20 ಏಪ್ರಿಲ್ 2012

ಕೊಬ್ಬರಿ ಮಿಠಾಯಿ

ಕೊಬ್ಬರಿ ತುರಿ- ೨ ಕಪ್
ಸಕ್ಕರೆ- ೨ಕಪ್
ಎಲೆಕ್ಕಿ ಪುಡಿ- ೧ ಚಮಚ 
ತುಪ್ಪ- ೨ ಚಮಚ 



ಸಕ್ಕರೆಗೆ ಸ್ವಲ್ಪ ನೀರು( ಈ ಪ್ರಮಾಣಕ್ಕೆ ೧ ಕಪ್ ನೀರು )ಹಾಕಿ ಪಾಕ ಮಾಡಿ .
ಅಂಟು ಪಾಕ ಬಂದ ಮೇಲೆ( ಸುಮಾರು ೬-೮ ನಿಮಿಷ ಕುದಿಸಿದ ಮೇಲೆ) ಕೊಬ್ಬರಿ ಏಲಕ್ಕಿ  ಪುಡಿ ಹಾಕಿ  ಹೊಂದುವಂತೆ  ಸೌಟಿನಲ್ಲಿ ತಿರುವಿ.
೩-೪ ನಿಮಿಷ ಹಾಗೆ ತಿರುವಿ
ತುಪ್ಪ ಸವರಿದ  ಪ್ಲೇಟ್  ಗೆ  ವರ್ಗಾಯಿಸಿ. 
ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿ.



ತೆಂಗು - ತರಾವರಿ 

ಚಂದ್ರಿಕಾ ಹೆಗಡೆ


14 ಏಪ್ರಿಲ್ 2012

ಮೊಳಕೆ ಕಾಳು ಕ್ಯಾಬೇಜ್ ಪಲ್ಯ

ಮೊಳಕೆ ಕಟ್ಟಿದ ಹೆಸರು ಕಾಳು- ೧/೨ ಕಪ್
ಹೆಚ್ಚಿದ  ಕ್ಯಾಬೇಜ್ - ೧/೨ ಕಪ್
ಈರುಳ್ಳಿ-೧
ಹಸಿಮೆಣಸಿನ  ಕಾಯಿ- ೧
ಎಣ್ಣೆ-೧ ಚಮಚ
ಅರಿಸಿನ
ಉಪ್ಪು
ತೆಂಗಿನ ತುರಿ ಸ್ವಲ್ಪ
ನಿಂಬೆರಸ- ೧ ಚಮಚ
ಸಾಸಿವೆ- ೧/೪ ಚಮಚ
ಕರಿಬೇವು






ಎಣ್ಣೆ ,ಸಾಸಿವೆ, ಕರಿಬೇವು, ಹಸಿಮೆಣಸಿನ ಕಾಯಿ, ಅರಿಸಿನ ಹಾಕಿ ಒಗ್ಗರಣೆ  ಸಿದ್ಧಮಾಡಿ. ಇದಕ್ಕೆ ಕ್ಯಾಬೇಜ್ , ಈರುಳ್ಳಿ,ಮೊಳಕೆ ಕಾಳು ಹಾಕಿ ಹುರಿದು ,ಸ್ವಲ್ಪ ನೀರು ಚುಮುಕಿಸಿ ಬೇಯಿಸಿ. ೪-೫ ನಿಮಿಷ
ಉಪ್ಪು ಹಾಕಿ-೨ ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಒಲೆಯಿಂದ ಇಳಿಸಿದ ಮೇಲೆ ನಿಂಬೆ ರಸ  , ತೆಂಗಿನ ತುರಿ ಸೇರಿಸಿ.




ಚಂದ್ರಿಕಾ ಹೆಗಡೆ

ಹಲಸಿನ ಕಾಯಿ ಪಲ್ಯ

ಹಲಸಿನ  ಕಾಯಿ  ತೊಳೆ - ೧ ಬಟ್ಟಲು ( ಸಣ್ಣಗೆ ಹೆಚ್ಚಿದ್ದು)
ಹಸಿಮೆಣಸಿನ ಕಾಯಿ-೨/ ಒಣ ಮೆಣಸು -2
ತೆಂಗಿನ ತುರಿ- ೧/೪ ಬಟ್ಟಲು
ನಿಂಬೆ ರಸ- ೨ ಚಮಚ
ಕರಿ ಬೇವು - ೧ ಎಳೆ
ಉಪ್ಪು
ಎಣ್ಣೆ- ೨ ಚಮಚ
ಸಾಸಿವೆ- ೧/೨ ಚಮಚ
ಅರಿಸಿನ ಚಿಟಿಕೆ,


