29 ಡಿಸೆಂಬರ್ 2011

ಮರಗೆಣಸಿನ ಪಲ್ಯ- ಭಾಜಿ

ಮರಗೆಣಸು- ಬೇಯಿಸಿದ್ದು-೨ ಹಿಸುಕಿಡಿ.
ಹಸಿಮೆಣಸು-೨ ಹೆಚ್ಚಿದ್ದು
ಈರುಳ್ಳಿ-೨ ಹೆಚ್ಚಿಡಿ.
ಅರಿಸಿನ
ಸಾಸಿವೆ-೧ ಚಮಚ
ಎಣ್ಣೆ-೨ ಚಮಚ
ಉಪ್ಪು
ತೆಂಗಿನ ತುರಿ- ೧/೪ ಬಟ್ಟಲು
ಕರಿಬೇವು- ೫-೬ ಎಲೆಗಳು
ನಿಂಬೆ ರಸ -1ಚಮಚ






ಮರಗೆಣಸಿನ ಗಟ್ಟಿ ಸಿಪ್ಪೆಯನ್ನು ತೆಗೆದು. ಬೇಯಿಸಿ. ಚೆನ್ನಾಗಿ ಬೆಂದ ಗೆಣಸನ್ನು ಹಿಸುಕಿಡಿ.
ಬಾಣಲೆಗೆ ಎಣ್ಣೆ ಸಾಸಿವೆ, ಈರುಳ್ಳಿ ಹಸಿಮೆಣಸು ಕರಿಬೇವನ್ನು ಹಾಕಿ. ಈರುಳ್ಳಿ ಬೆಂದ ಮೇಲೆ ಹಿಸುಕಿಟ್ಟ ಗೆಣಸು+ ಉಪ್ಪು ಸೇರಿಸಿ.
ಪಲ್ಯವಾದರೆ ನೀರಿನ ಅಗತ್ಯ ಇಲ್ಲ. ರೊಟ್ಟಿ ಚಪಾತಿಗೆ ಭಾಜಿ ಮಾಡುವದಾದರೆ ೧/೨ ಬಟ್ಟಲು ನೀರನ್ನು ಸೇರಿಸಿ.
ಕೊನೆಯಲ್ಲಿ ತೆಂಗಿನ  ತುರಿ+ ನಿಂಬೆ ರಸ ಸೇರಿಸಿ.

ಸ್ವಾದ.... ಅಡುಗೆ ಮನೆಯಲ್ಲಿ....



ಚಂದ್ರಿಕಾ ಹೆಗಡೆ

28 ಡಿಸೆಂಬರ್ 2011

ರೊಟ್ಟಿ -೧

ಮೈದಾ- ೧ ಕಪ್
ಚಿರೋಟಿ ರವ- ೧/೨ ಕಪ್
ಅಕ್ಕಿ ಹಿಟ್ಟು- ೧/೪ ಕಪ್
ಹಸಿಮೆಣಸು-೨
ಕರಿಬೇವು- ೫-೬ ಎಲೆಗಳು
ಈರುಳ್ಳಿ ಹೆಚ್ಚಿದ್ದು ೧/೨ ಕಪ್
ಎಣ್ಣೆ ಬೇಯಿಸಲು
ಉಪ್ಪು
ಮಜ್ಜಿಗೆ ೧/೨ ಕಪ್

ಎಲ್ಲ ಹಿಟ್ಟು + ರವ+ ಹಸಿಮೆಣಸು- ಕರಿಬೇವನ್ನು ಹೆಚ್ಚಿ  + ಉಪ್ಪು+ ಈರುಳ್ಳಿ  + ಮಜ್ಜಿಗೆ ಸೇರಿಸಿ ಕಲಸಿ. ಇನ್ನು ನೀರಿನ ಅಂಶ ಬೇಕೆನಿಸಿದರೆ ನೀರನ್ನು ಸೇರಿಸಿ. ಉಂಡೆ ಮಾಡಿ  ಕೈಗೆ ಎಣ್ಣೆ ಹಚ್ಚಿ  ರೊಟ್ಟಿ ತಟ್ಟಿ. ತವಾದ ಮೇಲೆ ಹಾಕಿ ಎನ್ನೆಯೊಂದಿಗೆ ಬೇಯಿಸಿ.


ರೊಟ್ಟಿ...ತಟ್ಟಿ....
ರುಚಿ ... ಎನಿಸುತ್ತೆ... ನಾಲಗೆ  ತಟ್ಟಿ...ತಟ್ಟಿ....!


