17 ನವೆಂಬರ್ 2011

ಸುವರ್ಣ ಗಡ್ಡೆಯ ಪಲ್ಯ (ಪಂಜರ ಗಡ್ಡೆ)

ಸುವರ್ಣ ಗಡ್ಡೆ- ಹೋಳುಗಳನ್ನಾಗಿ  ಮಾಡಿ- ೧ ಕಪ್
ಹುಳಿಸೆ ರಸ - ೨ ಚಮಚ
ಹಸಿಮೆಣಸು-೨-೩
ತೆಂಗಿನ ತುರಿ- ಸ್ವಲ್ಪ
ಎಣ್ಣೆ ೩ ಚಮಚ
ಕರಿಬೇವು ೫-೬ ಎಸಳು
ಉದ್ದಿನ ಬೇಳೆ- ೧/೨ ಚಮಚ
ಸಾಸಿವೆ ೧/೨ ಚಮಚ
ಬೆಲ್ಲ- ೨ ಚಮಚ
ಅರಿಸಿನ ಪುಡಿ , ಉಪ್ಪು

ಸುವರ್ಣ ಗಡ್ಡೆಯ ಹೋಳುಗಳನ್ನು  ಮೊದಲು ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಆರಿದ ಮೇಲೆ ಬಾಣಲೆಗೆ  ಎಣ್ಣೆ ಸಾಸಿವೆ ಉದ್ದಿನ ಬೇಳೆ ಹಸಿಮೆಣಸು ಹಾಕಿ ಒಗ್ಗರಣೆ ಸಿದ್ದಪಡಿಸಿ. ಇದಕ್ಕೆ ಬೇಯಿಸಿಟ್ಟುಕೊಂಡ ಹೋಳುಗಳನ್ನು ಹಾಕಿ, ಬೆಲ್ಲ, ಉಪ್ಪು, ಅರಿಸಿನ ಪುಡಿ, ಹುಳಿಸೆ ರಸ  ಸೇರಿಸಿ. ಎಲ್ಲ ಹೊಂದಿಕೊಂಡ ಮೇಲೆ...ತೆಂಗಿನ ತುರಿ ಹಾಕಿ....

ತಿನ್ನಿ.....!



ಇನ್ನೊಂದು ವಿಷಯ--- ಸುವರ್ಣ ಗಡ್ಡೆ- ಎಸ್ಟೋರೋಗಗಳಿಗೆ ಪರಿಹಾರವನ್ನು ನೀಡಬಲ್ಲದು ಎಂದು ಓದಿ- ಕೇಳಿದ ವಿಷಯ , ಅದರಲ್ಲೂ   ಮೂಲವ್ಯಾದಿಯ ಪರಿಹಾರಕ್ಕೆ ರಾಮಬಾಣ ದಂತೆ ಎಂಬುದು ಆಯುರ್ವೇದ ತಜ್ಞರ ಅಭಿಪ್ರಾಯ.....

ಚಂದ್ರಿಕಾ ಹೆಗಡೆ

ಮೆಂತೆ ಪಲಾವ್

ಮೆಂತೆ ಸೊಪ್ಪು ಸ್ವಚ್ಚ ಮಾಡಿದ್ದು- ೨ ಕಟ್ಟು
ಅಕ್ಕಿ -೨ ಕಪ್
ಕಸೂರಿ ಮೇಥಿ- ಸ್ವಲ್ಪ
ತುಪ್ಪ ೨ ಚಮಚ
ಹಾಲು ೧ ಕಪ್
ಬೆಳ್ಳುಳ್ಳಿ-೨ ಎಸಳು ಮಾತ್ರ
ಪಲಾವ್ ಎಲೆ-೩ 
ಕಾಳು ಮೆಣಸು-ಲವಂಗ ೫-೬
ಟೋಮೇಟೋ  ಸಾಸ್ - ೧ ಚಮಚ
ಗ್ರೀನ್ ಚಿಲ್ಲಿ ಸಾಸ್ - ೧ಚಮಚ 
ಹಸಿಮೆಣಸು-೨ 
ಉಪ್ಪು

