ಅಗತ್ಯ:
ನಿಂಬೆ ಹುಲ್ಲು - ೨ ಕಡ್ಡಿ
ಜೀರಿಗೆ- ೧ ಚಮಚ
ಮಜ್ಜಿಗೆ - ೧ ಲೋಟ
ಉಪ್ಪು ರುಚಿಗೆ
ಸಕ್ಕರೆ ೧/೨ ಚಮಚ
ಎಣ್ಣೆ ೧/೨ ಚಮಚ
ತೆಂಗಿನ ತುರಿ - ೧/೪ ಕಪ್
ವಿಧಾನ:
ನಿಂಬೆ ಹುಲ್ಲನ್ನು ಸಣ್ಣಗೆ ಹೆಚ್ಚಿ
ಎಣ್ಣೆಯಲ್ಲಿ ಜೀರಿಗೆ ನಿಂಬೆ ಹುಲ್ಲು ಹುರಿದುಕೊಳ್ಳಿ .
ತೆಂಗಿನ ತುರಿಯೊಂದಿಗೆ ಹುರಿದ ನಿಂಬೆ ಹುಲ್ಲು ಜೀರಿಗೆ , ಸ್ವಲ್ಪ ಮಜ್ಜಿಗೆ, ಸಕ್ಕರೆ ಸೇರಿಸಿ ರುಬ್ಬಿ.
ಇದನ್ನು ಅಗತ್ಯವಾಗಿ ಸೋಸಿ ಕೊಳ್ಳಿ . ಇಲ್ಲವಾದರೆ ಹುಹ್ಹು ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳುವದು :(
ಇದಕ್ಕೆ ಮತ್ತೆ ಮಜ್ಜಿಗೆ ಉಪ್ಪು ಸೇರಿಸಿ .
ನಿಂಬೆ ಹುಲ್ಲನ್ನು ಅನೇಕ ರೋಗಗಳಿಗೆ ಮೂಲಿಕೆಯಾಗಿ ಬಳಸುವರು .
ಇದನ್ನು ಒಣಗಿಸಿ ಪುಡಿಮಾಡಿ ಇಟ್ಟು ಬೇಕಾದಾಗ ಬಳಸಬಹುದು . ಇದರ ಕಷಾಯ superb ಮಾಡುವ ವಿಧಾನ ಹೇಳುತ್ತೇನೆ . ಸಾರಿನಲ್ಲಿ ಸುವಾಸನೆಗಾಗಿ , ಚಹಾದಲ್ಲಿ , ಸೂಪ್ .... ಹೀಗೆ ಬಳಕೆ ಇದೆ.
ಇದರಲ್ಲಿರುವ ವಿಶೇಷ ಸುವಾಸನೆ ನಮ್ಮಲ್ಲಿ ಕಟ್ಟಿದ ಮೂಗನ್ನು ಸರಾಗವಾಗಿ ಉಸಿರಾಡುವಂತೆ ಮಾಡುವದು . ಇದರ ಕಷಾಯ ಜ್ವರ ನಿರ್ಮೂಲನೆಗೆ ಸಹಾಯಕಾರಿ ಎನ್ನುವದು .... ನಮ್ಮ.... google .... ತಿಳಿ ಹೇಳಿದೆ :)
ನಿಮ್ಮ ಮನೆಯಲ್ಲಿ ಸುಲಭವಾಗಿ ಬೆಳೆಸಿ .... ನಾನಂತೂ ಬೆಳೆಸಿದ್ದೇನೆ ....
ವಿಶೇಷ : ನೀವು ಮಾಡುವ ಸಾಮಾನ್ಯ ಚಹಾಕ್ಕೆ ಇದನ್ನು ಹಾಕಿದರೆ ವಿಶೇಷ ಪರಿಮಳವನ್ನು ಪಡೆಯಬಹುದು . ಚಹಾ ಪುಡಿ ಹಾಕಬೇಕಾದರೆ ಈ ಹುಲ್ಲನ್ನು ಹೆಚ್ಚಿ ಹಾಕಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