24 ಜುಲೈ 2011

ಗಡಿಬಿಡಿ ದೋಸೆ ....?

ಅಗತ್ಯ:
         ಚಿರೋಟಿ ರವೆ -೧ ಬಟ್ಟಲು
         ಗೋದಿ ಹಿಟ್ಟು  ೧/೨ ಬಟ್ಟಲು
         ಅಕ್ಕಿ ಹಿಟ್ಟು ೧/೨ ಬಟ್ಟಲು
          ರುಚಿಗೆ ತಕ್ಕಸ್ಟು ಉಪ್ಪು
         ಚಿಟಿಕೆ ಸೋಡಾ
.......



ಈ ಮೇಲಿನ ಎಲ್ಲ ಸಾಮಗ್ರಿಗಳನ್ನು ನೀರಿನಲ್ಲಿ ಕಲಸಿ... ಚಿಟಿಕೆ ಸೋಡಾ ಸೇರಿಸಿ... ಚಟ್ನಿ ಮಾಡುವಷ್ಟು  ವೇಳೆ ನೆನಸಿದರೂ 
ಸಾಕು 

ತಿನ್ನುವಾಗ ಗಡಿಬಿಡಿ ಮಾಡಬೇಕು ಅಂತ ಅನ್ನಿಸುವದೆ ಇಲ್ಲ....!


ಗಡಿಬಿಡಿಯ ಸವಿಯಲ್ಲಿ

ಚಂದ್ರಿಕಾ ಹೆಗಡೆ

ಹಲಸಿನ ಹಣ್ಣಿನ ಕಡುಬು <ಇಡ್ಲಿ>

ಅಗತ್ಯ:
ಹಲಸಿನ ಹಣ್ಣಿನ ತೊಳೆ ೨ ಬಟ್ಟಲು<ಹೆಚ್ಚಿದ್ದು>
ಅಕ್ಕಿ-೨ ಬಟ್ಟಲು
ಬೆಲ್ಲಾ <ಜೋನಿ> ೧ ಬಟ್ಟಲು< ರುಚಿಗೆ ಇನ್ನು ಹೆಚ್ಚು ಹಾಕಬಹುದು>
ಚಿಟಿಕೆ ಉಪ್ಪು


ಅಕ್ಕಿಯನ್ನು ೩-೪ ಗಂಟೆ ನೆನಸಿ. ಅದರ ಜೊತೆ ಹೆಚ್ಚಿದ ೨ ಬಟ್ಟಲು ತೊಳೆಗಳಲ್ಲಿ ೧ ಬಟ್ಟಲನ್ನು ಅಕ್ಕಿ ಜೊತೆ ಹಾಕಿ ರುಬ್ಬಿ. ಆ ಮಿಶ್ರಣಕ್ಕೆ ಬೆಲ್ಲ, ಚಿಟಿಕೆ ಉಪ್ಪು ಸೇರಿಸಿ. ಅಕ್ಕಿ ರುಬ್ಬುವದು: ಸ್ವಲ್ಪ ತರಿ ತರಿಯಾಗಿರಲಿ... ಹಾಂ!
 ಇಡ್ಲಿ ಪ್ಲೇಟ್ ನಲ್ಲಿ  ಹಾಕಿ ಬೇಯಿಸಿ.
ತುಪ್ಪ... ಇಲ್ಲವೇ ಮೊಸರಿನ ಜೊತೆ....

ಮಳೆಗಾಲದ  ಮಲೆನಾಡಿನ ಸವಿ....

ಬೆಂಗಳೂರಿನಲ್ಲೂ....







ಚಂದ್ರಿಕಾ ಹೆಗಡೆ

17 ಜುಲೈ 2011

ಪುದಿನ ರೈಸ್ :



