29 ಜೂನ್ 2013

ಬಿಸಿಬೇಳೆ ಬಾತ್ ಪುಡಿ

ಅಗತ್ಯ:

ಕಡಲೆ ಬೇಳೆ - ೧/೪ ಕಪ್ 
ಉದ್ದಿನ ಬೇಳೆ - ೧/೪ ಕಪ್ 
ಕೊತ್ತಂಬರಿ ಬೀಜ- ೩/೪ ಕಪ್ 
ಜೀರಿಗೆ- ೨ ಚಮಚ 
ಮೆಂತೆ - ೧/೨ ಚಮಚ 
ಗಸಗಸೆ - ೧ ಚಮಚ 
ಚಕ್ಕೆ ದಾಲ್ಚಿನಿ -೧ ೦ 
ಲವಂಗ -೫ 
ಗುಂಟೂರು& ಬ್ಯಾಡಗಿ ಮೆಣಸು- ೩ ೦ 
ಮೆಣಸಿನ ಕಾಳು - ೧ ೦ 


ವಿಧಾನ:

 ಎಲ್ಲವನ್ನು ಬೇರೆ ಬೇರೆ  ಓವನ್ ನಲ್ಲಿ ಹುರಿದುಕೊಳ್ಳಿ .

ಹುರಿಯುವಾಗ ೧ ೦ ಸೆಕೆಂಡಿ ಗೊಮ್ಮೆ  ಆಫ್ ಮಾಡಿ ಕೈಯಾಡಿಸಿ . 

ತಣ್ಣಗಾದ ಮೇಲೆ ಪುಡಿ ಮಾಡಿ . 

ಪುಡಿ 


powder ...... ಮುಖಕ್ಕೆ ಅಲ್ಲ .... ಬಾತ್ ಗೆ ...... ಛೆ  ಬಿಸಿ ಬೇಳೆ ಬಾತ್ ಗೆ  ...... ))))):::::)




ಚಂದ್ರಿಕಾ ಹೆಗಡೆ 

ಉಂಡೆ ಹುಳಿ

                                                                        ಉಂಡೆ


ಅಗತ್ಯ:
ತೊಗರಿ ಬೇಳೆ ,ಕಡಲೆ ಬೇಳೆ , ಹೆಸರು ಬೇಳೆ - ಸೇರಿ ೧ ಕಪ್
ಹಸಿಮೆಣಸಿನ ಕಾಯಿ- ೪
ಜೀರಿಗೆ- ೧ ಚಮಚ
ಈರುಳ್ಳಿ - ೧ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು- ೨ ಗಿಡ ಸ್ವಚ್ಚಗೊಳಿಸಿ ಹೆಚ್ಚಿ
ರುಚಿಗೆ ಉಪ್ಪು

ವಿಧಾನ :
ಬೆಲೆಯನ್ನು ೩-೪ ಗಂಟೆಗಳ ಕಾಲ ನೆನಸಿ . ಬೇಳೆಯ  ಜೊತೆ ಜೀರಿಗೆ ಹಸಿಮೆಣಸಿನ ಕಾಯಿ ಸೇರಿಸಿ ತರಿ ತರಿಯಾಗಿ ರುಬ್ಬಿ (ಗಟ್ಟಿಯಾಗಿ)
ಇದಕ್ಕೆ ಕೊತ್ತಂಬರಿ ಸೊಪ್ಪು , ಈರುಳ್ಳಿ, ಉಪ್ಪು ಹಾಕಿ ಮಿಕ್ಸ್ ಮಾಡಿ ಉಂಡೆ ಕಟ್ಟಿ . ಇದನ್ನು ಇಡ್ಲಿ ಪ್ಲೇಟ್ ನ ಲ್ಲಿಟ್ಟು  ೫-೭ ನಿಮಿಷ ಬೇಯಿಸಿ .

