25 ಜನವರಿ 2012

ಪುಳಿಯೋಗರೆ ಗೊಜ್ಜು

ಅಗತ್ಯಗಳು:

ಹುಳಿಸೆ ಹಣ್ಣು- ನಿಂಬೆ ಗಾತ್ರದ್ದು-೨ 
ಬೆಲ್ಲ- ೪-೫ ಚಮಚ
ಸಾರಿನ ಪುಡಿ- ೪-೫ ಚಮಚ
ಕೊಬ್ಬರಿ ತುರಿ - ೭-೮ ಚಮಚ
ಕಡಲೆ ಬೀಜ( ಶೇಂಗ)- ೧೦೦ ಗ್ರಾಂ 
ಎಳ್ಳು- ೩ ಚಮಚ 
ಕರಿಬೇವು- ೨ ಎಳೆ
ಎಣ್ಣೆ- ೭-೯ ಚಮಚ 
ಅರಿಸಿನ- ೧ ಚಮಚ 
ಸಾಸುವೆ- ೨ ಚಮಚ 
ಉಪ್ಪು ರುಚಿಗೆ 

ಮಾಡುವ ವಿಧಾನ:
 ಹುಳಿಸೆ ಹಣ್ಣಿಗೆ ಸ್ವಲ್ಪ ನೀರನ್ನು ಹಾಕಿ ನೆನಸಿ. ದಪ್ಪ ರಸ ತೆಗೆಯಿರಿ. 
ಎಳ್ಳನ್ನು ಹುರಿದು ತರಿ ತರಿಯಾಗಿ ಪುಡಿ ಮಾಡಿ.

ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ, ಸಾಸುವೆ, ಕರಿಬೇವು ಅರಿಸಿನ ಹಾಕಿ ಹುರಿದು ಕಡಲೆ ಬೀಜವನ್ನು ಇದರಲ್ಲಿ ಹುರಿಯಿರಿ. ಇದಕ್ಕೆ ಬೆಲ್ಲ , ಹುಳಿಸೆ ರಸವನ್ನು ಹಾಕಿ- ೫ ನಿಮಿಷ ಕುದಿಸಿ.
ನಂತರ ಸಾರಿನ ಪುಡಿಯನ್ನು, ಕೊಬ್ಬರಿ ತುರಿಯನ್ನು   ಹಾಕಿ ಚೆನ್ನಾಗಿ ಕುದಿಸಿ.
ಉಪ್ಪು ಸೇರಿಸಿ ದಪ್ಪ ಮಿಶ್ರಣ ಸಿದ್ಧಪಡಿಸಿ. ಇದನ್ನು ಬಿಸಿ ಅನ್ನ , ನೆನಸಿದ ಅವಲಕ್ಕಿಯ ಜೊತೆ ಸೇರಿಸಿದರೆ ಪುಳಿಯೋಗರೆ ಸಿದ್ಧವಾಗುತ್ತದೆ.



ಚಂದ್ರಿಕಾ ಹೆಗಡೆ






ಅವಲಕ್ಕಿ ಪುಳಿಯೋಗರೆ

ಅಗತ್ಯ ಸಾಮಗ್ರಿ :
ಗಟ್ಟಿ ಅವಲಕ್ಕಿ- ೨ ಕಪ್
ಪುಳಿಯೋಗರೆ ಗೊಜ್ಜು- ೨ ಚಮಚ (ದೊಡ್ಡ ಚಮಚ)
ಕಡಲೆ ಬೀಜ( ಶೇಂಗ)- ೧/೪ ಕಪ್
ಎಣ್ಣೆ- ೨ ಚಮಚ
ಕರಿಬೇವು- ೧ ಎಳೆ
ಉಪ್ಪು ರುಚಿಗೆ


ಮಾಡುವ ವಿಧಾನ:
ಗಟ್ಟಿ ಅವಲಕ್ಕಿಯನ್ನು ೫-೭ ನಿಮಿಷ ನೀರಿನಲ್ಲಿ ನೆನಸಿಡಿ. ಆಮೇಲೆ  ನೀರನ್ನು ಬಸಿಯಲು ಇಡಿ. ಇನ್ನು ೭-೮ ನಿಮಿಷದ ಮೇಲೆ  ಬಾಣಲೆಗೆ ಎಣ್ಣೆ ಹಾಕಿ ಕಡಲೆ ಬೀಜವನ್ನು ಹುರಿಯಿರಿ. ಇದಕ್ಕೆ ಕರಿಬೇವು, ಪುಳಿಯೋಗರೆ ಗೊಜ್ಜು ಅವಲಕ್ಕಿ ಹಾಕಿ. ಪುಳಿಯೋಗರೆ ಗೊಜ್ಜನ್ನು ಸಿದ್ಧಪಡಿಸುವಾಗಲೇ ಉಪ್ಪನ್ನು ಹಾಕಿರುವ ಕಾರಣ ಉಪ್ಪನ್ನು ನೋಡಿ ಮತ್ತೆ ಸೇರಿಸಿ. 




ಚಂದ್ರಿಕಾ ಹೆಗಡೆ


24 ಜನವರಿ 2012

ಬದನೇಕಾಯಿ ಮಸಾಲ ರೈಸ್

ಅಕ್ಕಿ- ೧ಕಪ್
ಬದನೇಕಾಯಿ-೪
ಈರುಳ್ಳಿ- ೧ 
ಹುಳಿಸೆ ರಸ- ೧ ೧/೨ ಚಮಚ
ಸಕ್ಕರೆ-೧/೨ ಚಮಚ
ಗರಂ ಮಸಾಲ- ೨ ಚಮಚ
ಅರಿಸಿನ- ೧/೨ ಚಮಚ 
ಉಪ್ಪು
ತುಪ್ಪ- ೨ ಚಮಚ 
ಮೆಣಸಿನ ಕಾಳು ಪುಡಿ- ೧/೨ ಚಮಚ
ಕರಿ ಬೇವು- ೧ ಎಳೆ
ತೆಂಗಿನ ತುರಿ- ೧/೪ ಬಟ್ಟಲು 
೧  ಚಮಚ  ಎಣ್ಣೆ , ಸಾಸುವೆ  


ಮಾಡುವ ವಿಧಾನ:
ತೆಂಗಿನ ತುರಿಯನ್ನು ರುಬ್ಬಿ. ಬದನೆ ಕಾಯಿ ಉದ್ದಗೆ ಹೆಚ್ಚಿ.ಈರುಳ್ಳಿಯನ್ನು ಹೆಚ್ಚಿ.. 
ಅಕ್ಕಿ ತೊಳೆದು ಎಲ್ಲವನ್ನು ಸೇರಿಸಿ, ನೀರನ್ನು ಹಾಕಿ  ಕುಕ್ಕರ್ನಲ್ಲಿ ೩ ಕೂಗು ಮಾಡಿ.
ಮೇಲಿಂದ ಬೇಕಾದ್ರೆ ಇನ್ನಸ್ಟು ತುಪ್ಪ ಸೇರಿಸಿ.
ನಂತರ ಸಾಸುವೆ ಒಗ್ಗರಣೆ ಮಾಡಿ. 
ಬದನೆ ಕಾಯಿ ಅನ್ನಕ್ಕೆ ಹೊಂದಿಕೊಂಡಿರುತ್ತದೆ. ನಿಮಗೆ ಹೋಳುಗಳಾಗಿ ಸಿಗುವದಿಲ್ಲ.
ಹೋಳು ಸಿಗಬೇಕಂದರೆ  ಅನ್ನ ಮಾಡಿದ ಮೇಲೆ ಎಲ್ಲವನ್ನು ಸೇರಿಸಬೇಕು. ಈ ಮೇಲೆ ನಾನು ಹೇಳಿದ ತರಹ ಮಾಡಿದರೆ ಸಮಯದ ಉಳಿತಾಯವಾಗುತ್ತದೆ.

ಆರಾಮದಾಯಕ ಅಡಿಗೆ....ಮನಸ್ಸಿಗೂ... ಉದರಕ್ಕೂ.....


ಚಂದ್ರಿಕಾ ಹೆಗಡೆ

ಕಡಲೆ ಬೀಜ ( ಶೇಂಗ) ಕೆಂಪು ಚಟ್ನಿ

ಕಡಲೆ ಬೀಜ- ೧/೨ ಕಪ್
ತೆಂಗಿನ ತುರಿ- ೧/೪ ಕಪ್ 
ಕೆಂಪು ಮೆಣಸಿನ ಕಾಯಿ- ೩ 
ಉಪ್ಪು
ಸಕ್ಕರೆ- ೧/೪ ಚಮಚ
ಇಂಗು, ೧ ಚಮಚ ಎಣ್ಣೆ, ಸಾಸುವೆ - ಒಗ್ಗರಣೆಗೆ 


ಕಡಲೆ ಬೀಜ, ಕೆಂಪು ಮೆಣಸಿನ ಕಾಯಿಗಳನ್ನು   ೧/೨ ಚಮಚ  ಎಣ್ಣೆಯಲ್ಲಿ ಹುರಿಯಿರಿ.
ಇದಕ್ಕೆ ತೆಂಗಿನ ತುರಿ, ಸ್ವಲ್ಪ ನೀರು ಸೇರಿಸಿ, ಉಪ್ಪು ಸಕ್ಕರೆ ಹಾಕಿ ರುಬ್ಬಿ.
 ರುಬ್ಬಿದ ಮಿಶ್ರಣಕ್ಕೆ, ಇಂಗು ಸಾಸುವೆ ಒಗ್ಗರಣೆ ನೀಡಿ.
ಸಕಾಲಕ್ಕೆ ಸಿಗಲಿ ಸವಿ ಭೋಜನ.....


