19 ಮೇ 2011

ರೈಸ್:

ತರಕಾರಿ ಮಿಶ್ರಿತ, ಜೀರಾ ರೈಸ್:

ಅಗತ್ಯ: 
             ಅನ್ನ- ೩ ಬಟ್ಟಲು  
            1 ಕ್ಯಾಪ್ಸಿಕಂ- ಹೆಚ್ಚಿದ್ದು
            2 ಎಳೆ ಜೋಳ -ಹೆಚ್ಚಿದ್ದು
            ಕ್ಯಾರೆಟ್- ೧/೨ ತುರಿದದ್ದು 
            ಹಸಿಮೆಣಸಿನ ಕಾಯಿ-೩
            ಜೀರಿಗೆ ೨ ಚಮಚ
            ಎಣ್ಣೆ - ೪ ಚಮಚ
             ಉಪ್ಪು- ರುಚಿಗೆ ತಕ್ಕಸ್ಟು
             ನಿಂಬೆ ರಸ - ೧ ಚಮಚ

ಶುರು:
           ಬಾಣಲೆಗೆ ಎಣ್ಣೆ  ಹಾಕಿ ಬಿಸಿ ಮಾಡಿ , ಅದಕ್ಕೆ ಜೀರಿಗೆ ಹಾಕಿ,ಎಳೆ ಜೋಳವನ್ನು  ಹಾಕಿ ಹುರಿಯಿರಿ , ಅರ್ಧ ಬೆಂದ ಮೇಲೆ ಅದಕ್ಕೆ 
            ಕ್ಯಾಪ್ಸಿಕಂ , ಹಸಿಮೆಣಸು ಹಾಕಿ ಹುರಿಯಿರಿ, ನಂತರ ಸ್ವಲ್ಪ ಉಪ್ಪು ಸೇರಿಸಿ ೧ ನಿಮಿಷ ಬೇಯಿಸಿ, ಅನ್ನ ಮಿಶ್ರಣ ಮಾಡಿ. ಕ್ಯಾರೆಟ್ ತುರಿ ಸೇರಿಸಿ... ಗ್ಯಾಸ್ ಆಫ್  ಮಾಡಿ. ನಿಂಬೆರಸ ರುಚಿಗೆ ತಕ್ಕಸ್ಟು ಉಪ್ಪು ಸೇರಿಸಿ ...
       ಈ ಅನ್ನ ವನ್ನು ಮೊಸರು ಸವತೆಕಾಯಿ ಸಲಾಡ್, ಇಲ್ಲವೇ ಯಾವದಾದರೂ ಗ್ರೆವಿಯ ಜೊತೆ ಸವಿಯ ಬಹುದು .
         

ಸರಳತೆಗೆ ಪ್ರಾಧಾನ್ಯ:
                             


ಚಂದ್ರಿಕಾ ಹೆಗಡೆ

ಮೆಂತೆ ಜ್ಯೂಸ್:!

 ಅಗತ್ಯ:
          ನೆನಸಿದ ಮೆಂತೆ ೧/೪ ಬಟ್ಟಲು
           ಬೆಲ್ಲ- ರುಚಿಗೆ
          ಚಿಟಿಕೆ ಉಪ್ಪು
          ಏಲಕ್ಕಿ 
ಗೀರ್ರ್ರ್ :  
                   ಮಿಕ್ಸಿ ಜಾರಿನಲ್ಲಿ ಮೆಂತೆ ನೀರು ಹಾಕಿ ತರಿ ತರಿಯಾಗಿ ರುಬ್ಬಿ . ಪಾತ್ರೆಗೆ ಹಾಕಿ ಹೆಚ್ಚಿಗೆ ನೀರು ಸೇರಿಸಿ ಬೆಲ್ಲ ಏಲಕ್ಕಿ ಪುಡಿ ಚಿಟಿಕೆ ಉಪ್ಪು ಹಾಕಿ .....
                                 ಇದರಲ್ಲೇ ಇನ್ನೊಂದು ವಿಧಾನ: ಮೆಂತೆಯನ್ನು ಬೇಯಿಸಿ ರುಬ್ಬಿ ಬೆಲ್ಲ ಏಲಕ್ಕಿ ಉಪ್ಪು ಹಾಕಿ ಮಾಡಬಹುದು. ಈ ವಿಧಾನದಲ್ಲಿ ಮೆಂತೆಯ  ಕಹಿ ರುಚಿ ಸಿಗುವದಿಲ್ಲ...
                     ಈ ಪಾನೀಯ ಕೂಡ ಆಯಾಸ ಪರಿಹಾರಕ್ಕಾಗಿ ಮಲೆನಾಡಿನಲ್ಲಿ ಬೇಸಿಗೆಯ ಸಮಯದಲ್ಲಿ , ಸದಾ ಸಿದ್ದ ಮಾಡುತ್ತಿದ್ದ ಜನಪದೀಯ ಪಾನೀಯ ಎನ್ನಬಹುದು....
                   