                 ಪುದಿನ ಸೊಪ್ಪು  ೧ ಕಟ್ಟು
                  ಚಕ್ಕೆ ೧ ತುಂಡು
                 ಪಲಾವ್ ಎಲೆ-೧
                 ಕಾಳು ಮೆಣಸು- ೪-೫
                 ಹಸಿಮೆಣಸು-೨
                 ಲವಂಗ-೪-೫
                 ಅಕ್ಕಿ ೩ ಬಟ್ಟಲು
                 ಬಟಾಟೆ-೨-೩ <ಉದ್ದಕ್ಕೆ ಹೆಚ್ಚಬೇಕು>
                   ಎಣ್ಣೆ ೪-೫ ಚಮಚ 
                  ಹುಳಿಸೆ ರಸ ೧ ಚಮಚ 
ಚಟ್ ಪಟ್:
             ಪುದಿನ  ಸೊಪ್ಪು,ಹಸಿಮೆಣಸು, ಚಕ್ಕೆ , ಲವಂಗ,ಕಾಳು ಮೆಣಸು, ಎಲ್ಲವನ್ನು ರುಬ್ಬಿ.
              ಕುಕ್ಕರ್ ನಲ್ಲಿ, ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಬಟಾಟೆ ಹಾಕಿ, ಆಮೇಲೆ ರುಬ್ಬಿದ ಮಿಶ್ರಣ ಸೇರಿಸಿ ಹಸಿ ವಾಸನೆ ಹೋಗುವ ತನಕ  ಹುರಿಯಿರಿ . ಅಕ್ಕಿಯ ಎರಡರಸ್ಟು  ನೀರು ಹಾಕಿ, ಹುಳಿಸೆ ರಸ ಸೇರಿಸಿ. ಉಪ್ಪು ಹಾಕಿ. ಅಕ್ಕಿ ಹಾಕಿ ೩ ಕೂಗು ಮಾಡಿ. 
ಇದರ ಜೊತೆ ಮೊಸರು ಸವತೆಕಾಯಿ ಮೊಸರು ಬಜ್ಜಿ... 
ಭಾನುವಾರದ ಭೋಜನ...

ಚಂದ್ರಿಕಾ ಹೆಗಡೆ 
  

15 ಜುಲೈ 2011

ಹಲಸಿನ ಹಣ್ಣಿನ ದೋಸೆ
 ಅಗತ್ಯ: 
ಹಲಸಿನ ಹಣ್ಣಿನ ತೊಳೆಗಳು ೫-೬
ಅಕ್ಕಿ ಹಿಟ್ಟು ೧ ಕಪ್
ಬೆಲ್ಲ ೪-೫ ಚಮಚ
 ಎಣ್ಣೆ ಸ್ವಲ್ಪ

ಮಾಡೋಕೆ ಸೈ:
   ಅಕ್ಕಿ ಹಿಟ್ಟಿಗೆ ಹೆಚ್ಚಿದ ತೊಳೆಗಳನ್ನು  ಸೇರಿಸಿ, ಬೆಲ್ಲ ಸೇರಿಸಿ, ದೋಸೆ ಕಾವಲಿಗೆ ಎಣ್ಣೆ ಸವರಿ ದಪ್ಪಗೆ ದೋಸೆ ಹಾಕಿ...

ಇನ್ನೊಂದು ವಿಧಾನ... ಇದೇ ಅಗತ್ಯ:
 ಅಕ್ಕಿ ಹಿಟ್ಟಿಗೆ ಹಲಸಿನ ಹಣ್ಣಿನ ತೊಳೆಗಳನ್ನು ರುಬ್ಬಿ ಹಾಕಿ, ಇದಕ್ಕೆ ಬೆಲ್ಲ ಸೇರಿಸಿ ದೋಸೆ ಮಾಡಿ


ಬಿಸಿ ಬಿಸಿ ದೋಸೆಗೆ... ಘಮ್ಮೆನ್ನುವ ತುಪ್ಪ.....


ಚಂದ್ರಿಕಾ ಹೆಗಡೆ 
ಹಲಸಿನ  ಹಣ್ಣಿನ ಮುಳುಕ <ಸುಟ್ಟೆವು>
ಅಗತ್ಯ:
ಹೆಚ್ಚಿದ ಹಲಸಿನ ತೊಳೆಗಳು ೧/೨ ಕಪ್ 
ಅಕ್ಕಿ ಹಿಟ್ಟು  ೧ ಕಪ್
ಬೆಲ್ಲ ೫-೬ ಚಮಚ 
ಕರಿಯಲು ಎಣ್ಣೆ

ಸೈ.... 
 ಅಕ್ಕಿಯನ್ನು ೨-೩ ಗಂಟೆಗಳ ಕಾಲ ನೆನಸಿ ಸ್ವಲ್ಪ ಗಟ್ಟಿ ರುಬ್ಬಿಕೊಳ್ಳಿ. ಅದಕ್ಕೆ ಬೆಲ್ಲ, ಹೆಚ್ಚಿದ ಹಲಸಿನ ತೊಳೆಗಳನ್ನು ಹಾಕಿ. ಚಿಟಿಕೆ ಉಪ್ಪನ್ನು ಹಾಕಿ.
ಎಣ್ಣೆ ಬಿಸಿ ಮಾಡಿ... ಕೈಯಿಂದ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದು... ಎಣ್ಣೆಗೆ ಹಾಕಿ... ಬೇಯಿಸಿ.

ಇದರ ಜೊತೆ ಶುಂಟಿ ಚಟ್ನಿ... ತುಪ್ಪ... 
   ಸರಳವಾದರೂ... ಸವಿ ಬಹಳ...!
ಚಂದ್ರಿಕಾ ಹೆಗಡೆ 

14 ಜುಲೈ 2011

ಶ್ಯಾವಿಗೆ ಉಪ್ಪಿಟ್ಟು:



ಶ್ಯಾವಿಗೆ< ಅಕ್ಕಿ ಶ್ಯಾವಿಗೆ > ೧ ಬಟ್ಟಲು 
ಎಣ್ಣೆ ೩-೪ ಚಮಚ
ಈರುಳ್ಳಿ ೧ ಸಣ್ಣ ಗೆ  ಹೆಚ್ಚಿದ್ದು
ಟೊಮೇಟೊ  ೧ ಹೆಚ್ಚಿದ್ದು
ಹಸಿಮೆಣಸು ೧ ಸಣ್ಣಗೆ ಹೆಚ್ಚಿದು 
ಅರಿಸಿನ
ಕರಿಬೇವು
ಕ್ಯಾಪ್ಸಿಕಂ ೧ ಹೆಚ್ಚಿದ್ದು.
ಒಗ್ಗರಣೆಗೆ ಸಾಸಿವೆ 
ಉಪ್ಪು ರುಚಿಗೆ 
ಸೈ:


ಶ್ಯಾವಿಗೆಯನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ಇಡಿ. ಒಗ್ಗರಣೆಗೆ ಎಣ್ಣೆ ಹಾಕಿ. ಬಿಸಿ ಮಾಡಿ ಸಾಸಿವೆ ಹಸಿಮೆಣಸು, ಕರಿಬೇವು, ಈರುಳ್ಳಿ ಸೇರಿಸಿ.. ಹುರಿಯಿರಿ. ಇದಕ್ಕೆ ಟೊಮೇಟೊ  ಸೇರಿಸಿ ಬೇಯಿಸಿ . ಶ್ಯವಿಗೆಯ ೨ ರಷ್ಟು ನೀರು ಹಾಕಿ ಕುದಿಸಿ.. ಉಪ್ಪು ಹಾಕಿ.

ಕುದಿಯುತ್ತಿರುವ ಆ ನೀರಿಗೆ ಶ್ಯಾವಿಗೆ ಸೇರಿಸಿ... ಉರಿ ಸಣ್ಣದು ಮಾಡಿ ೭ ನಿಮಿಷ ಹಾಗೆ ಇಡಿ...

ರುಚಿ... ಬೇಕಾದಷ್ಟು...ಇಷ್ಟ... 

ಚಂದ್ರಿಕಾ ಹೆಗಡೆ

ಟೊಮೇಟೊ ಗೊಜ್ಜು:



ಟೊಮೇಟೊ ೪-೫ ಹೆಚ್ಚಿದ್ದು 
ಮೆಣಸಿನ ಪುಡಿ-೧ ಚಮಚ
ಈರುಳ್ಳಿ -೧  ಸಣ್ಣಗೆ ಹೆಚ್ಚಿದ್ದು 
ಅರಿಸಿನ ಪುಡಿ
ರುಚಿಗೆ ಉಪ್ಪು
ಬೆಲ್ಲ- ಸ್ವಲ್ಪ 
ಕರಿಬೇವು
ಒಗ್ಗರಣೆಗೆ ಎಣ್ಣೆ, ಸಾಸಿವೆ , ಹಸಿಮೆಣಸು,ಜೀರಿಗೆ 


ಸೈ:

ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿ, ಸಾಸಿವೆ,ಜೀರಿಗೆ ಹಾಕಿ, ನಂತರ ಕರಿಬೇವು ಹಸಿಮೆಣಸು ಹಾಕಿ, ಅರಿಸಿನ ಪುಡಿ ಸೇರಿಸಿ.
ಹೆಚ್ಚಿದ ಈರುಳ್ಳಿ ಸೇರಿಸಿ ಬಾಡಿಸಿ. ಅದಕ್ಕೆ ಟೊಮೇಟೊ, ಮೆಣಸಿನ ಪುಡಿ   ಹಾಕಿ. ಬೆಂದ ಮೇಲೆ ಬೆಲ್ಲ , ಉಪ್ಪು ಹಾಕಿ. ನೀರಿನ ಅಗತ್ಯ ಇಲ್ಲ...

ಚಪಾತಿಯ ಜೊತೆ.....