ಚಂದ್ರಿಕಾ  ಹೆಗಡೆ 

21 ಡಿಸೆಂಬರ್ 2011

ಸೀಮೆ ಬದನೆ ಕಾಯಿ ಪಲ್ಯ

ಸೀಮೆ ಬದನೆ ಕಾಯಿ ಹೋಳುಗಳು-೧ ಕಪ್
ಈರುಳ್ಳಿ- ೧/೨ ಕಪ್ ಹೋಳುಗಳು
ಸಾಂಬಾರ್ ಪುಡಿ- ೨ ಚಮಚ
ಉಪ್ಪು
ಅರಿಸಿನ
ಕರಿಬೇವು
ಎಣ್ಣೆ ೨ ಚಮಚ


ಸೀಮೆ ಬದನೆ ಕಾಯಿ ಸಿಪ್ಪೆ ತೆಗೆದು ಹೋಳುಗಳನ್ನಾಗಿ ಮಾಡಿ.
 ಪಾನ್ ಗೆ ಎಣ್ಣೆ ಹಾಕಿ ಬಿಸಿಯಾಗುವಾಗ  ಸೀಮೆ ಬದನೆ ಹೋಳುಗಳು ಹೆಚ್ಚಿಟ್ಟ ಈರುಳ್ಳಿ ಹಾಕಿ ಬಾಡಿಸಿ.
೧/೪ ಕಪ್ ನೀರಿನ್ನು ಸೇರಿಸಿ ಚೆನ್ನಾಗಿ ಬೇಯಿಸಿ.
೧೦ ನಿಮಿಷ ಕಳೆದ ಮೇಲೆ, ಅರಿಸಿನ ಸಾಂಬಾರ್ ಪುಡಿ, ಕರಿಬೇವು, ಉಪ್ಪು ಸೇರಿಸಿ ನೀರು ಆರುವ ವರೆಗೂ ಇಡಿ.
ಚಪಾತಿ/ ಅನ್ನದ ಜೊತೆ..... ಹಿತ,,,,,,


ಚಂದ್ರಿಕಾ ಹೆಗಡೆ

17 ಡಿಸೆಂಬರ್ 2011

ಬಾದಾಮ್ ಬರ್ಫಿ

ಬಾದಾಮ್ - ೧ ಬಟ್ಟಲು
ಸಕ್ಕರೆ-೨ ಬಟ್ಟಲು
ಏಲಕ್ಕಿ-೫
ಹಾಲು -೧ ಬಟ್ಟಲು
ತುಪ್ಪ- ೩ ಚಮಚ



ಬಾದಾಮ್ ಅನ್ನು  ಹಿಂದಿನ ರಾತ್ರಿಯೇ  ನೆನಸಿಡಿ. ಮರುದಿನ ಸಿಪ್ಪೆಯನ್ನು  ತೆಗೆಯಲು ಸಾಧ್ಯವಾಗುವದು.
ಹಾಲಿನೊಂದಿಗೆ ಸಿಪ್ಪೆ ತೆಗೆದ ಬಾದಾಮ್ ಅನ್ನು ನುಣ್ಣನೆ ರುಬ್ಬಿ.
ಸಕ್ಕರೆಯೊಂದಿಗೆ ಬಾದಾಮ್ ಮಿಶ್ರಣ  ವನ್ನು  ದಪ್ಪ ತಳದ  ಬಾಣಲೆಯಲ್ಲಿ ಹಾಕಿ.
ಇದನ್ನು ಒಲೆಯ ಮೇಲಿಟ್ಟು  ಕಾಯಿಸಿ.
೨೦- ನಿಮಿಷ  ಸಣ್ಣ ಉರಿಯಲ್ಲಿ ಚೆನ್ನಾಗಿ ಗೊಟಾಯಿಸಿ.
ಸ್ವಲ್ಪ ತುಪ್ಪ ಹಾಕಿ.
ಬಾಣಲೆಯಿಂದ ಬರ್ಫಿ ಮಿಶ್ರಣ ಬಿಡುತ್ತಿದ್ದಾಗ  ತುಪ್ಪ ಸವರಿದ ಪ್ಲೇಟ್ ಗೆ  ಹಾಕಿ.
ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ.
chandrika hegde 

16 ಡಿಸೆಂಬರ್ 2011

ಪಾಲಕ್ ಪೀಸ್ ಮಸಾಲ...1

ಪಾಲಕ್- ೪ ಕಟ್ಟು- ಸ್ವಚ್ಚ ಮಾಡಿದ್ದು
ಪೀಸ್  ( ಹಸಿ ಬಟಾಣಿ)- ೧ ಬಟ್ಟಲು( ಬೇಯಿಸಿದ್ದು )
ಈರುಳ್ಳಿ-೨ ಹೆಚ್ಚಿಡಿ.
ಹಸಿಮೆಣಸಿನ ಕಾಯಿ-೨
ಬೆಳ್ಳುಳ್ಳಿ-೫-೬ ಎಸಳು ಸಣ್ಣದಾಗಿ ಹೆಚ್ಚಿ.
ಗರಂ ಮಸಾಲ- ೨ ಚಮಚ
ಸಾಸಿವೆ-೧ ಚಮಚ
ಎಣ್ಣೆ-೨ ಚಮಚ
ಉಪ್ಪು
೧/೨ ಚಮಚ ಸಕ್ಕರೆ
ಅರಿಸಿನ
ಕರಿಬೇವು
ನಿಂಬೆರಸ - ೨ ಚಮಚ


ವಿಧಾನ:

ಪಾಲಕ್ ನೀರಿಲ್ಲದೆ ಬೇಯಿಸಿ. ರುಬ್ಬಿ.

