30 ನವೆಂಬರ್ 2011

ಹರಿವೇ ಸೊಪ್ಪಿನ ಫ್ರೈ

ಹರಿವೆ ಸೊಪ್ಪು- ೧ ಕಟ್ಟು
ಬೆಳ್ಳುಳ್ಳಿ-೬ (ಸಣ್ಣಗೆ ಕತ್ತರಿಸಿ)
ಹಸಿಮೆಣಸು-೧
ಎಣ್ಣೆ ೨ ಚಮಚ
ಉಪ್ಪು 

ಹರಿವೆ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ.....ಸೊಪ್ಪನ್ನು ಬಿಡಿಸಿ... ಆದ್ರೆ ಹೆಚ್ಚ ಬಾರದು....ಸೊಪ್ಪನ್ನು ಕೈಯಲ್ಲೇ ಎಲೆ ಎಳೆಯಾಗಿ  ಬಿಡಿಸಿ. ಬಾಣಲೆಗೆ ೨ ಚಮಚ ಎಣ್ಣೆ ಹಾಕಿ. ಬೆಳ್ಳುಳ್ಳಿ ಹುರಿದು, ಹಸಿಮೆಣಸಿನ ಕಾಯಿ , ಸೊಪ್ಪನ್ನು  ಸೇರಿಸಿ, ಸಣ್ಣ ಉರಿಯಲ್ಲಿ ೫-೬ ನಿಮಿಷ ಬೇಯಿಸಿ... ಉಪ್ಪು ಸೇರಿಸಿ....

ಸರಳವಾದರೂ.... ಒಮ್ಮೆ ಈ ಪಲ್ಯವನ್ನು ಮಾಡಿದವರು....ಇದನ್ನು ಮಾಡಲೆಂದೇ ಸೊಪ್ಪನ್ನು ತರುವದು ಸಹಜವೇ,,,,!

ಚಂದ್ರಿಕಾ ಹೆಗಡೆ

29 ನವೆಂಬರ್ 2011

ಆಲೂ- ಬೇಬಿ ಕಾರ್ನ್ ಮಸಾಲ..(ಖಾರ)

ಆಲೂ- ೩-೪ (ಬೇಯಿಸಿ ಹಿಸುಕಿದ್ದು)
ಈರುಳ್ಳಿ ೧ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು
ಎಣ್ಣೆ ೨ ಚಮಚ
ಅರಿಸಿನ - ಚಿಟಿಕೆ
ಟಮೇಟೋ- ೨ ಹೆಚ್ಚಿದ್ದು
ಬೇಬಿ ಕಾರ್ನ್-೪-೫ ಬೇಯಿಸಿ ಸಣ್ಣದಾಗಿ ಹೆಚ್ಚಿದ್ದು.
ಒಣ ಮೆಣಸಿನ ಕಾಯಿ- ೩-೪- ೧/೨ ಗಂಟೆ ನೆನಸಿ... ರುಬ್ಬಿ.
ಉಪ್ಪು ರುಚಿಗೆ 
ಕಿಚನ್ ಕಿಂಗ್ ಮಸಾಲ - ೨ ಚಮಚ 


ಎಣ್ಣೆಯಲ್ಲಿ ಈರುಳ್ಳಿ ಹುರಿದು... ಟೊಮೇಟೊ ಬೇಯಿಸಿ. ಅರಿಸಿನ ಪುಡಿ +  ರುಬ್ಬಿದ ಖಾರ + ಉಪ್ಪು+ ಕಿಚನ್ ಕಿಂಗ್ ಮಸಾಲ + ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೇಯಿಸಿ...ಅದಕ್ಕೆ ಬೇಬಿ ಕಾರ್ನ್ + ಆಲೂ + ಬೇಕಾದ್ರೆ ಇನ್ನು ಸ್ವಲ್ಪ ಉಪ್ಪು  ಹಾಕಿ ಸ್ವಲ್ಪ ನೀರು ಹಾಕಿ ೩ ನಿಮಿಷ ಬೇಯಿಸಿ,,,,

