲೆ ಹಾಕಿ ಎನ್ನೆಯೊಂದಿಗೆ ಬೇಯಿಸಿ.


ರೊಟ್ಟಿ...ತಟ್ಟಿ....
ರುಚಿ ... ಎನಿಸುತ್ತೆ... ನಾಲಗೆ  ತಟ್ಟಿ...ತಟ್ಟಿ....!


ಚಂದ್ರಿಕಾ  ಹೆಗಡೆ 

21 ಡಿಸೆಂಬರ್ 2011

ಸೀಮೆ ಬದನೆ ಕಾಯಿ ಪಲ್ಯ

ಸೀಮೆ ಬದನೆ ಕಾಯಿ ಹೋಳುಗಳು-೧ ಕಪ್
ಈರುಳ್ಳಿ- ೧/೨ ಕಪ್ ಹೋಳುಗಳು
ಸಾಂಬಾರ್ ಪುಡಿ- ೨ ಚಮಚ
ಉಪ್ಪು
ಅರಿಸಿನ
ಕರಿಬೇವು
ಎಣ್ಣೆ ೨ ಚಮಚ


ಸೀಮೆ ಬದನೆ ಕಾಯಿ ಸಿಪ್ಪೆ ತೆಗೆದು ಹೋಳುಗಳನ್ನಾಗಿ ಮಾಡಿ.
 ಪಾನ್ ಗೆ ಎಣ್ಣೆ ಹಾಕಿ ಬಿಸಿಯಾಗುವಾಗ  ಸೀಮೆ ಬದನೆ ಹೋಳುಗಳು ಹೆಚ್ಚಿಟ್ಟ ಈರುಳ್ಳಿ ಹಾಕಿ ಬಾಡಿಸಿ.
೧/೪ ಕಪ್ ನೀರಿನ್ನು ಸೇರಿಸಿ ಚೆನ್ನಾಗಿ ಬೇಯಿಸಿ.
೧೦ ನಿಮಿಷ ಕಳೆದ ಮೇಲೆ, ಅರಿಸಿನ ಸಾಂಬಾರ್ ಪುಡಿ, ಕರಿಬೇವು, ಉಪ್ಪು ಸೇರಿಸಿ ನೀರು ಆರುವ ವರೆಗೂ ಇಡಿ.
ಚಪಾತಿ/ ಅನ್ನದ ಜೊತೆ..... ಹಿತ,,,,,,


ಚಂದ್ರಿಕಾ ಹೆಗಡೆ

17 ಡಿಸೆಂಬರ್ 2011

ಬಾದಾಮ್ ಬರ್ಫಿ

ಬಾದಾಮ್ - ೧ ಬಟ್ಟಲು
ಸಕ್ಕರೆ-೨ ಬಟ್ಟಲು
ಏಲಕ್ಕಿ-೫
ಹಾಲು -೧ ಬಟ್ಟಲು
ತುಪ್ಪ- ೩ ಚಮಚ



ಬಾದಾಮ್ ಅನ್ನು  ಹಿಂದಿನ ರಾತ್ರಿಯೇ  ನೆನಸಿಡಿ. ಮರುದಿನ ಸಿಪ್ಪೆಯನ್ನು  ತೆಗೆಯಲು ಸಾಧ್ಯವಾಗುವದು.
ಹಾಲಿನೊಂದಿಗೆ ಸಿಪ್ಪೆ ತೆಗೆದ ಬಾದಾಮ್ ಅನ್ನು ನುಣ್ಣನೆ ರುಬ್ಬಿ.
ಸಕ್ಕರೆಯೊಂದಿಗೆ ಬಾದಾಮ್ ಮಿಶ್ರಣ  ವನ್ನು  ದಪ್ಪ ತಳದ  ಬಾಣಲೆಯಲ್ಲಿ ಹಾಕಿ.
ಇದನ್ನು ಒಲೆಯ ಮೇಲಿಟ್ಟು  ಕಾಯಿಸಿ.
೨೦- ನಿಮಿಷ  ಸಣ್ಣ ಉರಿಯಲ್ಲಿ ಚೆನ್ನಾಗಿ ಗೊಟಾಯಿಸಿ.
ಸ್ವಲ್ಪ ತುಪ್ಪ ಹಾಕಿ.
ಬಾಣಲೆಯಿಂದ ಬರ್ಫಿ ಮಿಶ್ರಣ ಬಿಡುತ್ತಿದ್ದಾಗ  ತುಪ್ಪ ಸವರಿದ ಪ್ಲೇಟ್ ಗೆ  ಹಾಕಿ.
ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ.
chandrika hegde 

16 ಡಿಸೆಂಬರ್ 2011

ಪಾಲಕ್ ಪೀಸ್ ಮಸಾಲ...1

ಪಾಲಕ್- ೪ ಕಟ್ಟು- ಸ್ವಚ್ಚ ಮಾಡಿದ್ದು
ಪೀಸ್  ( ಹಸಿ ಬಟಾಣಿ)- ೧ ಬಟ್ಟಲು( ಬೇಯಿಸಿದ್ದು )
ಈರುಳ್ಳಿ-೨ ಹೆಚ್ಚಿಡಿ.
ಹಸಿಮೆಣಸಿನ ಕಾಯಿ-೨
ಬೆಳ್ಳುಳ್ಳಿ-೫-೬ ಎಸಳು ಸಣ್ಣದಾಗಿ ಹೆಚ್ಚಿ.
ಗರಂ ಮಸಾಲ- ೨ ಚಮಚ
ಸಾಸಿವೆ-೧ ಚಮಚ
ಎಣ್ಣೆ-೨ ಚಮಚ
ಉಪ್ಪು
೧/೨ ಚಮಚ ಸಕ್ಕರೆ
ಅರಿಸಿನ
ಕರಿಬೇವು
ನಿಂಬೆರಸ - ೨ ಚಮಚ


ವಿಧಾನ:

ಪಾಲಕ್ ನೀರಿಲ್ಲದೆ ಬೇಯಿಸಿ. ರುಬ್ಬಿ.

ಬಟಾಣಿಯನ್ನು ಸ್ವಲ್ಪ ನೀರಿನಲ್ಲಿ ೧೦ ನಿಮಿಷ ಬೇಯಿಸಿ.

ಬಾಣಲೆಗೆ  ಎಣ್ಣೆ, ಸಾಸಿವೆ ಹಸಿಮೆಣಸಿನ ಕಾಯಿ, ಅರಿಸಿನ , ಹೆಚ್ಚಿದ  ಈರುಳ್ಳಿ, ಬೆಳ್ಳುಳ್ಳಿ , ಕರಿಬೇವು...ಹಾಕಿ, ಚೆನ್ನಾಗಿ ಹುರಿಯಿರಿ.
ಇದಕ್ಕೆ ಗರಂ ಮಸಾಲ ಹಾಕಿ ಮತ್ತೆ ಮಿಕ್ಸ್ ಮಾಡಿ, ಈಗ ರುಬ್ಬಿದ  ಪಾಲಕ್ , ಬಟಾಣಿ , ಉಪ್ಪು , ಸಕ್ಕರೆ ಹಾಕಿ, ೫-೬ ನಿಮಿಷ ಕುದಿಸಿ.
ಕೊನೆಯಲ್ಲಿ ೨ ಚಮಚ ನಿಂಬೆರಸ ಸೇರಿಸಿ.


ಚಪಾತಿ/ ರೊಟ್ಟಿ/ ದೋಸೆ/ ಅನ್ನಕ್ಕೂ ಸೈ


ಚಂದ್ರಿಕಾ ಹೆಗಡೆ 

15 ಡಿಸೆಂಬರ್ 2011

ಮೆಂತೆ ಸೊಪ್ಪಿನ ಇಡ್ಲಿ

ಉದ್ದಿನ ಬೇಳೆ (ನೆನಸಿದ್ದು)- ೧ ಕಪ್
ಅಕ್ಕಿ ತರಿ- ೨ ಕಪ್
ಮೆಂತೆ ಸೊಪ್ಪು-೨ ಕಟ್ಟು ( ಸ್ವಚ್ಚಗೊಳಿಸಿ ಸಣ್ಣಗೆ ಹೆಚ್ಚಿ)
ಉಪ್ಪು
ಹಸಿಮೆಣಸು-೨ ಹೆಚ್ಚಿದ್ದು
ಕರಿಬೇವು-೫-೬ ಎಲೆ ಗಳು

ನೆನಸಿದ ಉದ್ದಿನ ಬೇಳೆಗೆ( ಬೆಳ್ಳಿಗ್ಗೆ ಇಡ್ಲಿ ಮಾಡಬೇಕಾದರೆ- ಉದ್ದಿನ ಬೇಳೆಯನ್ನು ದಿನ ೪-೫ ಗಂಟೆ ನೆನಸಿ ಹಿಂದಿನ ರಾತ್ರಿಯೇ ರುಬ್ಬಿಡಿ) ಅಕ್ಕಿ ತರಿ ಉಪ್ಪು ಹೆಚ್ಚಿದ ಮೆಂತೆ   ಸೊಪ್ಪು, ಹಸಿಮೆಣಸು, ಕರಿಬೇವು, ಉಪ್ಪು ಸೇರಿಸಿ ಇಡ್ಲಿ ಮಾಡಿ.

ಚಟ್ನಿ ಜೊತೆ ಇಡ್ಲಿಯೋ....? ಇಡ್ಲಿ ಜೊತೆ ಚಟ್ನಿ ಯೋ.....? ನಿಮ್ಮ ಆಯ್ಕೆ....


ಚಂದ್ರಿಕಾ ಹೆಗಡೆ

ಅಕ್ಕಿ ರೊಟ್ಟಿ

ಅಕ್ಕಿ ಹಿಟ್ಟು- ೨ ಕಪ್
ಉಪ್ಪು ರುಚಿಗೆ ತಕ್ಕಸ್ಟು
ಬಿಸಿ ನೀರು

ಅಕ್ಕಿ ಹಿಟ್ಟನ್ನು ಬಿಸಿ ಬಿಸಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಲಟ್ಟಿಸಿ.
ಲಟ್ಟಿಸುವಾಗ ಗೋದಿ/ ಅಕ್ಕಿ ಹಿಟ್ಟಿನಲ್ಲಿ ಲಟ್ಟಿಸಿ.
ನೆನಪಿರಲಿ : ಚೆನ್ನಾಗಿ ನಾದಿ ನಾದಿ  ರೊಟ್ಟಿ ಮಾಡಿ.
ಗಟ್ಟಿ ಚಟ್ನಿ ಜೊತ್ಯಾಗ್ ಅಕ್ಕಿ ರೊಟ್ಟಿರಿ.. ಸವೀರೀ....





