11 ಜೂನ್ 2011

ಕ್ಯಾರೆಟ್ ಚಟ್ನಿ

ಅಗತ್ಯ:
         ತುರಿದ ಕ್ಯಾರೆಟ್ < ೩-೪>
         ಹಸಿಮೆಣಸಿನ ಕಾಯಿ೨-೩
         ಕಾಯಿ ತುರಿ ಕಾಲು ಕಪ್
         ಕರಿಬೇವು  ೧೦ ಎಲೆಗಳು
          ಉಪ್ಪು, ಹುಳಿಸೆ ರಸ ಸ್ವಲ್ಪ
          ಒಗ್ಗರಣೆಗೆ ಸ್ವಲ್ಪ ಎಣ್ಣೆ  ,ಸಾಸಿವೆ

"" ಕ್ಯಾರೆಟ್ ತುರಿ, ಹಸಿಮೆಣಸಿನ ಕಾಯಿ, ಕರಿಬೇವನ್ನು ಸ್ವಲ್ಪ ಬಾಡಿಸಿಕೊಳ್ಳಿ. ಇದು ಆರಿದ ಮೇಲೆ  ತೆಂಗಿನ ತುರಿ, ರುಚಿಗೆ ತಕ್ಕಸ್ಟು ಉಪ್ಪು, ಹುಳಿಸೆ ರಸ ಸೇರಿಸಿ ರುಬ್ಬಿ.
 ಸಾಸಿವೆ ಒಗ್ಗರಣೆ ಕೊಡಿ""

ಆರೋಗ್ಯಕರ ಚಿಂತನೆ
             


ಚಂದ್ರಿಕಾ  ಹೆಗಡೆ

ಸಬಕ್ಕಿ <ಸಾಬುದಾನಿ > ದೋಸೆ

ಅಗತ್ಯ:
           ಸಬಕ್ಕಿ ೧ ಕಪ್ <೩ ಜನರಿಗೆ>
            ಸ್ವಲ್ಪ ಅಕ್ಕಿ ಹಿಟ್ಟು
             ಈರುಳ್ಳಿ ಸಣ್ಣಗೆ ಹೆಚ್ಚಿದ್ದು <೨ ಈರುಳ್ಳಿ>
            ಹಸಿಮೆಣಸಿನ ಕಾಯಿ೨ ಸಣ್ಣಗೆ ಹೆಚ್ಚಿದ್ದು
            ರುಚಿಗೆ ಉಪ್ಪು
            ಮೊಸರು ೧ ೧/೨  ಕಪ್

ಸಾಬಕ್ಕಿ ಯನ್ನು  ೫-೬ ಗಂಟೆ ನೆನಸಿ.
ಬೆಳಿಗ್ಗೆ ದೋಸೆ ಮಾಡಬೇಕೆನ್ನುವವರು ರಾತ್ರಿ ನೆನಸಿದರೂ ... o .k 
   ಅದಕ್ಕೆ ಹಸಿಮೆಣಸಿನ ಕಾಯಿ, ಈರುಳ್ಳಿ , ಮೊಸರು ಉಪ್ಪು, ಅಕ್ಕಿ ಹಿಟ್ಟು ಸೇರಿಸಿ... ದೋಸೆ ಹಿಟ್ಟಿನ ಹದಕ್ಕೆ.. ತಯಾರಿಸಿ.
ಕಾವಲಿ ಮೇಲೆ ಹುಯ್ದು... 

ಆಹಾ.... ಕ್ಷಣ
ಇದರ ಜೊತೆಗೆ ಕ್ಯಾರೆಟ್  ಚಟ್ನಿ .....