ಇದನ್ನು ಚಟ್ನಿ ಜೊತೆ ಸೇವಿಸಬಹುದು .

                                                              ಮಜ್ಜಿಗೆ ಹುಳಿ :

೨ ಗಂಟೆ ನೆನಸಿದ ಕಡಲೆ ಬೇಳೆ - ೧ ಚಮಚ
ಜೀರಿಗೆ- ೧ ಚಮಚ
ಹಸಿಮೆಣಸಿನ ಕಾಯಿ- ೩
ಕುಂಬಳ ಕಾಯಿ ಹೋಳು - ೧ ಕಪ್
ತೆಂಗಿನ ತುರಿ - ೧ ಕಪ್
ಮೊಸರು/ ಮಜ್ಜಿಗೆ - ೩ ಕಪ್
ಸಕ್ಕರೆ- ೧ ಚಮಚ
ಒಗ್ಗರಣೆಗೆ- ೧ ಚಮಚ ಎಣ್ಣೆ, ೧/೨ ಚಮಚ ಸಾಸಿವೆ, ಅರಿಸಿನ , ಕರಿಬೇವು , ಒಣ ಮೆಣಸಿನ ಕಾಯಿ

ವಿಧಾನ:
ಕುಂಬಳ ಕಾಯಿ ಹೋಳು ಬೇಯಿಸಿಡಿ .
ಇದಕ್ಕೆ ಉಪ್ಪು ಹಾಕಿ ಕುದಿಸಿ ,
ಬೆಲೆ ಜೀರಿಗೆ, ಹಸಿಮೆಣಸಿನ ಕಾಯಿ , ತೆಂಗಿನ ತುರಿ  ಸೇರಿಸಿ ರುಬ್ಬಿ. ಈ ಮಿಶ್ರಣವನ್ನು ಹೋಳಿಗೆ ಹಾಕಿ ಕುದಿಸಿ
ಮಜ್ಜಿಗೆ ಅಗತ್ಯಕ್ಕೆ ನೀರು ಸಕ್ಕರೆ ಸೇರಿಸಿ .
ಈ ಮೊದಲು ಹೇಳಿದ /ಮಾಡಿಟ್ಟ ಉಂಡೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ .
ಒಗ್ಗರಣೆ ಹಾಕಿ.





ಹುಳಿ  ಹುಳಿಯಲ್ಲ ........ :) ಸವಿ!!


ಚಂದ್ರಿಕಾ ಹೆಗಡೆ 

ಸಾಂಬಾರ್ ಪುಡಿ

ಅಗತ್ಯ:
ಕೊತ್ತಂಬರಿ ಬೀಜ - ೨ ಬೌಲ್ 
ಮೆಣಸಿನ ಕಾಯಿ ( ಗುಂಟುರ್ & ಬ್ಯಾಡಗಿ) ೨ ೦ 
ಜೀರಿಗೆ- ೧/೨ ಬೌಲ್ 
ಮೆಂತೆ - ೪ ಚಮಚ 
ತೊಗರಿ ಬೇಳೆ - ೧/೨ ಕಪ್ 
ಕಡಲೆ ಬೇಳೆ - ೧/೨ ಕಪ್ 
ಸಾಸಿವೆ- ೪ ಚಮಚ 
ಅಕ್ಕಿ- ೩ ಚಮಚ 
ಅರಿಸಿನ - ೫ ಚಮಚ 
ಹಿಂಗು - ಅಡಿಕೆ ಗಾತ್ರ 
ಕರಿಬೇವಿನ  ಎಲೆಗಳು - ೧ ಕಟ್ಟು 