14 ಡಿಸೆಂಬರ್ 2011

ಕ್ಯಾರೆಟ್ ಮಿಲ್ಕ್ ಶೇಕ್


ಕ್ಯಾರೆಟ್-೫
ಸಕ್ಕರೆ-೫ ಚಮಚ
ಹಾಲು - ೪ ೧/೨ ಲೋಟ ( ೫ ಗ್ಲಾಸ್  ಮಾಡಲು)


ಕ್ಯಾರೆಟ್ ಸ್ವಚ್ಚಮಾಡಿ . ಸಣ್ಣಗೆ ಕತ್ತರಿಸಿ ಸಕ್ಕರೆಯೊಂದಿಗೆ ೧/೨ ಲೋಟ ಹಾಲು ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ಏಲಕ್ಕಿ ಸೇರಿಸಬಹುದು.  ಆಮೇಲೆ ಉಳಿದ ಹಾಲನ್ನು ಸೇರಿಸಿ.


ಅಹ..ಆಹಾ....

ಚಂದ್ರಿಕಾ ಹೆಗಡೆ

ಕೊರ್ನ್ ಅವಲಕ್ಕಿ.

ಗಟ್ಟಿ ಅವಲಕ್ಕಿ- ೨ ಕಪ್
ಕೊರ್ನ್- ೧/೨ ಬಟ್ಟಲು
ಹಸಿಮೆಣಸು-೨-೩
ಈರುಳ್ಳಿ-೨
ಕರಿಬೇವು ೬-೭ ಎಲೆಗಳು
ಅರಿಸಿನ
ಉಪ್ಪು
ಸಕ್ಕರೆ ೧/೨ ಚಮಚ
 ಎಣ್ಣೆ-೩ ಚಮಚ
ಒಗ್ಗರಣೆಗೆ ೧ ಚಮಚ ಸಾಸಿವೆ
 ತೆಂಗಿನ ತುರಿ- ೧/೪ ಬಟ್ಟಲು
ನಿಂಬೆರಸ- ೨ ಚಮಚ
ವಿಧಾನ :

ಗಟ್ಟಿ ಅವಲಕ್ಕಿಯನ್ನು ೬ ನಿಮಿಷ ನೆನಸಿ-  ಹಿಂಡಿ ಇಡಿ.- ೮-೯ ನಿಮಿಷ ಹಾಗೆ ಇಡಿ. ಚೆನ್ನಾಗಿ ಮೆದುವಾಗಲಿ.
ಹಾಗಂತ ತುಂಬಾ ಮೆತ್ತಗಾದರೆ ಒಗ್ಗರಣೆ   ಹಾಕುವಾಗ  ಚೆನ್ನಾಗಿ ಹೊಂದಿಕೊಳ್ಳುವದಿಲ್ಲ.
ಈರುಳ್ಳಿ& ಹಸಿಮೆಣಸು ಹೆಚ್ಚಿ .
 ಎಣ್ಣೆ& ಸಾಸಿವೆ& ಹಸಿಮೆಣಸು ಹಾಕಿ ಒಗ್ಗರಣೆ ಸಿದ್ಧ   ಮಾಡಿ.
ಇದಕ್ಕೆ ಕೊರ್ನ್ ಹಾಕಿ೩ ನಿಮಿಷ ಬೇಯಿಸಿ. ಈರುಳ್ಳಿ ಹಾಕಿ. ಕರಿಬೇವು& ಅರಿಸಿನ& ಸ್ವಲ್ಪ ಉಪ್ಪು   ಸೇರಿಸಿ.
ಚೆನ್ನಾಗಿ ಬೆಂದ ಮೇಲೆ ಅವಲಕ್ಕಿ & ಮತ್ತೆ ಉಪ್ಪು ರುಚಿಗೆ ತಕ್ಕಸ್ಟು ಸೇರಿಸಿ. ೮ ನಿಮಿಷ  ಸಣ್ಣ ಉರಿಯಲ್ಲೇ ಇಡಿ. ನಿಂಬೆರಸ& ತೆಂಗಿನ ತುರಿ ಸೇರಿಸಿ.
ಈ ಮೊದಲು  ಒಗ್ಗರಣೆಗೆ ಸ್ವಲ್ಪ ಉಪ್ಪನ್ನು ಹಾಕಿ ಎಂದಿರುವದಕ್ಕೆ ಕಾರಣ:   ಅವಲಕ್ಕಿ ಹಾಕಿದ ಮೇಲೆ ಉಪ್ಪನ್ನು ಹಾಕಿದರೆ ಕೊರ್ನ್ ಉಪ್ಪು ಚೆನ್ನಾಗಿ ಹೊಂದುವದಿಲ್ಲ. ಅದಕ್ಕೆ ಒಗ್ಗರಣೆಗೆ ತಕ್ಕಸ್ಟು ಉಪ್ಪನ್ನು ಮೊದಲು ಹಾಕಿ. ನಂತರ ಅವಲಕ್ಕಿ ಗೆ ತಕ್ಕಸ್ಟು ಸೇರಿಸಿ.


ಲಕ್ಕಿ..... ನೀ.... ಅವಲಕ್ಕಿ.......


ಚಂದ್ರಿಕಾ ಹೆಗಡೆ



ರಾಗಿ ಇಡ್ಲಿ

ರಾಗಿ - ೧ ಕಪ್
ಉದ್ದಿನ ಬೇಳೆ-೧ ಕಪ್
ಇಡ್ಲಿ ರವ- ೨ ೧/೨ ಕಪ್
ಉಪ್ಪು.

ರಾಗಿ& ಉದ್ದಿನ ಬೇಳೆಯನ್ನು ೪-೫ ಗಂಟೆ ನೆನಸಿಡಿ. (ಬೇರೆ ಬೇರೆಯಾಗಿ. )

ಎರಡನ್ನು ರಾತ್ರಿಯೇ ಬೇರೆ ಬೇರೆಯಾಗಿ ರುಬ್ಬಿ. ಆಮೇಲೆ ಸೇರಿಸಿ.
ಮರುದಿನ ಇಡ್ಲಿ  ಮಾಡುವಾಗ ರವೆ + ಉಪ್ಪು ಸೇರಿಸಿ.
ಇಡ್ಲಿ ತಟ್ಟೆಯಲ್ಲಿ ಇಡ್ಲಿ ಮಾಡಿ.
ಆರೋಗ್ಯಕರ ಅಡುಗೆ.....ಅದೇ ರಾಗಿ ಇಡ್ಲಿ....!!!
ಮುಂದೆ .....? ಸವಿಯೋದೆ ಕಣ್ರೀ.....


ಚಂದ್ರಿಕಾ ಹೆಗಡೆ

10 ಡಿಸೆಂಬರ್ 2011

ಶಾವಿಗೆ + ರವ ಮಿಕ್ಸ್ ಉಪ್ಪಿಟ್ಟು

ಶಾವಿಗೆ- ೧ ಬಟ್ಟಲು
ರವ- ೧ ಬಟ್ಟಲು
ಈರುಳ್ಳಿ-೨
ಹಸಿಮೆಣಸು-೨
ಕರಿಬೇವು 5 -೭ ಎಲೆ
ಎಣ್ಣೆ -4  ಚಮಚ
ಸಾಸಿವೆ.
ಉಪ್ಪು
ನಿಂಬೆರಸ -೧ ಚಮಚ
ತೆಂಗಿನ ತುರಿ -೧/೪ ಬಟ್ಟಲು


ಶಾವಿಗೆಯನ್ನು ೧ ಚಮಚ ಎಣ್ಣೆಯಲ್ಲಿ ಕೆಂಪಗೆ ಹುರಿಯಿರಿ. ರವೆಯನ್ನು ಎಣ್ಣೆ ಇಲ್ಲದೆ ಹುರಿಯಿರಿ.

ಜೊತೆಯಲ್ಲಿ ಒಂದು ಪಾತ್ರೆಯಲ್ಲಿ ನೀರನ್ನು    ಕುದಿಸಿಡಿ.

ಎಣ್ಣೆ+ ಸಾಸಿವೆ+ ಹಸಿಮೆಣಸು+ ಹೆಚ್ಚಿದ ಈರುಳ್ಳಿ + ಕರಿಬೇವು ಹುರಿಯಿರಿ

೫ ಬಟ್ಟಲು ನೀರನ್ನು ಹಾಕಿ ಉಪ್ಪು ಸೇರಿಸಿ. ಆ ನೀರಿನ ರುಚಿ ನೋಡಿದರೆ ಎಷ್ಟು ಉಪ್ಪು ಬೇಕಾಗಬಹುದು ತಿಳಿಯುವದು.

ಇದಕ್ಕೆ ಶಾವಿಗೆ+ ರವೆಯನ್ನು ಹಾಕಿ. ಕಲಕಿ.
ಸಣ್ಣ ಉರಿಯಲ್ಲಿ ೧೦ ನಿಮಿಷ ಇಡಿ.

ಕೊನೆಯಲ್ಲಿ ನಿಂಬೆ ರಸ+ ತೆಂಗಿನ ತುರಿ ಸೇರಿಸಿ.


ಆಸ್ವಾದಿಸಿ....


