31 ಮಾರ್ಚ್ 2011

ಮಾವಿನ ಕಾಯಿ ತಂಬುಳಿ..

ಅಗತ್ಯ:
          ಮಾವಿನಕಾಯಿ ಹೋಳುಗಳು
           ತೆಂಗಿನತುರಿ
           ಹಸಿಮೆಣಸಿನ ಕಾಯಿ
           ಮಜ್ಜಿಗೆ
          ಕರಿಬೇವು
           ಒಗ್ಗರಣೆಗೆ ಸ್ವಲ್ಪ ಎಣ್ಣೆ, ಸಾಸಿವೆ ಇಂಗು
          ಸ್ವಲ್ಪ ಸಕ್ಕರೆ. ರುಚಿಗೆ ಅಗತ್ಯದ   ಉಪ್ಪು.

ಸರಿ ತಯಾರಿ: 
                    ಮಾವಿನಕಾಯಿ ಹೋಳುಗಳು, ಹಸಿಮೆಣಸು , ತೆಂಗಿನ ತುರಿ ಎಲ್ಲವನ್ನು ಸೇರಿಸಿ ರುಬ್ಬಿ. ಪಾತ್ರೆಯಲ್ಲಿ ಹಾಕಿ ಮಜ್ಜಿಗೆ ಸೇರಿಸಿ , ಉಪ್ಪು ,ಸಕ್ಕರೆ ಸೇರಿಸಿ.
 ಒಗ್ಗರಣೆಯನ್ನು ಸೇರಿಸಿ.( ಸ್ವಲ್ಪ ಎಣ್ಣೆ ಬಿಸಿ ಆದ ಮೇಲೆ ಸಾಸಿವೆ . ಚಟಪಟ ಅನ್ನುವಾಗ ಓಲೆ off ಮಾಡಿ ಕರಿಬೇವು ಇಂಗು ಸೇರಿಸಿ..)
         ಬೇಸಿಗೆಯಲ್ಲಿ ಊಟಕ್ಕೊಂದು ರುಚಿ ನೀಡುವ ಮಾವಿನ ಕಾಯಿ ತಂಬುಳಿ ರೆಡಿ!


ತಂಬುಳಿ ಯ ಸವಿಯಲ್ಲಿ:
                                 ಚಂದ್ರಿಕಾ ಹೆಗಡೆ

29 ಮಾರ್ಚ್ 2011

ಪುನರ್ಪುಳಿ (ಕೋಕಂ) ತಂಬುಳಿ

ಅಗತ್ಯ:
          ಪುನರ್ಪುಳಿ ಒಣಗಿದ ಸಿಪ್ಪೆ ೫-೬. ೧ ಗಂಟೆಯ ಕಾಲ ನೆನಸಿಡಿ
          ( ಹಸಿ ಇದ್ದರೆ ಹಣ್ಣನ್ನು ಒಡೆದು ಅದರ ರಸದಿಂದ ಮಾಡಬಹುದು)
          ಬೆಳ್ಳುಳ್ಳಿ ೫-೬ ಎಸಳು.
           ತೆಂಗಿನ ಹಾಲು ೧/೨ ಕಪ್.
           ಹಸಿಮೆಣಸು ೨-3
          ನಿಂಬೆ ಗಾತ್ರದ ಬೆಲ್ಲ
           ಕರಿಬೇವು೩-೪ ಎಲೆಗಳು
           ಒಗ್ಗರಣೆಗೆ ಸಾಸಿವೆ, ಎಣ್ಣೆ ಸ್ವಲ್ಪ.
          