ಹಲಸಿನ ತೊಳೆಯನ್ನು ಹೆಚ್ಚಿ ಬೇಯಿಸಿಡಿ.
ಬಾಣಲೆಗೆ ಎಣ್ಣೆ, ಸಾಸಿವೆ, ಕರಿಬೇವು ಹಸಿಮೆಣಸಿನ ಕಾಯಿ,/ಒಣ ಮೆಣಸು,ಅರಿಸಿನ ಒಗ್ಗರಣೆ ಸಿದ್ಧಪಡಿಸಿ.
ಇದಕ್ಕೆ ಬೇಯಿಸಿಟ್ಟ ಹಲಸಿನ ತೊಳೆ ಹಾಕಿ ೫ ನಿಮಿಷ ಉರಿಯಲ್ಲಿಡಿ. ಉಪ್ಪು ಹಾಕಿ.
ಒಲೆಯಿಂದ ಇಳಿಸಿ ನಿಂಬೆ ರಸ ತೆಂಗಿನ ತುರಿ  ಸೇರಿಸಿ.


ಚಂದ್ರಿಕಾ ಹೆಗಡೆ

ಸುಟ್ಟ ಬದನೆ ಭಜ್ಜಿ

ದೊಡ್ಡ ಬದನೆ ಕಾಯಿ - ೧
ಈರುಳ್ಳಿ - ೧
ತೆಂಗಿನ ತುರಿ- ೧/೨ ಬಟ್ಟಲು
ಮೊಸರು- ೧/೨ ಬಟ್ಟಲು
ಸಾಸಿವೆ - ೧/೨ ಚಮಚ,
ಎಣ್ಣೆ- ೧ ಚಮಚ
ಅರಿಸಿನ ಚಿಟಿಕೆ,
ಕರಿಬೇವು- ೧ ಎಳೆ
ಸಕ್ಕರೆ- ೧/೨ ಚಮಚ
ಮಜ್ಜಿಗೆ ಮೆಣಸು-೨
ಉಪ್ಪು




ಸುಟ್ಟ ಬದನೆ ಕಾಯಿ ಸಿಪ್ಪೆ ತೆಗೆದು ಹೆಚ್ಚಿಡಿ.
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ.
ತೆಂಗಿನ ತುರಿಯನ್ನು ರುಬ್ಬಿ ಇಡಿ.
ಬದನೆ ಕಾಯಿ, ಈರುಳ್ಳಿ, ರುಬ್ಬಿದ ತೆಂಗಿನ ಕಾಯಿ ತುರಿ, ಉಪ್ಪು, ಮೊಸರು,ಸಕ್ಕರೆ ಸೇರಿಸಿ.
ಇದಕ್ಕೆ ಮಜ್ಜಿಗೆ ಮೆಣಸಿನ ಒಗ್ಗರಣೆ ಹಾಕಿ.(  ಎಣ್ಣೆ, ಸಾಸಿವೆ, ಕರಿಬೇವು, ಅರಿಸಿನ )


ಬಗೆ ಬಗೆ .... ಅಡುಗೆ.....


ಚಂದ್ರಿಕಾ ಹೆಗಡೆ


ಮಾವಿನ ಕಾಯಿ ಭಜ್ಜಿ

ಮಾವಿನ ಕಾಯಿ -೧ ಬೇಯಿಸಿದ್ದು
ತೆಂಗಿನ ತುರಿ- ೧/೨ ಬಟ್ಟಲು
ಮೊಸರು- ೧/೨ ಬಟ್ಟಲು
ಉಪ್ಪು
ಸಕ್ಕರೆ- ೧/೨ ಚಮಚ
ಒಗ್ಗರಣೆಗೆ- ೧ ಚಮಚ ಎಣ್ಣೆ, ಒಣ ಮೆಣಸು -೧  ಸಾಸಿವೆ - ೧ಚಮಚ , ಇಂಗು
ಹಸಿಮೆಣಸಿನ ಕಾಯಿ- ೨


ತೆಂಗಿನ ತುರಿ, ಹಸಿ ಮೆಣಸಿನ ಕಾಯಿ ರುಬ್ಬಿ.
ಬೇಯಿಸಿಟ್ಟುಕೊಂಡ ಮಾವಿನ ಕಾಯಿಯನ್ನು ಹಿಸುಕಿಡಿ . ಇದಕ್ಕೆ ಮೊಸರು, ರುಬ್ಬಿಟ್ಟ ಮಿಶ್ರಣ ಸಕ್ಕರೆ ಉಪ್ಪು ಸೇರಿಸಿ.
ಇದಕ್ಕೆ ಸಾಸಿವೆ , ಒಣ ಮೆಣಸು, ಇಂಗಿನ ಒಗ್ಗರಣೆ ನೀಡಿ.