ಚಂದ್ರಿಕಾ ಹೆಗಡೆ  

09 ಡಿಸೆಂಬರ್ 2011

ಸಖತ್ ಚಕ್ಕುಲಿ

ಅಕ್ಕಿ ಹಿಟ್ಟು- ೨ ಬಟ್ಟಲು
ಹುರಿಗಡಲೆ ಹಿಟ್ಟು- ೧ ಕಪ್
ಜೀರಿಗೆ ೧ ೧/೨ ಚಮಚ
ಎಳ್ಳು- ೨ ಚಮಚ
ಒಣ ಮೆಣಸಿನ ಪುಡಿ - ೩ ಚಮಚ
ಉಪ್ಪು
೪ ಚಮಚ ಬಿಸಿ ಮಾಡಿದ ಎಣ್ಣೆ
ಬಿಸಿ ನೀರು
ಕರಿಯಲು ಎಣ್ಣೆ
ಅವಧಿ ೧ ಗಂಟೆ 
ಅಕ್ಕಿ ಹಿಟ್ಟು ಹುರಿಗಡಲೆ ಹಿಟ್ಟನ್ನು  ಗಾಳಿಸಿ.
ಎರಡು ಹಿಟ್ಟು ಸೇರಿಸಿ.
ಇದಕ್ಕೆ ಜೀರಿಗೆ+ಎಳ್ಳು+ಒಣ ಮೆಣಸಿನ ಪುಡಿ+ಉಪ್ಪು  ಮಿಕ್ಸ್ ಮಾಡಿ.
೪ ಚಮಚ ಎಣ್ಣೆ ಬಿಸಿ ಮಾಡಿ ಈ ಹಿಟ್ಟಿಗೆ  ಹಾಕಿ. ಕಲಕಿ.
ಬಿಸಿ ನೀರು ಅಗತ್ಯಕ್ಕೆ ತಕ್ಕಂತೆ ಸೇರಿಸಿ.
ಚೆನ್ನಾಗಿ ನಾದಿ.

ಚಕ್ಕುಲಿ ಆಕಾರಕ್ಕೆ / ಚಕ್ಕುಲಿ ಒರಳಿನಲ್ಲಿ ಸುತ್ತಿ. ಎಣ್ಣೆಯಲ್ಲಿ ಕರಿಯಿರಿ.
ಆಕರ ಅಗತ್ಯವೆನಿಸದಿದ್ದರೆ   ಬಾಣಲೆಗೆ ನೇರವಾಗಿ ಬಿಡಿ.
ಹುಷಾರು.....


ಬಾಯಲ್ಲಿ ಗರಂ ಗುರಮ್ ಚಕ್ಕುಲಿ.
ಮರುದಿನ .... ಹುಡುಕಾಟ ...


ಚಕ್ಕುಲಿ ....ಎಲ್ಲಿ...ಎಲ್ಲಿ....ಖಾಲಿ...?



ಚಂದ್ರಿಕಾ ಹೆಗಡೆ

ಅಕ್ಕಿ ತರಿ ಉಪ್ಪಿಟ್ಟು

ಅಕ್ಕಿ ತರಿ- ೨ಕಪ್ +ನೀರು-೫ ಕಪ್
ಈರುಳ್ಳಿ-೨
ಆಲೂಗಡ್ಡೆ- ೧
ಹಸಿಮೆಣಸಿನ ಕಾಯಿ-೨-೩
ಕೊತ್ತಂಬರಿ ಸೊಪ್ಪು
ಎಣ್ಣೆ ೪ ಚಮಚ
ತೆಂಗಿನ ತುರಿ- ೧/೪ ಕಪ್
ಸಾಸಿವೆ- ೧ಚಮಚ
ನಿಂಬೆರಸ- ೨ ಚಮಚ
ಅಕ್ಕಿ ತರಿಯನ್ನು  ಘಂ ಎನ್ನುವಂತೆ ಹುರಿಯಿರಿ.
ಎಣ್ಣೆಯಲ್ಲಿ  ಸಾಸಿವೆ+ ಹಸಿಮೆಣಸಿನ ಕಾಯಿ+ ಆಲೂಗಡ್ಡೆ ತುಂಡುಗಳನ್ನು ಹಾಕಿ... ಆಲೂ ಬೇಯುತ್ತಿದ್ದಂತೆ  ಈರುಳ್ಳಿ ಹಾಕಿ, ಉಪ್ಪು+  ಸೇರಿಸಿ ಹುರಿಯಿರಿ. ಈಗ ನೀರು ಸೇರಿಸಿ. ಬೇಕೆನಿಸಿದರೆ ಉಪ್ಪು ಹಾಕಿ. ನೀರಿನ ರುಚಿ ನೋಡಿದರೆ  ತಿಳಿಯುವದು. ಕುದಿಯುತ್ತಿದ್ದ ನೀರಿಗೆ ನಿಧಾನವಾಗಿ ಅಕ್ಕಿ ತರಿ ಸೇರಿಸಿ ಒಮ್ಮೆ ಕೈ ಯಾಡಿಸಿ.
ಸಣ್ಣ ಉರಿಯಲ್ಲಿ  ೧೦ ನಿಮಿಷ ಇಡಿ.
ಕೊತ್ತಂಬರಿ ಸೊಪ್ಪು + ತೆಂಗಿನ ತುರಿ + ನಿಂಬೆರಸ ಸೇರಿಸಲು ಮರೆಯದಿರಿ...!




ಚಂದ್ರಿಕಾ ಹೆಗಡೆ

ಕ್ಯಾರೆಟ್ ಬೀನ್ಸ್ ಮಿಶ್ರಿತ ಅನ್ನ

ಅನ್ನ- ೨ ಕಪ್
ಕ್ಯಾರೆಟ್- ೨ 
ಬೀನ್ಸ್ -೧೦
ಹಸಿಮೆಣಸಿನ ಕಾಯಿ-೨
ಕೊತ್ತಂಬರಿ ಸೊಪ್ಪು- ೨ ಗಿಡ
ಜೀರಿಗೆ- ೧ ಚಮಚ
ಉಪ್ಪು
ತುಪ್ಪ ೩ ಚಮಚ
ನಿಂಬೆ ರಸ - ೨ ಚಮಚ

ತುಪ್ಪದಲ್ಲಿ ಜೀರಿಗೆ ಹುರಿದು ಅದಕ್ಕೆ ಕ್ಯಾರೆಟ್+ ಬೀನ್ಸ್+ ಹಸಿಮೆಣಸು ಸೇರಿಸಿ ಸಣ್ಣ ಉರಿಯಲ್ಲಿ ೭ ನಿಮಿಷ ಬೇಯಿಸಿ. ಬೆಂಡಾ ಮೇಲೆ ಉಪ್ಪು+ ಕೊತ್ತಂಬರಿ ಸೊಪ್ಪು ಸೇರಿಸಿ. ಕೊನೆಯಲ್ಲಿ ನಿಂಬೆ ರಸ ಹಾಕಿ.


ಅನ್ನ ಬ್ರಹ್ಮ ......


ಚಂದ್ರಿಕಾ ಹೆಗಡೆ

ಬದನೆ ಕಾಯಿ ಫ್ರೈ....2

ಉದ್ದನೆ ಬದನೇಕಾಯಿ-೪
ಒಣ ಮೆಣಸಿನ ಪುಡಿ-೧  ಚಮಚ
ಎಣ್ಣೆ-೨ ಚಮಚ
ಅರಿಸಿನ
ಕರಿಬೇವು-೪೪-೫ ಎಲೆಗಳು
ಉಪ್ಪು


ಬದನೆ ಕಾಯಿಯನ್ನು ಹೋಳುಗಳಾಗಿ ಮಾಡಿಕೊಳ್ಳಿ. 
ಇದನ್ನು ೨ ಚಮಚ ಉಪ್ಪು ಹಾಕಿ ನೀರಿನಲ್ಲಿ ೧/೨ ಗಂಟೆ ಇಡಿ.  ನಂಜು ಬಿಡುತ್ತದೆ. ಉಪ್ಪಿನ ಬದಲಾಗಿ ಸುಣ್ಣ  ಬಳಸಬಹುದು(ತಾಮ್ಬೂಲಕ್ಕೆ ಬಳಸುವ ಸುಣ್ಣ)

೨ ಚಮಚ ಎಣ್ಣೆಯಲ್ಲಿ ಬದನೆ ಹೋಳುಗಳನ್ನು ಹಾಕಿ.
೫-೭ ನಿಮಿಷ ಸಣ್ಣ ಉರಿಯಲ್ಲೇ ಇಡಿ.
ಇದಕ್ಕೆ ಒಣ ಮೆಣಸಿನ ಪುಡಿ+ ಅರಿಸಿನ+ ಉಪ್ಪು+ ಕರಿಬೇವು ಹಾಕಿ.
೨ ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಇದನ್ನು ಚಪಾತಿ, ರೊಟ್ಟಿಯ ಜೊತೆ/ ಅನ್ನದ ಜೊತೆ ಬಳಸಬಹುದು.


ನೆನಪಿಡಿ: ಬದನೆ ಕಾಯಿ ಬಲಿತಿರಬಾರದು.  ಎಳೆಯದಾದಸ್ತು ರುಚಿ. ಹಾಗೇನೆ ಬೇಗ ಬೇಯುತ್ತದೆ.


ಚಂದ್ರಿಕಾ ಹೆಗಡೆ

08 ಡಿಸೆಂಬರ್ 2011

ಮಾವಿನ ಕಾಯಿ ಅಪ್ಪೆ ಹುಳಿ


ಮಾವಿನ ಕಾಯಿ - ಚಿಕ್ಕದು-೧ ಬೇಯಿಸಿದ್ದು
ಹಸಿಮೆಣಸಿನ ಕಾಯಿ-೨
ಎಣ್ಣೆ ೧ ಚಮಚ
ಕರಿಬೇವು- ೪-೫ ಎಲೆ
ಇಂಗು
ಉಪ್ಪು
೧/೨ ಚಮಚ ಸಕ್ಕರೆ 
ಸಾಸಿವೆ ೧ ಚಮಚ

ಬೇಯಿಸಿದ ಮಾವಿನಕಾಯಿಯನ್ನು ಹಿಸುಕಿ. ಓಟೆಯನ್ನು, ಸಿಪ್ಪೆಯನ್ನು ಪ್ರತ್ಯೇಕಿಸಿ. ರಸವನ್ನು ತೆಗದಿಡಿ.