          ಅಡುಗೆ ನಡಿಗೆ:
          ಬಾಣಲೆಗೆ ಸ್ವಲ್ಪ ಎಣ್ಣೆ,  ಸಾಸಿವೆ , ಹಾಕಿ ಚಟ್ ಪಟ್ ಅನ್ನುವಾಗ ಬೆಳ್ಳುಳ್ಳಿ ,ಹಸಿಮೆಣಸು  ಹಾಕಿ.. ಹುರಿಯಿರಿ.. ನಂತರ ಕರಿಬೇವು ಅರಿಸಿನ ಹಾಕಿ ಒಲೆ off  ಮಾಡಿ.  ಈಗ ನೆನಸಿದ ಸಿಪ್ಪೆಯನ್ನು  ಹಿಂಡಿ ಸೋಸಿಕೊಳ್ಳಿ. ಒಗ್ಗರಣೆಗೆ ಸೇರಿಸಿ. ಉಪ್ಪು ಬೆಲ್ಲ ರುಚಿಗೆ ತಕ್ಕಸ್ಟು ಹಾಕಿ ತೆಂಗಿನ ಹಾಲನ್ನು ಮಿಕ್ಸ್ ಮಾಡಿ.
 ಸರಳ , ಆದರೆ ಆರೋಗ್ಯಕ್ಕೆ ಉತ್ತಮವಾದ ಪದಾರ್ಥ ಇದು..ಅಮ್ಮನ ಹತ್ತಿರ ಇನ್ನಸ್ಟು ಅನ್ನ ಮಾಡುವದಕ್ಕೆ ಹೇಳ್ತಿರಾ!  
 ಬೇಸಿಗೆಯ ಪಾನೀಯವಾಗಿಯೂ ಬಳಸಬಹುದು .


ಇದನ್ನೇ ಪಾನೀಯವನ್ನು ತಯಾರಿಸುವಾಗ...
 ನೆನಸಿದ ಸಿಪ್ಪೆ ಹಿಂಡಿ ಸೋಸಿ ಅದಕ್ಕೆ ಏಲಕ್ಕಿ ಬೆಲ್ಲ ಹಾಕಿಕೊಳ್ಳಬಹುದು...ನೆನಪಿರಲಿ ಈ ಪಾನೀಯಕ್ಕೆ ಬೆಲ್ಲಾನೆ ಸೂಕ್ತ!

ತೆಂಗಿನ ಹಾಲಿನಲ್ಲಿ ಸೇವಿಗೆ ಪಾಯಸ

ಅಗತ್ಯ :
             ಸೇವಿಗೆ ೧ ಕಪ್
             ಸಕ್ಕರೆ ೩/೪ ಕಪ್( ಬೇಕಾದ ಸಿಹಿ ಅಳತೆಯಲ್ಲಿ)
              ತೆಂಗಿನ ಹಾಲು ೨ ಕಪ್
             ಏಲಕ್ಕಿ , ಗೋಡಂಬಿ,  ದ್ರಾಕ್ಷಿ..
            ಖೋವ.. ಸ್ವಲ್ಪ.
             ತುಪ್ಪ೫-೬ ಚಮಚ.