ಬೆಳ್ಳುಳ್ಳಿ, ಕಾಳುಮೆಣಸು, ಲವಂಗ ಪುಡಿಮಾಡಿ. ಅಕ್ಕಿ ತೊಳೆದು ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಗು ಈ ಪುಡಿಯನ್ನು ಸೇರಿಸಿ, ೩ ಕಪ್ ನೀರು ಹಾಕಿ. ಕುಕ್ಕರ್ ನಲ್ಲಿ ಇಡಿ. ೩ ಕೂಗು  ಆಗಲಿ!
ಇದರ ಜೊತೆ ಸವತೆಕಾಯಿ, ಈರುಳ್ಳಿ ಮೊಸರಿನ  ಸಲಾಡ್ ಇರಲಿ....

ಸವಿಯಾದ.... ಈ ಸಮಯ.... ಎಲ್ಲರದೂ  ಆಗಲೆಂದೇ ಈ ಬ್ಲಾಗ್

ಚಂದ್ರಿಕಾ ಹೆಗಡೆ

ಅಲಸಂದೆ (ಸೋಡಿಗೆ) ಪಲ್ಯ

ಅಲಸಂದೆ  ಚಿಕ್ಕದಾಗಿ ಹೆಚ್ಚಿದ್ದು- ೧ ಕಪ್ 
ಹಸಿಮೆಣಸು -೧ ಹೆಚ್ಚಿದ್ದು 
ಎಣ್ಣೆ ೨ ಚಮಚ
ಕರಿಬೇವು ೫-೬ ಎಸಳು
ಅರಿಸಿನ , ಉಪ್ಪು, ಸಾಸಿವೆ(ಒಗ್ಗರಣೆಗೆ)
ತೆಂಗಿನ ತುರಿ ಸ್ವಲ್ಪ 

ಬಾಣಲೆಯಲ್ಲಿ ಎಣ್ಣೆ  ಹಾಕಿ ಬಿಸಿ ಮಾಡಿ ಸಾಸಿವೆ ಚಟ್ ಪಟ್ ಮಾಡಿ... ಹಸಿಮೆಣಸು, ಕರಿಬೇವು, ಅರಿಸಿನ ಹಾಕಿ, ಹೆಚ್ಚಿಟ್ಟ ಅಳಸಂದೆಯನ್ನು ಸೇರಿಸಿ, ಸ್ವಲ್ಪ ನೀರು ಚುಮುಕಿಸಿ  ಸಣ್ಣ ಉರಿಯಲ್ಲಿ ೭-೧೦ ನಿಮಿಷ ಬೇಯಿಸಿ.... ಉಪ್ಪು ಹಾಕಿ ಸ್ವಲ್ಪ ಸಣ್ಣ ಉರಿಯಲ್ಲೇ ಇಡಿ. ಗ್ಯಾಸ್ ಆರಿಸಿದ ಮೇಲೆ  ತೆಂಗಿನ ತುರಿ ಸೇರಿಸಿ.

ಸವಿದ ಘಳಿಗೆ ನನ್ನದು.....


ಚಂದ್ರಿಕಾ ಹೆಗಡೆ

18 ಆಗಸ್ಟ್ 2011

ಚೀನಿ ಕಾಯಿ ಸಿಹಿ ಕಡುಬು< ಇಡ್ಲಿ>...(ಸಿಹಿ ಕುಂಬಳ)