ಕೊತ್ತಂಬರಿ ಬೀಜ, ಮೆಣಸಿನ ಕಾಯಿ, ಮೆಂತೆ, ತೊಗರಿ  ಬೇಳೆ , ಸಾಸಿವೆ, ಕಡಲೆ ಬೇಳೆ ,  ಜೀರಿಗೆ , ಅಕ್ಕಿ ಯನ್ನು ಬಿಸಿಲಿನಲ್ಲಿ ಒಣಗಿಸಿ .  ಓವನ್ ನಲ್ಲಿ ಮಾಡಬಹುದು . ಕರಿಬೇವಿನ ಎಲೆ ಒಂದು ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ  ಒಣಗಿಸಿ . 
ಮಿಕ್ಸರ್ ನಲ್ಲಿ ಇಂಗು ಅರಿಸಿನ ಹಾಗು ಎಲ್ಲವನ್ನೂ  ಸೇರಿಸಿ ಪುಡಿ ಮಾಡಿ ಗಾಳಿ ಯಾ ಡದ  ಬಾಕ್ಸ್ ನಲ್ಲಿ ಇಡಿ . 




ತರಾತುರಿಯ ಬದುಕಿನಲ್ಲಿ  ಸಂಗ್ರಹವೂ !!

ಚಂದ್ರಿಕಾ ಹೆಗಡೆ 

ದೊಡ್ಡ ಪತ್ರೆ ರೈಸ್

 ಅಗತ್ಯ:

ದೊಡ್ಡ ಪತ್ರೆ - ೨ ಕಪ್                      
ಹಸಿಮೆಣಸಿನ ಕಾಯಿ- ೪
ಅನ್ನ - ೪ ಕಪ್
ಅರಿಸಿನ - ೧ ಚಮಚ
ಎಣ್ಣೆ- ೪ ಚಮಚ
ಉಪ್ಪು ರುಚಿಗೆ
ನಿಂಬೆ ರಸ- ೨ ಚಮಚ
ಬೆಲ್ಲ- ೧ ಚಮಚ
ಸಾಸಿವೆ- ೧ ಚಮಚ

ವಿಧಾನ : ದೊಡ್ಡಪತ್ರೆ  ಹಾಗು  ಹಸಿಮೆಣಸಿನ ಕಾಯಿ ರುಬ್ಬಿ.
ಬಾಣಲೆಗೆ  ಎಣ್ಣೆ , ಸಾಸಿವೆ ಹಾಕಿ .... ಚಟ್ ಪಟ್ ಅನ್ನುವಾಗ ಅರಿಸಿನ ಹಾಗು ರುಬ್ಬಿಟ್ಟ ಮಿಶ್ರಣ, ಉಪ್ಪು, ಬೆಲ್ಲ ಸೇರಿಸಿ .  ೩ ನಿಮಿಷ  ಸಣ್ಣ ಉರಿಯಲ್ಲಿ ಹುರಿದು  ಅನ್ನ ಸೇರಿಸಿ .  ಒಲೆಯಿಂದ ಇಳಿಸಿ .
ಉರಿಯಿಂದ  ತೆಗೆದ ಮೇಲೆ ನಿಂಬೆ ರಸ ಸೇರಿಸಿ .





ಸುಗಂಧಿತ ..... ಅನ್ನ .....



ಚಂದ್ರಿಕಾ ಹೆಗಡೆ 

ದೊಡ್ಡ ಪತ್ರೆ ತಂಬುಳಿ

ಅಗತ್ಯ:

ದೊಡ್ಡಪತ್ರೆ - ೧/೨ ಕಪ್
ಜೀರಿಗೆ- ೧ ಚಮಚ
ಬೆಲ್ಲ- ೧/೨ ಚಮಚ
ತೆಂಗಿನ ತುರಿ - ೧/೨ ಕಪ್
ಮಜ್ಜಿಗೆ- ೧ಕಪ್
ಉಪ್ಪು ರುಚಿಗೆ
ಎಣ್ಣೆ ೧ ಚಮಚ

ವಿಧಾನ:

ದೊಡ್ಡ ಪತ್ರೆ  , ಜೀರಿಗೆ ಯನ್ನು  ಎಣ್ಣೆಯಲ್ಲಿ ಹುರಿದು ತೆಂಗಿನ ತುರಿ , ಮಜ್ಜಿಗೆಯಲ್ಲಿ  ರುಬ್ಬಿ . ಮತ್ತೆ ಬೇಕಾದ್ರೆ ಮಜ್ಜಿಗೆ ಇನ್ನಷ್ಟು ಸೇರಿಸಿ . ಉಪ್ಪು, ಬೆಲ್ಲ ಹಾಕಿ.