ಚಂದ್ರಿಕಾ ಹೆಗಡೆ

ಪಪಾಯ ಜ್ಯೂಸ್

ಪಪಾಯ- ೧ ಚಿಕ್ಕದು 
ಸಕ್ಕರೆ- ೩ ಚಮಚ
ಚಿಟಿಕೆ ಉಪ್ಪು
ನೀರು.


ಪಪಾಯವನ್ನು ಸಿಪ್ಪೆ , ಬೀಜಗಳಿಂದ ಬೇರ್ಪಡಿಸಿ, ಇದಕ್ಕೆ ಸಕ್ಕರೆ, ಉಪ್ಪು, ನೀರು ಸೇರಿಸಿ ಜ್ಯುಸೆರ್ನಲ್ಲಿ  ಹಾಕಿ ಪಾನೀಯ ಸಿದ್ಧಪಡಿಸಿ.
                                         

ಸವಿಯೇ....!
ಪಪಾಯ ಒಳ್ಳೆಯ ಸ್ವಾದಿಷ್ಟ , ಆರೋಗ್ಯಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುವ ಫಲ...
ಇದರ ಸುವಾಸನೆ ಕೆಲವೊಬ್ಬರಿಗೆ ವಾಸನೆ!
ಆ ಕಾರಣ ಹಣ್ಣು ಹಾಗೆ ತಿಂದರೆ ಈ ತೊಂದರೆ... ಬೇರೆ ರೂಪದಲ್ಲಿ ನೀಡುವ ಯತ್ನ ಫಲಕಾರಿಯಾಗಿದೆ. 
   
ಚಂದ್ರಿಕಾ  ಹೆಗಡೆ  

ಮೊಸರು -ಒಗ್ಗರಣೆ ಅನ್ನ

ಅನ್ನ- ೧ಕಪ್
ಮೊಸರು-೩/೪ ಕಪ್
ಬಾಳಕ ( ಸಂಡಿಗೆ ಮೆಣಸು )- ೨
ಒಗ್ಗರಣೆಗೆ- ೧ ಚಮಚ ಸಾಸುವೆ, ಎಣ್ಣೆ
ಉಪ್ಪು
ಸಕ್ಕರೆ-೧ /೪ ಚಮಚ

ಅನ್ನ, ಮೊಸರು, ಉಪ್ಪು, ಸಕ್ಕರೆ ಸೇರಿಸಿ. 
ಎಣ್ಣೆಗೆ  ಸಾಸುವೆ, ಸಂಡಿಗೆ ಮೆಣಸು  ಹಾಕಿ ಹುರಿದು , ಮೊಸರು ಸೇರಿಸಿತ್ತ ಅನ್ನಕ್ಕೆ ಒಗ್ಗರಣೆ ಹಾಕಿ . 

ಸರಳ.... ಸ್ವಾದಿಷ್ಟ ... ಅದೇ..... " ಮನೆಯ ಶಕ್ತಿ" 

ಅವರೆಕಾಯಿ ಉಸುಳಿ

ಬೇಯಿಸಿದ ಅವರೆಕಾಯಿ- ೨ ಕಪ್
ಹಸಿಮೆಣಸು-೨
ಅರಿಸಿನ- ೧/೨ ಚಮಚ
ತೆಂಗಿನ ತುರಿ- ೧/೪ ಕಪ್
ಉಪ್ಪು
ಕರಿಬೇವು
ಒಗ್ಗರಣೆಗೆ- ೧ ಚಮಚ ಎಣ್ಣೆ, ಸಾಸಿವೆ.
ನಿಂಬೆ ರಸ- ೧ ಚಮಚ 


ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ಹಸಿಮೆಣಸಿನ ಕಾಯಿ, ಅರಿಸಿನ  ಹಾಕಿ. ಇದಕ್ಕೆ ಬೇಯಿಸಿದ ಅವರೆಕಾಯಿ , ಉಪ್ಪು ಹಾಕಿ. ಸ್ವಲ್ಪ ಆರಿದ ಮೇಲೆ ತೆಂಗಿನ ತುರಿ, ನಿಂಬೆರಸ ಸೇರಿಸಿ.

ಅರೆ ... ಅವರೇ.....

ಚಂದ್ರಿಕಾ ಹೆಗಡೆ

ಖಿಚಡಿ 1

ಅಕ್ಕಿ- ೨ ಕಪ್
ತೊಗರಿಬೇಳೆ - ೧/೨ ಕಪ್
ತೆಂಗಿನ ತುರಿ- ೧ ಕಪ್
ಬೀಟ್ ರೂಟ್-೧
ಬದನೆ ಕಾಯಿ-೧
ಫ್ಲಾವರ್   -೧/೪
ಬೀನ್ಸ್- ೫
ಈರುಳ್ಳಿ-೧
ಹುಳಿಸೆ ರಸ - ೨ ಚಮಚ
ಅರಿಸಿನ- ೧ ಚಮಚ 
ಸಕ್ಕರೆ- ೧ ಚಮಚ 
ಉಪ್ಪು
ತುಪ್ಪ- ೩ ಚಮಚ 
ಸಾಂಬಾರ್ ಪುಡಿ- ೩ ಚಮಚ 

ಎಲ್ಲ ತರಕಾರಿಗಳನ್ನು ಹೆಚ್ಚಿ.
ತೊಗರಿ ಬೆಲೆ, ಅಕ್ಕಿಯನ್ನು ತೊಳೆಯಿರಿ.
ತೆಂಗಿನ ತುರಿ, ಸಾಂಬಾರ್ ಪುಡಿ, ಸಕ್ಕರೆ, ಹುಳಿಸೆ ರಸ ಸೇರಿಸಿ ರುಬ್ಬಿ.
ಅಕ್ಕಿ, ತೊಗರಿಬೇಳೆಗೆ , ಎಲ್ಲ ತರಕಾರಿ, ರುಬ್ಬಿದ ಮಿಶ್ರಣ, ಅಗತ್ಯಕ್ಕೆ ತಕ್ಕಸ್ಟು ನೀರು ( ಅಕ್ಕಿ೧ ಕಪ್= ೨ ಕಪ್ ನೀರು) ಸೇರಿಸಿ.
ಉಪ್ಪು ರುಚಿಗೆ ತಕ್ಕಸ್ಟು ಹಾಕಿ.
ಕುಕ್ಕರ್ನಲ್ಲಿ- ೩ ಕೂಗು ಮಾಡಿಸಿ.
ಇದಕ್ಕೆ ನಂತರ ತುಪ್ಪ ಸೇರಿಸಿ. 

ಚಂದ್ರಿಕಾ ಹೆಗಡೆ

ಮೆಣಸು ರಸಂ

ಮೆಣಸಿನ ಕಾಳು- ೧೦
ತೊಗರಿ ಬೇಳೆ- ೧/೨ ಕಪ್
ಹುಳಿಸೆ ಹಣ್ಣು- ಅಡಿಕೆ ಗಾತ್ರ 
ಬೆಲ್ಲ- ೧/೨ ಚಮಚ 
ಜೀರಿಗೆ- ೨ ಚಮಚ
ಇಂಗು- ಚಿಟಿಕೆ
ಅರಿಸಿನ- ೧/೨ ಚಮಚ
ಉಪ್ಪು
ಒಗ್ಗರಣೆಗೆ ೧ ಚಮಚ ಎಣ್ಣೆ, ಸಾಸಿವೆ
ಕರಿಬೇವು, ಕೊತ್ತಂಬರಿ ಸೊಪ್ಪು
ತೆಂಗಿನ ತುರಿ- ೧/೪ ಕಪ್
ಗುಂಟುರ್ , ಬ್ಯಾಡಗಿ ಮೆಣಸಿನ ಕಾಯಿ-4

ಮಾಡುವ ವಿಧಾನ 

ಜೀರಿ ಗೆ  , ಮೆಣಸು, ಮೆಣಸಿನ ಕಾಯಿ, ಹುರಿದು ಪುಡಿ ಮಾಡಿ.
ತೊಗರಿಬೇಳೆಯನ್ನು ಅರಿಸಿನ ಹಾಕಿ ಬೇಯಿಸಿ.
ತೆಂಗಿನ ತುರಿ, ಹುಳಿಸೆ ಹಣ್ಣು, ಬೆಲ್ಲ,  ಸೇರಿಸಿ ರುಬ್ಬಿ.
ಬೇಯಿಸಿದ ತೊಗರಿ ಬೇಳೆಗೆ  ಪುಡಿ ಮಾಡಿದ ಜೀರಿಗೆ, ಮೆಣಸು, ಮೆಣಸಿನ ಕಾಯಿ ಹಾಗು ರುಬ್ಬಿದ ಮಿಶ್ರಣ ಸೇರಿಸಿ. ಉಪ್ಪನ್ನು ಹಾಕಿ ಕುದಿಸಿ.
ಕೊತ್ತಂಬರಿ ಸೊಪ್ಪು, ಕರಿಬೇವು , ಇಂಗು ಹಾಕಿ.
ಚೆನ್ನಾಗಿ ಕುದಿಸಿದ ಮೇಲೆ, ಒಗ್ಗರಣೆ ಹಾಕಿ.

