19 ಮೇ 2011

ಹೆಸರು ಕಾಳಿನ ....ಆಸ್ರಿಗೆ....

ಅಗತ್ಯ:
           ನೆನಸಿ ಮೊಳಕೆ ಕಟ್ಟಿದ ಹೆಸರು ಕಾಳು ೧/೨ ಕಪ್
           ಬೆಲ್ಲ- ರುಚಿಗೆ ತಕ್ಕಸ್ಟು
           ಉಪ್ಪು- ಸವುಳು ಹೊಡೆಯಲು:) 
           ಏಲಕ್ಕಿ ಪುಡಿ- ಬೇಕೆನಿಸಿದರೆ...
ಪವರ್ ಇದ್ದು ಅಲ್ದ?
                      ಹೆಸರು ಕಾಳನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ
                           ಬೆಲ್ಲ , ನೀರು, ಉಪ್ಪು ಸೇರಿಸಿ.... ಬೇಕಾದ್ರೆ ಏಲಕ್ಕಿ ಪುಡಿ ಹಾಕಿ...ಇದನ್ನು ಇನ್ನೊಂದು ವಿಧಾನದಲ್ಲೂ ಮಾಡುತ್ತಾರೆ: ಹೆಸರು ಕಾಳನ್ನು ಬೇಯಿಸಿ , ಅದನ್ನು ರುಬ್ಬಿ.... ಆದರೆ ಹಸಿಯಾಗಿ ಬಳಸಿದರೆ ಆರೋಗ್ಯದ ದೃಷ್ಟಿಯಿಂದ ಹಿತಕರವೆಂದು ನಾನು ಹಸಿ ಹೆಸರು ಬಳಸಿದ್ದೇನೆ.
ಪಕ್ಕನೆ ಇದನ್ನು ಮಾಡುವದು ನೆನಪಾಗಿದ್ದು: 
ಸುಮಾರು ಎಪ್ರಿಲ್ ಮೇ ತಿಂಗಳು ಗಳಲ್ಲಿ  ಘಟ್ಟದ  ಕೆಳಗಿನಿಂದ ಕೆಲಸ ಮಾಡುವದಕ್ಕೆ ಘಟ್ಟದ ಮೇಲೆ ಬರುತ್ತಿದ್ದ  ಆಳುಗಳಿಗೆ ಆಯಾಸ ಪರಿಹಾರಕ್ಕೆಂದು ಮಾಡುತ್ತಿದ್ದ ಪಾನೀಯ...ಇದಕ್ಕೆ ಬಳಸುವ ಹೆಸರು ಕಾಳು , ಬೆಲ್ಲ ದೇಹಕ್ಕೆ ನವ ಉಲ್ಲಾಸವನ್ನು ತರುವದಂತೂ ನಿಜ! ಹೀಗೆ ನೆನಪಾಗಿ ತಯಾರಿಸಿದೆ....
                 ಸರಳ ರಸಾಸ್ವಾದನೆ ಮತ್ತೂ ಹಿತಕರ! ದೇಹಕ್ಕೂ ... ಮನಸಿಗೂ...
                 
                     ರಸಾಸ್ವಾದನೆಗೂ ಬೇಕು ಮನಸು.....
                                  ರಸೋಲ್ಲಾಸದಲ್ಲಿ:
                                                           ಚಂದ್ರಿಕಾ ಹೆಗಡೆ

2 ಕಾಮೆಂಟ್‌ಗಳು: