ತರಕಾರಿ ಮಿಶ್ರಿತ, ಜೀರಾ ರೈಸ್:
ಅಗತ್ಯ:
ಅನ್ನ- ೩ ಬಟ್ಟಲು
1 ಕ್ಯಾಪ್ಸಿಕಂ- ಹೆಚ್ಚಿದ್ದು
2 ಎಳೆ ಜೋಳ -ಹೆಚ್ಚಿದ್ದು
ಕ್ಯಾರೆಟ್- ೧/೨ ತುರಿದದ್ದು
ಹಸಿಮೆಣಸಿನ ಕಾಯಿ-೩
ಜೀರಿಗೆ ೨ ಚಮಚ
ಎಣ್ಣೆ - ೪ ಚಮಚ
ಉಪ್ಪು- ರುಚಿಗೆ ತಕ್ಕಸ್ಟು
ನಿಂಬೆ ರಸ - ೧ ಚಮಚ
ಶುರು:
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ , ಅದಕ್ಕೆ ಜೀರಿಗೆ ಹಾಕಿ,ಎಳೆ ಜೋಳವನ್ನು ಹಾಕಿ ಹುರಿಯಿರಿ , ಅರ್ಧ ಬೆಂದ ಮೇಲೆ ಅದಕ್ಕೆ
ಕ್ಯಾಪ್ಸಿಕಂ , ಹಸಿಮೆಣಸು ಹಾಕಿ ಹುರಿಯಿರಿ, ನಂತರ ಸ್ವಲ್ಪ ಉಪ್ಪು ಸೇರಿಸಿ ೧ ನಿಮಿಷ ಬೇಯಿಸಿ, ಅನ್ನ ಮಿಶ್ರಣ ಮಾಡಿ. ಕ್ಯಾರೆಟ್ ತುರಿ ಸೇರಿಸಿ... ಗ್ಯಾಸ್ ಆಫ್ ಮಾಡಿ. ನಿಂಬೆರಸ ರುಚಿಗೆ ತಕ್ಕಸ್ಟು ಉಪ್ಪು ಸೇರಿಸಿ ...
ಈ ಅನ್ನ ವನ್ನು ಮೊಸರು ಸವತೆಕಾಯಿ ಸಲಾಡ್, ಇಲ್ಲವೇ ಯಾವದಾದರೂ ಗ್ರೆವಿಯ ಜೊತೆ ಸವಿಯ ಬಹುದು .
ಸರಳತೆಗೆ ಪ್ರಾಧಾನ್ಯ:
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