                                ರಸವೆ ನಿನಗಿದೋ ಧನ್ಯವಾದ!
                
      
                          ಕೂಲ್
                                      ಚಂದ್ರಿಕಾ ಹೆಗಡೆ

ಹೆಸರು ಕಾಳಿನ ....ಆಸ್ರಿಗೆ....

ಅಗತ್ಯ:
           ನೆನಸಿ ಮೊಳಕೆ ಕಟ್ಟಿದ ಹೆಸರು ಕಾಳು ೧/೨ ಕಪ್
           ಬೆಲ್ಲ- ರುಚಿಗೆ ತಕ್ಕಸ್ಟು
           ಉಪ್ಪು- ಸವುಳು ಹೊಡೆಯಲು:) 
           ಏಲಕ್ಕಿ ಪುಡಿ- ಬೇಕೆನಿಸಿದರೆ...
ಪವರ್ ಇದ್ದು ಅಲ್ದ?
                      ಹೆಸರು ಕಾಳನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ
                           ಬೆಲ್ಲ , ನೀರು, ಉಪ್ಪು ಸೇರಿಸಿ.... ಬೇಕಾದ್ರೆ ಏಲಕ್ಕಿ ಪುಡಿ ಹಾಕಿ...ಇದನ್ನು ಇನ್ನೊಂದು ವಿಧಾನದಲ್ಲೂ ಮಾಡುತ್ತಾರೆ: ಹೆಸರು ಕಾಳನ್ನು ಬೇಯಿಸಿ , ಅದನ್ನು ರುಬ್ಬಿ.... ಆದರೆ ಹಸಿಯಾಗಿ ಬಳಸಿದರೆ ಆರೋಗ್ಯದ ದೃಷ್ಟಿಯಿಂದ ಹಿತಕರವೆಂದು ನಾನು ಹಸಿ ಹೆಸರು ಬಳಸಿದ್ದೇನೆ.
ಪಕ್ಕನೆ ಇದನ್ನು ಮಾಡುವದು ನೆನಪಾಗಿದ್ದು: 
ಸುಮಾರು ಎಪ್ರಿಲ್ ಮೇ ತಿಂಗಳು ಗಳಲ್ಲಿ  ಘಟ್ಟದ  ಕೆಳಗಿನಿಂದ ಕೆಲಸ ಮಾಡುವದಕ್ಕೆ ಘಟ್ಟದ ಮೇಲೆ ಬರುತ್ತಿದ್ದ  ಆಳುಗಳಿಗೆ ಆಯಾಸ ಪರಿಹಾರಕ್ಕೆಂದು ಮಾಡುತ್ತಿದ್ದ ಪಾನೀಯ...ಇದಕ್ಕೆ ಬಳಸುವ ಹೆಸರು ಕಾಳು , ಬೆಲ್ಲ ದೇಹಕ್ಕೆ ನವ ಉಲ್ಲಾಸವನ್ನು ತರುವದಂತೂ ನಿಜ! ಹೀಗೆ ನೆನಪಾಗಿ ತಯಾರಿಸಿದೆ....
                 ಸರಳ ರಸಾಸ್ವಾದನೆ ಮತ್ತೂ ಹಿತಕರ! ದೇಹಕ್ಕೂ ... ಮನಸಿಗೂ...
                 