ಒಗ್ಗರಣೆ:  ಎಣ್ಣೆಗೆ ಸಾಸಿವೆ+ ಹಸಿಮೆಣಸು+ ಕರಿಬೇವು+ ಇಂಗು  ಹಾಕಿ ಒಗ್ಗರಣೆ ತಯಾರಿಸಿ. ಒಗ್ಗರಣೆಯನ್ನು ಮಾವಿನ ಕಾಯಿ ರಸಕ್ಕೆ ಹಾಕಿ. ಇದಕ್ಕೆ ಉಪ್ಪು ಸಕ್ಕರೆ  ಸೇರಿಸಿ.
ಬೇಕೆನಿಸಿದರೆ ಇದಕ್ಕೆ ತೆಂಗಿನ ಹಾಲನ್ನು ಸೇರಿಸಿ. 
ಮಲೆನಾಡಿನಲ್ಲಿ ಊಟದ  ಕೊನೆಯ  ಪದಾರ್ಥಗಳ ಸಾಲಿನಲ್ಲಿ  ಅಪ್ಪೆಹುಳಿ ಇಲ್ಲಾಂದ್ರೆ....!

  1. ಜ್ವರದಿಂದ ಊಟ ಸೇರದೆ ಇದ್ದಾಗ ಊಟಕ್ಕೆ ಒಂದು ರುಚಿಯನ್ನು ಕೊಡುವ ಶಕ್ತಿ ಇದಕ್ಕಿದೆ.
  2. ಯಾವದಾದ್ರು  ಸಮಾರಂಭಗಳಿಗೆ ಹೋಗಿ ಹೊಟ್ಟೆ ಭರ್ತಿ ಆಗಿ... ತೊಂದರೆಯಲ್ಲಿ ಇದ್ದಾಗ ಈ ಅಪ್ಪೆಹುಳಿಯನ್ನು ಕುಡಿಯಿರಿ. ಜೀರ್ಣ ಸರಾಗ....
  3. ಊಟಕ್ಕೊಂದು ಸಂಪೂರ್ಣತೆ ನೀಡುವ ಸಾಮರ್ಥ್ಯ ಇದಕ್ಕಿದೆ.

ಅಪ್ಪೆ ಹುಳಿಯಾದರೂ... ಉದರಕ್ಕೆ ಸಿಹಿಯೇ...

ಚಂದ್ರಿಕಾ ಹೆಗಡೆ


ಮಾವಿನ ಕಾಯಿ ಚಟ್ನಿ

ಮಾವಿನ ಕಾಯಿ ಹೆಚ್ಚಿದ್ದು ೧/೪ ಕಪ್( ಅರ್ಧ ಮಧ್ಯಮ ಗಾತ್ರದ ಮಾವಿನ ಕಾಯಿ)
ತೆಂಗಿನ ತುರಿ - ೧ ಬಟ್ಟಲು
ಒಣ ಮೆಣಸಿನ ಕಾಯಿ- ೪-೫
ಕಡಲೆ ಬೇಳೆ - ೨ ಚಮಚ
ಇಂಗು-
ಎಣ್ಣೆ- ೨ ಚಮಚ
ಸಕ್ಕರೆ/ ಬೆಲ್ಲ ೧/೪ ಚಮಚ
ಸಾಸಿವೆ ೧/೨ ಚಮಚ
ಉಪ್ಪು


೧ ಚಮಚ ಎಣ್ಣೆಯಲ್ಲಿ ಕಡಲೆ ಬೇಳೆ ಒಣ ಮೆಣಸು ಹುರಿಯಿರಿ. ತೆಂಗಿನ ತುರಿಯ ಜೊತೆ ಹುರಿದ ಪದಾರ್ಥ+ ಸಕ್ಕರೆ,+ ಉಪ್ಪು+ ಮಾವಿನ ಕಾಯಿ ಹೋಳುಗಳನ್ನು  ಸೇರಿಸಿ ರುಬ್ಬಿ. ರುಬ್ಬಿದ ಈ ಮಿಶ್ರಣಕ್ಕೆ ಉಳಿದ ೧ ಚಮಚ ಎಣ್ಣೆ+ ಸಾಸಿವೆ+ಇಂಗಿನ ಒಗ್ಗರಣೆ ಇಡಿ.

ಅನ್ನ + ಮಾವಿನ ಕಾಯಿ ಚಟ್ನಿ= ಮೃಷ್ಟಾನ್ನ ಬೇರೆ ಬೇಕೇ?: ಇದೆ ಸಾಕಲ್ಲವೇ!

ಚಂದ್ರಿಕಾ ಹೆಗಡೆ

ಟೊಮೇಟೊ ಹಶಿ

ಟೊಮೇಟೊ- ೨ ಸಣ್ಣದಾಗಿ ಹೆಚ್ಚಿದ್ದು
ತೆಂಗಿನ ತುರಿ- ೧ ಬಟ್ಟಲು
ಮೊಸರು/ ಮಜ್ಜಿಗೆ- ೧ ಬಟ್ಟಲು
ಹಸಿಮೆಣಸು/ ಒಣ ಮೆಣಸು-೧
ಒಗ್ಗರಣೆಗೆ: ಸಾಸಿವೆ, ಇಂಗು, ಎಣ್ಣೆ-೧ ಚಮಚ, ಅರಿಸಿನ
ಉಪ್ಪು
೧/೨ ಚಮಚ ಸಕ್ಕರೆ


ತೆಂಗಿನ ತುರಿಗೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಒಗ್ಗರಣೆ ಸಿದ್ಧ ಮಾಡಿ.
ಎಣ್ಣೆ ಕಾಯಿಸಿ, ಸಾಸಿವೆ+ ಹಸಿಮೆಣಸು+ ಇಂಗು+ಅರಿಸಿನ  ಹಾಕಿ. ಒಗ್ಗರಣೆ ಸ್ವಲ್ಪ ಬಿಸಿ ಇದ್ದಾಗ ಹೆಚ್ಚಿದ ಟೊಮೇಟೊ ಸೇರಿಸಿ. ಮೊಸರು+ ರುಬ್ಬಿದ ಮಿಶ್ರಣ+ ಉಪ್ಪು+ ಸಕ್ಕರೆ ಸೇರಿಸಿ.

ಇನ್ನೊಂದು ವಿಧಾನ:

ರುಬ್ಬಿದ ಮಿಶ್ರಣಕ್ಕೆ ಮೊಸರು+ಉಪ್ಪು+ ಸಕ್ಕರೆ+ ಟೊಮೇಟೊ ಸೇರಿಸಿ. ಇದಕ್ಕೆ ಒಗ್ಗರಣೆ ಹಾಕುವದು.

ಅನ್ನಕ್ಕೇ ಸರಿ.....


ಚಂದ್ರಿಕಾ ಹೆಗಡೆ

ಈರುಳ್ಳಿ ಹಶಿ ( ಭಜ್ಜಿ)

ಈರುಳ್ಳಿ -೩ (ಹೆಚ್ಚಿ)
ತೆಂಗಿನ ತುರಿ- ೧ ಬಟ್ಟಲು
ಮೊಸರು/  ಮಜ್ಜಿಗೆ- ೧ ಬಟ್ಟಲು
ಉಪ್ಪು, ೧/೨ ಚಮಚ ಸಕ್ಕರೆ
ಒಗ್ಗರಣೆಗೆ ೧ ಚಮಚ ಎಣ್ಣೆ, ಸಾಸಿವೆ, ಕರಿಬೇವು, ಅರಿಸಿನ,




ತೆಂಗಿನ ತುರಿಯನ್ನು ಸ್ವಲ್ಪ ನೀರು ಹಾಕಿ ರುಬ್ಬಿ.
 ಒಗ್ಗರಣೆಗೆ ಎಣ್ಣೆ ಸಾಸಿವೆ,  ಕರಿಬೇವು, . ಒಗ್ಗರಣೆ ಬಿಸಿ ಇದ್ದಾಗಲೇ  ಈರುಳ್ಳಿ ಸೇರಿಸಿ. ರುಬ್ಬಿದ  ಮಿಶ್ರಣಕ್ಕೆ  ಸೇರಿಸಿ. ಮೊಸರು+ಸಕ್ಕರೆ+ ಉಪ್ಪು ಹಾಕಿ.
  ಯಾವುದೇ ತರಹ ದ  ಅನ್ನ ವೈವಿಧ್ಯದ ಜೊತೆ ....

ಬೇಸಿಗೆಗೆ ಭಜ್ಜಿ  (ಹಸಿ)


ಚಂದ್ರಿಕಾ ಹೆಗಡೆ

ರಾಗಿ ಆಸರಿಗೆ ( ಜ್ಯೂಸ್ )


ನೆನಸಿದ ರಾಗಿ-೧ ಕಪ್
ಬೆಲ್ಲ/ ಸಕ್ಕರೆ ೧/೨ ಕಪ್
ಏಲಕ್ಕಿ ೨
ಚಿಟಿಕೆ ಉಪ್ಪು




ರಾಗಿಯನ್ನು+ ಏಲಕ್ಕಿ+ನೀರು  ರುಬ್ಬಿ. ಸೋಸಿ. ಅದಕ್ಕೆ ಬೆಲ್ಲ ಚಿಟಿಕೆ ಉಪ್ಪು ಹಾಕಿ ಪಾನೀಯವನ್ನಾಗಿ ಸ್ವೀಕರಿಸಿ.
ಸಿಹಿಯ ಬದಲಾಗಿ ಉಪ್ಪನ್ನು ಹಾಕಿ, ನಿಂಬೆರಸ ಹಾಕಿ ಸೇವಿಸಬಹುದು.

ಮಲೆನಾಡಿನಲ್ಲಿ  ಬೇಸಿಗೆಯ ಸಮಯದಲ್ಲಿ... ಎಲ್ಲರ ಮನೆಯಲ್ಲೂ ದಿನಕ್ಕೆ ೫-೧೦ ಸಲ ಆಸರಿಗೆ ಪದ ಕೇಳಲೇ ಬೇಕು....
ಬಂದ ನೆಂಟರಿಗೆ, ಪಕ್ಕದ ಮನೆಯವರಿಗೂ( ಇದು ಮಲೆನಾಡಿಗರ ಪ್ರತಿಷ್ಠೆಯ ಪ್ರಶ್ನೆಯು ಹೌದು. "ಆಸ್ರಿಗೆನು ಕೇಳಿದ್ವಿಲ್ಲೇ " ಅಂದರೆ  ಅವರು ಎಂತಹ ಮನುಷ್ಯರು ಎಂದು.! ) ಕೆಲಸದ ಆಳುಗಳಿಗೂ...ಮನೆಯ ಸದಸ್ಯರಿಗೂ.... ಹೀಗೆ...
ಆದ ಕಾರಣ ಈ ಆಸ್ರಿಗೆ ರೂಪ ಹಲವಾರು. ವಾತಾವರಣಕ್ಕೆ ತಕ್ಕಂತೆ... ಮಳೆಗಾಲ ಚಳಿಗಾಲದಲ್ಲಿ ಚಹಾ.. ಕಷಾಯ.. ಬಿಸಿನೀರು ( ಬಿಸಿ ಉದಕ) , ಬೇಸಿಗೆಯಲ್ಲಿ... ಮಜ್ಜಿಗೆ ನೀರು(ತಂಬುಳಿ) ತರಹದ ಆಸ್ರಿಗೆಗಳು....