ಪಾಲಕ್ ಪರೋಟದ ಜೊತೆ  ....ಸವಿದ ಕ್ಷಣ 


ಚಂದ್ರಿಕಾ ಹೆಗಡೆ

ಪಾಲಕ್ ಪರೋಟ

ಗೋದಿ ಹಿಟ್ಟು- ೨ ಕಪ್
ಪಾಲಕ್- ೨ ಕಟ್ಟು
ಜೀರಿಗೆ ಪುಡಿ ೧ ಚಮಚ
ಮೆಣಸಿನ ಪುಡಿ ೧ ಚಮಚ
ಅರಿಸಿನ ಪುಡಿ- ಚಿಟಿಕೆ 
ಉಪ್ಪು ರುಚಿಗೆ
ಹಸಿಮೆಣಸು-೧
ಎಣ್ಣೆ ೨ ಚಮಚ(ಪರೋಟ  ಮಾಡುವಾಗ ಇನ್ನು ಬೇಕಾಗುತ್ತದೆ.)
ಬಿಸಿ ನೀರು- ಹಿಟ್ಟು ಕಲೆಸಲು.

ಪಾಲಕ್ ಸೊಪ್ಪನ್ನು ಸ್ವಚ್ಚಗೊಳಿಸಿ. ಕತ್ತರಿಸಿ, ಹಸಿಮೆಣಸಿನ ಕಾಯಿಯೊಂದಿಗೆ    ಬೇಯಿಸಿ,  ಆರಿದ  ಮೇಲೆ  ರುಬ್ಬಿ.
ಗೋದಿ ಹಿಟ್ಟಿಗೆ  ೨ ಚಮಚ ಬಿಸಿಮಾಡಿದ ಎಣ್ಣೆ ಹಾಕಿ. ನಂತರ ರುಬ್ಬಿದ ಮಿಶ್ರಣ  +ಉಪ್ಪು+ಜೀರಿಗೆ  ಪುಡಿ+ಅರಿಸಿನ+ ಮೆಣಸಿನ ಪುಡಿ +ಬಿಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ... ಉಂಡೆಗಳನ್ನಾಗಿ ಮಾಡಿ... ಲಟ್ಟಿಸಿ ಬೇಯಿಸಿ... ಬೇಯಿಸುವಾಗ ಸ್ವಲ್ಪ ಎಣ್ಣೆ ಹಾಕಿ....

ಯಾವ್ದಾದ್ರೂ ಭಾಜಿ....ಜೊತೆ...ಪಾಲಕ್ ಪರೋಟ...

ಚಂದ್ರಿಕಾ ಹೆಗಡೆ

ಆಲೂಗಡ್ಡೆ ಕಡ್ಲೆ ಕಾಳು-ರೈಸ್

ಅನ್ನ- ೩ ಕಪ್
ಆಲೂಗಡ್ಡೆ -೪ ಬೇಯಿಸಿದ್ದು
ಈರುಳ್ಳಿ-೧ ಹೆಚ್ಚಿದ್ದು
ಹಸಿಮೆಣಸಿನ ಕಾಯಿ-೧ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು-೨-೩ ಗಿಡ...!
ಎಣ್ಣೆ ೨-೩ ಚಮಚ
ಕಡ್ಲೆ ಕಾಳು  ನೆನಸಿ ಬೇಯಿಸಿದ್ದು-೧/೨ ಕಪ್
ನಿಂಬೆ ರಸ- ೨ ಚಮಚ
ಅರಿಸಿನ ಚಿಟಿಕೆ
ಉಪ್ಪು ರುಚಿಗೆ
ಸ್ವಲ್ಪ ಸಕ್ಕರೆ
ಸಾಸಿವೆ ಒಗ್ಗರಣೆಗೆ

ಬಾಣಲೆಗೆ ಎಣ್ಣೆ ಹಾಕಿ .ಸಾಸಿವೆ ಸಿಡಿಸಿ.... ಹಸಿಮೆಣಸಿನ ಕಾಯಿ+ಅರಿಸಿನ+ಈರುಳ್ಳಿ ಹಾಕಿ ಹುರಿಯಿರಿ. ಕಡ್ಲೆ ಕಾಳು ಸೇರಿಸಿ.
ಆಲೂ ಗಡ್ಡೆಯನ್ನು ಹಿಸುಕಿ ಹಾಕಿ. ಉಪ್ಪು ಸಕ್ಕರೆ, ಕೊತ್ತಂಬರಿ ಸೊಪ್ಪು ಮಿಕ್ಸ್ ಮಾಡಿ ೨ ನಿಮಿಷ ಬೇಯಿಸಿ. ಅನ್ನ ಸೇರಿಸಿ. ಕೊನೆಯಲ್ಲಿ ನಿಂಬೆರಸ ಹಾಕುವದರೊಂದಿಗೆ ಮುಕ್ತಾಯ......




