15 ಜುಲೈ 2011

ಹಲಸಿನ  ಹಣ್ಣಿನ ಮುಳುಕ <ಸುಟ್ಟೆವು>
ಅಗತ್ಯ:
ಹೆಚ್ಚಿದ ಹಲಸಿನ ತೊಳೆಗಳು ೧/೨ ಕಪ್ 
ಅಕ್ಕಿ ಹಿಟ್ಟು  ೧ ಕಪ್
ಬೆಲ್ಲ ೫-೬ ಚಮಚ 
ಕರಿಯಲು ಎಣ್ಣೆ

ಸೈ.... 
 ಅಕ್ಕಿಯನ್ನು ೨-೩ ಗಂಟೆಗಳ ಕಾಲ ನೆನಸಿ ಸ್ವಲ್ಪ ಗಟ್ಟಿ ರುಬ್ಬಿಕೊಳ್ಳಿ. ಅದಕ್ಕೆ ಬೆಲ್ಲ, ಹೆಚ್ಚಿದ ಹಲಸಿನ ತೊಳೆಗಳನ್ನು ಹಾಕಿ. ಚಿಟಿಕೆ ಉಪ್ಪನ್ನು ಹಾಕಿ.
ಎಣ್ಣೆ ಬಿಸಿ ಮಾಡಿ... ಕೈಯಿಂದ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದು... ಎಣ್ಣೆಗೆ ಹಾಕಿ... ಬೇಯಿಸಿ.

ಇದರ ಜೊತೆ ಶುಂಟಿ ಚಟ್ನಿ... ತುಪ್ಪ... 
   ಸರಳವಾದರೂ... ಸವಿ ಬಹಳ...!
ಚಂದ್ರಿಕಾ ಹೆಗಡೆ 

2 ಕಾಮೆಂಟ್‌ಗಳು:

  1. ಸುಟ್ಟೆವು ಎಂಬ ಶಬ್ದ ನನಗೆ ಬಹಳ ಆಪ್ತ ...ಅಜ್ಜಿ ಹೇಳುತ್ತಿದ್ದ ಕತೆಯೊಂದರಲ್ಲಿ ಈ ಖಾದ್ಯದ ಹೆಸರು ಬರುತಿತ್ತು...ಅದು ಹೇಗಿರುತ್ತೆ ಅನ್ನೋ ಕುರಿತು ಬಾಲ್ಯದಿಂದಲೂ ನನಗೆ ಕುತುಹಲ ಅಮೆಲೊಂದು ದಿನ ಜಾನಪದ ತಜ್ಞೆ ಶಾಂತಿ ನಾಯಕ್ ಅವರ ಮನೆಯಲ್ಲಿ ಇದರ ರುಚಿ ನೋಡಿದೆ..ಹಲಸಿನ ಮುಳ್ಕ ನಾವು ಮಾಡುತ್ತೇವೆ ಆದರೆ ಅದಕ್ಕೇ ಅಂತಾರೆ ಅನ್ನೋದು ತಿಳಿದದ್ದು ಇಲ್ಲಿಯೇ..ಇದನ್ನು ಬಾಳೇ ಹಣ್ಣ ನಿಂದಲೂ ಮಾಡಬಹುದು..ಎಂಬುದು ಗೊತ್ತಾಗಿದ್ದು ಶಾಂತಿ ನಾಯಕ್ ಅವರಿಂದ..ಒಳ್ಳೆಯ ಮಾಹಿತಿ ಒದಗಿಸಿದ ನಿಮಗೂ..ಈ ಬ್ಲಾಗ್ ವಿಳಾಸ ಕೊಟ್ಟ ನನ್ನ ಅಣ್ಣ ವಿಕಾಸ್ ಹೆಗಡೆ ಅವರಿಗೂ ನನ್ನ್ನ ವಂದನೆ.

    ಪ್ರತ್ಯುತ್ತರಅಳಿಸಿ
  2. hum..? shanthi naik avrige gottirale beku... janapada tajne.... diet anno shabda maretu idna tindre.... aahaaa.... jagavestu... suttevastu sihi... anta gottagutte....

    ಪ್ರತ್ಯುತ್ತರಅಳಿಸಿ