ಸರಿ ಒಲೆ ಹೊತ್ತಿಸಿ... ಬಾಣಲೆ ಇಟ್ರಾ? ಹುಂ...? ಅದ್ಕಿಂಥಾ ಮುಂಚೆ ಒಂದು ಕೆಲ್ಸಾ ಇದೆ...:
             ತೆಂಗಿನ ತುರಿ ೨ ಬಟ್ಟಲು.. ಇದನ್ನು ಏಲಕ್ಕಿಯನ್ನು ಸ್ವಲ್ಪ ನೀರನ್ನು ಮಿಕ್ಸಿಯಲ್ಲಿ ಹಾಕಿ  ಚೆನ್ನಾಗಿ ರುಬ್ಬಿ. ನಂತರ ಅದನ್ನು ಸೋಸಿ..ಈಗ ತೆಂಗಿನ ಹಾಲು ಸಿದ್ಧ. ಇನ್ನೊಮ್ಮೆ ಆ ರುಬ್ಬಿದ ಮಿಶ್ರಣಕ್ಕೆ ೧ ಬಟ್ಟಲು ನೀರು ಹಾಕಿ ಸೋಸಿ..ಅದನ್ನು ಇನ್ನೊಂದು ಪಾತ್ರೆಯಲ್ಲಿ ಇಟ್ಟುಕೊಳ್ಳಿ.
 ಈಗ ಒಲೆ ಮೇಲೆ ಬಾಣಲೆ ಇಡಿ ..
              ಅದಕ್ಕೆ ೩-೪ ಚಮಚ ತುಪ್ಪ ಹಾಕಿ
               ಸೇವಿಗೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ...
              ಹೊತ್ತೀತು ಎಚ್ಚರಿಕೆ...
              ಆಯ್ತಾ?
             ಈಗ ಆ ಎರಡನೇ ಬಾರಿ ತೆಗೆದ  ತೆಂಗಿನ ಹಾಲಿನಲ್ಲಿ ಹುರಿದ ಸೇವಿಗೆಯನ್ನು ಹಾಕಿ ಬೇಯಿಸಿ.ಗೋಡಂಬಿ ದ್ರಾಕ್ಷಿ ಹುರಿಯದೆ ಹಾಕಿ ..... ಸ್ವಲ್ಪ ಬೇಕಾದರೆ ನೀರು ಸೇರಿಸಿ... ಬೆಂದ ಮೇಲೆ ಸಕ್ಕರೆ ಸೇರಿಸಿ.. ಖೊವಾನು ಬೇಕಾದರೆ  ಮತ್ತೆ ಕುದಿಸಿ..ಹುಂ? ಗಟ್ಟಿಯಾಗ್ತಾ ಇದೆ ಅಂತಲಾ?ಅದ್ಕೆನೆ ಇನ್ನು ತೆಂಗಿನ ಹಾಲನ್ನು ಉಳಿಸಿಕೊಂಡಿರೋದು:)
                               ಈಗ ತೆಂಗಿನ ಹಾಲನ್ನು ಸೇರಿಸಿ..ಒಂದೇ ಕುದಿ ಸರಿ ಬೇಗ ಬೇಗ ಒಲೆ off  ಮಾಡಿ .






'ಸರಳ ಅಡುಗೆಯ ಸವಿಯಲ್ಲಿ"
ಚಂದ್ರಿಕಾ ಹೆಗಡೆ

28 ಮಾರ್ಚ್ 2011

ಹೆಸರು ಕಾಳಿನ ಪಲ್ಯ ( ಸರಳ ವಿಧಾನ)

ಅಗತ್ಯ:
          ಬೇಯಿಸಿದ ಹೆಸರು ಕಾಳು ಒಂದು ಬಟ್ಟಲು
           ಹಸಿಮೆಣಸು ೨-೩
           ಈರುಳ್ಳಿ  ೩-೪
         ಆಲೂ ೧ ಬೇಯಿಸಿದ್ದು.
          ಕರಿಬೇವು ೬-೭ ಎಲೆಗಳು
          ಸ್ವಲ್ಪ ಎಣ್ಣೆ, ಸಾಸಿವೆ ,ಅರಿಸಿನ  ತೆಂಗಿನ ತುರಿ , ನಿಂಬೆ ರಸ.

ಮತ್ತೇಕೆ.. ಈಕಡೆ  ನೋಟ? ಶುರುನೆ"

