20 ಫೆಬ್ರವರಿ 2012

ಒಂದೆಲಗ ( ಬ್ರಾಹ್ಮೀ) ತಂಬುಳಿ

ಒಂದೆಲಗ- ೧ ಹಿಡಿ
ತೆಂಗಿನ ತುರಿ- ೧/೪ ಬಟ್ಟಲು
ಮಜ್ಜಿಗೆ - ೧ ಬಟ್ಟಲು
ಜೀರಿಗೆ- ೧ ಚಮಚ
ಎಣ್ಣೆ- ೧ ಚಮಚ
ಉಪ್ಪು - ರುಚಿಗೆ

ಒಂದೆಲಗವನ್ನು ಚೆನ್ನಾಗಿ ತೊಳೆದು  ಸಣ್ಣಗೆ ಹೆಚ್ಚಿ. ಜೀರಿಗೆ ಹಾಗು ಒಂದೆಲಗವನ್ನು ಹುರಿಯಿರಿ( ೧  ೧/೨ ನಿಮಿಷ)
ಇದಕ್ಕೆ  ತೆಂಗಿನ ತುರಿ ಹಾಕಿ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು ಹಾಕಿ. ಬೇಸಿಗೆಯಲ್ಲಿ ಬಿಸಿ ಅನ್ನ ತಂಬುಳಿ...ಬಲ್ಲವನೇ ಬಲ್ಲ.......


ಬ್ರಾಹ್ಮೀ  ಬುದ್ದಿ ಶಕ್ತಿಯನ್ನು ಚುರುಕು ಮಾಡುತ್ತದೆ.... ಕಣ್ಣಿಗೆ ಒಳ್ಳೇದು... ಮಕ್ಕಳು- ವಯೋವೃದ್ಧರ ತನಕ... ಸರ್ವ ರೋಗ ಪರಿಹಾರ ನೀಡುವ ಶಕ್ತಿ ಇದಕ್ಕಿದೆಯಂತೆ .... ಯಾಕಿನ್ನು ತಡ.... ತಂಬಳಿ  ಮಾಡಿ.
ವಿ. ಸೂ : ಈ ತಂಬಳಿ ಯನ್ನು ರಾತ್ರಿ ಸೇವಿಸಬಾರದಂತೆ ... ಕಾರಣ ಇನ್ನು ಸಿಕ್ಕಿಲ್ಲ..... 

2 ಕಾಮೆಂಟ್‌ಗಳು:

  1. ಒಟ್ಟಾರೆ ನಿಮ್ಮ ಬ್ಲಾಗ್ ಬಗ್ಗೇನೆ ಬರೀಬೇಕುರಿ. ಕೆಲವು ಅಡುಗೆಗಳಂತೂ ನಮಗೆಲ್ಲ ಹೊಸದು. ನಿಮ್ಮ ಕಡೆಯ ಊಟಕ್ಕೆ ಬೆರಗಾಗಿ ನಿಂತರೂ ಸರಿಯಾದ ಮಿರ್ಚಿ (ಖಾರ) ಇಲ್ಲದ್ದು ಒಂದಿಷ್ಟು ಯಾಕೋ ಸರಿ ಎನಿಸಲಿಲ್ಲ.
    ನಿಮ್ಮ ಕಡೆ ನಾನ್ ವೇಜ್ ಹೇಗೆ ಮಾಡುತ್ತಾರೆ ಅನ್ನೋದೂ ಬರಬೇಕಿತ್ತು. ಯಾಕೆಂದ್ರೆ ನಾನೊಬ್ಬ ನಾನ್ ವೆಜಿಟೀಯರಿನ್ ! ಖುಷಿ ಕೊಟ್ಟಿತು ನಿಮ್ಮ ಬ್ಲಾಗ್ ಎಂದು ಹೇಳಲಾರೆ. ಇದಕ್ಕಿಂತಲೂ ಅಕಾಡೆಮಿಕ್ ಆಗಿ ಏನಾದರೂ ಬರೆಯಿರಿ ಎಂಬುದು ನಮ್ಮ ವಿನಂತಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. aduge nimage hosadu.. namma kadeyadu! namage nimma kadeya aduge hosade! namma vaatavaranakke takkante ...ruchige takkante menasina kaayiya balake maadtivi. menasina kaayi balasade iruva aduge ruchiyaagiralla annuva maatannu naanu oppuvadilla. naanu nanna blog nalli naanu maadida aduge maatra haaktini. naanu sasyaahaariyaaddarinda aa adugegalanne haakuve. nimage khushi kodalu nanninda saadhyavilladdakke... naanenu maadalaare.! nimma academic salahege swaagata,
      haagu,
      naanu ondu taayi/ patni/ magalaagi academic chatuvavikeya jotege aduge maneyallu kriyaashilatva/ merugannu padeyuva aasteyullavalu. magu/gandanige ondu olleya aduge niididaru adondu samaajakke niiduva sandesha antha nanna bhaavane.
      "khushi kodade hodaru sadbhavadinda blog bheti maaduttiralla anantha dhanyavaadagalu sir.

      ಅಳಿಸಿ