08 ಡಿಸೆಂಬರ್ 2011

ರಾಗಿ ಆಸರಿಗೆ ( ಜ್ಯೂಸ್ )


ನೆನಸಿದ ರಾಗಿ-೧ ಕಪ್
ಬೆಲ್ಲ/ ಸಕ್ಕರೆ ೧/೨ ಕಪ್
ಏಲಕ್ಕಿ ೨
ಚಿಟಿಕೆ ಉಪ್ಪು




ರಾಗಿಯನ್ನು+ ಏಲಕ್ಕಿ+ನೀರು  ರುಬ್ಬಿ. ಸೋಸಿ. ಅದಕ್ಕೆ ಬೆಲ್ಲ ಚಿಟಿಕೆ ಉಪ್ಪು ಹಾಕಿ ಪಾನೀಯವನ್ನಾಗಿ ಸ್ವೀಕರಿಸಿ.
ಸಿಹಿಯ ಬದಲಾಗಿ ಉಪ್ಪನ್ನು ಹಾಕಿ, ನಿಂಬೆರಸ ಹಾಕಿ ಸೇವಿಸಬಹುದು.

ಮಲೆನಾಡಿನಲ್ಲಿ  ಬೇಸಿಗೆಯ ಸಮಯದಲ್ಲಿ... ಎಲ್ಲರ ಮನೆಯಲ್ಲೂ ದಿನಕ್ಕೆ ೫-೧೦ ಸಲ ಆಸರಿಗೆ ಪದ ಕೇಳಲೇ ಬೇಕು....
ಬಂದ ನೆಂಟರಿಗೆ, ಪಕ್ಕದ ಮನೆಯವರಿಗೂ( ಇದು ಮಲೆನಾಡಿಗರ ಪ್ರತಿಷ್ಠೆಯ ಪ್ರಶ್ನೆಯು ಹೌದು. "ಆಸ್ರಿಗೆನು ಕೇಳಿದ್ವಿಲ್ಲೇ " ಅಂದರೆ  ಅವರು ಎಂತಹ ಮನುಷ್ಯರು ಎಂದು.! ) ಕೆಲಸದ ಆಳುಗಳಿಗೂ...ಮನೆಯ ಸದಸ್ಯರಿಗೂ.... ಹೀಗೆ...
ಆದ ಕಾರಣ ಈ ಆಸ್ರಿಗೆ ರೂಪ ಹಲವಾರು. ವಾತಾವರಣಕ್ಕೆ ತಕ್ಕಂತೆ... ಮಳೆಗಾಲ ಚಳಿಗಾಲದಲ್ಲಿ ಚಹಾ.. ಕಷಾಯ.. ಬಿಸಿನೀರು ( ಬಿಸಿ ಉದಕ) , ಬೇಸಿಗೆಯಲ್ಲಿ... ಮಜ್ಜಿಗೆ ನೀರು(ತಂಬುಳಿ) ತರಹದ ಆಸ್ರಿಗೆಗಳು....

ಆಸರು ಎಂದರೆ- ಬಾಯಾರಿಕೆ ಎಂದರ್ಥ.
ಆದರೆ ಮಲೆನಾಡಿನ ಬಹು ಭಾಗದಲ್ಲಿ ಇದನ್ನು ಎರಡು ಸಂದರ್ಭದಲ್ಲಿ  ಬಳಸುವದನ್ನು ಕಾಣಬಹುದು.

  1.  ಬಾಯಾರಿಕೆ
  2. ಬೆಳಗಿನ ತಿಂಡಿ.(ಉಪಹಾರ). ಬೆಳಗಿನ ತಿಂಡಿಯ ಸಂದರ್ಭದಲ್ಲಿ  ಆಸರಿಗೆ ಕುಡಿದು ಆತ? ಎಂಬ ಮಾತನ್ನು ಕೇಳಬಹುದು. ಇಲ್ಲವೇ ಆಸರಿಗೆ ಆತ ? ಎಂಬುದು ಬಳಕೆ.    
ಆಹಾರದ ಬಳಕೆಯ ಓಚಿತ್ಯದ?  ಚಿಂತನೆಯಲ್ಲಿ...

ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