ಗಟ್ಟಿ ಅವಲಕ್ಕಿ- ೨ ಬಟ್ಟಲು
ಬೇಯಿಸಿಟ್ಟ ಅವರೆಕಾಯಿ-೧ ಬಟ್ಟಲು
ಈರುಳ್ಳಿ - ೨
ಹಸಿಮೆಣಸು-೨
ಕರಿಬೇವು- ೨ ಎಳೆ
ಎಣ್ಣೆ- ೪ ಚಮಚ
ಒಗ್ಗರಣೆಗೆ - ಸಾಸಿವೆ ೧ ಚಮಚ
ಅರಿಸಿನ -೧ ಚಮಚ
ಉಪ್ಪು
ಸಕ್ಕರೆ-೧ ಚಮಚ
ಹುಳಿಸೆ ರಸ-೧ ಚಮಚ
ತೆಂಗಿನ ತುರಿ- ೧/೨ ಬಟ್ಟಲು
ಮಾಡುವ ವಿಧಾನ
- ಅವಲಕ್ಕಿಯನ್ನು-೫ ನಿಮಿಷ ನೆನಸಿ.
- ನೆನೆಯುವ ಸಮಯಕ್ಕೆ ಈರುಳ್ಳಿ, ಹಸಿಮೆಣಸು ಹೆಚ್ಚಿ .
- ಅವಲಕ್ಕಿಯನ್ನು ಹಿಂಡಿ ಅಥವಾ ನೀರನ್ನು ಬಸಿಯಲು ಬಿಡಿ. ಇನ್ನು ೫ ನಿಮಿಷ ಹಾಗೆ ಬಿಡಿ. ಇದರಿಂದ ಅವಲಕ್ಕಿ ತನ್ನಲ್ಲಿರುವ ನೀರನ್ನು ಹೀರಿ ಮೃದುವಾಗುತ್ತದೆ.
- ಬಾಣಲೆಗೆ ಎಣ್ಣೆ, ಸಾಸಿವೆ, ಹಸಿಮೆಣಸು ಹಾಕಿ ಒಗ್ಗರಣೆ ಸಿದ್ಧಪಡಿಸಿ.
- ಈರುಳ್ಳಿ, ಕರಿಬೇವು, ಬೇಯಿಸಿಟ್ಟ ಅವರೆಕಾಯಿ,ಅರಿಸಿನ , ಸ್ವಲ್ಪ ಉಪ್ಪು, ಸಕ್ಕರೆ, ಹುಳಿಸೆ ರಸ ಹಾಕಿ ೩ ನಿಮಿಷ ಎಲ್ಲವು ಹೊಂದಿಕೊಳ್ಳಲು ಸಣ್ಣ ಉರಿಯಲ್ಲಿ ಇಡಿ.
- ಈಗ ಅವಲಕ್ಕಿ ಸೇರಿಸಿ. ಅಗತ್ಯವೆನಿಸಿದರೆ ಇನ್ನಸ್ಟು ಉಪ್ಪು ಸೇರಿಸಿ, ಸಣ್ಣ ಉರಿಯಲ್ಲಿ ೫ ನಿಮಿಷ ಇಡಿ.
- ಕೊನೆಯಲ್ಲಿ ತೆಂಗಿನ ತುರಿ ಸೇರಿಸಿ.
ಅವರೇ .....!
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