ಚಂದ್ರಿಕಾ ಹೆಗಡೆ 

ಸಾಂಬಾರ್ ದೋಸೆ


  

ಅಗತ್ಯ: 
        ಮಾಮೂಲು ದೋಸೆ ಹಿಟ್ಟು
        ಹೆಚ್ಚಿದ ಸವತೆ ಕಾಯಿ ಹೋಳುಗಳು < ಹಿಟ್ಟಿನ ಪ್ರಮಾಣಕ್ಕೆ ತಕ್ಕಂತೆ>
         ಈರುಳ್ಳಿ ಸಣ್ಣಗೆ ಹೆಚ್ಚಿದು
         ಹಸಿಮೆಣಸು, ಕೊತ್ತ0ಬರಿ ಸೊಪ್ಪು, ಇಂಗು, ಸಾಂಬಾರ್ ಪುಡಿ, ಅರಿಸಿನ

ಮಾಡುವ ವಿಧಾನ:

ಈ ಮೇಲಿನ ಸಾಮಗ್ರಿಗಳನ್ನು ಸೇರಿಸಿ.. ದೋಸೆ ತವಾದ ಮೇಲೆ ಆದಸ್ಸ್ತು ತೆಳ್ಳಗೆ ಹಾಕಿ.. ಎರಡು ಕಡೆ ಬೇಯಿಸಿ...

 ಇದರ ಜೊತೆ ಮೊಸರು ಬೆಲ್ಲ...
ಬಲ್ಲವನೇ ಬಲ್ಲ....

ಚಂದ್ರಿಕಾ ಹೆಗಡೆ 

ರವೆ ರೊಟ್ಟಿ:




ರವೆ ೧ ಬಟ್ಟಲು
ಉಪ್ಪು ರುಚಿಗೆ.
ಗೋದಿ ಹಿಟ್ಟು ಸ್ವಲ್ಪ...


ರವೆಗೆ ಸ್ವಲ್ಪ ನೀರು ಹಾಕಿ. ರವೆಯ ೨ ಪಟ್ಟು.
ಉಪ್ಪು ಸೇರಿಸಿ ಕುದಿಸಿ. ಗಟ್ಟಿಯಾಗುವಾಗ ಒಲೆಯಿಂದ ಇಳಿಸಿ. ಆರಿದ ಮೇಲೆ  ಉಂಡೆ ಮಾಡಿ . ಲಟ್ಟಿಸುವಾಗ ಗೋದಿ ಹಿಟ್ಟಿನಲ್ಲಿ ಉರುಳಿಸಿ...! ಲಟ್ಟಿಸಿ.
ಬೇಯಿಸುವಾಗ ಪುಲ್ಕಾ ತವಾದ ಮೇಲೆ ಬೇಯಿಸಿ.  ಜೊತೆಯಲ್ಲೊಂದು ಖಾರ ಚಟ್ನಿ ಸಿದ್ಧವಿರಲಿ... ಹಾಂ!


ಸವಿ ಸವಿ....ಸಮಯ ನಿಮ್ಮದಾಗಲಿ....


ಚಂದ್ರಿಕಾ ಹೆಗಡೆ 

ಹಲಸಿನ ಹಣ್ಣಿನ ಪಾಯಸ< ಬಕ್ಕೆ ಹಣ್ಣು>




ಅಗತ್ಯ:
   ಹಲಸಿನ ಹಣ್ಣಿನ ತೊಳೆಗಳು-೧೦-೧೫
   ಬೆಲ್ಲ
   ತೆಂಗಿನ ಹಾಲು ೩ ಬಟ್ಟಲು
   ರವೆ- ೧/೨ ಬಟ್ಟಲು
   ಏಲಕ್ಕಿ
   ಗೋಡಂಬಿ
   ತುಪ್ಪ-೨ ಚಮಚ


ಮಾಡುವದಕ್ಕೆ ಸೈ.....!
  ಹಲಸಿನ ಹಣ್ಣಿನ ತೊಳೆಗಳನ್ನು  ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಸ್ವಲ್ಪ ನೀರು ಹಾಕಿ ಬೇಯಿಸಿ... ಅದಕ್ಕೆ ರವೆಯನ್ನು ಹಾಕಿ... ೫ ನಿಮಿಷ ಬೇಯಿಸಿ..
  ತೆಂಗಿನ ತುರಿ, ಏಲಕ್ಕಿ ಮಿಕ್ಸಿಗೆ ಹಾಕಿ ರುಬ್ಬಿ... ಸೋಸಿ.
  ಬೆಂದ ರವೆ ಹಾಗು ಹಲಸಿನ ತೊಳೆ   ಇದಕ್ಕೆ ತೆಂಗಿನ ಹಾಲು ಬೆಲ್ಲ ಸೇರಿಸಿ... ೫ ನಿಮಿಷ ಕುದಿಸಿ. 
 ತುಪ್ಪದಲ್ಲಿ ಹುರಿದ ಗೋಡಂಬಿ  ಸೇರಿಸಿ...

ದೋಸೆ ಚಪಾತಿ ಜೊತೆ.... ಮನ ಮೆಚ್ಚುವದು....!
    
ಚಂದ್ರಿಕಾ ಹೆಗಡೆ