19 ಮಾರ್ಚ್ 2012

ಗುರೆಳ್ಳು (ಹುಚ್ಚೆಳ್ಳು) ಚಟ್ನಿ ಪುಡಿ

ಗುರೆಳ್ಳು- ೧ ಬಟ್ಟಲು
ಬೆಳ್ಳುಳ್ಳಿ- ೪-೫
ಕರಿಬೇವು- ೨ ಎಳೆ
ಅಚ್ಚಖಾರದ ಪುಡಿ- ೧ ೧/೨ ಚಮಚ
ಉಪ್ಪು ,
ಸಕ್ಕರೆ ೧/೨ ಚಮಚ
ಅರಿಸಿನ ೧/೪ ಚಮಚ



ಗುರೆಳ್ಳನ್ನು ಹುರಿಯಿರಿ. ಸುವಾಸನೆ ಬರುವ ತನಕ.
ಇದು ತಣ್ಣಗಾದ ಮೇಲೆ  ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಪುಡಿ ಮಾಡಿ.
ಸುಲಭವಾದರೂ ಸವಿ ಜಾಸ್ತಿಯೇ....

ಗುರೆಳ್ಳು (ಹುಚ್ಚೆಳ್ಳು) ಚಟ್ನಿ ಪುಡಿ
ಮೊಸರಿನ ಜೊತೆ....
ಜೋಳದ ರೊಟ್ಟಿಗಾಗಿಯೇ ಹುಟ್ಟಿತೆ.... ಗುರೆಳ್ಳು ಅನ್ನುವಸ್ಟು ....!



ಚಂದ್ರಿಕಾ ಹೆಗಡೆ

ಅಗಸೆ (flax seed ) ಚಟ್ನಿ (ಪುಡಿ)

ಅಗಸೆ ಬೀಜ- ೨ ಬಟ್ಟಲು

ಬೆಳ್ಳುಳ್ಳಿ-೭-೮
ಕರಿಬೇವು- ೩ ಎಳೆ
ಅಚ್ಚಖಾರದ ಪುಡಿ- ೨ ಚಮಚ ( ಹೆಚ್ಚು ಖಾರ ಬೇಕೆನಿಸಿದರೆ ಇನ್ನು ೧ ಚಮಚ )
ಹುಳಿಸೆ ಹಣ್ಣು - ಅಡಿಕೆ ಗಾತ್ರ
ಸಕ್ಕರೆ- ೧ ಚಮಚ
ಅರಿಸಿನ- ೧/೨ ಚಮಚ
ಉಪ್ಪು- ೧ ೧/೨ ಚಮಚ( ರುಚಿ ನೋಡಿ  ಇನ್ನಸ್ಟು)


ಮಾಡುವ ವಿಧಾನ
ಅಗಸೆ ಬೀಜವನ್ನು ಘಂ ಅನ್ನುವಂತೆ ಹುರಿಯಿರಿ. (ಓವನ್ ನಲ್ಲಿ ೩-೪ ನಿಮಿಷ)
ಕರಿಬೇವನ್ನು ಹುರಿಯಿರಿ. (ಎಣ್ಣೆ ಇಲ್ಲದೆಯೇ ಸಣ್ಣ ಉರಿಯಲ್ಲಿ ಅಥವಾ ಓವನ್ ನಲ್ಲಿ ೩ ನಿಮಿಷ)
ಆರಿದ ಅಗಸೆ ಬೀಜದ ಜೊತೆ ಎಲ್ಲವನ್ನು ಸೇರಿಸಿ ಪುಡಿ ಮಾಡಿ.
ರೊಟ್ಟಿ/ಚಪಾತಿ/ ಪುಲ್ಕಾ/ ದೋಸೆ ಜೊತೆ... ಮೊಸರನ್ನು ಸೇರಿಸಿ ಸೇವಿಸಿ.



ಪುಡಿಯಾದರು.... ಮನಸ್ಸಿಗೆ ಹಿಡಿಸುತ್ತೆ......!!