 ಈರುಳ್ಳಿಯನ್ನು  ಹೆಚ್ಚಿಟ್ಟುಕೊಳ್ಳಿ .
ಬಾಣಲೆಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ.. ಸಾಸಿವೆ ಹಾಕಿ. ಹಸಿಮೆಣಸು ಕರಿಬೇವು ಸೇರಿಸಿ ಅರಿಸಿನವನ್ನು ಹಾಕಿ .
ಈರುಳ್ಳಿಯನ್ನು ಹಾಕಿ ಹುರಿಯಿರಿ. ಆಮೇಲೆ ಸ್ವಲ್ಪ ಉಪ್ಪನ್ನು ಹಾಕಿ...
ಈಗ ಬೇಯಿಸಿದ ಹೆಸರು ಕಾಳು ಆಲೂ ಹಾಕಿ ಸ್ವಲ್ಪ ನೀರು ಸೇರಿಸಿ ರುಚಿಗೆ ತಕ್ಕಸ್ಟು ಉಪ್ಪು ಹಾಕಿ. ಚೆನ್ನಾಗಿ ಕುದಿಸಿ
  ಇಳಿಸಿದ ಮೇಲೆ ತೆಂಗಿನ ತುರಿ ನಿಂಬೆ ರಸ ಸೇರಿಸಿ. ಇನ್ನು ಚೆನ್ನಾಗಿ ಆಗಲು: ತೆಂಗಿನ ತುರಿಯನ್ನು ರುಬ್ಬಿ ಅದರ ಹಾಲನ್ನು ಸೋಸಿ ಆ ಹಾಲನ್ನು ಸೇರಿಸಬೇಕು...





 ಸರಿನಾ?... ತಡವಿನ್ನೇಕೆ ಅಡಿಗೆ ಮನೆ ಕಡೆಗೆ ಈಗಲೇ   ದೌಡಾಯಿಸಿ...

  ಅಡುಗೆ  ಮನೆಯ  ಸಡಗರದಲ್ಲಿ .....
                                                 ಚಂದ್ರಿಕಾ ಹೆಗಡೆ
  

ಸಿಂಪಲ್ ಆಲೂ ಬಾಜಿ ...

ಅಗತ್ಯ...:
              ಬೇಯಿಸಿದ ಆಲೂ ೫-೬
              ಈರುಳ್ಳಿ   ೨-೩
              ಸ್ವಲ್ಪ ತೆಂಗಿನ ತುರಿ
               ಕರಿಬೇವು ೫-೬ ಎಲೆಗಳು
               ಹಸಿಮೆಣಸು ೨-3
              ಅರಿಸಿನ, ನಿಂಬೆರಸ , ಒಗ್ಗರಣೆಗೆ ಸಾಸಿವೆ, ಎಣ್ಣೆ, ರುಚಿಗೆ ಅಗತ್ಯದ ಉಪ್ಪು.

 ಸರಿ ತಯಾರಾ?

                    ಬೇಯಿಸಿಟ್ಟುಕೊಂಡ ಆಲೂಗಳನ್ನು ಚೆನ್ನಾಗಿ ಹಿಸುಕಬೇಕು.
                     ಈರುಳ್ಳಿಗಳನ್ನು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ
                     ಬಾಣಲೆಗೆ ಸ್ವಲ್ಪ ಎಣ್ಣೆ , ಸಾಸಿವೆ, ಚಿಟಪಟ ಆದಮೇಲೆ  ಹಸಿಮೆಣಸು ಕರಿಬೇವು ಅರಿಸಿನ ಹಾಕಿ.
                     ತತ್ ಕ್ಷಣ  ಈರುಳ್ಳಿಯನ್ನು ಹಾಕಿ ಬಾಡಿಸಿ.
                      ಆಲೂ ಮಿಕ್ಸ್ ಹಾಕಿ ಕೈಯಾಡಿಸಿ .
                      ರುಚಿಗೆ ತಕ್ಕಸ್ಟು ಉಪ್ಪು ಸೇರಿಸಿ . ತೆಂಗಿನ ತುರಿ ಸೇರಿಸಿ.
                     ( ಇದಕ್ಕೆ ನೀರು ಹಾಕದೆ ಇದ್ದರೆ ಪಲ್ಯದ ತರಹ :ನೀರು ಹಾಕಿದರೆ ಬಾಜಿ ತರಹ ಬಳಸಬಹುದು )
                    ಸ್ವಲ್ಪ ನೀರು ಸೇರಿಸಿ . ಕುದಿಸಿ.
                    ಒಲೆಯ ಮೇಲಿಂದ ಇಳಿಸಿದ ಮೇಲೆ ನಿಂಬೆ ರಸ ಸೇರಿಸಿ.
                     