ಚಂದ್ರಿಕಾ ಹೆಗಡೆ

10 ಜೂನ್ 2011

ಮೆಂತೆ ಆಸ್ರಿಗೆ

ಅಗತ್ಯ: 
            ಮೆಂತೆ ೪ ಚಮಚ ನೆನಸಿದ್ದು <ಪ್ರಮಾಣ ೨ ಲೋಟ ಆಸ್ರಿಗೆಗೆ>
             ಬೆಲ್ಲ <ಜೋನಿ ಬೆಲ್ಲ- ೪ ಚಮಚ> ರುಚಿಗೆ  ತಕ್ಕಸ್ಟು
             ಏಲಕ್ಕಿ -೧
             ಚಿಟಿಕೆ ಉಪ್ಪು
ನೆನಸಿದ ಮೆಂತೆ ಯನ್ನು  ಬೆಲ್ಲ ನೀರು ಸೇರಿಸಿ ರುಬ್ಬಿ. ಸ್ವಲ್ಪ ತರಿ ತರಿಯಾಗಿರಲಿ .
 ಅದಕ್ಕೆ ಏಲಕ್ಕಿ ಪುಡಿ , ಚಿಟಿಕೆ ಉಪ್ಪು ಇನ್ನಸ್ಟು ನೀರು ಸೇರಿಸಿ...
 ನಿಜವಾಗ್ಲೂ ಇದನ್ನು ನೀವು ಇಷ್ಟ ಪಡ್ತೀರ! 
  ಮೆಂತೆ ಅಂತಾನು ಗೊತ್ತಾಗೋದಿಲ್ಲ....
ಒಂಥರಾ ಕಬ್ಬಿನ ರಸ ಕುಡಿದ ಹಾಗೇನೆ ಅನಿಸಿದ್ದು ನನ್ನ, ಉದಯ್  ಅನುಭವ...
ಆರೋಗ್ಯಕರ ಪೇಯ




ಇಗ್ಲೇನೆ ಮೆಂತೆ ನೆನಸಿ....


ಚಂದ್ರಿಕಾ ಹೆಗಡೆ

ಮಸಾಲ ಮಜ್ಜಿಗೆ

ಅಗತ್ಯ:
           ಮಜ್ಜಿಗೆ- ೧ ಲೋಟ
           ಉಪ್ಪು ರುಚಿಗೆ ತಕ್ಕಸ್ಟು
           ಜೀರಿಗೆ, ಬೆಳ್ಳುಳ್ಳಿ , ಶುಂಟಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಎಲ್ಲವನ್ನು ಸೇರಿಸಿ ಮಾಡಿದ ಪೇಸ್ಟ್  - ೧ ಚಮಚ < ಇನ್ನು ರುಚಿಗೆ... ಕಾಳು ಮೆಣಸಿನ ಪುಡಿ ಹಾಕಿ...>
          ಚಿಟಿಕೆ ಸಕ್ಕರೆ,
           ನಿಂಬೆ ರಸ ೨ ಚಮಚ
ಮಜ್ಜಿಗೆ ೧ ಲೋಟಕ್ಕೆ ಇನ್ನು ೧ ಲೋಟ ನೀರು ಸೇರಿಸಿ, ಮಸಾಲ ಪೇಸ್ಟ್   < ಮೇಲೆ ಹೇಳಿದ್ದು > ಹಾಕಿ, ಉಪ್ಪು  ಸಕ್ಕರೆ 
         ಸೇರಿಸಿ. ರುಚಿ ಮಸಾಲ ಮಜ್ಜಿಗೆ .....





 ಸವಿ ಸವಿ ಸಮಯ....
     ಚಂದ್ರಿಕಾ ಹೆಗಡೆ

21 ಮೇ 2011

ಬಾಳೆಕಾಯಿ ಬಿಳಿ ಹುಳಿ

   ಅಗತ್ಯ:
          ಬಾಳೆಕಾಯಿ ೨ 
          ತೆಂಗಿನತುರಿ ೧ ೧/೨ ಬಟ್ಟಲು
         ಮಜ್ಜಿಗೆ ೨ ಬಟ್ಟಲು 
         ಹಸಿಮೆಣಸು-೨
          ಬೆಳ್ಳುಳ್ಳಿ ೫-೬ ಎಸಳು
          ಕೊತ್ತಂಬರಿ ಬೀಜ೧/೨ ಚಮಚ
          ಕರಿಬೇವು 
          ನಿಂಬೆ ರಸ,ಅರಿಸಿನ, ಸಾಸಿವೆ
            ಸ್ವಲ್ಪ ಎಣ್ಣೆ
ವಿಧಾನ:
           ಬಾಳೆಕಾಯಿಯನ್ನು ಬೇಯಿಸಿ.
ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಿ .
          ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸು, ಕೊತ್ತಂಬರಿ ಬೀಜ ಸಾಸಿವೆ ಹಾಕಿ ಸಣ್ಣನೆ ಉರಿಯಲ್ಲಿ ಹುರಿಯಿರಿ.
ಈ ಹುರಿದದ್ದನ್ನು ತೆಂಗಿನ ತುರಿಯ ಜೊತೆ ಹಾಕಿ ರುಬ್ಬಿ. ಬಾಳೇ ಕಾಯಿಯ ಜೊತೆ ಈ ಮಿಶ್ರಣ ವನ್ನು ಸೇರಿಸಿ  ಕುದಿಸಿ.
ಉಪ್ಪು ಸೇರಿಸಿ. ಚೆನ್ನಾಗಿ ಕುದಿ ಆದಮೇಲೆ ಕರಿಬೇವು ಹಾಕಿ..
ಇನ್ನೊಂದು ಕಡೆ ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ,ಬಿಸಿ ಮಾಡಿ ಸಾಸಿವೆ ಚಟ್ ಪಟ್ ಮಾಡಿ , ಬೆಳ್ಳುಳ್ಳಿ, ಅರಿಸಿನ ಸೇರಿಸಿ..
ಈ ಒಗ್ಗರಣೆಯನ್ನು ಹುಳಿ ಗೆ ಸೇರಿಸಿ,
ಒಲೆ ಆಫ್ ಮಾಡಿ   ಮಜ್ಜಿಗೆ, ನಿಂಬೆ   ರಸ ಸೇರಿಸಿ...
ಇದೆ ವಿಧಾನವನ್ನೇ ಹಲಸಿನ ಕಾಯಿಗೂ ಅನ್ವಯಿಸಿ...