ಚಂದ್ರಿಕಾ ಹೆಗಡೆ

ಮಿಕ್ಸೆಡ್ ವೆಜಿಟೆಬಲ್ ಪಲ್ಯ

ಅಗತ್ಯ:
ಕ್ಯಾರೆಟ್-೧
ಕ್ಯಾಬೇಜ್ -೧/೨
ಬೀನ್ಸ್-೧೦
ಹಸಿಮೆಣಸು-೨
ತೆಂಗಿನ ತುರಿ- ೧/೪ ಬಟ್ಟಲು
ಉಪ್ಪು ರುಚಿಗೆ ತಕ್ಕಸ್ಟು
ಎಣ್ಣೆ-೩ ಚಮಚ
ಅಚ್ಚಖಾರ ಪುಡಿ-೧ ಚಮಚ
ಕರಿಬೇವು- ೧ ಎಳೆ
ಸಾಸಿವೆ- ೧/೨ ಚಮಚ
ಅರಿಸಿನ - ಸ್ವಲ್ಪ


ಎಲ್ಲ ತರಕಾರಿಗಳನ್ನು ಸಣ್ಣಗೆ ಹೆಚ್ಚಿ.
ಬಾಣಲೆಗೆ ಎಣ್ಣೆ,ಸಾಸಿವೆ  , ಕರಿಬೇವು, ಅರಿಸಿನ ,ಹಸಿಮೆಣಸಿನ ಕಾಯಿ ಹಾಕಿ ಹುರಿಯಿರಿ.
ನಂತರ ಎಲ್ಲ ತರಕಾರಿಗಳನ್ನೂ  , ೧/೪ ಬಟ್ಟಲು ನೀರನ್ನು ಹಾಕಿ ಸಣ್ಣ ಉರಿಯಲ್ಲಿ ೫-೭ ನಿಮಿಷ ಇಡಿ.
ನೀರು ಆರಿದ ಮೇಲೆ ಇದಕ್ಕೆ ಉಪ್ಪು, ತೆಂಗಿನ ತುರಿ ಹಾಕಿ. ಒಲೆಯಿಂದ ಇಳಿಸಿ.

ಚಂದ್ರಿಕಾ ಹೆಗಡೆ
ಮಾವಿನ ಹೂವಿನ (ಕಸ್ತ್ರಿ ) ಚಟ್ನಿ


ಮಾವಿನ ಹೂವು - ೧ ತೆನೆ

ತೆಂಗಿನ ತುರಿ-೧/೨ ಬಟ್ಟಲು

ಬ್ಯಾಡಗಿ + ಗುಂತುರ್ ಮೆಣಸಿನ ಕಾಯಿ-೪

ಒಗ್ಗರಣೆಗೆ= ೧ ಚಮಚ ಎಣ್ಣೆ, ೧/೨ ಚಮಚ ಸಾಸಿವೆ, ಚಿಟಿಕೆ ಇಂಗು

ರುಚಿಗೆ ತಕ್ಕಸ್ಟು ಉಪ್ಪು

೧/೪ ಚಮಚ ಸಕ್ಕರೆ/ ಬೆಲ್ಲ



ಮಾಡುವ ವಿಧಾನ:1

ಮಾವಿನ ಹೂವನ್ನು ಹೆಚ್ಚಿ.

ಇದಕ್ಕೆ ತೆಂಗಿನ ತುರಿ+ಮೆಣಸಿನ ಕಾಯಿ+ಮಾವಿನ ಹೂವು + ಉಪ್ಪು, ಸಕ್ಕರೆ ಸೇರಿಸಿ ರುಬ್ಬಿ.

ಒಗ್ಗರಣೆ ನೀಡಿ.





ವಿಧಾನ-೨

ಇವೆಲ್ಲ ಸಾಮಗ್ರಿ ಜೊತೆಗೆ ಉದ್ದಿನ ಬೇಳೆ/ ಅಥವಾ ಕಡಲೆ ಬೇಳೆ ಹಾಕುವದು



೧ ಚಮಚ ಎಣ್ಣೆಯಲ್ಲಿ ಉದ್ದಿನ ಬೇಳೆ / ಕಡಲೆ ಬೇಳೆ ಮೆಣಸಿನ ಕಾಯಿ ಹುರಿದು ಇವುಗಳ ಜೊತೆ ತೆಂಗಿನ ತುರಿ, ಮಾವಿನ ಹೂವು,ಉಪ್ಪು,ಸಕ್ಕರೆ ಸೇರಿಸಿ ರುಬ್ಬಿ.

ಒಗ್ಗರಣೆ ನೀಡಿ.





ಬೇಸಿಗೆಯಲ್ಲಿ ಮಾವಿನ ಸಂಭ್ರಮ .....

ಹೂವಿನ ಜೊತೆ ಅಡುಗೆ....!

 
 
ಚಂದ್ರಿಕಾ ಹೆಗಡೆ

ಮೆಂತೆ ತಂಬುಳಿ

ಮೆಂತೆ - ೧ ಚಮಚ
ತೆಂಗಿನ ತುರಿ- ೧/೨ ಬಟ್ಟಲು
ಮಜ್ಜಿಗೆ-೧ ಬಟ್ಟಲು
ಸಕ್ಕರೆ/ಬೆಲ್ಲ- ೧/೨ ಚಮಚ
ಎಣ್ಣೆ- 2  ಚಮಚ
ಹಸಿಮೆಣಸಿನ ಕಾಯಿ-2
ಉಪ್ಪು ರುಚಿಗೆ ತಕ್ಕಸ್ಟು
ಒಗ್ಗರಣೆಗೆ - ೧/೨ ಚಮಚ ಸಾಸುವೆ

ಮಾಡುವ ವಿಧಾನ:
ಮೆಂತೆ ಯನ್ನು ೧ ಚಮಚ ಎಣ್ಣೆಯಲ್ಲಿ ಕೆಂಪಗಾಗುವಂತೆ ಹುರಿಯಿರಿ. ಇದಕ್ಕೆ ಹಸಿಮೆಣಸಿನ ಕಾಯಿ ಹಾಕಿ ಬಾಡಿಸಿ.
ಮೆಂತೆ ಹಾಗು ಹಸಿಮೆಣಸಿನ ಕಾಯಿ ಆರಿದ ಮೇಲೆ ತೆಂಗಿನ  ತುರಿ, ಮಜ್ಜಿಗೆ,ಸಕ್ಕರೆ , ಉಪ್ಪು ಹಾಕಿ ರುಬ್ಬಿ.
ನುಣ್ಣಗೆ ರುಬ್ಬಿಟ್ಟ ಮಿಶ್ರಣಕ್ಕೆ ಒಗ್ಗರಣೆ ಹಾಕಿ.
ಒಗ್ಗರಣೆಯಲ್ಲಿ ಬಾಳಕ(ಮಜ್ಜಿಗೆ ಮೆಣಸನ್ನು ಸೇರಿಸಬಹುದು.)


ಸುಡು ಸುಡುವ ಬೇಸಿಗೆಯಲ್ಲಿ ಮನಕ್ಕೆ/ ಮನೆಗೆ/ ಮೈಗೆ ತಂಪು.....
ಅದೇ......

                     ತಂಬುಳಿ

ಚಂದ್ರಿಕಾ ಹೆಗಡೆ

20 ಫೆಬ್ರವರಿ 2012

ತೋಯಿಸಿದ ಮಂಡಕ್ಕಿ (ಕಳ್ಳೆಪುರಿ )

ಕಳ್ಳೆಪುರಿ - ೧ ಸೇರು
ಹುರಿಗಡಲೆ- ೧/೨ ಬಟ್ಟಲು
ಕಡ್ಲೆ ಬೀಜ - ೧ ಹಿಡಿ
ಹಸಿಮೆಣಸು- ೩
ಕರಿಬೇವು- ೧ ಎಳೆ
ಎಣ್ಣೆ- ೩ ಚಮಚ
ಸಾಸಿವೆ- ೧ ಚಮಚ
ಈರುಳ್ಳಿ- ೧ ಸಣ್ಣಗೆ ಹೆಚ್ಚ್ಚಿ
ಅರಿಸಿನ - ಚಿಟಿಕೆ
ಉಪ್ಪು
 ಸಕ್ಕರೆ- ೧/೨ ಚಮಚ



ಕಳ್ಳೆಪುರಿಯನ್ನು ನೀರಿನಲ್ಲಿ ಹಾಕಿ ತತಕ್ಷಣ ಹಿಂಡಿ ಇಡಿ. ಹುರಿಗದಲೆಯ್ಯನ್ನು ಪುಡಿ ಮಾಡಿ.