ಆಸರು ಎಂದರೆ- ಬಾಯಾರಿಕೆ ಎಂದರ್ಥ.
ಆದರೆ ಮಲೆನಾಡಿನ ಬಹು ಭಾಗದಲ್ಲಿ ಇದನ್ನು ಎರಡು ಸಂದರ್ಭದಲ್ಲಿ  ಬಳಸುವದನ್ನು ಕಾಣಬಹುದು.

  1.  ಬಾಯಾರಿಕೆ
  2. ಬೆಳಗಿನ ತಿಂಡಿ.(ಉಪಹಾರ). ಬೆಳಗಿನ ತಿಂಡಿಯ ಸಂದರ್ಭದಲ್ಲಿ  ಆಸರಿಗೆ ಕುಡಿದು ಆತ? ಎಂಬ ಮಾತನ್ನು ಕೇಳಬಹುದು. ಇಲ್ಲವೇ ಆಸರಿಗೆ ಆತ ? ಎಂಬುದು ಬಳಕೆ.    
ಆಹಾರದ ಬಳಕೆಯ ಓಚಿತ್ಯದ?  ಚಿಂತನೆಯಲ್ಲಿ...

ಚಂದ್ರಿಕಾ ಹೆಗಡೆ

ರಾಗಿ ಹಾಲುಬಾಯಿ (ಮಣ್ಣಿ)

ರಾಗಿ - ೨ ಕಪ್(ನೆನಸಿದ್ದು)
ಬೆಲ್ಲ ೧ ೧/೨ ಕಪ್
ಏಲಕ್ಕಿ-೩-೪
ಚಿಟಿಕೆ ಉಪ್ಪು
ತುಪ್ಪ ೩ ಚಮಚ


ನೆನಸಿದ ರಾಗಿಯನ್ನು ರುಬ್ಬಿ. ಸೋಸಿಕೊಳ್ಳಿ. ಇದಕ್ಕೆ ಬೆಲ್ಲ ಏಲಕ್ಕಿ ಚಿಟಿಕೆ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಕೈಯ್ಯಾಡಿಸುತ್ತಾ ಇರಿ. ಬಾಣಲೆಯನ್ನು ಬಿಟ್ಟು ಬರುವಾಗ ತುಪ್ಪ ಸವರಿದ ತಟ್ಟೆಗೆ  ಸುರಿದು ಕಟ್ ಮಾಡಿ. ತುಪ್ಪದೊಂದಿಗೆ ಸವಿಯಿರಿ.

ಕಪ್ಪಗಿದ್ದರೂ ರಾಗಿ  ಪೌಷ್ಟಿಕ  ಆಹಾರ.....!

ಇದನ್ನು ಸಿಹಿ   / ಸಪ್ಪೆ/ ಖಾರ  ಮೂರೂ ರುಚಿಗಳಲ್ಲೂ ಮಾಡಬಹುದು.
ಹಬ್ಬದ ದಿನ ಬೆಳಗಿನ ಉಪಹಾರವನ್ನಾಗಿ ಮಲೆನಾಡಿಗರ ಮನೆಗಳಲ್ಲಿ ಕಾಣಬಹುದು.


ಚಂದ್ರಿಕಾ ಹೆಗಡೆ

ಒಣ ಮೆಣಸಿನ ಕಾಯಿ ಚಟ್ನಿ

ಒಣ ಮೆಣಸಿನ ಕಾಯಿ- ೪-೫ (೨ ಘಂಟೆ ನೆನಸಿ)
ತೆಂಗಿನ ತುರಿ ೧ ಕಪ್
ಸಕ್ಕರೆ ೧/೨ ಚಮಚ
ಉಪ್ಪು ರುಚಿಗೆ
ಹುಳಿಸೆ ರಸ ೧/೨ ಚಮಚ
ಒಗ್ಗರಣೆಗೆ, ಎಣ್ಣೆ , ಸಾಸಿವೆ


ಒಣ ಮೆಣಸಿನ ಕಾಯಿ ೨ ಘಂಟೆ ನೆನಸಿ, ಇದಕ್ಕೆ ತೆಂಗಿನ ತುರಿ + ಸಕ್ಕರೆ+ ಉಪ್ಪು+ ಹುಳಿಸೆ ರಸ  ಸೇರಿಸಿ ರುಬ್ಬಿ.
 ಸಾಸಿವೆ ಒಗ್ಗರಣೆ ನೀಡಿ.




ದೋಸೆ/ ಚಪಾತಿ ಜೊತೆ ಸವಿಯಬಹುದು.


ಚಂದ್ರಿಕಾ ಹೆಗಡೆ

ಇಡ್ಲಿ ಉಪ್ಪಿಟ್ಟು

 ಇಡ್ಲಿ- ೪
ಈರುಳ್ಳಿ-೧
ಹಸಿಮೆಣಸು- ೨
ಎಣ್ಣೆ- ೨ ಚಮಚ
ಕರಿಬೇವು- ೪ ಎಲೆ
ಉಪ್ಪು
ಅರಿಸಿನ
ಸಾಸಿವೆ


ಇಡ್ಲಿ ಸಾಮಾನ್ಯವಾಗಿ ಬೆಳಿಗ್ಗೆ ಉಪಹಾರಕ್ಕಾಗಿ ಮಾಡುವಂಥದ್ದು.  ಮಿಕ್ಕಿದ ಅದೇ ಇಡ್ಲಿಯನ್ನು ಸಂಜೆ ತಿನ್ನಲು ಮನಸ್ಸು ಆಗದೆ ಇದ್ದಾಗ ಅದಕ್ಕೊಂದು ಹೊಸ ರುಚಿ ರೂಪನ್ನು ಕೊಡಬಹುದು. ಅಸ್ಟೇ ಅಲ್ಲ, ಅದೇ ಇಡ್ಲಿನಾ ಎಂದು ಮೂಗು ಮುರಿಯುತ್ತಿದ್ದವರು  ಇನ್ನಸ್ಟು ಹಾಕು ಎಂದು ಆಸೆ ಪಡುವ ಸಾಧ್ಯತೆ ೧೦೦%




ಪೀಠಿಕೆ  ಜಾಸ್ತಿ ಆದರು ಸತ್ಯಾನೆ...



  1. ಇಡ್ಲಿಯನ್ನು ಪುಡಿ ಮಾಡಿ.
  2.   ಎಣ್ಣೆ,   ಸಾಸಿವೆ ಒಗ್ಗರಣೆ ಹಾಕಿ. 
  3. ಇದರಲ್ಲಿ ಅರಿಸಿನ + ಈರುಳ್ಳಿ+ ಹಸಿಮೆಣಸು+ ಕರಿಬೇವು ಹುರಿಯಿರಿ.
  4. ಉಪ್ಪು + ಇಡ್ಲಿ ಚೂರುಗಳನ್ನು ಸೇರಿಸಿ ೪-೬ ನಿಮಿಷ  ಸಣ್ಣ ಉರಿಯಲ್ಲಿ ಇಡಿ.
  5. ಬಿಸಿ ಬಿಸಿ ಇಡ್ಲಿ ಉಪ್ಪಿಟ್ಟು... ನಿಮ್ಮ ನಾಲಿಗೆ ನಿಮ್ಮ ಮನಸ್ಸಿಗೆ ಹೇಳುವದು"  ಇನ್ನು ಇಡ್ಲಿ ಬೇಡ , ಇಡ್ಲಿ ಉಪ್ಪಿಟ್ಟೇ  ಮಾಡು"

ನಾಲಿಗೆಗೂ ಮಹತ್ವ ಕೊಡಿ....!



ಚಂದ್ರಿಕಾ ಹೆಗಡೆ

ಸೇಬು ಹಣ್ಣಿನ ಹಲ್ವ

 ಸೇಬು- ೨
ಸಕ್ಕರೆ- ೩/೪ ಕಪ್
ನಿಂಬೆ ರಸ - ೪ ಚಮಚ
ಏಲಕ್ಕಿ-೨
ತುಪ್ಪ- ೧ ಚಮಚ

ಸೇಬು ಹಣ್ಣನ್ನು ರುಬ್ಬಿ.
ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ.
ನಂತರ ಸೇಬು ಪೇಸ್ಟ್ , ನಿಂಬೆರಸ ಸೇರಿಸಿ ಸಣ್ಣ ಉರಿಯಲ್ಲಿ ಗಟ್ಟಿ ಆಗುವ ತನಕ ಕಲಕುತ್ತಾ ಇರಿ. ನಂತರ ಏಲಕ್ಕಿ ಸೇರಿಸಿ.

ಚಪಾತಿ , ಬ್ರೆಡ್ ಜೊತೆ ಸವಿಯ ಬಹುದು.

ಸಿಹಿ ಸಂಭ್ರಮ ...

