10 ಏಪ್ರಿಲ್ 2012

ಬಾಳೆಕಾಯಿ ಪಲ್ಯ -೧

ಬಾಳೆ ಕಾಯಿ  (ದೊಡ್ಡದು ) - ೨
ಈರುಳ್ಳಿ- ೧
ತೆಂಗಿನ ತುರಿ ೧/೪ ಬಟ್ಟಲು
ನಿಂಬೆ ರಸ- ೨ ಚಮಚ
ಉಪ್ಪು
ಎಣ್ಣೆ- ೨ ಚಮಚ
ಕರಿ ಬೇವು- ೧ ಎಳೆ
ಸಾಸುವೆ- ೧/೨ ಚಮಚ
ಅರಿಸಿನ ೧/೨ ಚಮಚ
ಹಸಿ ಮೆಣಸಿನ ಕಾಯಿ- 2

ಬಾಳೆ ಕಾಯಿಯನ್ನು  ಇಡಿಯಾಗಿಯೇ ಬೇಯಿಸಿ.
ತಣ್ಣಗಾದ ಮೇಲೆ  ಸಿಪ್ಪೆ ತೆಗೆದು ತುರಿ ಮಣೆಯಲ್ಲಿ ತುರಿದು ಇಡಿ.
ಈರುಳ್ಳಿ ಸಣ್ಣಗೆ ಹೆಚ್ಚಿ.
ಎಣ್ಣೆ, ಸಾಸುವೆ ಅರಿಸಿನ, ಹಸಿಮೆಣಸಿನ ಕಾಯಿ , ಕರಿ ಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ, ಈರುಳ್ಳಿ ಸೇರಿಸಿ ೧/೨ ಬೇಯಿಸಿ. ತುರಿದಿಟ್ಟ ಬಾಳೆ ಕಾಯಿ, ಉಪ್ಪು ಸಕ್ಕರೆ ಸೇರಿಸಿ. ೩- ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಒಲೆಯಿಂದ  ತೆಗೆದ ಮೇಲೆ ನಿಂಬೆ ರಸ, ತೆಂಗಿನ ತುರಿ ಹಾಕಿ.


ಬಾಳೆ- ಬಲು ರುಚಿ



ಚಂದ್ರಿಕಾ ಹೆಗಡೆ

ಬಿಲ್ವ ಪತ್ರೆ ತಂಬುಳಿ

ಬಿಲ್ವ ಪತ್ರೆ - ೪ ಎಲೆಗಳು
ತೆಂಗಿನ ತುರಿ- ೧/೨ ಬಟ್ಟಲು
ಮಜ್ಜಿಗೆ- ೧ ಲೋಟ
ಉಪ್ಪು ರುಚಿಗೆ ತಕ್ಕಸ್ಟು
ಸಕ್ಕರೆ ೧/೪ ಚಮಚ
ಕಾಳು ಮೆಣಸು - ೫-೬
ಜೀರಿಗೆ - ೧/೨ ಚಮಚ
ಎಣ್ಣೆ ೧/೨ ಚಮಚ


ಬಿಲ್ವ ಪತ್ರೆ , ಜೀರಿಗೆ, ಕಾಳು ಮೆಣಸನ್ನು ಎಣ್ಣೆಯಲ್ಲಿ ಹುರಿದು, ತೆಂಗಿನ ತುರಿ, ಉಪ್ಪು, ಸಕ್ಕರೆ , ಹಾಗು ಸ್ವಲ್ಪ ನೀರನ್ನು ಹಾಕಿ ರುಬ್ಬಿ.
ಇದಕ್ಕೆ ಮಜ್ಜಿಗೆ , ಇನ್ನಸ್ಟು ಉಪ್ಪು ಬೇಕೆನಿಸಿದರೆ ಸೇರಿಸಿ.


ಬೇಸಿಗೆಯಲ್ಲಿ ಅಧರ - ಉದರಕ್ಕೆ  ಆರಾಮದಾಯಕ  ಅಡುಗೆ- ಸರಳ ಕ್ರಮ- ಸುಲಭ ಜೀರ್ಣ!