ಚಂದ್ರಿಕಾ ಹೆಗಡೆ

22 ಜನವರಿ 2012

ಮಿಕ್ಸೆಡ್ ಫ್ರುಟ್ ಜ್ಯೂಸ್

 ಪೈನಾಪಲ್ - ೧ ಚಿಕ್ಕದು 
ಆಪಲ್ - ೧ ಚಿಕ್ಕದು
ಪಪಾಯ - ೧ ಚಿಕ್ಕದು
ಸಕ್ಕರೆ- ೪ ಚಮಚ
ಉಪ್ಪು- ಚಿಟಿಕೆ 
ನೀರು 

ಮಾಡುವ ಸರದಿಯಲ್ಲಿ... ಎಲ್ಲವನ್ನು ಜ್ಯುಸೆರ್ನಲ್ಲಿ ಹಾಕಿ ರುಬ್ಬಿ. ಸೋಸುವದು ಇಸ್ಟೇ ...
ರುಚಿ ಮಾತ್ರ.... ಅದೆಷ್ಟಪ್ಪ......ವಾಹ್!


ಚಂದ್ರಿಕಾ ಹೆಗಡೆ 

ಅವರೆಕಾಯಿ ಅವಲಕ್ಕಿ

ಗಟ್ಟಿ ಅವಲಕ್ಕಿ- ೨ ಬಟ್ಟಲು
ಬೇಯಿಸಿಟ್ಟ ಅವರೆಕಾಯಿ-೧ ಬಟ್ಟಲು
ಈರುಳ್ಳಿ - ೨ 
ಹಸಿಮೆಣಸು-೨
ಕರಿಬೇವು- ೨ ಎಳೆ
ಎಣ್ಣೆ- ೪ ಚಮಚ
 ಒಗ್ಗರಣೆಗೆ  - ಸಾಸಿವೆ ೧ ಚಮಚ
 ಅರಿಸಿನ -೧ ಚಮಚ 
ಉಪ್ಪು
ಸಕ್ಕರೆ-೧ ಚಮಚ
ಹುಳಿಸೆ ರಸ-೧ ಚಮಚ 
 ತೆಂಗಿನ ತುರಿ- ೧/೨ ಬಟ್ಟಲು 

ಮಾಡುವ ವಿಧಾನ
  1. ಅವಲಕ್ಕಿಯನ್ನು-೫ ನಿಮಿಷ ನೆನಸಿ.
  2. ನೆನೆಯುವ ಸಮಯಕ್ಕೆ ಈರುಳ್ಳಿ, ಹಸಿಮೆಣಸು  ಹೆಚ್ಚಿ .
  3. ಅವಲಕ್ಕಿಯನ್ನು ಹಿಂಡಿ ಅಥವಾ ನೀರನ್ನು ಬಸಿಯಲು ಬಿಡಿ.  ಇನ್ನು ೫ ನಿಮಿಷ ಹಾಗೆ ಬಿಡಿ. ಇದರಿಂದ ಅವಲಕ್ಕಿ ತನ್ನಲ್ಲಿರುವ ನೀರನ್ನು ಹೀರಿ ಮೃದುವಾಗುತ್ತದೆ.
  4. ಬಾಣಲೆಗೆ  ಎಣ್ಣೆ, ಸಾಸಿವೆ, ಹಸಿಮೆಣಸು ಹಾಕಿ ಒಗ್ಗರಣೆ ಸಿದ್ಧಪಡಿಸಿ. 
  5. ಈರುಳ್ಳಿ, ಕರಿಬೇವು, ಬೇಯಿಸಿಟ್ಟ ಅವರೆಕಾಯಿ,ಅರಿಸಿನ , ಸ್ವಲ್ಪ ಉಪ್ಪು, ಸಕ್ಕರೆ, ಹುಳಿಸೆ ರಸ  ಹಾಕಿ ೩ ನಿಮಿಷ ಎಲ್ಲವು ಹೊಂದಿಕೊಳ್ಳಲು  ಸಣ್ಣ ಉರಿಯಲ್ಲಿ ಇಡಿ. 
  6. ಈಗ ಅವಲಕ್ಕಿ ಸೇರಿಸಿ. ಅಗತ್ಯವೆನಿಸಿದರೆ ಇನ್ನಸ್ಟು ಉಪ್ಪು ಸೇರಿಸಿ, ಸಣ್ಣ ಉರಿಯಲ್ಲಿ ೫ ನಿಮಿಷ ಇಡಿ. 
  7. ಕೊನೆಯಲ್ಲಿ ತೆಂಗಿನ ತುರಿ ಸೇರಿಸಿ. 

ಅವರೇ .....!



ಚಂದ್ರಿಕಾ ಹೆಗಡೆ

21 ಜನವರಿ 2012

ಉದ್ದಿನ ಬೇಳೆ ಕೊತ್ತಂಬರಿ ಸೊಪ್ಪಿನ ಚಟ್ನಿ

ಉದ್ದಿನ ಬೇಳೆ - ೨ ಚಮಚ
ಹಸಿಮೆಣಸು- ೨
ಕೊತ್ತಂಬರಿ ಸೊಪ್ಪು೧/೪ ಹಿಡಿ
ತೆಂಗಿನ ತುರಿ- ೧ ಕಪ್
ಉಪ್ಪು
ಎಣ್ಣೆ- ೧ ಚಮಚ 
ಒಗ್ಗರಣೆಗೆ- ೧ ಚಮಚ ಎಣ್ಣೆ, ೧/೨ ಚಮಚ ಸಾಸಿವೆ 

 ೧ ಚಮಚ ಎಣ್ಣೆಯನ್ನು   ಬಿಸಿ ಮಾಡಿ.
ಇದಕ್ಕೆ ಉದ್ದಿನ ಬೇಳೆಯನ್ನು ಹಾಕಿ ಕೆಂಪಾಗುವಂತೆ ಹುರಿಯಿರಿ.
ಇದಕ್ಕೆ ಕೊತ್ತಂಬರಿ ಸೊಪ್ಪನ್ನು , ಹಸಿಮೆಣಸನ್ನು ಹಾಕಿ ಹುರಿಯಿರಿ.
ಇವುಗಳನ್ನೂ, ತೆಂಗಿನ ತುರಿ, ಉಪ್ಪು ಸ್ವಲ್ಪ ನೀರು ಹಾಕಿ ರುಬ್ಬಿ.
ಇದಕ್ಕೆ ಸಾಸಿವೆ ಒಗ್ಗರಣೆ ಮಾಡಿ.


ಚಂದ್ರಿಕಾ ಹೆಗಡೆ

ಜೀರಿಗೆ ದೋಸೆ

ವಾಯುಪ್ರಕೋಪ   (gas )   ಪರಿಹರಿಸಲು ಜೀರಿಗೆಯನ್ನು ಬಳಸುವದು ತಿಳಿದೇ ಇದೆ. ಇದನ್ನು ಕಷಾಯ ರೂಪದಲ್ಲಿ ಸೇವಿಸಲು ಮನಸ್ಸಿಲ್ಲದೆ ಇದ್ದಾಗ ದೋಸೆಯಲ್ಲಿ  ಮಿಶ್ರಣಮಾಡಿ ಸೇವನೆ ಮಾಡಬಹುದು. ಜೀರಿಗೆ  ಮನೆಯ ಅಡುಗೆಮನೆಯಲ್ಲಿ  ಶಕ್ತಿ ರೂಪದಲ್ಲಿ ಡಬ್ಬಿಯಲ್ಲಿ ಕುಳಿತಿರುತ್ತದೆ!


ಅಗತ್ಯ:
ಜೀರಿಗೆ-೪ ಚಮಚ
ಕೊತ್ತಂಬರಿ ಸೊಪ್ಪು- ೧/೨ ಹಿಡಿ
ಮೆಣಸು ಕಾಳು- ೧ ಚಮಚ
ಶುಂಟಿ ೧/೨ ಇಂಚು
ದೋಸೆ ಹಿಟ್ಟು- ೪ ಕಪ್
ಉಪ್ಪು

ಮಾಡುವ ಕ್ರಮ:
 ಜೀರಿಗೆ ಹುರಿದಿಡಿ.
ಇದನ್ನು, ಕೊತ್ತಂಬರಿ ಸೊಪ್ಪು, ಮೆಣಸು ಕಾಳು, ಶುಂಟಿ, ಸೇರಿಸಿ ತರಿ ತರಿಯಾಗಿ ಪುಡಿ ಮಾಡಿ.
ಪುಡಿಯನ್ನು  ದೋಸೆ ಹಿಟ್ಟಿಗೆ ಸೇರಿಸಿ.ಉಪ್ಪು ಹಾಕಿ .ದೋಸೆ ಸಿದ್ಧಪಡಿಸಿ. 