ಚಂದ್ರಿಕಾ ಹೆಗಡೆ

ಮೊಳಕೆ ಮೆಂತೆ ಪಲಾವ್

 ಅನ್ನ- ೨ ಕಪ್
ಮೊಳಕೆ ಮೆಂತೆ- ೧ ಕಪ್
ಈರುಳ್ಳಿ-೨ ಹೆಚ್ಚಿದ್ದು
ಮೆಣಸಿನ ಪುಡಿ- ೨ ಚಮಚ
ಹಸಿಮೆಣಸು- ೨-೩ ಕತ್ತರಿಸಿದ್ದು
ಶುಂಟಿ- ಬೆಳ್ಳುಳ್ಳಿ ಪೇಸ್ಟ್- ೨ ಚಮಚ
ಕೊತ್ತಂಬರಿ ಸೊಪ್ಪು
ಚಕ್ಕೆ, ಲವಂಗ
ಸಾಸಿವೆ,
ನಿಂಬೆ ರಸ, ಉಪ್ಪು
ಎಣ್ಣೆ


ಬಾಣಲೆಯಲ್ಲಿ ಎಣ್ಣೆ ಸಾಸಿವೆ ಚಕ್ಕೆ ಲವಂಗ ಹುರಿಯಿರಿ. ಇದಕ್ಕೆ ಈರುಳ್ಳಿ+ಹಸಿಮೆಣಸು+ಶುಂಟಿ ಬೆಳ್ಳುಳ್ಳಿ ಪೇಸ್ಟ್  ಸೇರಿಸಿ ಹುರಿಯಿರಿ. ನಂತರ ಮೊಳಕೆ ಕಟ್ಟಿದ ಮೆಂತೆ ಸೇರಿಸಿ. ೫-೭ ನಿಮಿಷ ಬೇಯಿಸಿ.
ಇದಕ್ಕೆ ಮೆಣಸಿನ ಪುಡಿ+ ಅರಿಸಿನ ಸ್ವಲ್ಪ ಉಪ್ಪು ಹಾಕಿ. ಅನ್ನ ಸೇರಿಸಿ. ಕೊತ್ತಂಬರಿ ಸೊಪ್ಪು+  ರುಚಿಗೆ ತಕ್ಕಸ್ಟು ಇನ್ನಸ್ಟು ಉಪ್ಪು ಸೇರಿಸಿ ಚೆನ್ನಾಗಿ  ಮಿಕ್ಸ್ ಮಾಡಿ.
ಕೊನೆಯಲ್ಲಿ ನಿಂಬೆ ರಸ ಸೇರಿಸಿ.

ಕಹಿ ಇಲ್ಲದ ಮೆಂತೆ  ಪಲಾವ್.
ಕೇಳ್ಪಟ್ಟ ಮಾತು 
ಸ್ನೇಹಿತರೆ , ಮೆಂತೆ ತಂಪಿನ ಅಂಶ ಹೊಂದಿದೆ ಎಂಬುದು ಹಿರಿಯರ ಮಾತು. ನನ್ನ ಇದೆ ಬ್ಲಾಗ್ ನಲ್ಲಿ ಈ ಮೊದಲು ಮೆಂತೆ ಆಸರಿಗೆ ಎಂಬ ಪಾನೀಯವೊಂದನ್ನು ಪರಿಚಯಿಸಿದ್ದೇನೆ.    ದಿನಾಲು ಬೆಳ್ಳಿಗ್ಗೆ ನೆನಸಿದ ಮೆಂತೆಯನ್ನು  ತಿಂದರೆ ಮಹಿಳೆಯರನ್ನು ಕಾಡುವ ತಿಂಗಳಿನ ನೋವು ಕಡಿಮೆಯಾಗುವದು ಎಂಬುದು ಕೇಳ್ಪಟ್ಟ ಮಾತು.

ಮುಂಬರುವ ದಿನಗಳಲ್ಲಿ ಮೆಂತೆ ದೋಸೆ, ಚಟ್ನಿ , ಕಷಾಯವನ್ನು ಪರಿಚಯಿಸುತ್ತೇನೆ.

ಅಡುಗೆಯಲ್ಲಿ/ ಅಡುಗೆ ಬರೆಯುವಲ್ಲಿ ನನಗಂತೂ ಸಮಾಧಾನ....


ಚಂದ್ರಿಕಾ ಹೆಗಡೆ

ಮೊಳಕೆ ಹುರುಳಿ ಕಾಳು ಸಾರು

ಮೊಳಕೆ ಕಟ್ಟಿದ ಹುರುಳಿ- ೧ ಕಪ್
ತೆಂಗಿನ ತುರಿ- ೧ ಕಪ್  
ಶುಂಟಿ ಬೆಳ್ಳುಳ್ಳಿ ಪೇಸ್ಟ್ - ೨ ಚಮಚ
ಹುಳಿಸೆ ಹಣ್ಣು- ಅಡಿಕೆ ಗಾತ್ರ
ಕರಿಬೇವು- ೪-೫ ಎಲೆ
ಕೆಂಪು ಮೆಣಸು- ೫-೬( ಬ್ಯಾಡಗಿ- ಗುಂಟುರ್)
ಕೊತ್ತಂಬರಿ ಬೀಜ- ೨ ಚಮಚ
ಅರಿಸಿನ, ಸಾಸಿವೆ, ೨ ಚಮಚ ಎಣ್ಣೆ-- ಒಗ್ಗರಣೆಗೆ
ಉಪ್ಪು
ಈರುಳ್ಳಿ-೧
ಚಕ್ಕೆ- ೧
ಬೆಲ್ಲ - ೧/೨ ಚಮಚ

ಹುರುಳಿಯನ್ನು ೧ ದಿನ ನೆನಸಿ- ಬಟ್ಟೆಯಲ್ಲಿ/ ಜಾಳಿಗೆಯಲ್ಲಿ ಇಡಿ. ಮೊಳಕೆ ಕಟ್ಟುವದು.
ಇದನ್ನು ಬೇಯಿಸಿಟ್ಟುಕೊಳ್ಳಿ.
ಚಕ್ಕೆ+ತೆಂಗಿನ ತುರಿ +ಮೆಣಸಿನ ಕಾಯಿ+ಕೊತ್ತಂಬರಿ ಬೀಜ+ಶುಂಟಿ- ಬೆಳ್ಳುಳ್ಳಿ ಪೇಸ್ಟ್ ರುಬ್ಬಿ.
ಬಾಣಲೆಗೆ ಎಣ್ಣೆ ಹಾಕಿ , ಸಾಸಿವೆ ಒಗ್ಗರಣೆ ಮಾಡಿ. ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ. ಹಸಿ ವಾಸನೆ ಹೋಗುವಂತೆ ಬೇಯಿಸಿ.
೫-೮ ನಿಮಿಷ ಸಣ್ಣ ಉರಿಯಲ್ಲೇ  ಇಡಿ.
ಇದಕ್ಕೆ ಬೇಯಿಸಿದ ಹುರುಳಿ, ಹುಳಿಸೆ ರಸ, ಬೆಲ್ಲ, ಉಪ್ಪು, ಕರಿಬೇವು,   ಅರಿಸಿನ ಹಾಕಿ.
೪-೫ ನಿಮಿಷ ಕುದಿಸಿ.

ಮೊಳಕೆ ಕಟ್ಟಿದ ಕಾಳು  ಆರೋಗ್ಯಕ್ಕೆ ಒಳ್ಳೇದು...


ಚಂದ್ರಿಕಾ ಹೆಗಡೆ

06 ಡಿಸೆಂಬರ್ 2011

ಸವತೆಕಾಯಿ ಪೂರಿ

ಅಕ್ಕಿ ಹಿಟ್ಟು- ೧ ಕಪ್
ಸವತೆಕಾಯಿ ೧/೨
ಗೋದಿ ಹಿಟ್ಟು ೧/೨ ಕಪ್
ಹಸಿಮೆಣಸಿನ ಕಾಯಿ-೨
ಕರಿಬೇವು-೩-೪
ಹಿಂಗು-ಚಿಟಿಕೆ
ಉಪ್ಪು
ಎಣ್ಣೆ

ಸವತೆಕಾಯಿಯೊಂದಿಗೆ  ಹಸಿಮೆಣಸು, ಕರಿಬೇವು, ಹಿಂಗು, ಉಪ್ಪು ಹಾಕಿ ರುಬ್ಬಿ.ಅಕ್ಕಿ ಹಿಟ್ಟು, ಗೋದಿ ಹಿಟ್ಟಿನಲ್ಲಿ ಈ ಮಿಶ್ರಣವನ್ನು ಸೇರಿಸಿ, ಪೂರಿ ಲಟ್ಟಿಸಿ ಕರಿಯಿರಿ,,

ಎಣ್ಣೆ ಮಯ.... ಆದರು ತಿನ್ನುವಲ್ಲಿ... ಅದೇನೋ...ಸಂತೋಷ....

ಚಂದ್ರಿಕಾ ಹೆಗಡೆ

ಸವತೆ ಕಾಯಿ ನೀರ್ ದೋಸೆ

ಅಕ್ಕಿ- ನೆನಸಿದ್ದು- ೨ ಕಪ್
ಸವತೆ ಕಾಯಿ- ಸಿಪ್ಪೆ ಸಮೇತ-೧
ಉಪ್ಪು


ಅಕ್ಕಿಯನ್ನು ೩-೪ ಘಂಟೆ ಕಾಲ ನೆನಸಿ. ಸವತೆ ಕಾಯಿಯೊಂದಿಗೆ  ರುಬ್ಬಿ. ಮಿಶ್ರಣ ನೀರು ನೀರಾಗಿರಲಿ.  ಅದನ್ನು ದೋಸೆ ತವದಲ್ಲಿ ಹುಯ್ಯಿರಿ.
 ಸ್ವಾದಿಷ್ಟ  ಸವತೆ ಕಾಯಿ ದೋಸೆ....
ಹೀಗೇನೆ  ಮಂಗಳೂರ್  ಸವತೆ ಕಾಯಿ/ ಮಗೆ ಕಾಯಿ ದೋಸೆ ಮಾಡಬಹುದು.


ರಜಾದ ಮಜಾ ಅಡುಗೆ ಮನೆಯಲ್ಲಿ.....

ಚಂದ್ರಿಕಾ ಹೆಗಡೆ

ಹುಳಸೆ ಕಾಯಿ ಅಪ್ಪೆ ಹುಳಿ

ಹುಳಸೆ ಕಾಯಿ -೩
ಬೆಳ್ಳುಳ್ಳಿ 3 -೪ ಎಸಳು  
ಬೆಲ್ಲ- ಅಡಿಕೆ ಗಾತ್ರ
ಎಣ್ಣೆ ೧ ಚಮಚ   
ಉಪ್ಪು
ಹಸಿಮೆಣಸು-೨
ಸಾಸಿವೆ ೧/೨ ಚಮಚ




ಹುಳಿಸೇ ಕಾಯಿಯನ್ನು ಬೇಯಿಸಿ. ಹುಸುಕಿಡಿ. ಸೋಸಿ. 