ಬಾಣಲೆಗೆ ಎಣ್ಣೆ, ಸಾಸಿವೆ, ಕಡಲೆ ಬೀಜ ಹಾಕಿ ಹುರಿಯಿರಿ. ಇದಕ್ಕೆ ಕರಿಬೇವು,ಈರುಳ್ಳಿ,ಹಸಿಮೆಣಸಿನ ಕಾಯಿ,ಅರಿಸಿನ , ಸಕ್ಕರೆ , ಉಪ್ಪು ಹಾಕಿ ಬೇಯಿಸಿ. ೩ ನಿಮಿಷದ ಮೇಲೆ ಹುರಿಗಡಲೆ ಪುಡಿ ಹಾಕಿ.
ಹಿಂಡಿ ಇಟ್ಟಿದ್ದ  ಕಳ್ಳೆಪುರಿಯನ್ನು ಹಾಕಿ- ೫ ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಇದರ ಜೊತೆ ಮೆಣಸಿನ ಕಾಯಿ ಭಜಿನೂ ಇದ್ರೆ....ಮ್......ಹಾ......



ಚಂದ್ರಿಕಾ ಹೆಗಡೆ

ಒಂದೆಲಗ ( ಬ್ರಾಹ್ಮೀ) ತಂಬುಳಿ

ಒಂದೆಲಗ- ೧ ಹಿಡಿ
ತೆಂಗಿನ ತುರಿ- ೧/೪ ಬಟ್ಟಲು
ಮಜ್ಜಿಗೆ - ೧ ಬಟ್ಟಲು
ಜೀರಿಗೆ- ೧ ಚಮಚ
ಎಣ್ಣೆ- ೧ ಚಮಚ
ಉಪ್ಪು - ರುಚಿಗೆ

ಒಂದೆಲಗವನ್ನು ಚೆನ್ನಾಗಿ ತೊಳೆದು  ಸಣ್ಣಗೆ ಹೆಚ್ಚಿ. ಜೀರಿಗೆ ಹಾಗು ಒಂದೆಲಗವನ್ನು ಹುರಿಯಿರಿ( ೧  ೧/೨ ನಿಮಿಷ)
ಇದಕ್ಕೆ  ತೆಂಗಿನ ತುರಿ ಹಾಕಿ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು ಹಾಕಿ. ಬೇಸಿಗೆಯಲ್ಲಿ ಬಿಸಿ ಅನ್ನ ತಂಬುಳಿ...ಬಲ್ಲವನೇ ಬಲ್ಲ.......


ಬ್ರಾಹ್ಮೀ  ಬುದ್ದಿ ಶಕ್ತಿಯನ್ನು ಚುರುಕು ಮಾಡುತ್ತದೆ.... ಕಣ್ಣಿಗೆ ಒಳ್ಳೇದು... ಮಕ್ಕಳು- ವಯೋವೃದ್ಧರ ತನಕ... ಸರ್ವ ರೋಗ ಪರಿಹಾರ ನೀಡುವ ಶಕ್ತಿ ಇದಕ್ಕಿದೆಯಂತೆ .... ಯಾಕಿನ್ನು ತಡ.... ತಂಬಳಿ  ಮಾಡಿ.
ವಿ. ಸೂ : ಈ ತಂಬಳಿ ಯನ್ನು ರಾತ್ರಿ ಸೇವಿಸಬಾರದಂತೆ ... ಕಾರಣ ಇನ್ನು ಸಿಕ್ಕಿಲ್ಲ.....