ಚಂದ್ರಿಕಾ ಹೆಗಡೆ

19 ಜನವರಿ 2012

ಪುದಿನ ಚಟ್ನಿ

ಪುದಿನ- ೧ ಕಟ್ಟು 
ಹುರಿಗಡಲೆ (ಪುಟಾಣಿ)- ೧/೪ ಬಟ್ಟಲು
ತೆಂಗಿನ ತುರಿ- ೧ ಬಟ್ಟಲು
ಹುಳಿಸೇ ರಸ- ೧/೪  ಚಮಚ 
ಉಪ್ಪು
ಸಕ್ಕರೆ-೧/೨ ಚಮಚ
ಎಣ್ಣೆ-೨ ಚಮಚ
ಹಸಿಮೆಣಸು -೨
ಸಾಸಿವೆ-೧ ಚಮಚ

ಪುದಿನ ಸೊಪ್ಪನ್ನು ತೊಳೆದು, ಕಡ್ಡಿಯಿಂದ   ಸೊಪ್ಪನ್ನು ಬೇರ್ಪಡಿಸಿ.
ಸೊಪ್ಪನ್ನು, ಹಸಿಮೆಣಸನ್ನು , ಹುರಿಗಡಲೆಯನ್ನು  ೧ ಚಮಚ ಎಣ್ಣೆಯಲ್ಲಿ  ಹುರಿಯಿರಿ-<೨ ನಿಮಿಷ>
ಇದಕ್ಕೆ ತೆಂಗಿನ ತುರಿ, ಉಪ್ಪು, ಸಕ್ಕರೆ ,ಹುಳಿಸೇ ರಸ ಸೇರಿಸಿ ರುಬ್ಬಿ.
ಈ ರುಬ್ಬಿದ ಮಿಶ್ರಣಕ್ಕೆ, ೧ ಚಮಚ ಎಣ್ಣೆಯಲ್ಲಿ ಸಾಸಿವೆ ಒಗ್ಗರಣೆ ಮಾಡಿ  ಸೇರಿಸಿ.< ಚಟ್ನಿ ನೀರು ಬೇಕಿದ್ರೆ ನೀರನ್ನು ಸೇರಿಸಿ.>


ದೋಸೆ/ ರೊಟ್ಟಿ/ ಚಪಾತಿಯೊಂದಿಗೆ ಜೊತೆ....


ಸವಿ.+..ಆರೋಗ್ಯ..=...ಮನೆಯ ಶಕ್ತಿ....


ಚಂದ್ರಿಕಾ ಹೆಗಡೆ

ಚಿಕ್ಕು (ಸಪೋಟ ) ಮಿಲ್ಕ್ ಶೇಕ್

ಚಿಕ್ಕು-೪
ಸಕ್ಕರೆ-೩  ಚಮಚ
ಹಾಲು-೩ ಲೋಟ

ಎಲ್ಲವನ್ನೂ ಸೇರಿಸಿ/ ಬೇಕಿದ್ರೆ ನೀರನ್ನೂ ಹಾಕಿ ಜ್ಯುಸೆರ್ನಲ್ಲಿ ರುಬ್ಬಿ.
ಚಿಕ್ಕು  ರುಚಿಕರ ಹಣ್ಣು. !

ಚಂದ್ರಿಕಾ ಹೆಗಡೆ

18 ಜನವರಿ 2012

ಕ್ಯಾರೆಟ್ ರಸಂ

ಕ್ಯಾರೆಟ್- ೧ 
ರಸಂ ಪುಡಿ- ೩ ಚಮಚ
ಹುಳಿಸೆ ರಸ- ೨ ಚಮಚ
ಬೆಲ್ಲ- ೧ ಚಮಚ
ಹಸಿಮೆಣಸು-೧
ಇಂಗು chitike
ಉಪ್ಪು ಒಗ್ಗರಣೆಗೆ- ಎಣ್ಣೆ, ಸಾಸಿವೆ, ಜೀರಿಗೆ 
ಕರಿಬೇವು ೧ ಎಳೆ 
ಕೊತ್ತಂಬರಿ ಸೊಪ್ಪು ೨ ಗಿಡ 

ಕ್ಯಾರೆಟ್ ಅನ್ನು ಮಿಕ್ಸಿಯಲ್ಲಿ ರುಬ್ಬಿ.
ಇದಕ್ಕೆ ಹುಳಿಸೆ ರಸ, ಬೆಲ್ಲ, ರಸಂ ಪುಡಿ, ಉಪ್ಪು, ಕರಿಬೇವು,ಹಸಿಮೆಣಸು ಸೀಳಿದ್ದು, ಕೊತ್ತಂಬರಿ ಸೊಪ್ಪು, ಇಂಗು ಸೇರಿಸಿ- ೨ ಕುದಿ ಮಾಡಿ.
ಇದಕ್ಕೆ ಜೀರಿಗೆ, ಸಾಸುವೆ ಒಗ್ಗರಣೆ ಮಾಡಿ.

ಸರಳವಾದರೂ ಗೆಲ್ಲುತ್ತೆ.....!


ಚಂದ್ರಿಕಾ ಹೆಗಡೆ

ಸಾಂಬಾರ್ ಅವಲಕ್ಕಿ

ಗಟ್ಟಿ ಅವಲಕ್ಕಿ- ೨ ಕಪ್
ಈರುಳ್ಳಿ-೨
ಹಸಿಮೆಣಸಿನ ಕಾಯಿ-೨
ಕೊತ್ತಂಬರಿ ಸೊಪ್ಪು- ೧/೪ ಹಿಡಿ
ಕರಿಬೇವು-೧೦ ಎಲೆಗಳು
ಅರಿಸಿನ -೧/೨ ಚಮಚ
ಸಾಂಬಾರ್ ಪುಡಿ- ೨ ಚಮಚ
ಹುಳಿಸೆ ರಸ- ೨ ಚಮಚ 
ಸಕ್ಕರೆ- ೧ ಚಮಚ 
ಉಪ್ಪು
ಇಂಗು - ಪುಡಿ ೧/೪ ಚಮಚ
ಎಣ್ಣೆ- ೩ ಚಮಚ
ತೆಂಗಿನ ತುರಿ- ೧/೨ ಬಟ್ಟಲು 
ಸಾಸಿವೆ- ೧ ಚಮಚ 



ಗಟ್ಟಿ ಅವಲಕ್ಕಿಯನ್ನು ೫ ನಿಮಿಷ ನೆನಸಿ. ನೀರು ಬಿಸಿದು ಇಡಿ. ಹುಳಿಸೆ ರಸ ಸಿದ್ಧಪಡಿಸಿ.
ಈರುಳ್ಳಿ, ಕೊತ್ತಂಬರಿ ಸೊಪ್ಪು ಹೆಚ್ಚಿಡಿ.
ಬಾಣಲೆಗೆ ಎಣ್ಣೆ, ಸಾಸಿವೆ ಹಾಕಿ ಚಟ ಪಟ್  ಆದಮೇಲೆ ಹಸಿಮೆಣಸು, ಈರುಳ್ಳಿ, ಕರಿಬೇವನ್ನು ಹಾಕಿ ಹುರಿಯಿರಿ.
ಸಾಂಬಾರ್ ಪುಡಿ, ಹುಳಿಸೆ ರಸ , ಅರಿಸಿನ ಸಕ್ಕರೆ ಹಾಕಿ, ೧ ನಿಮಿಷ ಹುರಿಯಿರಿ.
ಉಪ್ಪು , ಹಿಂಗು, ಕೊತ್ತಂಬರಿ ಸೊಪ್ಪು ಸ್ವಲ್ಪ ಉಪ್ಪು ,ಹಾಕಿ.
ನೆನಸಿ  ಮೆತ್ತಗಾದ ಅವಲಕ್ಕಿಯನ್ನು ಸೇರಿಸಿ. ಕೈಯ್ಯಾಡಿಸಿ.
ಅಗತ್ಯಕ್ಕೆ ತಕ್ಕಸ್ಟು ! ಉಪ್ಪು ಸೇರಿಸಿ. 
೫ ನಿಮಿಷ ಬಿಸಿ ಮಾಡಿ. 
ಕೊನೆಯಲ್ಲಿ  ತೆಂಗಿನ ತುರಿ ಸೇರಿಸಿ. 


ಅದೇನು ರುಚಿಯೇ.....


ಚಂದ್ರಿಕಾ ಹೆಗಡೆ

ಫ್ರುಟ್ ಸಲಾಡ್

ಬಾಳೆಹಣ್ಣು -೧
ಚಿಕ್ಕು-೧
ಆಪಲ್ -೧
ಪಪಾಯ-೧/೪
ಸಕ್ಕರೆ-೩ ಚಮಚ
ಫ್ರೆಶ್ ಕ್ರೀಮ್- ೨ ಚಮಚ
ಕಸ್ಟರ್ಡ್ ಪುಡಿ- ೧ ಚಮಚ
ಹಾಲು-೧/ ಬಟ್ಟಲು 
ಎಲ್ಲ ಹಣ್ಣು ಗಳನ್ನೂ  ಹೆಚ್ಚಿ, ಸಕ್ಕರೆ ,ಕ್ರೀಮ್ ಸೇರಿಸಿ. ಇದಕ್ಕೆ ಹಾಲಿನಲ್ಲಿ ಕದಡಿದ ಕಸ್ಟರ್ಡ್ ಪುಡಿ ಹಾಕಿ. ಇದಕ್ಕೆ ಬೇಕಿದ್ರೆ  ಒಣ ಹಣ್ಣು, ಬಾದಾಮ್   ಸೇರಿಸ ಬಹುದು.


ಹಿತವೇ...