                     ರಸಾಸ್ವಾದನೆಗೂ ಬೇಕು ಮನಸು.....
                                  ರಸೋಲ್ಲಾಸದಲ್ಲಿ:
                                                           ಚಂದ್ರಿಕಾ ಹೆಗಡೆ

13 ಮೇ 2011

ಸಿಹಿ ಗೆಣಸಿನ ಪರೋಟ

ಅಗತ್ಯ:
             ಸಿಹಿ ಗೆಣಸು ಬೇಯಿಸಿ  ರುಬ್ಬಿದ್ದು- ೨ ಕಪ್
             ಸಕ್ಕರೆ ಪುಡಿ ೫  -೬ ಚಮಚ( ಬೆಲ್ಲ ಹಾಕಿದರೂ ಒಳ್ಳೇದೆ!)
             ಗೋದಿ ಹಿಟ್ಟು  ೪ ಕಪ್
              ಏಲಕ್ಕಿ ಪುಡಿ ೧/೨ ಟೀ ಚಮಚ
             ಹಿಟ್ಟಿಗೆ ರುಚಿಗೆ ತಕ್ಕಸ್ಟು ಉಪ್ಪು.
             ತುಪ್ಪ
             ಹಿಟ್ಟು ಕಲೆಸುವದಕ್ಕೆ ೫-೬ ಚಮಚ ಬಿಸಿ ಮಾಡಿದ ಎಣ್ಣೆ.

ಪಟಾ ಪಟ್ :
ಗೋದಿ ಹಿಟ್ಟನ್ನೇ ಆದಷ್ಟು ಬಳಸಿ....
   ಸರಿ ಹಿಟ್ಟನ್ನು ಬಿಸಿ ಎಣ್ಣೆ, ಅಗತ್ಯಕ್ಕೆ ತಕ್ಕಸ್ಟು ನೀರು, ಉಪ್ಪು  ಸೇರಿಸಿ ಕಲೆಸಿಕೊಳ್ಳಿ. ಆಯ್ತಾ? ಹುಂ... ಈಗ ಗೆಣಸಿನ ಮಿಶ್ರಣಕ್ಕೆ ಎಲ್ಲಕ್ಕಿ ಪುಡಿ, ಸಕ್ಕರೆ ಪುಡಿ ಸೇರಿಸಿ...
ತವಾ  ಇಡಿ ಬೇಗ..... 
              ಗೋದಿ ಹಿಟ್ಟಿನ ಸಣ್ಣ ಉಂಡೆ ... ಅಡಿಕೆ ಗಾತ್ರದ್ದು... ಮಾಡಿ... ತಟ್ಟಿಸಿ... ೨ ಚಿಕ್ಕ ಚಿಕ್ಕ ಚಪಾತಿಯ ತರಹ
              ಎರಡರ ಮಧ್ಯ ಈ ಗೆಣಸಿನ ಮಿಶ್ರಣ  ಸೇರಿಸಿ... ತುದಿಯನ್ನು ಬೆರಳಿನಿಂದ ಮಡಚಿ... ಇಲ್ಲವೇ ನಿಧಾನವಾಗಿ ಲಟ್ಟಿಸಿ...
ತವಾ ಕಾದಿದ್ರೆ ಅದಕ್ಕೆ ಈ ಪರೋಟ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ...
                         ಅದಕ್ಕೆ ತುಪ್ಪ ಸೇರಿಸಿ ತಿನ್ನಿ... ಚಂದ್ರಿಕಾ ಥ್ಯಾಂಕ್ಸ್... ಅನ್ನಿ!

........ಸವಿಯ ಸಮಯ...
                                      ಚಂದ್ರಿಕಾ ಹೆಗಡೆ

ಹೆಸರು ಕಾಳು ದೋಸೆ

ಕಾಲೇಜಿನಲ್ಲಿಯ ಒಬ್ಬರು ಸಹೋದ್ಯೋಗಿಗಳು ಹೇಳಿದ್ದು ಕೇಳಿ ಮನೆಯಲ್ಲಿ ಮಾಡಿದ್ದು.....



ಅಗತ್ಯ:  ಹೆಸರುಕಾಳು ನೆನಸಿದ್ದು - ೨ ಕಪ್
            ಅಕ್ಕಿ ನೆನಸಿದ್ದು             - ೧ ಕಪ್
            ಚಿಟಿಕೆ ಸೋಡಾ
            ಈರುಳ್ಳಿ  ಸಣ್ಣಗೆ ಹೆಚ್ಚಿದ್ದು - ೧ ಕಪ್
           ಸ್ವಲ್ಪ ಜೀರಿಗೆ, ಕೊತ್ತಂಬರಿ ಸೊಪ್ಪು,ರುಚಿಗೆ ಉಪ್ಪು.