ಬಿಸಿಲ ಬೇಗೆಗೆ ತಂಪು ತಂಪಾದ ಅಡುಗೆ!



ಚಂದ್ರಿಕಾ ಹೆಗಡೆ

ಹಲಸಿನ ಕಾಯಿ ಹುಳಿ

ಹಲಸಿನ ತೊಳೆ - ೩ ಬಟ್ಟಲು 
ತೆಂಗಿನ ತುರಿ - ೧ ಬಟ್ಟಲು
ಮಜ್ಜಿಗೆ - ೧ ೧/೨ ಬಟ್ಟಲು
ಹಸಿ ಮೆಣಸಿನ ಕಾಯಿ - ೩
ಬೆಳ್ಳುಳ್ಳಿ ( ಇಷ್ಟಪಡುವದಾದರೆ) - ೫ ಎಸಳು 
ಕೊತ್ತಂಬರಿ ಬೀಜ- ೧/೨ ಚಮಚ
ಸಾಸಿವೆ- ೧ ಚಮಚ 
ಎಣ್ಣೆ- ೩ ಚಮಚ 
ಉಪ್ಪು
ಬೆಲ್ಲ- ೧ ಚಮಚ 
ಅರಿಸಿನ - ೧ಚಮಚ 


ಮಾಡುವ ವಿಧಾನ :

ಹಲಸಿನ ತೊಳೆಯನ್ನು ಅರಿಸಿನ ಹಾಕಿ  ಬೇಯಿಸಿ. 
೧ ಚಮಚ ಎಣ್ಣೆಯಲ್ಲಿ ಹಸಿಮೆಣಸಿನ ಕಾಯಿ, ಕೊತ್ತಂಬರಿ ಬೀಜ , ಹುರಿಯಿರಿ. ಇದನ್ನು ತೆಂಗಿನ ತುರಿ ಹಸಿ ಸಾಸುವೆ ಜೊತೆ ರುಬ್ಬಿ.
ರುಬ್ಬಿದ ಮಿಶ್ರಣವನ್ನು ಬೇಯಿಸಿಟ್ಟ ತೊಳೆಯ ಜೊತೆ ಹಾಕಿ ಕುದಿಸಿ.
ಉಪ್ಪು ಸೇರಿಸಿ.
೨ ಕುದಿ ಬಂದ ಮೇಲೆ ಮಜ್ಜಿಗೆ, ಬೆಲ್ಲ  ಸೇರಿಸಿ ೧ ನಿಮಿಷ ಕುದಿಸಿ .
 ೨ ಚಮಚ ಎಣ್ಣೆಯಲ್ಲಿ ಬೆಳ್ಳುಳ್ಳಿ ಹುರಿದು ಈ ಹುಳಿಗೆ ಸೇರಿಸಿ.



ಅಗಾಧ ರುಚಿ....!




ಚಂದ್ರಿಕಾ ಹೆಗಡೆ




ಬೆಲ್ಲ -ಕಾಯಿ ಉಂಡೆ

ತೆಂಗಿನ ತುರಿ- ೨ ಕಪ್
ಬೆಲ್ಲ- ೧ ೧/೨ ಕಪ್
ಏಲಕ್ಕಿ ಪುಡಿ - ೧ ಚಮಚ


ಬೆಲ್ಲ ತೆಂಗಿನ ತುರಿಯನ್ನು ಸೇರಿಸಿ ೧೫ ನಿಮಿಷ ಸಣ್ಣ ಉರಿಯಲ್ಲಿ ಇಟ್ಟು ಕೈಯಾಡಿಸುತ್ತಾಇರಿ. ಪಾಕ ಗಟ್ಟಿಯಾದ ಮೇಲೆ ತಣ್ಣಗಾಗಲು ಬಿಟ್ಟು , ಆಮೇಲೆ ಉಂಡೆ ಕಟ್ಟಿ.
ಪಾಕ ಪರೀಕ್ಷೆ!: ಒಂದು ಲೋಟದಲ್ಲಿ ನೀರು ಹಾಕಿ ಬೆಲ್ಲವನ್ನು ಬಿಟ್ಟು ನೋಡಿ ನೀರಲ್ಲಿ ಕರಗದೆ ಗಟ್ಟಿಯಾಗಿ ಕೈಗೆ ಸಿಕ್ಕರೆ ಪಾಕವಾಗಿದೆ ಎಂದು ಅರ್ಥ .