                                          ಇದನ್ನು ಚಪಾತಿ, ರೊಟ್ಟಿ, ದೋಸೆಯ ಜೊತೆ ಬಳಸಬಹುದು.


                                      ಇದನ್ನು ನಾನು ಚಪಾತಿಯ ಜೊತೆ ಮಾಡಿದ್ದೆ.
       
          ಸದ್ಭಾವದಿಂದ ....
                                  ಚಂದ್ರಿಕಾ ಹೆಗಡೆ
            

27 ಮಾರ್ಚ್ 2011

ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಪಲ್ಯ..

ಅಗತ್ಯ : ಕಲ್ಲಂಗಡಿ ಹಣ್ಣಿನ ಸಿಪ್ಪೆ.*( ಅಗತ್ಯವಿರುವಸ್ಟು)
            ಈರುಳ್ಳಿ 
            ಸ್ವಲ್ಪ ಗರಂ ಮಸಾಲ ಪುಡಿ 
             ನಿಂಬೆರಸ ೧ ಚಮಚ 
              ಅರಿಸಿನ ಅರ್ಧ ಚಮಚ 
              ಒಗ್ಗರಣೆಗೆ ಸಾಸಿವೆ, ಎಣ್ಣೆ.
             ಕರಿಬೇವು. ಹಸಿಮೆಣಸು ರುಚಿಗೆ ಉಪ್ಪು 
 ತಡವಿನ್ನೇಕೆ :
             ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಹೊರಗಿನ ಗಟ್ಟಿ ಭಾಗವನ್ನು ತೆಗೆದು ಸಣ್ಣ ದಾಗಿ ಹೆಚ್ಚಿಕೊಳ್ಳಿ.
             ನೆನಪಿರಲಿ ಹಣ್ಣಿನ ಮೆತ್ತಗಿನ ಭಾಗವನ್ನು ತೆಗೆಯಬೇಕು.

             ನಂತರ... ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಸಿಡಿಯುವಾಗ ಹಸಿಮೆಣಸು.. ಕರಿಬೇವು ಈರುಳ್ಳಿ ಹೆಚ್ಚಿಟ್ಟ ಕಲ್ಲಂಗಡಿ ಚೂರು  ಅರಿಸಿನ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ... ನೀರನ್ನು ಹಾಕುವ ಅಗತ್ಯವಿಲ್ಲ. 
 ಸ್ವಲ್ಪ ಬೆಂದ ಮೇಲೆ ಗರಂ ಮಸಾಲ ಹಾಕಿ ಮತ್ತೆ ಸ್ವಲ್ಪ ಬೇಯಿಸಿ ಬೆಂದ ಮೇಲೆ ಉಪ್ಪು ಹಾಕಿ...೨ ನಿಮಿಷ ಬೇಯಿಸಿ... ನಿಂಬೆ ರಸ ಸೇರಿಸಿ ...ತೆಂಗಿನ ಕಾಯಿ ಬೇಕು ಅಂದವರು ಧಾರಾಳವಾಗಿ ಬಳಸಿ...

 ಅತ್ಯಂತ ರುಚಿಕರವೆಂದು ನನ್ನ ಅಭಿಪ್ರಾಯ... ನಿಮ್ಮದು ಆಗಬೇಕಾದರೆ ಒಮ್ಮೆ ಈ ಪಲ್ಯ ತಯಾರಿಸಿ ನೋಡಿ....
                                         ಹಣ್ಣಿನ ಜೊತೆ fridge ನಲ್ಲಿ ಸಿಪ್ಪೆಗೂ ಜಾಗ!
                                    