ಸಿಹಿ ಕುಂಬಳದ  ತುರಿ- ೨ ಕಪ್
ಅಕ್ಕಿ ತರಿ ೧/೨
ಬೆಲ್ಲ ೧ ಕಪ್
ಏಲಕ್ಕಿ ೨-೩
ಲೋಕಲ್  ರವ ೧/೨ ಕಪ್


ಸಿಹಿ ಕುಂಬಳದ  ತುರಿಯನ್ನು ಈ ಮೇಲಿನ ಸಾಮಗ್ರಿಗಳೊಂದಿಗೆ ಮಿಶ್ರಣ ಮಾಡಿ ಇಡ್ಲಿ ತಟ್ಟೆಯಲ್ಲಿ ಇಟ್ಟು ಬೇಯಿಸಿ.... ಬಿಸಿ ಬಿಸಿಯಿರುವಾಗಲೇ ತುಪ್ಪ/ ಮೊಸರಿನೊಂದಿಗೆ  ಸವಿಯಿರಿ.....


ರುಚಿ.... ಹೆಚ್ಚಾದಂತೆ... ಅಡಿಗೆಯ  ಕಡೆಗೆ ಗಮನ....



ಚಂದ್ರಿಕಾ ಹೆಗಡೆ

14 ಆಗಸ್ಟ್ 2011

ರಾಗಿ ತಾಲಿ ಪಿಟ್ಟು

ಅಗತ್ಯ :
ರಾಗಿ ಹಿಟ್ಟು- ೨ ಕಪ್
ಈರುಳ್ಳಿ-೧ ಸಣ್ಣಗೆ ಹೆಚ್ಚಿದ್ದು 
ಹಸಿಮೆಣಸು ೨-೩ ಸಣ್ಣಗೆ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು ೧/೨ ಕಟ್ಟು ಸಣ್ಣಗೆ ಹೆಚ್ಚಿದ್ದು
ರುಚಿಗೆ ಉಪ್ಪು

ಹಿಟ್ಟಿನ ಪ್ರಮಾಣದಸ್ಟೆ ನೀರನ್ನು ಬಿಸಿ ಮಾಡಿ ... ಅದಕ್ಕೆ ಉಪ್ಪನ್ನು ಸೇರಿಸಿ...ಹಿಟ್ಟು ಹಾಕಿ ಕಾಯಿಸಿ...ಗಟ್ಟಿ ಆದ ಮೇಲೆ ಅದಕ್ಕೆ ಈರುಳ್ಳಿ, ಹಸಿಮೆಣಸು,ಕೊತ್ತಂಬರಿ ಸೊಪ್ಪು ಹಾಕಿ..ಉಂಡೆ ಮಾಡಿ ಕೈಯ್ಯಲ್ಲೇ  ಲಟ್ಟಿಸಿ.... ಬೇಯಿಸಿ.....
ಬಾಳೆ ಎಲೆ ಯಲ್ಲಿ ಮಾಡಿದರೆ ಉತ್ತಮ... ಸಿಗುವ ಹಾಗೆ ಇಲ್ಲದಿದ್ದರೆ ನಾನು ಕಂಡು ಕೊಂಡ ಪರಿಹಾರ  ಒಳ್ಳೆ ತೆಳ್ಳನೆಯ ಬಟ್ಟೆಯ ಮೇಲೆ ಲಟ್ಟಿಸಿ ಅದನ್ನು ಕಾವಲಿಯ ಮೇಲೆ ತಿರುಗಿಸಿ ಹಾಕುವದು.....ಇದರಲ್ಲಿ ಲಟ್ಟಿಸುವಾಗ ಎಣ್ಣೆ ಅಗತ್ಯ ಇಲ್ಲ.... ಬದಲಾಗಿ ನೀರು ಸಾಕು.....


ರಾಗಿ ತಾಲಿ ಪಿಟ್ಟನ್ನು ಇನ್ನೊಂದು ವಿಧಾನದಿಂದಲೂ ಮಾಡಬಹುದು....ಅದೇನೆಂದರೆ....ಹಿಟ್ಟನ್ನು ಬಿಸಿನೀರಿಗೆ  ಹಾಕಿ ಕಾಯಿಸುವ ಬದಲು... ತಣ್ಣನೆಯ  ನೀರಿನಲ್ಲಿಯೇ ಕಲೆಸುವದು. ಆದರೆ ಮೊದಲು ಹೇಳಿದ ವಿಧಾನದಲ್ಲಿ  ಎಣ್ಣೆ ಕಡಿಮೆ ಸಾಕು

ವಿಸ್ತರಣೆ ನನ್ನದು.... ಆಯ್ಕೆ  ನಿಮ್ಮದು....