ಮೆಲ್ಲಲೇನು ರುಚಿ.....!




ಚಂದ್ರಿಕಾ ಹೆಗಡೆ

ಕರಿಬೇವಿನ ಚಟ್ನಿ ಪುಡಿ

ಕರಿ ಬೇವು- ೨೦ ಎಳೆ
ಕಡಲೆ ಬೇಳೆ- ೧/೪ ಕಪ್
ಅಚ್ಚಖಾರದ ಪುಡಿ- ೨ ಚಮಚ 
ಹುಳಿಸೆ ಹಣ್ಣು ಸ್ವಲ್ಪ -(ಅಡಿಕೆ ಗಾತ್ರ )
ಉಪ್ಪು
ಸಕ್ಕರೆ - ೧ ಚಮಚ 
ಅರಿಸಿನ - ೧ ಚಮಚ 


ಕರಿ ಬೇವನ್ನು ಹುರಿದುಕೊಳ್ಳಿ. ಪುಡಿ ಆಗುವ ಹಾಗೆ.
(ಓವೆನ್ ನಲ್ಲಿ- ೩ ನಿಮಿಷ ಹುರಿದರೆ ಸಾಕು. ಆದರೆ ಪ್ರತಿ ೧ ನಿಮಿಷಕ್ಕೆ ತೆಗೆದು ಕೈಯಾಡಿಸಬೇಕು.)
ಕಡಲೆ ಬೇಳೆ ಹುರಿದಿಡಿ.
ಆನಂತರ ಎಲ್ಲವನ್ನು ಸೇರಿಸಿ ಪುಡಿ ಮಾಡಿ.

ದೋಸೆ/ ಚಪಾತಿ/ ರೊಟ್ಟಿ/ ಇಡ್ಲಿ ಜೊತೆಗೆ ಈ ಚಟ್ನಿ ಪುಡಿಗೆ    ಮೊಸರನ್ನು ಸೇರಿಸಿ  ಸೇವಿಸಿ.


ಚಂದ್ರಿಕಾ ಹೆಗಡೆ


10 ಏಪ್ರಿಲ್ 2012

ಈರುಳ್ಳಿ ಚಟ್ನಿ -೨

 ಈರುಳ್ಳಿ ದೊಡ್ಡದು -೨
ಹಸಿಮೆಣಸು-೨
ಹುಳಿಸೆ ರಸ- ೧/೨ ಚಮಚ
ಉಪ್ಪು
ಸಕ್ಕರೆ ೧/೪ ಚಮಚ

ಈರುಳ್ಳಿ ,ಹಸಿಮೆಣಸಿನ ಕಾಯಿ, ಉಪ್ಪು , ಸಕ್ಕರೆ , ಹುಳಿಸೆ ರಸ ಇವನ್ನು ರುಬ್ಬಿ.
ಚಟ್ನಿ ರೆಡಿ.
strong  ಆಗಿ ಇರುವ ಈ ಚಟ್ನಿ ಯನ್ನು ದೋಸೆ ರೊಟ್ಟಿ , ಚಪಾತಿ, ಇಡ್ಲಿ ಜೊತೆ ಸೇವಿಸಬಹುದು.
 ಜ್ವರ ಬಂದು ನಾಲಿಗೆಗೆ ಏನು ರುಚಿ ಎನಿಸದಿರುವವರಿಗೆ  ಒಳ್ಳೆ ಅಡುಗೆ!

ಮನೆಯಲ್ಲಿ ಅಡಗಿರುವ ವಿಶೇಷ ಶಕ್ತಿ.... ಅದುವೇ ಅಡುಗೆ!