                                         ಆರೋಗ್ಯಕರ ಅಡುಗೆ ....ಸಂತೃಪ್ತಿಯ  ಹೊಗಳಿಕೆಯಲ್ಲಿ


                                         ಚಂದ್ರಿಕಾ ಹೆಗಡೆ

21 ಮಾರ್ಚ್ 2011

ಹೀರೆಕಾಯಿ ಹಶಿ ಅಥವಾ ಬಜ್ಜಿ.

                                 ಸ್ವಲ್ಪ ಈ ಹೆಸರಿನ ಬಗ್ಗೆ ... ಸಿರ್ಸಿ ಸಿದ್ದಾಪುರ ಕಡೆಯಲ್ಲಿ ಹಶಿ ಎಂದು ಕರೆಸಿಕೊಳ್ಳುತ್ತದೆ.  ಯೆಲ್ಲಾಪುರ್ ದಲ್ಲಿ ಬಜ್ಜಿ ಎಂದು ಕರೆಯಲಾಗುತ್ತದೆ. ಬಜ್ಜಿ ಎಂದ ಮಾತ್ರಕ್ಕೆ ಕರಿದ ಪದಾರ್ಥವೆಂದು ಓದಿ ಹೋಗಬೇಕಾದ ಅಗತ್ಯವಿಲ್ಲ!





       ಅಗತ್ಯಗಳು : ಹಿರೇಕಾಯಿ ಮಧ್ಯಮ  ಗಾತ್ರ ೧ 
                                                           ತೆಂಗಿನ ತುರಿ ೧ ಬಟ್ಟಲು 
                                                          ಮೊಸರು ಅಥವಾ ಮಜ್ಜಿಗೆ ೧ ಬಟ್ಟಲು 
                                                           ಸ್ವಲ್ಪ ಎಣ್ಣೆ ೩-೪ ಚಮಚ 
                                                          ಒಗ್ಗರಣೆಗೆ ಸಾಸಿವೆ. ಮೆಣಸು. <ಹಸಿಮೆಣಸು ಬೇಕಾದರೆ.>
                                                            ರುಚಿಗೆ ಉಪ್ಪು.

                                       ಶುರು ಮಾಡೋಣ?:
                                                         ಹಿರೇಕಾಯಿ ಸಣ್ಣಗೆ ಹೆಚ್ಚಿ. 
                      
                                          ೨ ಚಮಚ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿ .
                                           ತೆಂಗಿನಕಾಯಿ ತುರಿಯನ್ನು ರುಬ್ಬಿಟ್ಟುಕೊಳ್ಳಿ
                                           ನಂತರ ಬೇಯಿಸಿಟ್ಟ ಹಿರೇಕಾಯಿ ಹೋಳುಗಳ ಜೊತೆಯಲ್ಲಿ ತೆಂಗಿನ ಕಾಯಿ ಮಿಕ್ಸ್ ಹಾಕಿ.
                                            ಮಜ್ಜಿಗೆ ಸೇರಿಸಿ. ರುಚಿಗೆ ಅಗತ್ಯದ ಉಪ್ಪು ಸೇರಿಸಿ.
                                            ಸಾಸಿವೆ ಒಗ್ಗರಣೆ ನೀಡಿ. 
                                            (ಇದನ್ನೇ ತಂಬಳಿ ಮಾಡಬಯಸುವವರು ಹಿರೇಕಾಯಿ ಹೋಳುಗಳನ್ನು ತೆಂಗಿನ ಕಾಯಿ ತುರಿಗಳ ಜೊತೆಯಲ್ಲಿ ರುಬ್ಬಬೇಕು. )



ತಡವಿನ್ನೇಕೆ ಸಿದ್ಧವಿದೆಯಲ್ಲ!
                                                     ಅಡುಗೆ ಮನೆಯ ಹೋರಾಟದಲ್ಲಿ ....
                                                    ಚಂದ್ರಿಕಾ ಹೆಗಡೆ