ಚಂದ್ರಿಕಾ ಹೆಗಡೆ

ಎಳೇ ಹಲಸಿನ ಕಾಯಿ ಪಲ್ಯ

 ಎಳೇ ಹಲಸಿನ ಕಾಯಿ- ೧
ಈರುಳ್ಳಿ- ೨
ಕರಿಬೇವು- ೨ ಎಳೆ
ಎಣ್ಣೆ- ೩ ಚಮಚ
ತೆಂಗಿನ ತುರಿ - ೧/೨ ಬಟ್ಟಲು
 ನಿಂಬೆ ರಸ- ೨ ಚಮಚ
ಉಪ್ಪು ರುಚಿಗೆ ತಕ್ಕಸ್ಟು
ಸಕ್ಕರೆ ೧/೨ ಚಮಚ
ಈರುಳ್ಳಿ ೧ ಸಣ್ಣಗೆ ಹೆಚ್ಚಿದ್ದು
ಒಗ್ಗರಣೆಗೆ ೧ ಚಮಚ ಸಾಸುವೆ, ೨ ಹಸಿ ಮೆಣಸಿನ ಕಾಯಿ, ಅರಿಸಿನ ೧/೨ ಚಮಚ

ಎಳೆ ಹಲಸಿನ ಕಾಯಿಯ ಮುಳ್ಳು, ಮೇಣದ ಭಾಗವನ್ನು ಕತ್ತರಿಸಿ.
ನೀರಿನಲ್ಲಿ-೫ ನಿಮಿಷ ಇಡಿ.
ಆ ನೀರನ್ನು ತೆಗೆದು ಮತ್ತೆ  ಬೇರೆ ನೀರು ಹಾಕಿ ಕುಕ್ಕರ್ನಲ್ಲಿ ೩ ಕೂಗು  ಮಾಡಿ.
೧೫ ನಿಮಿಷ ಕಳೆದ ಮೇಲೆ ಕುಕ್ಕರ್ನಿಂದ ತೆಗೆದು ನೀರು ಬಸಿದು  ಹೋಳುಗಳನ್ನು ಆರಲು ೧ ಪ್ಲೇಟ್ ನಲ್ಲಿ ಹಾಕಿ. ಚೆನ್ನಾಗಿ ಹಿಸುಕಿ.
ಹೋಳು ಎಳೆ ಎಳೆಯಾಗಿ  ಬಿಟ್ಟು ಕೊಳ್ಳುತ್ತದೆ .

ಈಗ ಬಾಣಲೆಗೆ ಎಣ್ಣೆ ಹಾಕಿ ಸಾಸುವೆ ಹಸಿ ಮೆಣಸಿನ ಕಾಯಿ, ಕರಿಬೇವು, ಅರಿಸಿನ ಹಾಕಿ. ಇದಕ್ಕೆ  ಈರುಳ್ಳಿ  ಹಾಗು ಹಿಸುಕಿಟ್ಟ ಹಲಸಿನ ಕಾಯಿಯ ಹೋಳು ,ಉಪ್ಪು , ಸಕ್ಕರೆ ಸೇರಿಸಿ.
 ೨ ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಒಲೆಯಿಂದ ಇಳಿಸಿ, ನಿಂಬೆ ರಸ  ತೆಂಗಿನ ತುರಿ ಸೇರಿಸಿ.

ಬೇಸಿಗೆಯ ಆರಂಭದಲ್ಲಿ  ಹಲಸು ನೀಡುವ ಕೊಡುಗೆ ನಿಮ್ಮ ಅಡುಗೆ ಮನೆಯಲ್ಲಿ  ಸಂಭ್ರಮಿಸಲಿ.


ಚಂದ್ರಿಕಾ ಹೆಗಡೆ

ಹಲಸಿನ ಕಂದೆ ( ಎಳೇ ಹಲಸು) ಚಟ್ನಿ

  ಎಳೇ ಹಲಸಿನ ಕಾಯಿ- ೧ ಚಿಕ್ಕದ್ದು
ಈರುಳ್ಳಿ-೨
ಹಸಿಮೆಣಸಿನ ಕಾಯಿ- ೨-೩
ತೆಂಗಿನ ತುರಿ- ೧/೨ ಬಟ್ಟಲು
ಉದ್ದಿನ ಬೇಳೆ- ೧ ಚಮಚ
ಎಣ್ಣೆ- ೧ ಚಮಚ
ಉಪ್ಪು - ರುಚಿಗೆ ತಕ್ಕಸ್ಟು
ಸಕ್ಕರೆ  ೧/೨ ಚಮಚ
ಮೊಸರು - ೧/೨ ಬಟ್ಟಲು
ಒಗ್ಗರಣೆಗೆ: ೧ ಚಮಚ ಎಣ್ಣೆ, ೧/೨ ಚಮಚ ಸಾಸುವೆ , ಚಿಟಿಕೆ ಅರಿಸಿನ ,ಕರಿಬೇವಿನ ಸೊಪ್ಪು- ೧ ಎಳೆ