ಚಂದ್ರಿಕಾ ಹೆಗಡೆ

ಕೊತ್ತಂಬರಿ ಸೊಪ್ಪಿನ ಚಟ್ನಿ

ಅಗತ್ಯ:
ಕೊತ್ತಂಬರಿ ಸೊಪ್ಪು ೧/೨ ಕಟ್ಟು
ಹಸಿಮೆಣಸು-೩-೪ 
ತೆಂಗಿನ ತುರಿ-೧
  ಹುರಿ ಗಡಲೇ ೫-೬ ಚಮಚ
ಒಗ್ಗರಣೆಗೆ- , ಸಾಸಿವೆ 
ಎಣ್ಣೆ
ಉಪ್ಪು 

ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು, ಸ್ವಲ್ಪ ಎಣ್ಣೆ ಹಾಕಿ ಹುರಿ ಗಡಲೇ  ಕೊತ್ತಂಬರಿ ಸೊಪ್ಪು, ಹಸಿಮೆಣಸು ಹಾಕಿ ಸ್ವಲ್ಪ ಬಾಡಿಸಿ. ಆರಿದ ಮೇಲೆ ತೆಂಗಿನ ತುರಿ ಸೇರಿಸಿ ರುಚಿಗೆ ತಕ್ಕಸ್ಟು ಉಪ್ಪು ಸೇರಿಸಿ ರುಬ್ಬಿ( ೧/೨ ಚಮಚ ಸಕ್ಕರೆ ಹಾಕಿದ್ರೆ ಇನ್ನು ಟೇಸ್ಟ್....ಆದ್ರೆ ಇಲ್ಲದಿದ್ದರೂ.... ರುಚಿ... ಇದೇರಿ....!) ಇದಕ್ಕೆ ಸಾಸಿವೆ ಒಗ್ಗರಣೆ ಹಾಕಿ..... ಇಡ್ಲಿ... ಚಪಾತಿ... ದೋಸೆ.... ಹಾಂ.... ಉಪ್ಪಿಟ್ಟಿಗೂ.... ಜೊತೇನೆ.....!



ಚಟ್ನಿ.....ಚಿಂತನೆ.....!



ಚಂದ್ರಿಕಾ ಹೆಗಡೆ

13 ಆಗಸ್ಟ್ 2011

ಮೂಲಂಗಿ ಹಸಿ ಪಲ್ಯಾ.... (ಕೋಸಂಬರಿ)

ತುರಿದ ಮೂಲಂಗಿ ೧ ಕಪ್ 
ನೆನಸಿದ ಹೆಸರು ಬೇಳೆ ೧
ಹಸಿಮೆಣಸು  ೧ ಹೆಚ್ಚಿದ್ದು
ನಿಂಬೆ ರಸ ೨ ಚಮಚ 
ರುಚಿಗೆ ಉಪ್ಪು

ಈ ಮೇಲಿನ ಮಿಶ್ರಣವನ್ನು ಸೇರಿಸಿ.......

just    ..... enjoy 


ಹಸಿ       ತರಕಾರಿಯಲ್ಲಿದೆ..... ಹೊಸತನ-ನವ ಉಲ್ಲಾಸದ ಗುಟ್ಟು...... ಶು..... ಯಾರಿಗೂ ಹೇಳ್ಬೇಡಿ.....!   


ಇದಕ್ಕೆ ಬೇಕಾದರೆ  ಸವತೆಕಾಯಿಯನ್ನು ಹಾಕಬಹುದು......




ವಾಹ್.......




ಚಂದ್ರಿಕಾ ಹೆಗಡೆ