ಚಂದ್ರಿಕಾ ಹೆಗಡೆ

ಬಾಳೆಕಾಯಿ ಪಲ್ಯ -೧

ಬಾಳೆ ಕಾಯಿ  (ದೊಡ್ಡದು ) - ೨
ಈರುಳ್ಳಿ- ೧
ತೆಂಗಿನ ತುರಿ ೧/೪ ಬಟ್ಟಲು
ನಿಂಬೆ ರಸ- ೨ ಚಮಚ
ಉಪ್ಪು
ಎಣ್ಣೆ- ೨ ಚಮಚ
ಕರಿ ಬೇವು- ೧ ಎಳೆ
ಸಾಸುವೆ- ೧/೨ ಚಮಚ
ಅರಿಸಿನ ೧/೨ ಚಮಚ
ಹಸಿ ಮೆಣಸಿನ ಕಾಯಿ- 2

ಬಾಳೆ ಕಾಯಿಯನ್ನು  ಇಡಿಯಾಗಿಯೇ ಬೇಯಿಸಿ.
ತಣ್ಣಗಾದ ಮೇಲೆ  ಸಿಪ್ಪೆ ತೆಗೆದು ತುರಿ ಮಣೆಯಲ್ಲಿ ತುರಿದು ಇಡಿ.
ಈರುಳ್ಳಿ ಸಣ್ಣಗೆ ಹೆಚ್ಚಿ.
ಎಣ್ಣೆ, ಸಾಸುವೆ ಅರಿಸಿನ, ಹಸಿಮೆಣಸಿನ ಕಾಯಿ , ಕರಿ ಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ, ಈರುಳ್ಳಿ ಸೇರಿಸಿ ೧/೨ ಬೇಯಿಸಿ. ತುರಿದಿಟ್ಟ ಬಾಳೆ ಕಾಯಿ, ಉಪ್ಪು ಸಕ್ಕರೆ ಸೇರಿಸಿ. ೩- ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಒಲೆಯಿಂದ  ತೆಗೆದ ಮೇಲೆ ನಿಂಬೆ ರಸ, ತೆಂಗಿನ ತುರಿ ಹಾಕಿ.


ಬಾಳೆ- ಬಲು ರುಚಿ



ಚಂದ್ರಿಕಾ ಹೆಗಡೆ

ಬಿಲ್ವ ಪತ್ರೆ ತಂಬುಳಿ

ಬಿಲ್ವ ಪತ್ರೆ - ೪ ಎಲೆಗಳು
ತೆಂಗಿನ ತುರಿ- ೧/೨ ಬಟ್ಟಲು
ಮಜ್ಜಿಗೆ- ೧ ಲೋಟ
ಉಪ್ಪು ರುಚಿಗೆ ತಕ್ಕಸ್ಟು
ಸಕ್ಕರೆ ೧/೪ ಚಮಚ
ಕಾಳು ಮೆಣಸು - ೫-೬
ಜೀರಿಗೆ - ೧/೨ ಚಮಚ
ಎಣ್ಣೆ ೧/೨ ಚಮಚ


ಬಿಲ್ವ ಪತ್ರೆ , ಜೀರಿಗೆ, ಕಾಳು ಮೆಣಸನ್ನು ಎಣ್ಣೆಯಲ್ಲಿ ಹುರಿದು, ತೆಂಗಿನ ತುರಿ, ಉಪ್ಪು, ಸಕ್ಕರೆ , ಹಾಗು ಸ್ವಲ್ಪ ನೀರನ್ನು ಹಾಕಿ ರುಬ್ಬಿ.
ಇದಕ್ಕೆ ಮಜ್ಜಿಗೆ , ಇನ್ನಸ್ಟು ಉಪ್ಪು ಬೇಕೆನಿಸಿದರೆ ಸೇರಿಸಿ.


ಬೇಸಿಗೆಯಲ್ಲಿ ಅಧರ - ಉದರಕ್ಕೆ  ಆರಾಮದಾಯಕ  ಅಡುಗೆ- ಸರಳ ಕ್ರಮ- ಸುಲಭ ಜೀರ್ಣ!

ಚಂದ್ರಿಕಾ ಹೆಗಡೆ

ಎಳೇ ಹಲಸಿನ ಕಾಯಿ ಪಲ್ಯ

 ಎಳೇ ಹಲಸಿನ ಕಾಯಿ- ೧
ಈರುಳ್ಳಿ- ೨
ಕರಿಬೇವು- ೨ ಎಳೆ
ಎಣ್ಣೆ- ೩ ಚಮಚ
ತೆಂಗಿನ ತುರಿ - ೧/೨ ಬಟ್ಟಲು
 ನಿಂಬೆ ರಸ- ೨ ಚಮಚ
ಉಪ್ಪು ರುಚಿಗೆ ತಕ್ಕಸ್ಟು
ಸಕ್ಕರೆ ೧/೨ ಚಮಚ
ಈರುಳ್ಳಿ ೧ ಸಣ್ಣಗೆ ಹೆಚ್ಚಿದ್ದು
ಒಗ್ಗರಣೆಗೆ ೧ ಚಮಚ ಸಾಸುವೆ, ೨ ಹಸಿ ಮೆಣಸಿನ ಕಾಯಿ, ಅರಿಸಿನ ೧/೨ ಚಮಚ

