14 ಏಪ್ರಿಲ್ 2012

ಕರಿಬೇವಿನ ಚಟ್ನಿ ಪುಡಿ

ಕರಿ ಬೇವು- ೨೦ ಎಳೆ
ಕಡಲೆ ಬೇಳೆ- ೧/೪ ಕಪ್
ಅಚ್ಚಖಾರದ ಪುಡಿ- ೨ ಚಮಚ 
ಹುಳಿಸೆ ಹಣ್ಣು ಸ್ವಲ್ಪ -(ಅಡಿಕೆ ಗಾತ್ರ )
ಉಪ್ಪು
ಸಕ್ಕರೆ - ೧ ಚಮಚ 
ಅರಿಸಿನ - ೧ ಚಮಚ 


ಕರಿ ಬೇವನ್ನು ಹುರಿದುಕೊಳ್ಳಿ. ಪುಡಿ ಆಗುವ ಹಾಗೆ.
(ಓವೆನ್ ನಲ್ಲಿ- ೩ ನಿಮಿಷ ಹುರಿದರೆ ಸಾಕು. ಆದರೆ ಪ್ರತಿ ೧ ನಿಮಿಷಕ್ಕೆ ತೆಗೆದು ಕೈಯಾಡಿಸಬೇಕು.)
ಕಡಲೆ ಬೇಳೆ ಹುರಿದಿಡಿ.
ಆನಂತರ ಎಲ್ಲವನ್ನು ಸೇರಿಸಿ ಪುಡಿ ಮಾಡಿ.

ದೋಸೆ/ ಚಪಾತಿ/ ರೊಟ್ಟಿ/ ಇಡ್ಲಿ ಜೊತೆಗೆ ಈ ಚಟ್ನಿ ಪುಡಿಗೆ    ಮೊಸರನ್ನು ಸೇರಿಸಿ  ಸೇವಿಸಿ.


ಚಂದ್ರಿಕಾ ಹೆಗಡೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