ರೆಡಿ!:
         ರಾತ್ರಿ ನೆನೆ ಹಾಕಿದ ಅಕ್ಕಿ, ಹೆಸರು ಕಾಳನ್ನು ಬೆಳಿಗ್ಗೆ ಜೀರಿಗೆ,ಕೊತ್ತಂಬರಿ ಸೊಪ್ಪು, ಸೇರಿಸಿ ರುಬ್ಬಿ.  ಸ್ವಲ್ಪ  ಸೋಡಾ ಬೆರೆಸಿ ಉಪ್ಪು ಸೇರಿಸಿ.
ತವಾದ ಮೇಲೆ ಸ್ವಲ್ಪ ಎಣ್ಣೆ ಸವರಿ ಮಾಮೂಲು ದೋಸೆ ತರಹ ಹುಯ್ದು...ಮೇಲೆ ಈರುಳ್ಳಿ  ಹಾಕಿ. ರೆಡಿ...
ಇದರ ಜೊತೆ ಮಧ್ಯದಲ್ಲಿ ಉಪ್ಪಿಟ್ಟನ್ನು ಹಾಕಿ "ಪೆಸರಿಟ್ಟು" ಮಾಡಬಹುದು ಅಂತ ಆ ಸಹೋದ್ಯೋಗಿ  ಹೇಳಿದ್ದರು... ಯಾಕೋ ನನಗೆ ಅಸ್ಟು ಆ ಕೊಂಬಿನೆಶನ್ ಇಷ್ಟ  ಆಗಲಿಲ್ಲ... ಅದಕ್ಕೆ ಕೇವಲ ಹೆಸರು ಕಾಳು ದೋಸೆ...ಕಾಯಿ ಚಟ್ನಿ ಜೊತೆ ಸೂಪರ್....
ನನ್ನ "ಉದಯ್"  ಇನ್ನು ಮುಂದೆ ಮಾಡಬಹುದು ಅಂತ ಹೇಳಿದ್ದಾನೆ. ಅದಕ್ಕೆ ಧೈರ್ಯದಿಂದ  ಬರೆಯುತ್ತಿದ್ದೇನೆ!



ಜೀವನದ ಜೊತೆ ಪ್ರೀತಿಯ ಹೆಜ್ಜೆ....

                                          ಚಂದ್ರಿಕಾ ಹೆಗಡೆ

05 ಏಪ್ರಿಲ್ 2011

ರವೆ ಇಡ್ಲಿ...

ಅಗತ್ಯ:
          ಇಡ್ಲಿ ರವೆ ೩ ಕಪ್
           ಮೊಸರು ೧/೨ ಲೀಟರ್..
           ಹಸಿ  ಮೆಣಸು  ೨-೩
           ಕೊತ್ತಂಬರಿ ಸೊಪ್ಪು ೧/೨ ಕಟ್ಟು
            ಕರಿಬೇವು ೧೦-೧೨ ಎಲೆಗಳು
            ಕ್ಯಾರೆಟ್ ತುರಿದದ್ದು ೧/೨ ಬಟ್ಟಲು
           ರುಚಿಗೆ ಉಪ್ಪು... ಸ್ವಲ್ಪ ಅಡುಗೆ ಸೋಡಾ,  ೨-೩ ಚಮಚ ಎಣ್ಣೆ. ಸಾಸಿವೆ, ಕಡಲೆ ಬೇಳೆ ಒಗ್ಗರಣೆಗೆ.


ಒಲೆ ಹೊತ್ತಿಸಿ:
                     ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಕಡಲೆಬೇಳೆ ಹಾಕಿ , ರವೆಯನ್ನು ಸ್ವಲ್ಪ ಹುರಿದುಕೊಳ್ಳಿ. ಆರಿದ ಮೇಲೆ ಅದಕ್ಕೆ ಮೊಸರು ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚ್ಚಿ ಹಾಕಿ. ಉಪ್ಪು ಸೋಡಾ, ಹೆಚ್ಚಿದ ಹಸಿಮೆಣಸು, ಕರಿಬೇವು ಸೇರಿಸಿ. ೧೦ ನಿಮಿಷ ಹಾಗೆ ಬಿಡಿ.
 ಇಡ್ಲಿ ಕುಕ್ಕರ್ ಪ್ಲೇಟ್ ನಲ್ಲಿ ಸ್ವಲ್ಪ ಎಣ್ಣೆ ಹಚ್ಚಿ ಮೊದಲು ಕ್ಯಾರಟ್ ತುರಿ ಸ್ವಲ್ಪ  ಇಡಿ ಆ ನಂತರ ಇಡ್ಲಿ ಹಿಟ್ಟು ಹಾಕಿ . ಬೇಯಿಸಿ.
ಹೋಟೆಲ್ ಸುವಾಸನೆ ನಿಮ್ಮ ಮನೆಯಲ್ಲಿ:)!
ಇದರ ಜೊತೆಯಲ್ಲಿ ಸಾಂಬಾರ್ ಇಲ್ಲವೇ ಕಾಯಿ ಚಟ್ನಿ ... ಸವಿದು ನೋಡಿ!



