14 ಏಪ್ರಿಲ್ 2012

ಮಾವಿನ ಕಾಯಿ ಭಜ್ಜಿ

ಮಾವಿನ ಕಾಯಿ -೧ ಬೇಯಿಸಿದ್ದು
ತೆಂಗಿನ ತುರಿ- ೧/೨ ಬಟ್ಟಲು
ಮೊಸರು- ೧/೨ ಬಟ್ಟಲು
ಉಪ್ಪು
ಸಕ್ಕರೆ- ೧/೨ ಚಮಚ
ಒಗ್ಗರಣೆಗೆ- ೧ ಚಮಚ ಎಣ್ಣೆ, ಒಣ ಮೆಣಸು -೧  ಸಾಸಿವೆ - ೧ಚಮಚ , ಇಂಗು
ಹಸಿಮೆಣಸಿನ ಕಾಯಿ- ೨


ತೆಂಗಿನ ತುರಿ, ಹಸಿ ಮೆಣಸಿನ ಕಾಯಿ ರುಬ್ಬಿ.
ಬೇಯಿಸಿಟ್ಟುಕೊಂಡ ಮಾವಿನ ಕಾಯಿಯನ್ನು ಹಿಸುಕಿಡಿ . ಇದಕ್ಕೆ ಮೊಸರು, ರುಬ್ಬಿಟ್ಟ ಮಿಶ್ರಣ ಸಕ್ಕರೆ ಉಪ್ಪು ಸೇರಿಸಿ.
ಇದಕ್ಕೆ ಸಾಸಿವೆ , ಒಣ ಮೆಣಸು, ಇಂಗಿನ ಒಗ್ಗರಣೆ ನೀಡಿ.

ಬಿಸಿಲ ಬೇಗೆಗೆ ತಂಪು ತಂಪಾದ ಅಡುಗೆ!



ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