ಅಡುಗೆ ಮನೆಯಲ್ಲೂ..... ಅದೆಂಥ ಸಂತೋಷ....


ಚಂದ್ರಿಕಾ ಹೆಗಡೆ







ಬೇಲದ ಹಣ್ಣಿನ ಪಾನಕ

ಬೇಲದ ಹಣ್ಣು-೧
ಬೆಲ್ಲ - ೧ ಕಪ್(ಬೇಕೆನಿಸಿದರೆ ಇನ್ನು ಸ್ವಲ್ಪ )
ಚಿಟಿಕೆ ಉಪ್ಪು
ಏಲಕ್ಕಿ-೨-೩
ನೀರು-೩ ಕಪ್


ಬೇಲದ ಹಣ್ಣನ್ನು ಒಡೆದು ಅದರೊಳಗಿರುವ ತಿರುಳಿಗೆ ಬೆಲ್ಲ, ಏಲಕ್ಕಿ, ಚಿಟಿಕೆ ಉಪ್ಪು , ಸ್ವಲ್ಪ ನೀರು  ಹಾಕಿ ಮಿಕ್ಸಿಯಲ್ಲಿ  ೧ ಸಲ ತಿರುವಿ. ಆಮೇಲೆ ಸೋಸಿ. ಉಳಿದ ನೀರನ್ನು ಮಿಕ್ಸ್ ಮಾಡಿ....

ಆರೋಗ್ಯಕರ ಪೇಯ....

ಆದರೆ  ಕೆಲವೊಬ್ಬರಿಗೆ ಇಷ್ಟ ಆಗೋಲ್ಲ.... ಅದರ (ಸು)ವಾಸನೆಯೇ  ಕಾರಣ....
ನನ್ನ ಮಗ, ಹಾಗು ಉದಯ್ ಬೇಡ ಅಂತ ತಿರಸ್ಕರಿಸಿದರು.... ಆದ್ರೆ ನಿಜಕ್ಕೂ ಉತ್ತಮ ಪೇಯ. ನಾನಂತೂ   ಇದನ್ನು ಇಷ್ಟ ಪಟ್ಟೆ. ನಿಮಗಿಷ್ಟವಾಗುತ್ತೋ   ಇಲ್ಲವೋ ತಿಳಿಬೇಕಾದ್ರೆ  ನೀವ್ ಮಾಡಿ ನೋಡಬೇಕಲ್ಲ....


ಚಂದ್ರಿಕಾ ಹೆಗಡೆ

28 ನವೆಂಬರ್ 2011

ಹರಿವೆ ಸೊಪ್ಪಿನ ಚಟ್ನಿ

ಹರಿವೆ ಸೊಪ್ಪು ೨ ಕಟ್ಟು
ತೆಂಗಿನ ತುರಿ- ೧ ಕಪ್
ಮೊಸರು ಕಾಲು ಕಪ್
ಹಸಿಮೆಣಸಿನ ಕಾಯಿ-೨ 
ಈರುಳ್ಳಿ- ೨ ( ಸಣ್ಣದಾಗಿ ಹೆಚ್ಚಿ/)
ಸಾಸಿವೆ,೨ ಚಮಚ ಎಣ್ಣೆ, ಕರಿಬೇವಿನ ಸೊಪ್ಪು, ಉಪ್ಪು, ಸ್ವಲ್ಪ ಸಕ್ಕರೆ , ಚಿಟಿಕೆ ಇಂಗು, ಚಿಟಿಕೆ ಅರಿಸಿನ

೧ ಚಮಚ ಎಣ್ಣೆ ಹಾಕಿ. ಹಸಿಮೆಣಸಿನ ಕಾಯಿ ಹಾಕಿ ಬಾಡಿಸಿ.
ಇದಕ್ಕೆ ತೊಳೆದು ಹೆಚ್ಚಿದ ಸೊಪ್ಪನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಅರಿಸಿನ ಹಾಕಿ. (ಸೊಪ್ಪನ್ನು ಮುಚ್ಚಿ ಬೇಯಿಸಿ.....)
ಆರಿದ ಮೇಲೆ ತೆಂಗಿನ ತುರಿ+ಬೇಯಿಸಿದ ಸೊಪ್ಪು+ಉಪ್ಪ್ಪು + ಸ್ವಲ್ಪ ಸಕ್ಕರೆ=ನೀರು ಇಲ್ಲದೆಯೇ ರುಬ್ಬಿ.

