ಟಮೇಟೋ - ೪ ಇದರಲ್ಲಿ ೩ ಬೇಯಿಸಿ
ತೊಗರಿ ಬೇಳೆ ಬೇಳೆ-೧/೪ ಕಪ್
ತೆಂಗಿನ ತುರಿ-೧/೨ ಕಪ್
ಕೊತ್ತಂಬರಿ ಬೀಜ- ೩ಚಮಚ
ಜೀರಿಗೆ ೧/೨ ಚಮಚ
ಗುಂಟುರು ಮೆಣಸಿನ ಕಾಯಿ-೨
ಬ್ಯಾಡಗಿ ಮೆಣಸಿನ ಕಾಯಿ-೨
ಇಂಗು
ಬೆಲ್ಲ ೧/೨ ಚಮಚ
ಉದ್ದಿನ ಬೇಳೆ ೧/೨ ಚಮಚ
ಒಗ್ಗರಣೆಗೆ ಎಣ್ಣೆ, ಸಾಸಿವೆ,
ಕರಿಬೇವು,ಅರಿಸಿನ
ಹುಳಿಸೇ ರಸ ೨ ಚಮಚ
ಬೇಳೆ ಯೊಂದಿಗೆ ೩ ಟಮೇಟೋ ಬೇಯಿಸಿ.
ಈಗ ಸಾರಿನ ಪುಡಿ ಮಾಡೋಣ:
ಜೀರಿಗೆ , ಕೊತ್ತಂಬರಿ ಬೀಜ, ಉದ್ದಿನ ಬೇಳೆ, ೨ ತರಹದ ಮೆಣಸಿನ ಕಾಯಿಗಳನ್ನು ತೆಂಗಿನ ತುರಿಯೊಂದಿಗೆ ಹುರಿದು ಪುಡಿ ಮಾಡಿ.
ಬೇಯಿಸಿದ ಬೇಳೆ + ಟಮೇಟೋ ಜೊತೆ ಈ ಪುಡಿಯನ್ನು ಹಾಕಿ. ಬೆಲ್ಲ, ಉಪ್ಪು, ಇಂಗು, ಹುಳಿಸೇ ರಸ ಮಿಕ್ಸ್ ಮಾಡಿ. ಇದಕ್ಕೆ ಕರಿಬೇವು, ಅರಿಸಿನ ಸೇರಿಸಿ. ಸಾಸಿವೆ ಒಗ್ಗರಣೆ ಹಾಕಿ.
ಇಡ್ಲಿ/ ದೋಸೇಗೆಂದೇ .... ಬಂದಿದೆ...
ಸಾರು ಎಂದೆ.....
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