ಚಂದ್ರಿಕಾ ಹೆಗಡೆ

15 ಜನವರಿ 2012

ಖಾರ ಪೊಂಗಲ್

ಹೆಸರು ಬೇಳೆ-೧ ಕಪ್
ಅಕ್ಕಿ-೧ ಕಪ್
ಹಸಿಮೆಣಸು   - ೨ ಮೆಣಸಿನ ಕಾಳು- ೧೦
ತುಪ್ಪ-೨ ಚಮಚ
ಕರಿಬೇವು
ಗೋಡಂಬಿ
ಅರಿಸಿನ - ಚಿಟಿಕೆ
ಉಪ್ಪು ರುಚಿಗೆ ತಕ್ಕಸ್ಟು
ಸಾಸಿವೆ- ೧ ಚಮಚ
ಕೊಬ್ಬರಿ ತುರಿ೧/೪ ಬಟ್ಟಲು

ಮಾಡುವ ವಿಧಾನ :
ಹೆಸರು ಬೇಳೆಯನ್ನು ಘಂ ಅನ್ನುವಂತೆ ಹುರಿಯಿರಿ<  ಸಣ್ಣ ಉರಿಯಲ್ಲಿ ೫ ನಿಮಿಷ ಹುರಿದರೆ ಸಾಕು>
ಅಕ್ಕಿ, ಹೆಸರುಬೇಳೆಯನ್ನು ಬೇಯಿಸಿ.
ಮೆಣಸಿನ ಕಾಳನ್ನು ಪುಡಿ ಮಾಡಿ.
ಬಾಣಲೆಗೆ ತುಪ್ಪ,ಸಾಸಿವೆ, ಗೋಡಂಬಿ ಕರಿಬೇವು ಹಸಿಮೆಣಸು ಹಾಕಿ ಒಗ್ಗರಣೆ
ಸಿದ್ಧಪಡಿಸಿ  . ಅರಿಸಿನ ಹಾಕಿ .
ಇದಕ್ಕೆ ಮೆಣಸಿನ ಕಾಳಿನ ಪುಡಿ , ಅನ್ನ, ಹೆಸರುಬೇಳೆ< ಬೇಯಿಸಿದ್ದು> ಉಪ್ಪು ಸೇರಿಸಿ.
ಕೊನೆಯಲ್ಲಿ ಕೊಬ್ಬರಿ ತುರಿ ಸೇರಿಸಿ.

ಖಾರವಾದಸ್ಟು ಹಿತ... ಮೆಣಸಿನ ಕಾಳು ಆಯುರ್ವೇದದಲ್ಲಿ ಮಹತ್ವ- ಸತ್ವನ್ನು ಹೊಂದಿರುವ ಸಾಂಬಾರ್ ಪದಾರ್ಥ!


ಚಂದ್ರಿಕಾ ಹೆಗಡೆ

ಸಿಹಿ ಪೊಂಗಲ್

 ಹೆಸರು ಬೇಳೆ- ೧ ಕಪ್
ಅಕ್ಕಿ- ೧ ಕಪ್
ಬೆಲ್ಲ - ೧ ಅಚ್ಚು ದೊಡ್ಡದು<ಪುಡಿ ಮಾಡಿಕೊಳ್ಳಿ.
ತುಪ್ಪ-೪ ಚಮಚ
ಹಾಲು-೧/೨ ಕಪ್
ಗೋಡಂಬಿ, ದ್ರಾಕ್ಷಿ
ಜಾಯ್ ಕಾಯ್- ಪುಡಿ, ಏಲಕ್ಕಿ ಪುಡಿ- ೧/೨ ಚಮಚ


ಮಾಡುವ ವಿಧಾನ- ಹೆಸರು ಬೇಳೆಯನ್ನು ಘಂ ಎನ್ನುವ ಹಾಗೆ ಹುರಿದುಕೊಳ್ಳಿ. ಅಕ್ಕಿ ಹಾಗು ಹೆಸರುಬೇಳೆಯನ್ನು ಸೇರಿಸಿ ಬೇಯಿಸಿಕೊಳ್ಳಿ.
ಬಾಣಲೆಗೆ ೩ ಚಮಚ ತುಪ್ಪ ಹಾಕಿ , ಹೆಸರುಬೇಳೆ, ಅನ್ನ , ಬೆಲ್ಲ ಹಾಕಿ ಕುದಿಸಿ.೩ ನಿಮಿಷದ ನಂತರ ಹಾಲನ್ನು ಸೇರಿಸಿ ಕುದಿಸಿ. ೫ ನಿಮಿಷ ಕುದಿಸಿದ ಮೇಲೆಏಲಕ್ಕಿ ಪುಡಿ, ಜಾಯ್ಕೈ ಪುಡಿ ಸೇರಿಸಿ. ,ಇನ್ನೊಂದು ಒಗ್ಗರಣೆ ಸಿದ್ದಮಾಡಿ.  ಇದರಲ್ಲಿ ೧ ಚಮಚ ತುಪ್ಪ, ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ಪೊಂಗಲ್ಗೆ ಹಾಕಿ.

ಸವಿ ಪೊಂಗಲ್ ನಿಮ್ಮ ಮನಸ್ಸು, ನಾಲಗೆಗೆ- ಜೀವನದಲ್ಲಿ ಸುಖ ಕ್ಷಣಕ್ಕೆ ಸಾಕ್ಷಿಯಾಗಲಿ....


ಸಂತೃಪ್ತಿಯ .....

ಚಂದ್ರಿಕಾ ಹೆಗಡೆ

14 ಜನವರಿ 2012

ಮೋಸಂಬಿ ಜ್ಯೂಸ್

ಮೋಸಂಬಿ- ೪
ಸಕ್ಕರೆ- ೪ ಚಮಚ
ಉಪ್ಪು ಚಿಟಿಕೆ
ನೀರು


ಮೋಸಂಬಿ ಸಿಪ್ಪೆ ತೆಗೆದು , ಸಕ್ಕರೆ ಉಪ್ಪು ನೀರು ಹಾಕಿ ಜ್ಯುಸರ್ನಲ್ಲಿ ಹಾಕಿ .
ಸಾಲಿಡ್ ಬೇಕೆಂದರೆ ನೀರನ್ನು ಹೊರತುಪಡಿಸಿ ಸಕ್ಕರೆ ಚಿಟಿಕೆ ಉಪ್ಪು ಹಾಕಿ.
ನಂತರ  ಸೋಸಿ.



ಪಾನೀಯ .....ಪೇಯವೂ.....


ಚಂದ್ರಿಕಾ ಹೆಗಡೆ

ಸಾಸುವೆ ಅವಲಕ್ಕಿ


ಗಟ್ಟಿ   ಅವಲಕ್ಕಿ- ೨ ಕಪ್
ತೆಂಗಿನ ತೂರಿ ೧/೨ ಕಪ್
ಹಸಿಮೆಣಸು-೨
ಕರಿಬೇವು- ೧ ಕಡ್ಡಿ
ಸಾಸುವೆ- ೨ ಚಮಚ ಎಣ್ಣೆ ೫ ಚಮಚ
ಸಕ್ಕರೆ ೧  ಚಮಚ
ಉಪ್ಪು ರುಚಿಗೆ
ಬ್ಯಾಡಗಿ, ಗುನ್ಟುರ್ ಮೆಣಸಿನ ಕಾಯಿ - 4
ಅರಿಸಿನ - ೧ ಚಮಚ
ಹುಳಿಸೇ ರಸ- ೩ ಚಮಚ
ಕಡ್ಲೆ ಬೀಜ( ಶೇಂಗ)- ೧ ಹಿಡಿ
ಉದ್ದಿನ ಬೇಳೆ-೧ ಚಮಚ

ಮಾಡುವ ವಿಧಾನ


ಅವಲಕ್ಕಿಯನ್ನು ೫ ನಿಮಿಷ ನೀರಿನಲ್ಲಿ ನೆನಸಿ. ನೀರು ಬಸಿದು  ೧೦ ನಿಮಿಷ ಇಡಿ . ಆಗ ಚೆನ್ನಾಗಿ ಮೃದುವಾಗುತ್ತದೆ.
ತೆಂಗಿನ ತುರಿಯನ್ನು , ಬ್ಯಾಡಗಿ, ಗುನ್ತೂರ್ ಮೆಣಸಿನ ಕಾಯಿ, ಸಾಸುವೆ ಹಾಕಿ ರುಬ್ಬಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಸಾಸುವೆ, ಕಡ್ಲೆ ಬೀಜ, ಉದ್ದಿನ ಬೇಳೆ , ಹಸಿಮೆಣಸಿನ ಕಾಯಿ , ಕರಿ ಬೇವು ಹಾಕಿ ಹುರಿಯಿರಿ.
ಅರಿಸಿನ, ರುಬ್ಬಿದ ಮಿಶ್ರಣ ಸೇರಿಸಿ, ಮತ್ತೆ ಹುರಿಯಿರಿ. ಇದಕ್ಕೆ ಹುಳಿಸೇ ರಸ ಹಾಕಿ. ಉಪ್ಪು, ಸಕ್ಕರೆ ಸೇರಿಸಿ.
ಈಗ ನೆನಸಿ ಮೃದುವಾದ  ಅವಲಕ್ಕಿ, ಇನ್ನಸ್ಟು ಅಗತ್ಯವೆನಿಸಿದ ಉಪ್ಪು ಸೇರಿಸಿ.

