30 ನವೆಂಬರ್ 2012

ಸಿಂಪಲ್ ಬೆಳ್ಳುಳ್ಳಿ ತೊವ್ವೆ



ಅಗತ್ಯ :


ಹೆಸರು ಬೇಳೆ - ೧ ಕಪ್
ತೊಗರಿ ಬೇಳೆ - ೧/೪ ಕಪ್
ಬೆಳ್ಳುಳ್ಳಿ- ೫-೬
ಹಸಿಮೆಣಸು- ೨
ಕರಿಬೇವು
 ಅರಿಸಿನ  ಚಿಟಿಕೆ
ಉಪ್ಪು ರುಚಿಗೆ ತಕ್ಕಷ್ಟು
 ನಿಂಬೆ ರಸ - ೧ ಚಮಚ
ಸಕ್ಕರೆ ೧/೪ ಚಮಚ
ಒಗ್ಗರಣೆಗೆ-೩  ಚಮಚ ಎಣ್ಣೆ, ೧/೨ ಚಮಚ ಸಾಸಿವೆ

ವಿಧಾನ :


  •            ಬೇಳೆಯನ್ನು  ಬೇಯಿಸಿಟ್ಟುಕೊಳ್ಳಿ . ಕುದಿಯುತ್ತಿದ್ದಾಗ ....
  • ಒಗ್ಗರಣೆಗೆ  ಎಣ್ಣೆ ಸಾಸಿವೆ , ಬೆಳ್ಳುಳ್ಳಿ , ಕರಿಬೇವು, ಅರಿಸಿನ ಹಸಿಮೆಣಸು ,  ಹುರಿದು ಬೇಳೆಗೆ  ಹಾಕಿ .
  • ಉಪ್ಪು , ಸಕ್ಕರೆ ಹಾಕಿ.
  • ಒಲೆಯಿಂದ ಇಳಿಸಿಟ್ಟ  ಮೇಲೆ  ನಿಂಬೆರಸ ಸೇರಿಸಿ. 


ಸಿಂಪಲ್.... ಆದರೂ ... ಸೂಪರ್ .....



ಸರಳತೆ...... ಸುಲಭತೆ......




ಚಂದ್ರಿಕಾ ಹೆಗಡೆ 


19 ನವೆಂಬರ್ 2012

ಅಕ್ಕಿ ತರಿ ಮಸಾಲಾ ಉಪ್ಪಿಟ್ಟು

                                                      ಅಕ್ಕಿ ತರಿ ಮಸಾಲಾ ಉಪ್ಪಿಟ್ಟು 


ಅಗತ್ಯ:

ಅಕ್ಕಿ ತರಿ- 2 ಬೌಲ್
ಈರುಳ್ಳಿ- 2
ಹಸಿ ಮೆಣಸು -2
ಕರಿಬೇವು
ಸಾಂಬಾರ್ ಪುಡಿ-1 ಚಮಚ
ಮೆಣಸಿನ ಪುಡಿ- 1 ಚಮಚ
1ಬೆಲ್ಲ - 1/2 ಚಮಚ ( ಜೋನಿ  ಬೆಲ್ಲ)
ಹುಳಿಸೆ  ರಸ- 1/2 ಚಮಚ
ಎಣ್ಣೆ- 4 ಚಮಚ
ಸಾಸಿವೆ- 1 ಚಮಚ
ಆರಿಸಿನ ಪುಡಿ - 1/2 ಚಮಚ
ತೆಂಗಿನ ತುರಿ - 1 ಬೌಲ್
ಉಪ್ಪು  ರುಚಿಗೆ ತಕ್ಕಸ್ಟು .

ಮಾಡುವ ವಿಧಾನ :

  • ಅಕ್ಕಿ ತರಿಯನ್ನುಹೊಂಬಣ್ಣ  ಬರುವ ತನಕ ಹುರಿದುಕೊಳ್ಳಿ. ಎಣ್ಣೆ  ಹಾಕದೆಯೇ!
  • 5 ಬೌಲ್ ನೀರನ್ನು ಕುದಿಸಿಟ್ಟುಕೊಳ್ಳಿ .
  • ತೆಂಗಿನ ತುರಿ,  ಸಾಂಬಾರ್ ಪುಡಿ , ಬೆಲ್ಲ, ಅರಿಸಿನ , ಹುಳಿಸೆ  ರಸ,  ಸೇರಿಸಿ  ರುಬ್ಬಿಡಿ .
  • ಈರುಳ್ಳಿ, ಹಸಿಮೆಣಸನ್ನು  ಹೆಚ್ಚಿ.
  • ಬಾಣಲೆಗೆ  ಎಣ್ಣೆ, ಸಾಸಿವೆ, ಕರಿಬೇವು, ಹಸಿಮೆಣಸು  ಹಾಕಿ ಒಗ್ಗರಣೆ  ಮಾಡಿ , ಕುದಿಯುತ್ತಿರುವ ನೀರನ್ನು ಸೇರಿಸಿ- ಅಗತ್ಯ ಉಪ್ಪಿನೊಂದಿಗೆ.
  • ಇದಕ್ಕೆ ರುಬ್ಬಿಟ್ಟ  ಮಿಶ್ರಣ ಸೇರಿಸಿ- 1 ನಿಮಿಷ ಕುದಿಯಲು  ಬಿಡಿ.
  • ನಂತರ ಅಕ್ಕಿ ತರಿಯನ್ನು ಗಂಟಾಗದಂತೆ  ಹಾಕಿ . ಉರಿಯನ್ನು  ಸಣ್ಣಗೆ ಮಾಡಿ 5 ರಿಂದ- 7 ನಿಮಿಷ ಸಣ್ಣ ಉರಿಯಲ್ಲೇ ಇಡಿ.



ತಡವೇಕೆ ... ತಗೊಳ್ಳಿ ಎಂತೀರೋ ... ನಾನೇ  ತಿಂತೀನಿ ಎಂತೀರೋ.... ಯುವರ್ ಚಾಯ್ಸ್ .....:)



ರಜದಲ್ಲೇ     ಬ್ಲಾಗ್ ಪ್ರವೇಶಿಸಲು ಸುಸಮಯ ಎಂಬ  ಜ್ಞಾನೋದಯದಲ್ಲಿ ..

ಚಂದ್ರಿಕಾ  ಹೆಗಡೆ