ಬಟಾಣಿಯನ್ನು ಸ್ವಲ್ಪ ನೀರಿನಲ್ಲಿ ೧೦ ನಿಮಿಷ ಬೇಯಿಸಿ.

ಬಾಣಲೆಗೆ  ಎಣ್ಣೆ, ಸಾಸಿವೆ ಹಸಿಮೆಣಸಿನ ಕಾಯಿ, ಅರಿಸಿನ , ಹೆಚ್ಚಿದ  ಈರುಳ್ಳಿ, ಬೆಳ್ಳುಳ್ಳಿ , ಕರಿಬೇವು...ಹಾಕಿ, ಚೆನ್ನಾಗಿ ಹುರಿಯಿರಿ.
ಇದಕ್ಕೆ ಗರಂ ಮಸಾಲ ಹಾಕಿ ಮತ್ತೆ ಮಿಕ್ಸ್ ಮಾಡಿ, ಈಗ ರುಬ್ಬಿದ  ಪಾಲಕ್ , ಬಟಾಣಿ , ಉಪ್ಪು , ಸಕ್ಕರೆ ಹಾಕಿ, ೫-೬ ನಿಮಿಷ ಕುದಿಸಿ.
ಕೊನೆಯಲ್ಲಿ ೨ ಚಮಚ ನಿಂಬೆರಸ ಸೇರಿಸಿ.


ಚಪಾತಿ/ ರೊಟ್ಟಿ/ ದೋಸೆ/ ಅನ್ನಕ್ಕೂ ಸೈ


ಚಂದ್ರಿಕಾ ಹೆಗಡೆ 

15 ಡಿಸೆಂಬರ್ 2011

ಮೆಂತೆ ಸೊಪ್ಪಿನ ಇಡ್ಲಿ

ಉದ್ದಿನ ಬೇಳೆ (ನೆನಸಿದ್ದು)- ೧ ಕಪ್
ಅಕ್ಕಿ ತರಿ- ೨ ಕಪ್
ಮೆಂತೆ ಸೊಪ್ಪು-೨ ಕಟ್ಟು ( ಸ್ವಚ್ಚಗೊಳಿಸಿ ಸಣ್ಣಗೆ ಹೆಚ್ಚಿ)
ಉಪ್ಪು
ಹಸಿಮೆಣಸು-೨ ಹೆಚ್ಚಿದ್ದು
ಕರಿಬೇವು-೫-೬ ಎಲೆ ಗಳು

ನೆನಸಿದ ಉದ್ದಿನ ಬೇಳೆಗೆ( ಬೆಳ್ಳಿಗ್ಗೆ ಇಡ್ಲಿ ಮಾಡಬೇಕಾದರೆ- ಉದ್ದಿನ ಬೇಳೆಯನ್ನು ದಿನ ೪-೫ ಗಂಟೆ ನೆನಸಿ ಹಿಂದಿನ ರಾತ್ರಿಯೇ ರುಬ್ಬಿಡಿ) ಅಕ್ಕಿ ತರಿ ಉಪ್ಪು ಹೆಚ್ಚಿದ ಮೆಂತೆ   ಸೊಪ್ಪು, ಹಸಿಮೆಣಸು, ಕರಿಬೇವು, ಉಪ್ಪು ಸೇರಿಸಿ ಇಡ್ಲಿ ಮಾಡಿ.

ಚಟ್ನಿ ಜೊತೆ ಇಡ್ಲಿಯೋ....? ಇಡ್ಲಿ ಜೊತೆ ಚಟ್ನಿ ಯೋ.....? ನಿಮ್ಮ ಆಯ್ಕೆ....


ಚಂದ್ರಿಕಾ ಹೆಗಡೆ

ಅಕ್ಕಿ ರೊಟ್ಟಿ

ಅಕ್ಕಿ ಹಿಟ್ಟು- ೨ ಕಪ್
ಉಪ್ಪು ರುಚಿಗೆ ತಕ್ಕಸ್ಟು
ಬಿಸಿ ನೀರು

ಅಕ್ಕಿ ಹಿಟ್ಟನ್ನು ಬಿಸಿ ಬಿಸಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಲಟ್ಟಿಸಿ.
ಲಟ್ಟಿಸುವಾಗ ಗೋದಿ/ ಅಕ್ಕಿ ಹಿಟ್ಟಿನಲ್ಲಿ ಲಟ್ಟಿಸಿ.
ನೆನಪಿರಲಿ : ಚೆನ್ನಾಗಿ ನಾದಿ ನಾದಿ  ರೊಟ್ಟಿ ಮಾಡಿ.
ಗಟ್ಟಿ ಚಟ್ನಿ ಜೊತ್ಯಾಗ್ ಅಕ್ಕಿ ರೊಟ್ಟಿರಿ.. ಸವೀರೀ....