ವಿಭಿನ್ನ ಅವಲಕ್ಕಿ ಸಿದ್ಧ .

ಕೆಲವೊಬ್ಬರಿಗೆ ಸಾಸಿವೆ ಹಸಿ ವಾಸನೆ ಇಸ್ಟವಾಗುವದಿಲ್ಲ. ಆಗ ಹುರಿದು ಸೇರಿಸಬಹುದು. ಆದರೆ ಹಸಿವಾಸನೆಯೇ ಇದರ ವೈಶಿಷ್ಟ್ಯ .




ಒಂದು ಅಡುಗೆ ಮನೆಯಲ್ಲಿ ವಿಭಿನ್ನ ರುಚಿ ಬಗೆ......


ಚಂದ್ರಿಕಾ ಹೆಗಡೆ . ...

13 ಜನವರಿ 2012

ಪೈನಾಪಲ್ ಜ್ಯೂಸ್

ಪೈನಾಪಲ್ - ೧/೨
ಸಕ್ಕರೆ- ೧/೨ ಕಪ್
ಚಿಟಿಕೆ ಉಪ್ಪು
ಅಗತ್ಯಕ್ಕೆ ತಕ್ಕಂತೆ ನೀರು


ಪೈನಾಪಲ್  ತುಂಡು ಗಳನಾಗಿ   ಮಾಡಿ, ಸಕ್ಕರೆ , ಉಪ್ಪು ೨ ಲೋಟ ನೀರು  ಜ್ಯೂಸರ್ ನಲ್ಲಿ  ಹಾಕಿ. ಚೆನ್ನಾಗಿ   ರುಬ್ಬಿ. ಸೋಸಿ.- ಸೇವಿಸಿ 


" ಆರೋಗ್ಯವೇ ಭಾಗ್ಯ "

ಚಂದ್ರಿಕಾ ಹೆಗಡೆ

ಕೊತ್ತಂಬರಿ ಹಾಗು ಶುಂಟಿ - ಚಟ್ನಿ

ಕೊತ್ತಂಬರಿ ಸೊಪ್ಪು- ೧/೨ ಹಿಡಿ
ಶುಂಟಿ- ಹೆಬ್ಬೆರಳಿನ ಗಾತ್ರ
ತೆಂಗಿನ ತುರಿ - ೧/೨ ಬಟ್ಟಲು
ಹುರಿಗಡಲೆ- ೧/೨ ಬಟ್ಟಲು
ಹಸಿಮೆಣಸಿನ ಕಾಯಿ- ೩
ಉಪ್ಪು
ಸಕ್ಕರೆ ೧/೨ ಚಮಚ
ಒಗ್ಗರಣೆಗೆ- ೧ ಚಮಚ ಎಣ್ಣೆ ೧/೨ ಚಮಚ ಸಾಸಿವೆ




ಒಗ್ಗರಣೆ ಸಾಮಗ್ರಿ ಬಿಟ್ಟು ಉಳಿದೆಲ್ಲವನ್ನೂ  ಸೇರಿಸಿ ರುಬ್ಬಿ. ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ. ಇದಕ್ಕೆ ಸಾಸಿವೆ ಒಗ್ಗರಣೆ ನೀಡಿ.


ದೋಸೆ/ ಇಡ್ಲಿ/ ಚಪಾತಿ/ ರೊಟ್ಟಿಯ ಜೊತೆ ಬಳಸಬಹುದು.


ಚಂದ್ರಿಕಾ ಹೆಗಡೆ

ಈರುಳ್ಳಿ ದೋಸೆ

ಈರುಳ್ಳಿ- ೩
ದೋಸೆ ಹಿಟ್ಟು- ೨ ಕಪ್
ಕೊತ್ತಂಬರಿ ಸೊಪ್ಪು ೧/೪ ಹಿಡಿ
ಹಸಿಮೆಣಸಿನ ಕಾಯಿ-೨
ಉಪ್ಪು
ಎಣ್ಣೆ




ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ.


ಇದನ್ನು ದೋಸೆ ಹಿಟ್ಟಿಗೆ ಸೇರಿಸಿ. ಉಪ್ಪು ಸೇರಿಸಿ ದೋಸೆ ಮಾಡಿ. ಎಣ್ಣೆ ಹಾಕಿ ಬೇಯಿಸಿ.

ಇದರೊಂದಿಗೆ ಚಟ್ನಿ ಹಾಕಿ ಸವಿಯಿರಿ.


ಚಂದ್ರಿಕಾ ಹೆಗಡೆ

12 ಜನವರಿ 2012

ಕ್ಯಾರೆಟ್ ದೋಸೆ

ಕ್ಯಾರೆಟ್-೩
ಹಸಿಮೆಣಸಿನ ಕಾಯಿ- ೨
ಕೊತ್ತಂಬರಿ ಸೊಪ್ಪು- ೧/೨ ಕಟ್ಟು


ದೋಸೆ ಹಿಟ್ಟು- ೨ ಕಪ್
ಉಪ್ಪು ರುಚಿಗೆ
ಎಣ್ಣೆ




ಕ್ಯಾರೆಟ್, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಇವುಗಳನ್ನು  ಮಿಕ್ಸಿಯಲ್ಲಿ  ರುಬ್ಬಿ. ಇದನ್ನು ದೋಸೆ ಮಾಡುವ ಮುನ್ನ ಸೇರಿಸಿ. ಉಪ್ಪು ಹಾಕಿ.  ದೋಸೆ ತವಾದ  ಮೇಲೆ ಹಿಟ್ಟನ್ನು ಹಾಕಿ. ದೋಸೆ ಮಾಡಿ. ಎಣ್ಣೆ ಹಾಕಿ ಬೇಯಿಸಿ.
ಇದರಲ್ಲಿ ಕ್ಯಾರೆಟ್, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ರುಬ್ಬಿದ ಕಾರಣ... ಮಕ್ಕಳು ಹಾಗೆ ತುರಿದು ಹಾಕಿದರೆ ಅಷ್ಟಾಗಿ ಇಷ್ಟಪಡುವದಿಲ್ಲ.. ಇದಕ್ಕೆ ನನ್ನ ಮಗನು ಹೊರತಲ್ಲಾ.....






ಅಹ,,, ದೋಸೆ



ಚಂದ್ರಿಕಾ ಹೆಗಡೆ  

11 ಜನವರಿ 2012

ಬಾಳೇ ಹಣ್ಣಿನ ಪಾಯಸ

ಬಾಳೇ ಹಣ್ಣು ಹೆಚ್ಚಿದ್ದು - ೧ ಕಪ್
ತೆಂಗಿನ ಹಾಲು- ೨ ಕಪ್
ಸಕ್ಕರೆ/ ಬೆಲ್ಲ-  ೩/೪ ಕಪ್
ಏಲಕ್ಕಿ- ೨-೩ ಪುಡಿ ಮಾಡಿದ್ದು
ಚಿಟಿಕೆ ಉಪ್ಪು ( ಹಾಲು ಹಾಕಿದರೆ ಉಪ್ಪು ಸೇರಿಸಬಾರದು.)

ತೆಂಗಿನ ತುರಿಯನ್ನು  ರುಬ್ಬಿ ಸೋಸಿ. ಈ ಹಾಲಿಗೆ ಹೆಚ್ಚಿಟ್ಟ ಬಾಳೇ ಹಣ್ಣು, ಏಲಕ್ಕಿ ಸಕ್ಕರೆ ಅಥವಾ ಬೆಲ್ಲ, ಚಿಟಿಕೆ ಉಪ್ಪು ಹಾಕಿ.
ದೋಸೆ, ಚಪಾತಿ ಜೊತೆ ಇಲ್ಲವೇ ಊಟದ ನಂತರದ ಸಿಹಿಯಾಗಿಯೂ ಸೇವಿಸಲು ಯೋಗ್ಯ.

ಸಿಹಿಯೋ ಸಿಹಿಯು......


ಚಂದ್ರಿಕಾ ಹೆಗಡೆ

10 ಜನವರಿ 2012

ಸಾಂಬಾರ್ ಉಪ್ಪಿಟ್ಟು

ಉಪ್ಪಿಟ್ಟು ರವೆ- ೨ ಕಪ್
ಈರುಳ್ಳಿ-೧
ಹಸಿಮೆಣಸು-೨
ಕರಿಬೇವು-೪-೫
ಎಣ್ಣೆ-೪ ಚಮಚ
ಅರಿಸಿನ
ಸಾಂಬಾರ್ ಪುಡಿ-೨ ಚಮಚ
ಹುಳಿಸೇ ರಸ-೧ ಚಮಚ
ಹಿಂಗು- ಚಿಟಿಕೆಯಷ್ಟು
ಉಪ್ಪು
ಸಕ್ಕರೆ-೧ ಚಮಚ
ಕ್ಯಾರೆಟ್-೧
ದಪ್ಪ ಮೆಣಸಿನ ಕಾಯಿ-೧
ಸಾಸಿವೆ -೧ ಚಮಚ
ತೆಂಗಿನ ತುರಿ ಪೇಸ್ಟ್ - ೧/೪ ಕಪ್