ಎಳೆ ಹಲಸಿನ ಕಾಯಿಯ ಮುಳ್ಳು, ಮೇಣದ ಭಾಗವನ್ನು ಕತ್ತರಿಸಿ.
ನೀರಿನಲ್ಲಿ-೫ ನಿಮಿಷ ಇಡಿ.
ಆ ನೀರನ್ನು ತೆಗೆದು ಮತ್ತೆ  ಬೇರೆ ನೀರು ಹಾಕಿ ಕುಕ್ಕರ್ನಲ್ಲಿ ೩ ಕೂಗು  ಮಾಡಿ.
೧೫ ನಿಮಿಷ ಕಳೆದ ಮೇಲೆ ಕುಕ್ಕರ್ನಿಂದ ತೆಗೆದು ನೀರು ಬಸಿದು  ಹೋಳುಗಳನ್ನು ಆರಲು ೧ ಪ್ಲೇಟ್ ನಲ್ಲಿ ಹಾಕಿ. ಚೆನ್ನಾಗಿ ಹಿಸುಕಿ.
ಹೋಳು ಎಳೆ ಎಳೆಯಾಗಿ  ಬಿಟ್ಟು ಕೊಳ್ಳುತ್ತದೆ .

ಈಗ ಬಾಣಲೆಗೆ ಎಣ್ಣೆ ಹಾಕಿ ಸಾಸುವೆ ಹಸಿ ಮೆಣಸಿನ ಕಾಯಿ, ಕರಿಬೇವು, ಅರಿಸಿನ ಹಾಕಿ. ಇದಕ್ಕೆ  ಈರುಳ್ಳಿ  ಹಾಗು ಹಿಸುಕಿಟ್ಟ ಹಲಸಿನ ಕಾಯಿಯ ಹೋಳು ,ಉಪ್ಪು , ಸಕ್ಕರೆ ಸೇರಿಸಿ.
 ೨ ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಒಲೆಯಿಂದ ಇಳಿಸಿ, ನಿಂಬೆ ರಸ  ತೆಂಗಿನ ತುರಿ ಸೇರಿಸಿ.

ಬೇಸಿಗೆಯ ಆರಂಭದಲ್ಲಿ  ಹಲಸು ನೀಡುವ ಕೊಡುಗೆ ನಿಮ್ಮ ಅಡುಗೆ ಮನೆಯಲ್ಲಿ  ಸಂಭ್ರಮಿಸಲಿ.


ಚಂದ್ರಿಕಾ ಹೆಗಡೆ

ಹಲಸಿನ ಕಂದೆ ( ಎಳೇ ಹಲಸು) ಚಟ್ನಿ

  ಎಳೇ ಹಲಸಿನ ಕಾಯಿ- ೧ ಚಿಕ್ಕದ್ದು
ಈರುಳ್ಳಿ-೨
ಹಸಿಮೆಣಸಿನ ಕಾಯಿ- ೨-೩
ತೆಂಗಿನ ತುರಿ- ೧/೨ ಬಟ್ಟಲು
ಉದ್ದಿನ ಬೇಳೆ- ೧ ಚಮಚ
ಎಣ್ಣೆ- ೧ ಚಮಚ
ಉಪ್ಪು - ರುಚಿಗೆ ತಕ್ಕಸ್ಟು
ಸಕ್ಕರೆ  ೧/೨ ಚಮಚ
ಮೊಸರು - ೧/೨ ಬಟ್ಟಲು
ಒಗ್ಗರಣೆಗೆ: ೧ ಚಮಚ ಎಣ್ಣೆ, ೧/೨ ಚಮಚ ಸಾಸುವೆ , ಚಿಟಿಕೆ ಅರಿಸಿನ ,ಕರಿಬೇವಿನ ಸೊಪ್ಪು- ೧ ಎಳೆ