ಹಲಸಿನ ಕಾಯಿಯ  ಮುಳ್ಳುಗಳನ್ನು ತೆಗೆದು , ಅದರ ಮಧ್ಯದ  ಅಂಟು (ಮೇಣ) ಬರುವ ಭಾಗವನ್ನು ಕತ್ತರಿಸಿ .
ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿ ೫ ನಿಮಿಷ ನೀರಿನಲ್ಲಿ ಇಟ್ಟರೆ  ಮತ್ತೆ ಮೇಣ ಬರುವದಿಲ್ಲ.
ಕುಕ್ಕರ್ ನಲ್ಲಿ ಹೋಳಿನ ಜೊತೆಗೆ ನೀರನ್ನು ಹಾಕಿ ೩ ಕೂಗು  ಮಾಡಿ ಬೇಯಿಸಿ.
೧/೨ ಗಂಟೆಯ ನಂತರ  ನೀರನ್ನು ಬಸಿದು ಕೊಳ್ಳಿ. ಈರುಳ್ಳಿಯನ್ನು ಹೆಚ್ಚಿ.


 ೧ ಚಮಚ ಎಣ್ಣೆ ಬಿಸಿ ಮಾಡಿ ಇದಕ್ಕೆ ಉದ್ದಿನ ಬೇಳೆ ಹಾಕಿ  ಹುರಿಯಿರಿ.
ಹಸಿಮೆಣಸಿನ ಕಾಯಿ ಸೇರಿಸಿ ಒಲೆಯಿಂದ ಇಳಿಸಿಡಿ. ಹೋಳು, ತೆಂಗಿನ ತುರಿ , ಉಪ್ಪು, ಸಕ್ಕರೆ ಇವುಗಳನ್ನು ಮಿಕ್ಸಿ ಜಾರ್ ಗೆ  ಹಾಕಿ ರುಬ್ಬಿ.
ಈ ಮಿಶ್ರಣಕ್ಕೆ ಮೊಸರು , ಹೆಚ್ಚಿಟ್ಟ ಈರುಳ್ಳಿ ಹಾಕಿ.


ಒಗ್ಗರಣೆಯನ್ನು ಸಿದ್ಧಪಡಿಸಿ   ಸೇರಿಸಿ.


ಚಿಕ್ಕ ಹಲಸು  ಭಾರಿ ರುಚಿ....

ಹಲಸಿನ ಬೆಳೆಯ ಬೆಲೆ ನಾಲಿಗೆಯಲ್ಲಿ....!


ಚಂದ್ರಿಕಾ ಹೆಗಡೆ


02 ಏಪ್ರಿಲ್ 2012

ಬಾಳೆಕಾಯಿ ಭಜಿ

ಬಾಳೆಕಾಯಿ-೧
ಕಡಲೆ ಹಿಟ್ಟು ೧ ಬಟ್ಟಲು
ಎಣ್ಣೆ- ಕರಿಯಲು
ಉಪ್ಪು ರುಚಿಗೆ ತಕ್ಕಸ್ಟು
ಅರಿಸಿನ - ೧/೪ ಚಮಚ
ಅಜವಾನ-೧/೨ ಚಮಚ
ಅಡುಗೆ ಸೋಡಾ - ಚಿಟಿಕೆ




ಬಾಳೇಕಾಯಿಯನ್ನ್ನು   ತೆಳ್ಳಗೆ  ಹೆಚ್ಚಿ.
ಕಡಲೆ ಹಿಟ್ಟಿಗೆ ಉಪ್ಪು, ಅಜವಾನ, ಅರಿಸಿನ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. . ಇದಕ್ಕೆ ಚಿಟಿಕೆ ಅಡುಗೆ ಸೋಡಾ ಹಾಕಿ-೩ ನಿಮಿಷ ಬಿಡಿ.
ಎಣ್ಣೆ ಕಾದ ಮೇಲೆ  ಹೆಚ್ಚಿಟ್ಟುಕೊಂಡ ಬಾಳೇಕಾಯನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ ಹೊಂಬಣ್ಣ ಬರುವ ತನಕ ಕರಿಯಿರಿ.