ಮಾಡುವ ವಿಧಾನ:
ಹಸಿಮೆಣಸಿನ ಕಾಯಿ, ಕ್ಯಾರೆಟ್, ದಪ್ಪಮೆನಸಿನ ಕಾಯಿ, ಈರುಳ್ಳಿ, ಇವುಗಳನ್ನು ಹೆಚ್ಚಿಕೊಳ್ಳಿ.
ರವೆಯನ್ನು ಘಂ ಎನ್ನುವಂತೆ ಹುರಿಯಿರಿ.
ಈ ಸಮಯದಲ್ಲೇ ನೀರನ್ನು ಕುದಿಸಿ ಇಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ, ಸಾಸಿವೆ ಹಸಿಮೆಣಸಿನ ಕಾಯಿ, ಕರಿಬೇವನ್ನು ಹಾಕಿ ಒಗ್ಗರಣೆ ಮಾಡಿ.
ಇದಕ್ಕೆ ತರಕಾರಿಗಳನ್ನು ಸೇರಿಸಿ.
ಸ್ವಲ್ಪ ಉಪ್ಪು, ಅರಿಸಿನ , ಸಾಂಬಾರ್ ಪುಡಿ ಹಾಕಿ. ಹುಳಿಸೆರಸ, ತೆಂಗಿನ ತುರಿ ಪೇಸ್ಟ್  ಸೇರಿಸಿ.
 ೪ ಕಪ್ ನೀರು ಸೇರಿಸಿ. ಚೆನ್ನಾಗಿ ಕುದಿಸಿ.
ಇದಕ್ಕೆ ಇನ್ನು ಸ್ವಲ್ಪ , ರುಚಿಗೆ ತಕ್ಕಸ್ಟು ಉಪ್ಪು, ಸಕ್ಕರೆ ಸೇರಿಸಿ.
ನಿಧಾನಕ್ಕೆ ಹುರಿದಿಟ್ಟ ರವೆ ಸೇರಿಸಿ.
ಉರಿಯನ್ನು ಕಡಿಮೆ ಮಾಡಿ ೭-೮ ನಿಮಿಷ ಬಿಡಿ.
ಘಮ ಘಮ ಉಪ್ಪಿಟ್ಟು  ನಿಮಗಾಗಿ..... ನಿಮ್ಮಿಂದಲೇ,,,,,


ಚಂದ್ರಿಕಾ ಹೆಗಡೆ

08 ಜನವರಿ 2012

ತೋಯಿಸಿದ ಅವಲಕ್ಕಿ

ಗಟ್ಟಿ ಅವಲಕ್ಕಿ- ೧ ಕಪ್
ಈರುಳ್ಳಿ- ೧ ಹೆಚ್ಚಿ
ಹಸಿಮೆಣಸು-೧ ಹೆಚ್ಚಿ
ಕರಿಬೇವು 3 -೪ ಎಲೆ
ಕೊತ್ತಂಬರಿ ಸೊಪ್ಪು
ಟೊಮೇಟೊ - ೧  ಹೆಚ್ಚಿ
ಉಪ್ಪು
ಎಣ್ಣೆ-೨ ಚಮಚ
ಸಕ್ಕರೆ ೧/೨ ಚಮಚ
ಸಾಸಿವೆ ೧/೨ ಚಮಚ
 ಅರಿಸಿನ ಚಿಟಿಕೆ
ನಿಂಬೆರಸ- ೧ ಚಮಚ


ಗಟ್ಟಿ  ಅವಲಕ್ಕಿಯನ್ನು ೫ ನಿಮಿಷ ನೆನಸಿ  ನೀರು ಬಸಿದು ಇಡಿ.
ಬಾಣಲೆಗೆ ಎಣ್ಣೆ, ಸಾಸಿವೆ ಹಸಿಮೆಣಸು, ಕರಿಬೇವು ಒಗ್ಗರಣೆ ಹಾಕಿ.

ಇದಕ್ಕೆ ಅರಿಸಿನ, ಈರುಳ್ಳಿ ಹಾಕಿ ಹುರಿಯಿರಿ.
ಟೊಮೇಟೊ, ಉಪ್ಪು  ಸೇರಿಸಿ.
ಅವಲಕ್ಕಿ ಹಾಕಿ, ಬಿಸಿ ಮಾಡಿ.
ಕೊನೆಯಲ್ಲಿ ನಿಂಬೆರಸ ಸೇರಿಸಿ. ಉಪ್ಪು ಅಗತ್ಯವೆನಿಸಿದರೆ ಇನ್ನೊಮ್ಮೆ ಉಪ್ಪು ಹಾಕಿ.



ಅವಲಕ್ಕಿ... ಉಪಹಾರಕ್ಕಾಗಿ.....


ಚಂದ್ರಿಕಾ ಹೆಗಡೆ

07 ಜನವರಿ 2012

ಬೆಳ್ಳುಳ್ಳಿ ಅನ್ನ

ಅನ್ನ- ೧ ಬಟ್ಟಲು
ಬೆಳ್ಳುಳ್ಳಿ ಎಸಳು -೫
ಹಸಿಮೆಣಸು- ೧ 
ಕರಿಬೇವು-೪ ಎಲೆ
ಉಪ್ಪು
ಅರಿಸಿನ
ತುಪ್ಪ- ೩ ಚಮಚ
ಸಾಸಿವೆ- ೧/೨ ಚಮಚ

ಬಾಣಲೆಗೆ ತುಪ್ಪ , ಸಾಸಿವೆ, ಹಸಿಮೆಣಸು, ಕರಿಬೇವು, ಬೆಳ್ಳುಳ್ಳಿ ಹಾಕಿ ಹುರಿಯಿರಿ.
ಇದಕ್ಕೆ ಅರಿಸಿನ ಸೇರಿಸಿ.
ಅನ್ನ , ಉಪ್ಪು ಸೇರಿಸಿ.

ಮೊಸರಿನ ಜೊತೆ... ಬೆಳ್ಳುಳ್ಳಿ ಅನ್ನ......


ಚಂದ್ರಿಕಾ ಹೆಗಡೆ

ಕಡಲೆ ಹಿಟ್ಟಿನ ಬರ್ಫಿ

ಕಡಲೆ ಹಿಟ್ಟು- ೧ ಬಟ್ಟಲು
ತುಪ್ಪ- ೧ ಬಟ್ಟಲು
ಹಾಲು ೧ ಬಟ್ಟಲು
ಸಕ್ಕರೆ- ೧ ೧/೨ ಬಟ್ಟಲು


ಮಾಡುವ ವಿಧಾನ:
 ಕಡಲೆ ಹಿಟ್ಟು , ೧/೨ ಬಟ್ಟಲು ತುಪ್ಪ ಹಾಕಿ ಘಂ ಎನ್ನುವ ಹಾಗೆ ಹುರಿಯಿರಿ.
ಇದಕ್ಕೆ ಹಾಲು ಸಕ್ಕರೆ ಹಾಕಿ ಗೊಟಾಯಿಸುತ್ತಾ ಇರಿ. ಉರಿ ಸಣ್ಣದಿರಲಿ.
ಪಾತ್ರೆ ಬಿಡುವ ಮುಂಚೆ ಇನ್ನುಳಿದ ತುಪ್ಪ ಸೇರಿಸಿ.

ತುಪ್ಪ ಸವರಿದ ಪ್ಲೇಟ್ ಗೆ  ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ.


ಸಿಹಿಯಲ್ಲಿ ಅದೇನು ಸವಿ....!

ಚಂದ್ರಿಕಾ ಹೆಗಡೆ

ಈರುಳ್ಳಿ ಚಟ್ನಿ-1

ಈರುಳ್ಳಿ- ೧
ಹಸಿಮೆಣಸು-೨
ಹುಳಿಸೇ ರಸ ೧/೪ ಚಮಚ
ತೆಂಗಿನ ತುರಿ - ೧/೨ ಬಟ್ಟಲು
ಉಪ್ಪು
ಸಕ್ಕರೆ ೧/೨ ಚಮಚ

ಒಗ್ಗರಣೆಗೆ:
ಸಾಸಿವೆ - ೧ ಚಮಚ
ಎಣ್ಣೆ- ೧ ಚಮಚ

ಈರುಳ್ಳಿ, ತೆಂಗಿನ ತುರಿ, ಹಸಿಮೆಣಸಿನ ಕಾಯಿ, ಉಪ್ಪು, ಸಕ್ಕರೆ ಸೇರಿಸಿ. ರುಬ್ಬಿ. ಈ ಮಿಶ್ರಣಕ್ಕೆ  ಸಾಸಿವೆ ಒಗ್ಗರಣೆ ಹಾಕಿ.
ಈರುಳ್ಳಿ ರಕ್ತ ಶುದ್ಧಿ ಮಾಡುತ್ತದೆ ಎಂಬುದು ಹಿರಿಯರ ಮಾತು.


ಮನೆಯಲ್ಲಿರಲಿ... ಆರೋಗ್ಯಕ್ಕೆ ತಕ್ಕುದಾದ ಮಂತ್ರ....