ಹಲಸಿನ ಕಾಯಿಯ  ಮುಳ್ಳುಗಳನ್ನು ತೆಗೆದು , ಅದರ ಮಧ್ಯದ  ಅಂಟು (ಮೇಣ) ಬರುವ ಭಾಗವನ್ನು ಕತ್ತರಿಸಿ .
ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿ ೫ ನಿಮಿಷ ನೀರಿನಲ್ಲಿ ಇಟ್ಟರೆ  ಮತ್ತೆ ಮೇಣ ಬರುವದಿಲ್ಲ.
ಕುಕ್ಕರ್ ನಲ್ಲಿ ಹೋಳಿನ ಜೊತೆಗೆ ನೀರನ್ನು ಹಾಕಿ ೩ ಕೂಗು  ಮಾಡಿ ಬೇಯಿಸಿ.
೧/೨ ಗಂಟೆಯ ನಂತರ  ನೀರನ್ನು ಬಸಿದು ಕೊಳ್ಳಿ. ಈರುಳ್ಳಿಯನ್ನು ಹೆಚ್ಚಿ.


 ೧ ಚಮಚ ಎಣ್ಣೆ ಬಿಸಿ ಮಾಡಿ ಇದಕ್ಕೆ ಉದ್ದಿನ ಬೇಳೆ ಹಾಕಿ  ಹುರಿಯಿರಿ.
ಹಸಿಮೆಣಸಿನ ಕಾಯಿ ಸೇರಿಸಿ ಒಲೆಯಿಂದ ಇಳಿಸಿಡಿ. ಹೋಳು, ತೆಂಗಿನ ತುರಿ , ಉಪ್ಪು, ಸಕ್ಕರೆ ಇವುಗಳನ್ನು ಮಿಕ್ಸಿ ಜಾರ್ ಗೆ  ಹಾಕಿ ರುಬ್ಬಿ.
ಈ ಮಿಶ್ರಣಕ್ಕೆ ಮೊಸರು , ಹೆಚ್ಚಿಟ್ಟ ಈರುಳ್ಳಿ ಹಾಕಿ.


ಒಗ್ಗರಣೆಯನ್ನು ಸಿದ್ಧಪಡಿಸಿ   ಸೇರಿಸಿ.


ಚಿಕ್ಕ ಹಲಸು  ಭಾರಿ ರುಚಿ....

ಹಲಸಿನ ಬೆಳೆಯ ಬೆಲೆ ನಾಲಿಗೆಯಲ್ಲಿ....!


ಚಂದ್ರಿಕಾ ಹೆಗಡೆ


02 ಏಪ್ರಿಲ್ 2012

ಬಾಳೆಕಾಯಿ ಭಜಿ

ಬಾಳೆಕಾಯಿ-೧
ಕಡಲೆ ಹಿಟ್ಟು ೧ ಬಟ್ಟಲು
ಎಣ್ಣೆ- ಕರಿಯಲು
ಉಪ್ಪು ರುಚಿಗೆ ತಕ್ಕಸ್ಟು
ಅರಿಸಿನ - ೧/೪ ಚಮಚ
ಅಜವಾನ-೧/೨ ಚಮಚ
ಅಡುಗೆ ಸೋಡಾ - ಚಿಟಿಕೆ




ಬಾಳೇಕಾಯಿಯನ್ನ್ನು   ತೆಳ್ಳಗೆ  ಹೆಚ್ಚಿ.
ಕಡಲೆ ಹಿಟ್ಟಿಗೆ ಉಪ್ಪು, ಅಜವಾನ, ಅರಿಸಿನ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. . ಇದಕ್ಕೆ ಚಿಟಿಕೆ ಅಡುಗೆ ಸೋಡಾ ಹಾಕಿ-೩ ನಿಮಿಷ ಬಿಡಿ.
ಎಣ್ಣೆ ಕಾದ ಮೇಲೆ  ಹೆಚ್ಚಿಟ್ಟುಕೊಂಡ ಬಾಳೇಕಾಯನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ ಹೊಂಬಣ್ಣ ಬರುವ ತನಕ ಕರಿಯಿರಿ.


