08 ಡಿಸೆಂಬರ್ 2011

ಮೊಳಕೆ ಮೆಂತೆ ಪಲಾವ್

 ಅನ್ನ- ೨ ಕಪ್
ಮೊಳಕೆ ಮೆಂತೆ- ೧ ಕಪ್
ಈರುಳ್ಳಿ-೨ ಹೆಚ್ಚಿದ್ದು
ಮೆಣಸಿನ ಪುಡಿ- ೨ ಚಮಚ
ಹಸಿಮೆಣಸು- ೨-೩ ಕತ್ತರಿಸಿದ್ದು
ಶುಂಟಿ- ಬೆಳ್ಳುಳ್ಳಿ ಪೇಸ್ಟ್- ೨ ಚಮಚ
ಕೊತ್ತಂಬರಿ ಸೊಪ್ಪು
ಚಕ್ಕೆ, ಲವಂಗ
ಸಾಸಿವೆ,
ನಿಂಬೆ ರಸ, ಉಪ್ಪು
ಎಣ್ಣೆ


ಬಾಣಲೆಯಲ್ಲಿ ಎಣ್ಣೆ ಸಾಸಿವೆ ಚಕ್ಕೆ ಲವಂಗ ಹುರಿಯಿರಿ. ಇದಕ್ಕೆ ಈರುಳ್ಳಿ+ಹಸಿಮೆಣಸು+ಶುಂಟಿ ಬೆಳ್ಳುಳ್ಳಿ ಪೇಸ್ಟ್  ಸೇರಿಸಿ ಹುರಿಯಿರಿ. ನಂತರ ಮೊಳಕೆ ಕಟ್ಟಿದ ಮೆಂತೆ ಸೇರಿಸಿ. ೫-೭ ನಿಮಿಷ ಬೇಯಿಸಿ.
ಇದಕ್ಕೆ ಮೆಣಸಿನ ಪುಡಿ+ ಅರಿಸಿನ ಸ್ವಲ್ಪ ಉಪ್ಪು ಹಾಕಿ. ಅನ್ನ ಸೇರಿಸಿ. ಕೊತ್ತಂಬರಿ ಸೊಪ್ಪು+  ರುಚಿಗೆ ತಕ್ಕಸ್ಟು ಇನ್ನಸ್ಟು ಉಪ್ಪು ಸೇರಿಸಿ ಚೆನ್ನಾಗಿ  ಮಿಕ್ಸ್ ಮಾಡಿ.
ಕೊನೆಯಲ್ಲಿ ನಿಂಬೆ ರಸ ಸೇರಿಸಿ.

ಕಹಿ ಇಲ್ಲದ ಮೆಂತೆ  ಪಲಾವ್.
ಕೇಳ್ಪಟ್ಟ ಮಾತು 
ಸ್ನೇಹಿತರೆ , ಮೆಂತೆ ತಂಪಿನ ಅಂಶ ಹೊಂದಿದೆ ಎಂಬುದು ಹಿರಿಯರ ಮಾತು. ನನ್ನ ಇದೆ ಬ್ಲಾಗ್ ನಲ್ಲಿ ಈ ಮೊದಲು ಮೆಂತೆ ಆಸರಿಗೆ ಎಂಬ ಪಾನೀಯವೊಂದನ್ನು ಪರಿಚಯಿಸಿದ್ದೇನೆ.    ದಿನಾಲು ಬೆಳ್ಳಿಗ್ಗೆ ನೆನಸಿದ ಮೆಂತೆಯನ್ನು  ತಿಂದರೆ ಮಹಿಳೆಯರನ್ನು ಕಾಡುವ ತಿಂಗಳಿನ ನೋವು ಕಡಿಮೆಯಾಗುವದು ಎಂಬುದು ಕೇಳ್ಪಟ್ಟ ಮಾತು.

ಮುಂಬರುವ ದಿನಗಳಲ್ಲಿ ಮೆಂತೆ ದೋಸೆ, ಚಟ್ನಿ , ಕಷಾಯವನ್ನು ಪರಿಚಯಿಸುತ್ತೇನೆ.

ಅಡುಗೆಯಲ್ಲಿ/ ಅಡುಗೆ ಬರೆಯುವಲ್ಲಿ ನನಗಂತೂ ಸಮಾಧಾನ....


ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