ಚಂದ್ರಿಕಾ ಹೆಗಡೆ

06 ಜನವರಿ 2012

ಮೂಲಂಗಿ ಸೊಪ್ಪಿನ ಸಲಾಡ್

ಮೂಲಂಗಿ ಸೊಪ್ಪು- ೨ ಕಪ್ ಹೆಚ್ಚಿದ್ದು
ಮೂಲಂಗಿ ಗಡ್ಡೆ- ೧ ಸಣ್ಣಗೆ ಹೆಚ್ಚಿ
ಈರುಳ್ಳಿ- ೨ ಸಣ್ಣಗೆ ಹೆಚ್ಚಿ
ಮೊಸರು ೧/೨ ಕಪ್
ಉಪ್ಪು

ಸಣ್ಣಗೆ ಹೆಚ್ಚಿದ ಮೂಲಂಗಿ ಸೊಪ್ಪು, ಈರುಳ್ಳಿ, ಮೂಲಂಗಿ ಗಡ್ಡೆ , ಉಪ್ಪು ಮೊಸರು ಸೇರಿಸಿ.
ರೊಟ್ಟಿ/ ಊಟದ ಜೊತೆ...ಇರಲು ಹಿತವೇನು! ಹುಂ....
ಅರೋಗ್ಯ ಕಾಪಾಡಿಕೊಳ್ಳಲು, ಹೆಚ್ಚಿದ ತೂಕವನ್ನು ಕಳೆದುಕೊಂಡು ಆತ್ಮವಿಶ್ವಾಸ  ಹೆಚ್ಚಿಸಿಕೊಳ್ಳಲು ಮೂಲಂಗಿ ಸಲಾಡ್  ಇಂದೇ ಮಾಡಿ :).....



ಚಂದ್ರಿಕಾ  ಹೆಗಡೆ

ಮೂಲಂಗಿ ಸೊಪ್ಪಿನ ದೋಸೆ

ಅಕ್ಕಿ -೨ ಕಪ್
ಉದ್ದಿನ ಬೇಳೆ- ೩ ಚಮಚ
ಮೆಂತೆ-೧ ಚಮಚ
ಕಡಲೆ ಬೇಳೆ - ೨ ಚಮಚ
ಉಪ್ಪು
ಮೂಲಂಗಿ ಸೊಪ್ಪು- ಹೆಚ್ಚಿದ್ದು  ೨ಕಪ್
ಈರುಳ್ಳಿ - ೨ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು- ೧/೨ ಹಿಡಿ ಹೆಚ್ಚಿದ್ದು
ಅರಿಸಿನ ಚಿಟಿಕೆ
ಖಾರ ಪುಡಿ- ೨ ಚಮಚ
ಜೀರಿಗೆ- ೧/೨ ಚಮಚ
ಎಣ್ಣೆ

ಮಾಡುವ ವಿಧಾನ:
ಅಕ್ಕಿ, ಉದ್ದು, ಕಡಲೆಬೇಳೆ , ಮೆಂತೆ ಯನ್ನು  ೩-೪ ಗಂಟೆ ನೆನಸಿಡಿ. ಇದನ್ನು ರುಬ್ಬಿ
 ಈ ಹಿಟ್ಟಿಗೆ ಹೆಚ್ಚಿದ ಮೂಲಂಗಿ ಸೊಪ್ಪು, ಕೊತ್ತಂಬರಿ ಸೊಪ್ಪು, ಈರುಳ್ಳಿ,ಉಪ್ಪು, ಅರಿಸಿನ , ಜೀರಿಗೆ , ಖಾರ ಪುಡಿ ಸೇರಿಸಿ.
 ದೋಸೆ ತವಾದ  ಮೇಲೆ ಆದಸ್ಟು ತೆಳ್ಳಗೆ  ಹುಯ್ಯಿರಿ.
ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ.

ಮೂಲಂಗಿ..... ದೋಸೆ.... ವಾಸನೆಯಾಗಲ್ಲ.... ನಂಬಿ....

ಚಂದ್ರಿಕಾ ಹೆಗಡೆ

05 ಜನವರಿ 2012

ಆಲೂ ಪರೋಠ

ಆಲೂ - ೪ ಬೇಯಿಸಿದ್ದು
ಈರುಳ್ಳಿ-೨ ಹೆಚ್ಚಿದ್ದು
ಹಸಿಮೆಣಸು- ೨ ಹೆಚ್ಚಿದ್ದು
ಗರಂ ಮಸಾಲ- ೨ ಚಮಚ
ಉಪ್ಪು ರುಚಿಗೆ
ಕೊತ್ತಂಬರಿ ಸೊಪ್ಪು- ಅರ್ಧ ಹಿಡಿ
ಗೋದಿ ಹಿಟ್ಟು ೪ ಬಟ್ಟಲು
ಬಿಸಿ ಎಣ್ಣೆ ೨ ಚಮಚ
ಪರೋಠ ಬೇಯಿಸಲು  ಎಣ್ಣೆ

ಗೋದಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ
ಕಲಸುವ ಮುನ್ನ: ೨ ಚಮಚ ಎಣ್ಣೆ ಬಿಸಿ ಮಾಡಿ ಹಾಕಿ.ರುಚಿಗೆ ಉಪ್ಪು ಸೇರಿಸಿ. ಬಿಸಿ ನೀರಿನಲ್ಲಿ ಕಲಸಿ.  ಇದರಿಂದ ಚಪಾತಿ/ ಪರೋಠ  ತುಂಬಾ ಮೃದುವಾಗುತ್ತದೆ.
ಬೇಯಿಸಿದ ಆಲೂ ಗಡ್ಡೆಯನ್ನು ಚೆನ್ನಾಗಿ ಹಿಸುಕಿಡಿ.  ಇದಕ್ಕೆ ಕೊತ್ತಂಬರಿ ಸೊಪ್ಪು+ ಹಸಿಮೆಣಸು+ ಗರಮ್  ಮಸಾಲ + ಉಪ್ಪು+ ಹೆಚ್ಚಿದ ಈರುಳ್ಳಿ ಸೇರಿಸಿ.
 ಚಪಾತಿ ಹಿಟ್ಟಿನಲ್ಲಿ ಉಂಡೆ ಮಾಡಿ ಸ್ವಲ್ಪ ಲಟ್ಟಿಸಿ.  ಇದರೊಳಗೆ  ಆಲೂಗಡ್ಡೆಯ ಮಿಶ್ರಣವನ್ನು ಸೇರಿಸಿ . ನಿಧಾನವಾಗಿ ಮುಚ್ಚಿ ಲಟ್ಟಿಸಿ.
ಸ್ವಲ್ಪ ಎಣ್ಣೆ ಸವರಿ  ಪರೋಠ ವನ್ನು  ಬೇಯಿಸಿ.
ಶುಂಟಿ ಚಟ್ನಿ ಜೊತೆಯಾಗಲಿ....


 ಎಲ್ಲೀ.... ಏಳಿ....ಪರೋಠ ತಿನ್ನಿ


ಚಂದ್ರಿಕಾ ಹೆಗಡೆ

02 ಜನವರಿ 2012

ಬಾದಾಮ್ ಮಿಲ್ಕ್ ಬರ್ಫಿ

ಬಾದಾಮ್- ೧ ಕಪ್
ಸಕ್ಕರೆ- ೧ ೧/೨
ಮಿಲ್ಕ್ ಪೌಡರ್ - ೧/೨ ಕಪ್
ತುಪ್ಪ- ೫ ಚಮಚ
ಏಲಕ್ಕಿ ಪುಡಿ- ೧/೨ ಚಮಚ
ಹಾಲು- ೧ ಕಪ್


  1. ಬಾದಾಮ್ ಅನ್ನು ಬೆಚ್ಚಗಿನ ನೀರಿನಲ್ಲಿ ೭-೮ ಗಂಟೆ ನೆನಸಿ. ಇದರಿಂದ  ಸಿಪ್ಪೆ ತೆಗೆಯಲು ಸುಲಭ
  2. ಸಿಪ್ಪೆ ತೆಗೆದ ಬಾದಾಮ್ ಅನ್ನು  ಹಾಲಿನೊಂದಿಗೆ ನುಣ್ಣನೆ ರುಬ್ಬಿ.
  3. ಇದಕ್ಕೆ ಸಕ್ಕರೆ, ಹಾಲಿನ ಪುಡಿ, ಹಾಕಿ ಮತ್ತೆ ರುಬ್ಬಿ. ಇದರಿಂದ ಹಾಲಿನ ಪುಡಿ ಗಂಟು ಕಟ್ಟುವದಿಲ್ಲ.
  4. ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ೨೦ -೨೫ ನಿಮಿಷ ಚೆನ್ನಾಗಿ ಕುದಿಸಿ. ತಿರುವುತ್ತಾ ಇರಿ. ಇನ್ನೇನು ಗಟ್ಟಿ ಆಗುತ್ತಿದ್ದಾಗ ತುಪ್ಪ ಸೇರಿಸಿ.( ಬರ್ಫಿ ಹದಕ್ಕೆ ಬಂದಾಗ ಗುಳ್ಳೆಗಳು ಏಳುತ್ತದೆ,)

                     ಹೀಗಾದಾಗ ಪಾತ್ರೆಯಿಂದ ಮಿಶ್ರಣ ಸುಲಭವಾಗಿ ಪ್ಲೇಟ್ ಗೆ ಬೀಳುತ್ತದೆ.
5    ತುಪ್ಪ ಸವರಿದ ತಟ್ಟೆಗೆ   ಹಾಕಿ. ಹರಡಿ ಬೇಕಾದ ಆಕಾರಕ್ಕೆ ಕತ್ತರಿಸಿ.

ಬಾದಾಮ್ .... ತಿನ್ನಿ... ಬೋರಾದಾಗ ಬರ್ಫಿ ತಿನ್ನಿ....



ಚಂದ್ರಿಕಾ ಹೆಗಡೆ