ಎಣ್ಣೆ ಸಾಸಿವೆ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಒಗ್ಗರಣೆ ತಯಾರಿಸಿ. ಸೂಸಿದ 


ರಸಕ್ಕೆ ಸೇರಿಸಿ. ಉಪ್ಪು ಬೆಲ್ಲ ಹಾಕಿ.


ಬಿಸಿ ಬಿಸಿ ಅನ್ನಕ್ಕಾಗಿ.. ಹುಳಿ ಖಾರದ... ಬಾಯಲ್ಲಿ ನೀರೂರಿಸುವ ಅಪ್ಪೆಹುಳಿ 


ಇಷ್ಟವಾಗದವರು   ಇದ್ದಾರ....ಅಯ್ಯೋ....ಅನ್ನುವ ಆಶ್ಚರ್ಯ ವಾಗುವ ಸರದಿ  


ಮಲೆನಾಡಿಗರದು.






ಚಂದ್ರಿಕಾ ಹೆಗಡೆ

03 ಡಿಸೆಂಬರ್ 2011

ಟೋಮೇಟೋ ತಿಳಿ ಸಾರು

ಟೋಮೇಟೋ -೫-೬
ತೊಗರಿಬೇಳೆ-೨ ಚಮಚ
ಕಾಳು ಮೆಣಸು- ೧೦
ಮೆಣಸಿನ ಪುಡಿ- ೧ ಚಮಚ
ಜೀರಿಗೆ- ೧ ಚಮಚ
ಲವಂಗ- ೩
ಮೆಂತೆ ೧/೪ ಚಮಚ
ಅರಿಸಿನ 
ಉಪ್ಪು
ಹಿಂಗು
ಬೆಲ್ಲ-೧/೨ ಚಮಮ್ಚ
ಅಡಿಕೆ ಗಾತ್ರದ ಹುಳಿಸೇ ಹಣ್ಣು
ಕರಿಬೇವು
ಒಗ್ಗರಣೆಗೆ - ಸಾಸಿವೆ ,ಜೀರಿಗೆ,  ಎಣ್ಣೆ 
ಟೊಮೇಟೊ- ಹೆಚ್ಚಿದ್ದು- ೧
ಕೊತ್ತಂಬರಿ ಸೊಪ್ಪು 

ಮೊದಲು ತಿಳಿ ಸಾರಿನ ಪುಡಿ:   
ತೊಗರಿ ಬೇಳೆ + ಕರಿಬೇವು +ಮೆಂತೆ+ಲವಂಗ+ಜೀರಿಗೆ+ ಕಾಳು ಮೆಣಸು ಹುರಿದು ಪುಡಿ ಮಾಡಿ
ಟೊಮೇಟೊ ಬೇಯಿಸಿ.. ಇಡಿಯಾಗಿ.  ನಂತರ  ಜಾಳಿಗೆಯಲ್ಲಿ ಟೊಮೇಟೊ ಹಾಕಿ. ಚೆನ್ನಾಗಿ ಹಿಸುಕಿ. ಟೊಮೇಟೊ ರಸ ಬೀಳಲು ಕೆಳಗೊಂದು ಪಾತ್ರೆ ಇಡಿ...!
ಆ ಟೊಮೇಟೊ ರಸಕ್ಕೆ, ಹೆಚ್ಚಿದ ಟೊಮೇಟೊ+ ಕೊತ್ತಂಬರಿ ಸೊಪ್ಪು + ತಿಳಿ ಸಾರಿನ ಪುಡಿ+ ಬೆಲ್ಲ+ ಹಿಂಗು+ ಉಪ್ಪು+ಅರಿಸಿನ  ಹಾಕಿ.
ಸಾಸಿವೆ , ಜೀರಿಗೆ ಒಗ್ಗರಣೆ ನೀಡಿ.

ಬಿಸಿ ಬಿಸಿ ಅನ್ನ-- ಘಮ ಘಮ ಸಾರು....

ಚಂದ್ರಿಕಾ ಹೆಗಡೆ

ಕ್ಯಾಪ್ಸಿಕಂ- ಈರುಳ್ಳಿ ಪಲ್ಯ

ಕ್ಯಾಪ್ಸಿಕಂ- ೧ ದೊಡ್ಡದು
ಈರುಳ್ಳಿ-೨ 
ಮೆಣಸಿನ ಪುಡಿ-೧ ಚಮಚ
ಎಣ್ಣೆ- ೧ ೧/೨ ಚಮಚ
ಸಾಸಿವೆ-೧/೨ ಚಮಚ
ಉಪ್ಪು 

ಕ್ಯಾಪ್ಸಿಕಂ+ಈರುಳ್ಳಿಯನ್ನು ಹೆಚ್ಚಿ. ಬಾಣಲೆಗೆ ಎಣ್ಣೆ ಸಾಸಿವೆ ಹಾಕಿ. ನಂತರ ಕ್ಯಾಪ್ಸಿಕಂ+ ಈರುಳ್ಳಿಯನ್ನು ಸೇರಿಸಿ ಹುರಿಯಿರಿ. ಮೆಣಸಿನ ಪುಡಿ ಸೇರಿಸಿ. ಉಪ್ಪು ಹಾಕಿ. 
ಸರಳವಾದರೂ... ಹುರಿದ    ಕ್ಯಾಪ್ಸಿಕಂ... ಜೊತೆ ಈರುಳ್ಳಿ... ವಾಹ್

ಚಂದ್ರಿಕಾ ಹೆಗಡೆ

ಬಸಳೆ ಭಜ್ಜಿ..

ಬಸಳೆ ಸೊಪ್ಪು- ೪ ದಂಟು.. ಸೊಪ್ಪು
ತೆಂಗಿನ ತುರಿ-೧ ಬಟ್ಟಲು
ಈರುಳ್ಳಿ- ೧
ಎಣ್ಣೆ-೧ ಚಮಚ ಬಸಳೆ ಸೊಪ್ಪು ಹುರಿಯಲು+ ೧ ಚಮಚ ಒಗ್ಗರಣೆಗೆ+ ಸಾಸಿವೆ
ಉಪ್ಪು
ಮಜ್ಜಿಗೆ- ೧ ಬಟ್ಟಲು
ನಾನೇ ಬೆಳೆಸಿದ ಬಸಳೆ ಗಿಡ... ಅದೆಂಥ ರುಚಿ....!

ಬಸಳೆ  ಸೊಪ್ಪನ್ನು ತೊಳೆದು ಹೆಚ್ಚಿ. ೧ ಚಮಚ    ಎಣ್ಣೆಯೊಂದಿಗೆ ೨ ನಿಮಿಷ ಹುರಿಯಿರಿ.  ಬಸಳೆ ಮೆತ್ತಗಿನ ಸೊಪ್ಪು . ಆದ್ದರಿಂದ ೨-೩ ನಿಮಿಷ ಬೇಯಿಸಲು ಸಾಕು.
ತೆಂಗಿನ ತುರಿಯನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿ.
ರುಬ್ಬಿದ ಮಿಶ್ರಣಕ್ಕೆ   ಬೇಯಿಸಿದ ಸೊಪ್ಪು, ಉಪ್ಪು, ಮಜ್ಜಿಗೆ, ಹೆಚ್ಚಿದ ಈರುಳ್ಳಿ ಸೇರಿಸಿ.
ಇದಕ್ಕೆ ಸಾಸಿವೆ ಒಗ್ಗರಣೆ ನೀಡಿ.

ಯಾವುದೇ ಖಾರದ ಪದಾರ್ಥವನ್ನು ಬಳಸದೆ ಮಾಡುವ ಭಜ್ಜಿ.ತಿಂಗಳಿಗೆ  ಒಂದು ದಿನವಾದರೂ ಈ ತರಹದ ಆಹಾರವನ್ನ್ನು ಬಳಸಿ.


ಉತ್ತಮ ಆರೋಗ್ಯ ..ಆಹಾರದಲ್ಲೇ....

ಚಂದ್ರಿಕಾ ಹೆಗಡೆ


02 ಡಿಸೆಂಬರ್ 2011

ಟಮೇಟೋ ಸಾರು

ಟಮೇಟೋ - ೪ ಇದರಲ್ಲಿ ೩ ಬೇಯಿಸಿ
ತೊಗರಿ ಬೇಳೆ ಬೇಳೆ-೧/೪ ಕಪ್
ತೆಂಗಿನ ತುರಿ-೧/೨ ಕಪ್
ಕೊತ್ತಂಬರಿ ಬೀಜ- ೩ಚಮಚ 
ಜೀರಿಗೆ ೧/೨ ಚಮಚ
ಗುಂಟುರು  ಮೆಣಸಿನ ಕಾಯಿ-೨ 
ಬ್ಯಾಡಗಿ ಮೆಣಸಿನ ಕಾಯಿ-೨
ಇಂಗು
ಬೆಲ್ಲ ೧/೨ ಚಮಚ
ಉದ್ದಿನ ಬೇಳೆ ೧/೨ ಚಮಚ 
ಒಗ್ಗರಣೆಗೆ ಎಣ್ಣೆ, ಸಾಸಿವೆ, 
ಕರಿಬೇವು,ಅರಿಸಿನ 
ಹುಳಿಸೇ ರಸ ೨ ಚಮಚ 

ಬೇಳೆ ಯೊಂದಿಗೆ ೩ ಟಮೇಟೋ ಬೇಯಿಸಿ.

ಈಗ ಸಾರಿನ ಪುಡಿ ಮಾಡೋಣ:
ಜೀರಿಗೆ , ಕೊತ್ತಂಬರಿ ಬೀಜ, ಉದ್ದಿನ ಬೇಳೆ, ೨ ತರಹದ ಮೆಣಸಿನ ಕಾಯಿಗಳನ್ನು ತೆಂಗಿನ ತುರಿಯೊಂದಿಗೆ ಹುರಿದು ಪುಡಿ ಮಾಡಿ.  