ಭಲೇ .... ಭಜಿ


ಚಂದ್ರಿಕಾ ಹೆಗಡೆ

ಖಾಂದ (ಈರುಳ್ಳಿ) ಭಜಿ

ಈರುಳ್ಳಿ- ೩
ಕಡಲೆ ಹಿಟ್ಟು - ೧ ೧/೨ ಕಪ್
ಉಪ್ಪು ರುಚಿಗೆ
ಮೆಣಸಿನ ಪುಡಿ ೧ ಚಮಚ
ಕರಿಯಲು ಎಣ್ಣೆ


ಈರುಳ್ಳಿಯನ್ನು ಉದ್ದಕೆ ಸೀಳಿ.
ಇದಕ್ಕೆ ಉಪ್ಪು ಹಾಕಿ- ೧೦ ನಿಮಿಷ   ಬಿಡಿ . ಈ   ಸಮಯದಲ್ಲಿ ಈರುಳ್ಳಿ ನೀರನ್ನು ಬಿಟ್ಟುಕೊಳ್ಳುತ್ತದೆ.
ಇದಕ್ಕೆ ಕಡಲೆ ಹಿಟ್ಟನ್ನು, ಮೆಣಸಿನ ಪುಡಿ( ಅಚ್ಚಖಾರ) ಸೇರಿಸಿ.
ಉದುರು ಉದುರಾಗಿ ಎಣ್ಣೆಯಲ್ಲಿ ಬಿಡಿ.
ಹೊಂಬಣ್ಣ ಬರುವ ತನಕ ಕರಿಯಿರಿ. 
ಟೊಮೇಟೊ ಸಾಸ್ , ಚಟ್ನಿ ಜೊತೆ ಸವಿಯಿರಿ.




ಭಜಿ ... ಭಜನೆ ... ಮನೆಯಲ್ಲಿ...ಅಡುಗೆ ಮನೆಯ ಕಡೆಗೆ ಎಲ್ಲರ ಪ್ರಯಾಣ....!








ಚಂದ್ರಿಕಾ ಹೆಗಡೆ

ಸಿಹಿ ಪುರಿ(ಸಕ್ಕರೆ ಪುರಿ)

ಮೈದಾ ಹಿಟ್ಟು- ೧ ಕಪ್
ಸಕ್ಕರೆ- ೧/೪ ಕಪ್
ಎಣ್ಣೆ- ೩ ಚಮಚ ( ಹಿಟ್ಟಿಗೆ ಹಾಕಲು)
ಎಣ್ಣೆ ಕರಿಯಲು
ಉಪ್ಪು ರುಚಿಗೆ
ಸಕ್ಕರೆ ಪಾಕ- ೩ ಬಟ್ಟಲು 
ಏಲಕ್ಕಿ - ೩ 
ಬಾದಾಮ್ -೫ 




ಮೈದಾ ಹಿಟ್ಟಿಗೆ ಉಪ್ಪು, ಬಿಸಿ ಎಣ್ಣೆ, ಬಿಸಿ ನೀರು ಹಾಕಿ ಕಲಸಿ.
ಸಕ್ಕರೆ, ಏಲಕ್ಕಿ ಪುಡಿ ಮಾಡಿ ಇಡಿ. ಬಾದಾಮ್ ಅನ್ನು ಸಣ್ಣಗೆ ಹೆಚ್ಚಿ.
ಸಕ್ಕರೆ ಪಾಕವನ್ನು ಈ ಮೊದಲೇ ಸಿದ್ಧಪಡಿಸಿಕೊಳ್ಳಿ.
ಮೈದಾ ಹಿಟ್ಟನ್ನು   ಚಪಾತಿ  ಲಟ್ಟಿಸುವಂತೆ  ಲಟ್ಟಿಸಿ ೪ ಭಾಗ ಮಾಡಿ.
ಇದನ್ನು ಎಣ್ಣೆಯಲ್ಲಿ ಕರಿಯಿರಿ.
ನಂತರ ಸಕ್ಕರೆ ಪಾಕದಲ್ಲಿ ಈ ಪುರಿಗಳನ್ನು ಹಾಕಿ-೫ ನಿಮಿಷ ಇಡಿ.
ಆಮೇಲೆ ಪುರಿಗಳನ್ನು ತೆಗೆದು ಒಂದು ಪ್ಲೇಟಿನಲ್ಲಿ ಜೋಡಿಸಿ. ಇವುಗಳ ಮೇಲೆ ಈಗಾಗಲೇ ಮಾಡಿಟ್ಟುಕೊಂಡ ಸಕ್ಕರೆ ಪುಡಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಬಾದಾಮ್ ಹಾಕಿ. ೧/೨ ಗಂಟೆ ಫ್ರಿಡ್ಜ್ ನಲ್ಲಿ ಇಡಿ.
ಸಿಹಿಯೋ... ಸಿಹಿಯು...


ವಿ-ಸೂ : ಮೈದಾ ಬದಲಿಗೆ ಗೋದಿಯನ್ನು ಸೇರಿಸಬಹುದು. 





ಮನ ಹಗುರವಾಗಲು ಅಡುಗೆ ಮಾಡಿ!!


ಚಂದ್ರಿಕಾ ಹೆಗಡೆ