ಸವಿ ನೆನಪು ಮಾತ್ರವಲ್ಲ  ಘಳಿಗೆಯೂ !!


ಚಂದ್ರಿಕಾ ಹೆಗಡೆ 

ಪಾಲಕ್ ತಂಬುಳಿ

ಅಗತ್ಯ:

ಪಾಲಕ್ ಸೊಪ್ಪು - ೧/೨ ಕಪ್ ( ತೊಳೆದು ಹೆಚ್ಚಿದ್ದು)
ತೆಂಗಿನ ತುರಿ - ೧/೪ ಕಪ್
ಮಜ್ಜಿಗೆ - ೧ ಕಪ್
 ಜೀರಿಗೆ- ೧/೨ ಚಮಚ
ಮೆಣಸಿನ ಕಾಳು - ೩-೪
ಎಣ್ಣೆ - ೧ ಚಮಚ
ಬೆಲ್ಲ ೧/೪ ಚಮಚ
ಉಪ್ಪು ರುಚಿಗೆ


ವಿಧಾನ:
ಎಣ್ಣೆಯಲ್ಲಿ ಜೀರಿಗೆ , ಮೆಣಸಿನ ಕಾಳು , ಸೊಪ್ಪನ್ನು ಹುರಿದು ತೆಂಗಿನ ತುರಿ ಹಾಗು ಮಜ್ಜಿಗೆಯಲ್ಲಿ ರುಬ್ಬಿ. ಅಗತ್ಯಕ್ಕೆ ತಕ್ಕ ಉಪ್ಪು, ೧/೪ ಚಮಚ ಬೆಲ್ಲವನ್ನು ಸೇರಿಸಿ .  







ಮನೆಯ ಶಕ್ತಿ  ಪಡೆದುಕೊಳ್ಳುವದು ಅಡುಗೆ ಮನೆಯಲ್ಲಿ.....!



ಚಂದ್ರಿಕಾ ಹೆಗಡೆ 

11 ಜೂನ್ 2013

ತಿಳಿ ಸಾರಿನ ಪುಡಿ

ಅಗತ್ಯ :
ತೊಗರಿಬೇಳೆ - ೧ ಕಪ್
ಮೆಣಸಿನ ಕಾಳು - ೧ ೧/೨ ಕಪ್
ಬ್ಯಾಡಗಿ ಮೆಣಸು - ೨ ೦
ಜೀರಿಗೆ - ೧ ೧/೪  ಕಪ್
ಕೊತ್ತಂಬರಿ - ೧ ಕಪ್
ಕರಿಬೇವಿನಎಲೆ - ೧ ಕಪ್
ಅರಿಸಿನ ಪುಡಿ - ೫ ಚಮಚ
ಇಂಗು  - ೨ ಚಮಚ


ವಿಧಾನ :
 ಎಲ್ಲವನ್ನು  ಸಣ್ಣ ಉರಿಯಲ್ಲಿ ಹುರಿದುಕೊಂಡು  ಚೆನ್ನಾಗಿ ಪುಡಿ ಮಾಡಿ ಗಾಳಿಯಾಡದ ಜಾರ್ ನಲ್ಲಿ ಇಡಿ .


ಮಾರ್ಕೆಟ್ ಪುಡಿ ಇಂದಿನಿಂದ  ಪುಡಿ ಪುಡಿ .......:)



ಚಂದ್ರಿಕಾ ಹೆಗಡೆ