14 ಏಪ್ರಿಲ್ 2012

ಹಲಸಿನ ಕಾಯಿ ಹುಳಿ

ಹಲಸಿನ ತೊಳೆ - ೩ ಬಟ್ಟಲು 
ತೆಂಗಿನ ತುರಿ - ೧ ಬಟ್ಟಲು
ಮಜ್ಜಿಗೆ - ೧ ೧/೨ ಬಟ್ಟಲು
ಹಸಿ ಮೆಣಸಿನ ಕಾಯಿ - ೩
ಬೆಳ್ಳುಳ್ಳಿ ( ಇಷ್ಟಪಡುವದಾದರೆ) - ೫ ಎಸಳು 
ಕೊತ್ತಂಬರಿ ಬೀಜ- ೧/೨ ಚಮಚ
ಸಾಸಿವೆ- ೧ ಚಮಚ 
ಎಣ್ಣೆ- ೩ ಚಮಚ 
ಉಪ್ಪು
ಬೆಲ್ಲ- ೧ ಚಮಚ 
ಅರಿಸಿನ - ೧ಚಮಚ 


ಮಾಡುವ ವಿಧಾನ :

ಹಲಸಿನ ತೊಳೆಯನ್ನು ಅರಿಸಿನ ಹಾಕಿ  ಬೇಯಿಸಿ. 
೧ ಚಮಚ ಎಣ್ಣೆಯಲ್ಲಿ ಹಸಿಮೆಣಸಿನ ಕಾಯಿ, ಕೊತ್ತಂಬರಿ ಬೀಜ , ಹುರಿಯಿರಿ. ಇದನ್ನು ತೆಂಗಿನ ತುರಿ ಹಸಿ ಸಾಸುವೆ ಜೊತೆ ರುಬ್ಬಿ.
ರುಬ್ಬಿದ ಮಿಶ್ರಣವನ್ನು ಬೇಯಿಸಿಟ್ಟ ತೊಳೆಯ ಜೊತೆ ಹಾಕಿ ಕುದಿಸಿ.
ಉಪ್ಪು ಸೇರಿಸಿ.
೨ ಕುದಿ ಬಂದ ಮೇಲೆ ಮಜ್ಜಿಗೆ, ಬೆಲ್ಲ  ಸೇರಿಸಿ ೧ ನಿಮಿಷ ಕುದಿಸಿ .
 ೨ ಚಮಚ ಎಣ್ಣೆಯಲ್ಲಿ ಬೆಳ್ಳುಳ್ಳಿ ಹುರಿದು ಈ ಹುಳಿಗೆ ಸೇರಿಸಿ.



ಅಗಾಧ ರುಚಿ....!




ಚಂದ್ರಿಕಾ ಹೆಗಡೆ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