ಈ ಮಿಶ್ರಣವನ್ನು  ಒಂದು ಪಾತ್ರೆಗೆ ಹಾಕಿ. ಇದಕ್ಕೊಂದು ಒಗ್ಗರಣೆ ಕೊಡಬೇಕಲ್ಲಾ......

ಒಗ್ಗರಣೆ: ೧ ಚಮಚ ಎಣ್ಣೆ ಬಿಸಿ ಮಾಡಿ, ಸಾಸಿವೆ ಸಿಡಿಸಿ, ಕರಿಬೇವು ಇಂಗು ಹಾಕಿ . ಒಗ್ಗರಣೆ ಬಿಸಿಯಾಗಿರುವಾಗಲೇ ಅದಕ್ಕೆ ಹೆಚ್ಚಿಟ್ಟ ಈರುಳ್ಳಿ   ಸೇರಿಸಿ... ಮೊದಲಿನ ಮಿಶ್ರಣಕ್ಕೆ ಸೇರಿಸಿ. ಇಲ್ಲಿ ಯಾಕೆ ಬಿಸಿ ಒಗ್ಗರಣೆಗೆ ಹಸಿ ಈರುಳ್ಳಿ  ಹಾಕಿದ್ದು ಎಂದರೆ..... ಈರುಳ್ಳಿ ಸ್ವಲ್ಪ ಬೆಂದ ಹಾಗೆ ಆಗಿ ಹಸಿವಾಸನೆ ಹೋಗಿರಲಿ ಅಂತ....
ಕೊನೆಯಲ್ಲಿ ಮೊಸರು ಸೇರಿಸಿ....ಮೊಸರು ಸೇರಿಸಿದ ಮೇಲೆ ಇನ್ನಸ್ಟು ಉಪ್ಪು ಅಗತ್ಯವೆನಿಸಿದರೆ ಸೇರಿಸಿ.

ಅನ್ನ, ಚಪಾತಿ, ರೊಟ್ಟಿ....ಜೊತೆ...ಚಟ್ನಿ 


ಚಂದ್ರಿಕಾ ಹೆಗಡೆ


26 ನವೆಂಬರ್ 2011

ಕೆಂಪು ಕ್ಯಾಬೇಜ್ ರೈಸ್- (ಕಾಳು ಮೆಣಸು ಶುಂಟಿ. ಸ್ಪೆಷಲ್ )

ಕೆಂಪು ಕ್ಯಾಬೇಜ್ ಚಿಕ್ಕದು -೧
ಶುಂಟಿ(ಹಸಿ)  ಹೆಬ್ಬರಳಿನ  ಗಾತ್ರ...!!
ಕಾಳು ಮೆಣಸು- ೧೦-೧೨
ಹಸಿಮೆಣಸು-೧
ಅರಿಸಿನ ಚಿಟಿಕೆ
ಉಪ್ಪು ರುಚಿಗೆ ತಕ್ಕಸ್ಟು
ಗ್ರೀನ್ ಚಿಲ್ಲಿ ಸಾಸ್- ೨ ಚಮಚ
ಟಮೇಟೋ ಸಾಸ್ ೧ ಚಮಚ 
ತುಪ್ಪ ೩ ಚಮಚ 
ಅನ್ನ ೨ ಬೌಲ್ 
ಜೀರಿಗೆ ೧ ಚಮಚ


ಮೊದಲು ಜೀರಿಗೆ ಶುಂಟಿ,ಕಾಳುಮೆಣಸು  ಸೇರಿಸಿ ಪುಡಿ ಮಾಡಿ. ತುಪ್ಪ ದೊಂದಿಗೆ ಕ್ಯಾಬೇಜ್ ಹಾಕಿ ಬೇಯಿಸಿ... ಹಾಗೆ ಪುಡಿ ಮಾಡಿದ ಶುಂಟಿ ಜೀರಿಗೆ,ಕಾಳುಮೆಣಸು ಸೇರಿಸಿ , ಸಾಸ್ ಎರಡನ್ನು ಹಾಕಿ, ಅರಿಸಿನ ಹಸಿಮೆಣಸು ಹೆಚ್ಚಿ ಹಾಕಿ. ಉಪ್ಪು ಹಾಕಿ....ಕೊನೆಯಲ್ಲಿ ಅನ್ನ ಮಿಶ್ರಣ ಮಾಡಿ.....



ಸರಳ ಆಹಾರ ...ಸುಲಭ ಜೀರ್ಣ....!


ಚಂದ್ರಿಕಾ ಹೆಗಡೆ