ಭಲೇ .... ಭಜಿ


ಚಂದ್ರಿಕಾ ಹೆಗಡೆ

ಖಾಂದ (ಈರುಳ್ಳಿ) ಭಜಿ

ಈರುಳ್ಳಿ- ೩
ಕಡಲೆ ಹಿಟ್ಟು - ೧ ೧/೨ ಕಪ್
ಉಪ್ಪು ರುಚಿಗೆ
ಮೆಣಸಿನ ಪುಡಿ ೧ ಚಮಚ
ಕರಿಯಲು ಎಣ್ಣೆ


ಈರುಳ್ಳಿಯನ್ನು ಉದ್ದಕೆ ಸೀಳಿ.
ಇದಕ್ಕೆ ಉಪ್ಪು ಹಾಕಿ- ೧೦ ನಿಮಿಷ   ಬಿಡಿ . ಈ   ಸಮಯದಲ್ಲಿ ಈರುಳ್ಳಿ ನೀರನ್ನು ಬಿಟ್ಟುಕೊಳ್ಳುತ್ತದೆ.
ಇದಕ್ಕೆ ಕಡಲೆ ಹಿಟ್ಟನ್ನು, ಮೆಣಸಿನ ಪುಡಿ( ಅಚ್ಚಖಾರ) ಸೇರಿಸಿ.
ಉದುರು ಉದುರಾಗಿ ಎಣ್ಣೆಯಲ್ಲಿ ಬಿಡಿ.
ಹೊಂಬಣ್ಣ ಬರುವ ತನಕ ಕರಿಯಿರಿ. 
ಟೊಮೇಟೊ ಸಾಸ್ , ಚಟ್ನಿ ಜೊತೆ ಸವಿಯಿರಿ.




ಭಜಿ ... ಭಜನೆ ... ಮನೆಯಲ್ಲಿ...ಅಡುಗೆ ಮನೆಯ ಕಡೆಗೆ ಎಲ್ಲರ ಪ್ರಯಾಣ....!








ಚಂದ್ರಿಕಾ ಹೆಗಡೆ

ಸಿಹಿ ಪುರಿ(ಸಕ್ಕರೆ ಪುರಿ)

ಮೈದಾ ಹಿಟ್ಟು- ೧ ಕಪ್
ಸಕ್ಕರೆ- ೧/೪ ಕಪ್
ಎಣ್ಣೆ- ೩ ಚಮಚ ( ಹಿಟ್ಟಿಗೆ ಹಾಕಲು)
ಎಣ್ಣೆ ಕರಿಯಲು
ಉಪ್ಪು ರುಚಿಗೆ
ಸಕ್ಕರೆ ಪಾಕ- ೩ ಬಟ್ಟಲು 
ಏಲಕ್ಕಿ - ೩ 
ಬಾದಾಮ್ -೫ 




ಮೈದಾ ಹಿಟ್ಟಿಗೆ ಉಪ್ಪು, ಬಿಸಿ ಎಣ್ಣೆ, ಬಿಸಿ ನೀರು ಹಾಕಿ ಕಲಸಿ.
ಸಕ್ಕರೆ, ಏಲಕ್ಕಿ ಪುಡಿ ಮಾಡಿ ಇಡಿ. ಬಾದಾಮ್ ಅನ್ನು ಸಣ್ಣಗೆ ಹೆಚ್ಚಿ.
ಸಕ್ಕರೆ ಪಾಕವನ್ನು ಈ ಮೊದಲೇ ಸಿದ್ಧಪಡಿಸಿಕೊಳ್ಳಿ.
ಮೈದಾ ಹಿಟ್ಟನ್ನು   ಚಪಾತಿ  ಲಟ್ಟಿಸುವಂತೆ  ಲಟ್ಟಿಸಿ ೪ ಭಾಗ ಮಾಡಿ.
ಇದನ್ನು ಎಣ್ಣೆಯಲ್ಲಿ ಕರಿಯಿರಿ.
ನಂತರ ಸಕ್ಕರೆ ಪಾಕದಲ್ಲಿ ಈ ಪುರಿಗಳನ್ನು ಹಾಕಿ-೫ ನಿಮಿಷ ಇಡಿ.
ಆಮೇಲೆ ಪುರಿಗಳನ್ನು ತೆಗೆದು ಒಂದು ಪ್ಲೇಟಿನಲ್ಲಿ ಜೋಡಿಸಿ. ಇವುಗಳ ಮೇಲೆ ಈಗಾಗಲೇ ಮಾಡಿಟ್ಟುಕೊಂಡ ಸಕ್ಕರೆ ಪುಡಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಬಾದಾಮ್ ಹಾಕಿ. ೧/೨ ಗಂಟೆ ಫ್ರಿಡ್ಜ್ ನಲ್ಲಿ ಇಡಿ.
ಸಿಹಿಯೋ... ಸಿಹಿಯು...


ವಿ-ಸೂ : ಮೈದಾ ಬದಲಿಗೆ ಗೋದಿಯನ್ನು ಸೇರಿಸಬಹುದು. 





ಮನ ಹಗುರವಾಗಲು ಅಡುಗೆ ಮಾಡಿ!!


ಚಂದ್ರಿಕಾ ಹೆಗಡೆ