30 ನವೆಂಬರ್ 2011

ಕೆಂಪು ಕ್ಯಾಬೇಜ್ ಮೊಸರು ಭಜ್ಜಿ

ಕೆಂಪು ಕ್ಯಾಬೇಜ್ - ೧/೨ ಹೆಚ್ಚಿದ್ದು
ಮೊಸರು - ೧ ಬಟ್ಟಲು
ಹಸಿಮೆಣಸಿನ ಕಾಯಿ-೧ ಹೆಚ್ಚಿದ್ದು
ಈರುಳ್ಳಿ-೧ ಹೆಚ್ಚಿದ್ದು
ಉಪ್ಪು ರುಚಿಗೆ ತಕ್ಕಸ್ಟು
ಸಕ್ಕರೆ ೧/೨ ಚಮಚ
ಕೊತ್ತಂಬರಿ ಸೊಪ್ಪು- ೧/೨ ಹಿಡಿ

ಕ್ಯಾಬೇಜ್, ಈರುಳ್ಳಿ,ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನು ಸಣ್ಣದಾಗಿ ಹೆಚ್ಚಿ. ಇದಕ್ಕೆ ಉಪ್ಪು ಸಕ್ಕರೆ, ಮೊಸರು ಸೇರಿಸಿ. ಯಾವದಾದ್ರು ರೈಸ್  ಗೆ ಜೊತೆಯಾಗುವದು.


ಚಂದ್ರಿಕಾ ಹೆಗಡೆ

ಬೀಟ್ ರೂಟ್ ಮೊಸರು ಭಜ್ಜಿ

ಬೀಟ್ ರೂಟ್ - ೧--ತುರಿದುಕೊಳ್ಳಿ.
ಮೊಸರು-೧ ಬಟ್ಟಲು
ತೆಂಗಿನ ತುರಿ೧/೨ ಬಟ್ಟಲು
ಜೀರಿಗೆ ೧/೨ ಚಮಚ
ಎಣ್ಣೆ-೩ ಚಮಚ
ಉಪ್ಪು
ಹಸಿಮೆಣಸಿನ ಕಾಯಿ-೧ 
  1. ಬೀಟ್ ರೂಟ್  ತುರಿಯನ್ನು ೨ ಚಮಚ ಎಣ್ಣೆಯೊಂದಿಗೆ ಹುರಿದಿಟ್ಟುಕೊಳ್ಳಿ.
  2. ತೆಂಗಿನ ತುರಿ+ಜೀರಿಗೆ+ಉಪ್ಪು ಹಾಕಿ ರುಬ್ಬಿ.
  3. ರುಬ್ಬಿದ ಮಿಶ್ರಣಕ್ಕೆ ಬೀಟ್ ರೂಟ್  ಸೇರಿಸಿ.
  4. ಮೊಸರನ್ನು ಹಾಕಿ.
  5.  ೧ಚಮಚ ಎಣ್ಣೆಗೆ ಸಾಸಿವೆ , ಹಸಿಮೆಣಸಿನ ಕಾಯಿ ಒಗ್ಗರಣೆ  ನೀಡಿ.

ಅನ್ನದ ಜೊತೆ ಆರೋಗ್ಯಕ್ಕೆ ಹಿತಕರ ಭಜ್ಜಿ. ಬೇಸಗೆಯಲ್ಲಂತೂ... ತಂಪು ತಂಪು.....


ಚಂದ್ರಿಕಾ ಹೆಗಡೆ

ಹರಿವೆ ಸೊಪ್ಪಿನ ಮೊಸರು ಭಜ್ಜಿ


ಹರಿವೆ ಸೊಪ್ಪು- ೧ ಕಟ್ಟು
ಈರುಳ್ಳಿ-೨
ತೆಂಗಿನ ತುರಿ- ೧/೨ ಕಪ್
ಹಸಿಮೆಣಸಿನ ಕಾಯಿ-೧
ಎಣ್ಣೆ ೨ ಚಮಚ
ಸಾಸಿವೆ ಒಗ್ಗರಣೆಗೆ 
ಉಪ್ಪು
ಮೊಸರು- ೧ ಬಟ್ಟಲು
ಅರಿಸಿನ ಚಿಟಿಕೆ
ಬೆಲ್ಲ-೧/೨ ಚಮಚ