ಬೇಯಿಸಿದ ಬೇಳೆ + ಟಮೇಟೋ  ಜೊತೆ ಈ ಪುಡಿಯನ್ನು ಹಾಕಿ. ಬೆಲ್ಲ, ಉಪ್ಪು, ಇಂಗು, ಹುಳಿಸೇ ರಸ ಮಿಕ್ಸ್ ಮಾಡಿ. ಇದಕ್ಕೆ ಕರಿಬೇವು, ಅರಿಸಿನ  ಸೇರಿಸಿ. ಸಾಸಿವೆ ಒಗ್ಗರಣೆ ಹಾಕಿ.

ಇಡ್ಲಿ/ ದೋಸೇಗೆಂದೇ .... ಬಂದಿದೆ...
ಸಾರು ಎಂದೆ.....

ಚಂದ್ರಿಕಾ ಹೆಗಡೆ



ಕ್ಯಾಬೇಜ್ ದೋಸೆ


ದೋಸೆ ಹಿಟ್ಟು- ೨ ಕಪ್
ಕ್ಯಾಬೇಜ್- ಹೆಚ್ಚಿದ್ದು೧/೨ ಕಪ್
ಈರುಳ್ಳಿ-೧ (ಹೆಚ್ಚಿ)
ಹಸಿಮೆಣಸಿನ ಕಾಯಿ-೨ ಹೆಚ್ಚಿ.
ಅರಿಸಿನ- ಚಿಟಿಕೆ
ಇಂಗು ಸ್ವಲ್ಪ
ಖಾರ ಪುಡಿ ೧/೨ ಚಮಚ
ಎಣ್ಣೆ

ದೋಸೆ ಹಿಟ್ಟಿಗೆ  ಎಣ್ಣೆ ಹೊರತು ಪಡಿಸಿ  ಎಲ್ಲವನ್ನು ಸೇರಿಸಿ... ದೋಸೆ ಮಾಡಿ....








ಮಲೆನಾಡಿಗರ  ಹೆಮ್ಮೆಯ.....ದೋಸೆ....!


ಚಂದ್ರಿಕಾ ಹೆಗಡೆ

ಮೆಂತೆ ಸೊಪ್ಪಿನ - ದಾಲ್

ಮೆಂತೆ ಸೊಪ್ಪು- ೧ ಕಟ್ಟು ( ಸ್ವಚ್ಛ ಮಾಡಿದ್ದು)
ಹೆಸರುಬೇಳೆ - ೧ ಕಪ್(ಬೇಯಿಸಿಕೊಳ್ಳಿ)
ಹಸಿಮೆಣಸು-೨ (ಖಾರವಿರುವದು)
ಕಸೂರಿ ಮೇತಿ..೨ ಚಮಚ...!
ಜೀರಿಗೆ-೧ ಚಮಚ 
ಎಣ್ಣೆ-೨ ಚಮಚ
ಉಪ್ಪು
ನಿಂಬೆರಸ-೧ ಚಮಚ 
ಸಾಸಿವೆ-೧/೨ ಚಮಚ 


ಬಾಣಲೆಗೆ ೨ ಚಮಚ ಎಣ್ಣೆ ಹಾಕಿ. ಇದಕ್ಕೆ ಸಾಸಿವೆ ಜೀರಿಗೆ , ಹಸಿಮೆಣಸಿನ ಕಾಯಿ ಕಸೂರಿ ಮೇತಿ  ಹಾಕಿ ಫ್ರೈ ಮಾಡಿ. ಹಸಿ ಮೆಂತೆ ಸೊಪ್ಪನ್ನು ಹಾಕಿ ಬೇಯುತ್ತಿದ್ದ ಹಾಗೆ ... ಬೇಯಿಸಿಟ್ಟ ಹೆಸರು ಬೇಳೆಯನ್ನು ಹಾಕಿ. ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ..ಸ್ವಲ್ಪ ಗಟ್ಟಿಯಾಗುವ ತನಕ.  ನಂತರ    ನಿಂಬೆರಸ ಸೇರಿಸಿ.

ಅನ್ನ/ ಚಪಾತಿ ಜೊತೆ.... ದಾಲ್...!

ಚಂದ್ರಿಕಾ ಹೆಗಡೆ

ಚಾಕ್ಲೆಟ್ ಬಾಲ್ಸ್

 ಕೋಕೋ ಪೌಡರ್-೩ ಚಮಚ
sweetened  condensed  milk -- ೩ ಚಮಚ 
ಬಿಸ್ಕಿಟ್ ಪುಡಿ- ೪ ಚಮಚ

೩ ಚಮಚ ಬಿಸ್ಕಿಟ್ ಪುಡಿಯೊಂದಿಗೆ ಹಾಲು( ಮೇಲೆ ಸೂಚಿಸಿದ್ದು ) ಕೋಕೋ ಪೌಡರ್ ಹಾಕಿ.. ಸಣ್ಣ ಉರಿಯಲ್ಲಿ ೫-೬ ನಿಮಿಷ ಇಡಿ. 
ಚೆನ್ನಾಗಿ ಮಿಕ್ಸ್  ಆಗಲಿ. ಅದು ಆರಿದ ಮೇಲೆ  ಚಿಕ್ಕ ಉಂಡೆಗಳನ್ನಾಗಿ ಮಾಡಿ ಉಳಿದ ೨ ಚಮಚ ಬಿಸ್ಕಿಟ್ ಪುಡಿಯಲ್ಲಿ ಹೊರಳಾಡಿಸಿ.
ಇದಕ್ಕೆ ಬೇಕಾದ್ರೆ ಒಣ ಹಣ್ಣು ಸೇರಿಸಬಹುದು....   ಒಣ ಹಣ್ಣು ಸೇರಿಸುವಾಗ ಮಾಡುವ ವಿಧಾನ ಬೇರೆ.... ಮುಂದಿನ ದಿನಗಳಲ್ಲಿ.....ಬರೆಯುವೆ....

ಮಗುವಿಗೆ ಅದೆಷ್ಟು ದಿನ  ಚಾಕಲೇಟ್  ಮರೆಯಲ್ಲಿ... ಎಂದು ನನ್ನ ಸ್ನೇಹಿತರು ಇಟ್ಟ ಪ್ರಶ್ನೆಗೆ ಉತ್ತರಿಸುವ  ವಿಧಾನ ಹೀಗೂ...... 

ನಿಮಗೂ ಮಗುವಿನ ಹೆಸರಿನಲ್ಲಿ ಸವಿಯುವ ಭಾಗ್ಯ.....


ಚಂದ್ರಿಕಾ ಹೆಗಡೆ

ಚೈನೀಸ್ ಕ್ಯಾಬೇಜ್ ಪಲ್ಯ...

ಚೈನೀಸ್ ಕ್ಯಾಬೇಜ್ ೧/೨
ಈರುಳ್ಳಿ-೨
ಕ್ಯಾರೆಟ್-೧
ಸಾಂಬಾರ್ ಪುಡಿ-೧/೨ ಚಮಚ 
ಉಪ್ಪು, ನಿಂಬೆರಸ 

 ಬಾಣಲೆಗೆ  ೨ ಚಮಚ ಎಣ್ಣೆ ಹಾಕಿ, ...ಈರುಳ್ಳಿಯನ್ನು ಕತ್ತರಿಸಿ...ಹುರಿಯಿರಿ..ಸಾಂಬಾರ್ ಪುಡಿ ಹಾಕಿ.. ಇದಕ್ಕೆ ಕ್ಯಾರೆಟ್ ತುರಿದು ಹಾಕಿ. ಸಣ್ಣದಾಗಿ ಕತ್ತರಿಸಿದ ಚೈನೀಸ್   ಕ್ಯಾಬೇಜ್ ಹಾಕಿ. ಎಲ್ಲವು ಅರ್ಧ ಬೆಂದಿರಲಿ. ನಿಂಬೆರಸ ಸೇರಿಸಿ ಉಪ್ಪು ಹಾಕಿ. 

ಅರ್ಧ ಬೆಂದಿರುವದರಲ್ಲೂ ಮಜವೇ.... ಹಿತವೇ...!

ಚಂದ್ರಿಕಾ ಹೆಗಡೆ

01 ಡಿಸೆಂಬರ್ 2011

ರವೆ ಸಿಹಿ ಬಾತ್( ಸಿರ- ಕೇಸರಿಬಾತ್ )

ರವೆ ೧ ಕಪ್
ಹಾಲು ೩ ಕಪ್
ತುಪ್ಪ- ಸ್ವಲ್ಪ ಧಾರಾಳ ಬಳಸಿ...! ---೧ ಕಪ್...!
ಸಕ್ಕರೆ ೧ ೧/೨ ಕಪ್ 
ಏಲಕ್ಕಿ
ಒಣ ದ್ರಾಕ್ಷಿ
ಗೋಡಂಬಿ...

ರವೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ.... ಘಮ ಬರುವ ತನಕ..... ಇದಕ್ಕೆ ಕಾಯಿಸಿದ ಹಾಲನ್ನು ಹಾಕಿ ಬೇಯಿಸಿ.... ಗಟ್ಟಿಯಾಗುವ ತನಕ. ನಂತರ ಸಕ್ಕರೆ ಸೇರಿಸಿ   ಬೇಯಿಸಿ,.... ತುಪ್ಪ ಮರಳುವ ತನಕ....

ತುಪ್ಪ ಮರಳುವದು ಎಂದರೆ---ರವೆಗೆ ಹಾಲು ಹಾಕಿ ಬೇಯಿಸುವಾಗ ತುಪ್ಪವನ್ನು ರವೆಯೇ ಹೀರಿಕೊಂಡಿರುತ್ತದೆ., ನಿಮಗೆ ತುಪ್ಪ ಎಲ್ಲಿ ಹೋಯ್ತು ಎಂದು ಚಿಂತಿಸುವ ತನಕ!  ಸಕ್ಕರೆ ಹಾಕಿ ಚೆನ್ನಾಗಿ ಕಾಯಿಸಿದಾಗ ಮತ್ತೆ ಮರಳುತ್ತದೆ.... ನೋಡಿ .... ಅಡುಗೆಯ ಚಮತ್ಕಾರ....!
ನಂತರ  ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಹಾಕಿ...


ಮತ್ತೆ ಮತ್ತೆ .... ಬಾತ್....! ಕೇಸರಿ ಬಾತ್...


ಚಂದ್ರಿಕಾ ಹೆಗಡೆ