ಹಲಸಿನ ಹಣ್ಣಿನ ಮುಳುಕ <ಸುಟ್ಟೆವು>
ಅಗತ್ಯ:
ಹೆಚ್ಚಿದ ಹಲಸಿನ ತೊಳೆಗಳು ೧/೨ ಕಪ್
ಅಕ್ಕಿ ಹಿಟ್ಟು ೧ ಕಪ್
ಬೆಲ್ಲ ೫-೬ ಚಮಚ
ಕರಿಯಲು ಎಣ್ಣೆ
ಸೈ....
ಅಕ್ಕಿಯನ್ನು ೨-೩ ಗಂಟೆಗಳ ಕಾಲ ನೆನಸಿ ಸ್ವಲ್ಪ ಗಟ್ಟಿ ರುಬ್ಬಿಕೊಳ್ಳಿ. ಅದಕ್ಕೆ ಬೆಲ್ಲ, ಹೆಚ್ಚಿದ ಹಲಸಿನ ತೊಳೆಗಳನ್ನು ಹಾಕಿ. ಚಿಟಿಕೆ ಉಪ್ಪನ್ನು ಹಾಕಿ.
ಎಣ್ಣೆ ಬಿಸಿ ಮಾಡಿ... ಕೈಯಿಂದ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದು... ಎಣ್ಣೆಗೆ ಹಾಕಿ... ಬೇಯಿಸಿ.
ಇದರ ಜೊತೆ ಶುಂಟಿ ಚಟ್ನಿ... ತುಪ್ಪ...
ಸರಳವಾದರೂ... ಸವಿ ಬಹಳ...!
ಚಂದ್ರಿಕಾ ಹೆಗಡೆ