    
     
             ಅಡುಗೆ ಮನೆಯಲ್ಲಿ ಎಸ್ಟೊಂದು ವೈವಿಧ್ಯ ಎಂಬ ....ಚಿಂತನೆಯಲ್ಲಿ...
                                                                                                    ಚಂದ್ರಿಕಾ ಹೆಗಡೆ

04 ಏಪ್ರಿಲ್ 2011

ಸಿಹಿ

ಚಾಕಲೇಟ್ ರೋಲ್ಸ್
ಅಗತ್ಯ :
             ೧/೨ ಪ್ಯಾಕ್ ಮ್ಯಾರಿ ಬಿಸ್ಕೆಟ್  ಪುಡಿ ಮಾಡಿಟ್ಟುಕೊಳ್ಳಿ.
             ಕೋಕ ಪೌಡರ್ ೨-೩ ಚಮಚ
               ೧/೨ ಕಪ್ ಹಾಲು
              ೧ ಕಪ್ ಒಣ ಕೊಬ್ಬರಿ ತುರಿದು ಪುಡಿ ಮಾಡಿದ್ದು.
              ೩/೪ ಪುಡಿ ಮಾಡಿದ ಸಕ್ಕರೆ
               ೨-೩ ಚಮಚ ಬೆಣ್ಣೆ
               ೧ ಚಮಚ ಪುಡಿ ಮಾಡಿದ ಏಲಕ್ಕಿ.

ಮುಂದಿನ ಹೆಜ್ಜೆ!
               ಬಿಸ್ಕೆಟ್ ಪುಡಿ ಕೋಕ ಪುಡಿ, ಹಾಲು ಸ್ವಲ್ಪ ಸಕ್ಕರೆ ಪುಡಿ (೨ ಚಮಚ) ಎಲ್ಲವನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಚಪಾತಿಯ ಹಾಗೆ ಲಟ್ಟಿಸಿ.
ಕೊಬ್ಬರಿ ತುರಿ ಉಳಿದ ಸಕ್ಕರೆ ಪುಡಿ, ಬೆಣ್ಣೆ ,ಏಲಕ್ಕಿ ಪುಡಿ ಸೇರಿಸಿ ಕಲಸಿ. ಇದು ಪುಡಿ ತರಹ ಉಳಿಯದ ಹಾಗೆ ಬೆಣ್ಣೆ ಸೇರಿಸಿ....
ಚಪಾತಿಯ ಆಕಾರದ ಮೊದಲಿನ ಹದಕ್ಕೆ ಈಗ ತಯಾರಿಸಿದ ಮಿಕ್ಸ್ ಎಲ್ಲ ಕಡೆಯಲ್ಲೂ ಸಮಾನವಾಗಿ ಹರಡಿ..ಈಗ ಆ ಚಪಾತಿಯ ಆಕಾರವನ್ನು ರೋಲ್  ತರಹ ಸುತ್ತಿ. ಸಿಲಿಂಡರ್ ಆಕಾರಕ್ಕೆ ಕತ್ತರಿಸಿ.. fridge ನಲ್ಲಿ    ೩೦-೪೫ ನಿಮಿಷ ಇಡಿ..




 ಕಾಯ್ತಾ ಇರಿ.... ಸೂಪರ್... ಅನ್ನಿ... 


 ಯುಗಾದಿಯಲ್ಲಿ .... ಸಿಹಿ ಸಂಭ್ರಮ ....
                            ಚಂದ್ರಿಕಾ ಹೆಗಡೆ