ಅಗತ್ಯ:
ಹಲಸಿನ ಹಣ್ಣಿನ ತೊಳೆಗಳು-೧೦-೧೫
ಬೆಲ್ಲ
ತೆಂಗಿನ ಹಾಲು ೩ ಬಟ್ಟಲು
ರವೆ- ೧/೨ ಬಟ್ಟಲು
ಏಲಕ್ಕಿ
ಗೋಡಂಬಿ
ತುಪ್ಪ-೨ ಚಮಚ
ಮಾಡುವದಕ್ಕೆ ಸೈ.....!
ಹಲಸಿನ ಹಣ್ಣಿನ ತೊಳೆಗಳನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಸ್ವಲ್ಪ ನೀರು ಹಾಕಿ ಬೇಯಿಸಿ... ಅದಕ್ಕೆ ರವೆಯನ್ನು ಹಾಕಿ... ೫ ನಿಮಿಷ ಬೇಯಿಸಿ..
ತೆಂಗಿನ ತುರಿ, ಏಲಕ್ಕಿ ಮಿಕ್ಸಿಗೆ ಹಾಕಿ ರುಬ್ಬಿ... ಸೋಸಿ.
ಬೆಂದ ರವೆ ಹಾಗು ಹಲಸಿನ ತೊಳೆ ಇದಕ್ಕೆ ತೆಂಗಿನ ಹಾಲು ಬೆಲ್ಲ ಸೇರಿಸಿ... ೫ ನಿಮಿಷ ಕುದಿಸಿ.
ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ...
ದೋಸೆ ಚಪಾತಿ ಜೊತೆ.... ಮನ ಮೆಚ್ಚುವದು....!
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