ಮೆಂತೆ ಸೊಪ್ಪು- ೧ ಕಟ್ಟು ( ಸ್ವಚ್ಛ ಮಾಡಿದ್ದು)
ಹೆಸರುಬೇಳೆ - ೧ ಕಪ್(ಬೇಯಿಸಿಕೊಳ್ಳಿ)
ಹಸಿಮೆಣಸು-೨ (ಖಾರವಿರುವದು)
ಕಸೂರಿ ಮೇತಿ..೨ ಚಮಚ...!
ಜೀರಿಗೆ-೧ ಚಮಚ
ಎಣ್ಣೆ-೨ ಚಮಚ
ಉಪ್ಪು
ನಿಂಬೆರಸ-೧ ಚಮಚ
ಸಾಸಿವೆ-೧/೨ ಚಮಚ
ಬಾಣಲೆಗೆ ೨ ಚಮಚ ಎಣ್ಣೆ ಹಾಕಿ. ಇದಕ್ಕೆ ಸಾಸಿವೆ ಜೀರಿಗೆ , ಹಸಿಮೆಣಸಿನ ಕಾಯಿ ಕಸೂರಿ ಮೇತಿ ಹಾಕಿ ಫ್ರೈ ಮಾಡಿ. ಹಸಿ ಮೆಂತೆ ಸೊಪ್ಪನ್ನು ಹಾಕಿ ಬೇಯುತ್ತಿದ್ದ ಹಾಗೆ ... ಬೇಯಿಸಿಟ್ಟ ಹೆಸರು ಬೇಳೆಯನ್ನು ಹಾಕಿ. ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ..ಸ್ವಲ್ಪ ಗಟ್ಟಿಯಾಗುವ ತನಕ. ನಂತರ ನಿಂಬೆರಸ ಸೇರಿಸಿ.
ಅನ್ನ/ ಚಪಾತಿ ಜೊತೆ.... ದಾಲ್...!
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