ಹುಳಿ....ಹುಳಿಯಲ್ಲ .... ಸವಿ!


ಚಂದ್ರಿಕಾ ಹೆಗಡೆ

20 ಮೇ 2011

ಫ್ರೈ

ಬದನೆ ಫ್ರೈ
ಅಗತ್ಯ: 
  ಬದನೆ ಕಾಯಿ<                ೧
  ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಉಪ್ಪು ಸೇರಿಸಿ ೧/೨ ಬಟ್ಟಲು
  ರವೆ ಸ್ವಲ್ಪ
  ಎಣ್ಣೆ
ಕಾವಲಿ  ಇಡಿ:
                  ಬದನೆ ಕಾಯಿ ವ್ರತ್ತಾಕಾರವಾಗಿ ಕತ್ತರಿಸಿ. ಈ ತುಂಡನ್ನು ಮಸಾಲ ಪುಡಿಯಲ್ಲಿ ಹೊರಳಾಡಿಸಿ.. 2ನಿಮಿಷ ಬಿಟ್ಟು ರವೆಯಲ್ಲಿ ಹೊರಳಾಡಿಸಿ. ಈಗ ಕಾದ ಕಾವಲಿಯಲ್ಲಿ ಎಣ್ಣೆ ಹಾಕಿ ಈ ಬದನೆ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ...

ಹೀಗೆಯೇ ಹೀರೆ ಕಾಯಿ ಯಲ್ಲೂ ಮಾಡಬಹುದು.

ಸರಳತೆಯಲ್ಲಿ... ಅಡುಗೆ ಮನೆಗೆ ಪ್ರವೇಶ.....


ಚಂದ್ರಿಕಾ ಹೆಗಡೆ

19 ಮೇ 2011

ರವೆ ಕಸ್ಟರ್ಡ್ ಪಾಯಸ:



ಅಗತ್ಯ:
           ರವೆ( ಲೋಕಲ್) ೧/೨ ಬಟ್ಟಲು
           ತೆಂಗಿನ ಹಾಲು ೩ ಬಟ್ಟಲು
          ಸಕ್ಕರೆ ೧ ೧/೨ ಬಟ್ಟಲು
           ಕಸ್ಟರ್ಡ್ ಪುಡಿ ೨ ಚಮಚ
           ಗೋಡಂಬಿ, ದ್ರಾಕ್ಷಿ, ಬಾದಾಮ್
           ರವೆ ಹುರಿಯಲು ೨ ಚಮಚ ತುಪ್ಪ
  ತಯಾರಿ....
 ರವೆಯನ್ನು ತುಪ್ಪ ಹಾಕಿ ಹುರಿದು ಕೊಳ್ಳಿ. ತೆಂಗಿನ ಹಾಲಿನಲ್ಲಿ ಬೇಯಿಸಿ.. ಸಕ್ಕರೆ ಸೇರಿಸಿ.. ಕಸ್ಟರ್ಡ್ ಪುಡಿ, ಹುರಿದ ಗೋಡಂಬಿ ದ್ರಾಕ್ಷಿ ಹಾಕಿ. ಬಾದಾಮ್ ಸಣ್ಣಗೆ ಕತ್ತರಿಸಿ. ಸೇರಿಸಿ. 
 ಚಪಾತಿ ಜೊತೆ, ದೋಸೆ ಜೊತೆ ಒಳ್ಳೆ ರುಚಿ ಗೊತ್ತೇನ್ರಿ?

  ಕಡಿಮೆ ಅವಧಿ ಹೆಚ್ಚಿನ ತಯಾರಿ....



ಚಂದ್ರಿಕಾ ಹೆಗಡೆ