  1. ಹರಿವೆ ಸೊಪ್ಪನ್ನು,( ಅದರಲ್ಲೂ ಕೆಂಪು ಹರಿವೆ ಸೊಪ್ಪು) ತೊಳೆದು ಸಣ್ಣಗೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ...
  2. ಹಸಿಮೆಣಸಿನಕಾಯಿ, ತೆಂಗಿನ ತುರಿ, ಉಪ್ಪು ಹಾಕಿ ರುಬ್ಬಿ.
  3. ಈ ಮಿಶ್ರಣಕ್ಕೆ ಬೇಯಿಸಿ- ಆರಿದ  ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಲ್ಲ, ಮೊಸರು, ಹಾಕಿ.
  4. ಇದಕ್ಕೊಂದು ಸಾಸಿವೆ, ಅರಿಸಿನದ  ಒಗ್ಗರಣೆ ನೀಡಿ.

ಉತ್ತಮ ಆರೋಗ್ಯಕ್ಕೆ  ಉತ್ತಮ ಅಡುಗೆ....


ಚಂದ್ರಿಕಾ ಹೆಗಡೆ

ಉದ್ದಿನ ಬೇಳೆ ಚಟ್ನಿ

ಉದ್ದಿನ ಬೇಳೆ -೨ ಚಮಚ
ತೆಂಗಿನ ತುರಿ- ೧ ಬಟ್ಟಲು
ಹಸಿಮೆಣಸಿನ ಕಾಯಿ ೨ ( ತುಂಬಾ ಖಾರ ಇದ್ದರೆ ೧)
ಎಣ್ಣೆ ೨ ಚಮಚ 
ಸಕ್ಕರೆ ಕಾಲು ಚಮಚ, ಉಪ್ಪು 
ಒಗ್ಗರಣೆಗೆ ಸಾಸಿವೆ

೧ ಚಮಚ ಎಣ್ಣೆಯಲ್ಲಿ ಉದ್ದಿನ ಬೇಳೆ , ಹಸಿಮೆಣಸನ್ನು ಹುರಿಯಿರಿ.
ಇದನ್ನು ತೆಂಗಿನ ತುರಿ+ಸಕ್ಕರೆ + ಉಪ್ಪು + ಸ್ವಲ್ಪ ನೀರು ಹಾಕಿ ರುಬ್ಬಿ.
ಇದಕ್ಕೆ ಸಾಸಿವೆ ಒಗ್ಗರಣೆ ಇಡಿ...!


ಇಡ್ಲಿ, ಚಪಾತಿ/ಪರೋಟ/ತಾಲಿಪಿಟ್ಟು, ದೋಸೆ ಜೊತೆಗೆ  ಸವಿಯುವದು...... ನಮ್ಮ ಜವಾಬ್ದಾರಿ....

ಚಂದ್ರಿಕಾ ಹೆಗಡೆ

ತರಕಾರಿ ತುಂಬಿದ ಪರೋಟ

ಗೋದಿ ಹಿಟ್ಟು ಅಥವಾ ಮೈದಾ- ೧ ೧/೨ ಕಪ್
ಅಕ್ಕಿ ಹಿಟ್ಟು-೩ ಕಪ್
ಉಪ್ಪು
ಎಣ್ಣೆ
ಮೂಲಂಗಿ-೧ 
ಈರುಳ್ಳಿ-೨
ಕ್ಯಾಪ್ಸಿಕಂ  -1
ಕ್ಯಾರೆಟ್-೨
ಮೆಣಸಿನ ಪುಡಿ-೨ ಚಮಚ
ಜೀರಿಗೆ -೨ ಚಮಚ

  1. ಗೋದಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ.(ಸ್ವಲ್ಪ ಉಪ್ಪು ಹಾಕಿ)
  2. ಮೂಲಂಗಿ, ಕ್ಯಾರೆಟ್  ಸಿಪ್ಪೆ ತೆಗೆದು ತುರಿದುಕೊಳ್ಳಿ.
  3. ಈರುಳ್ಳಿ , ಕ್ಯಾಪ್ಸಿಕಂ ಸಣ್ಣಗೆ ಹೆಚ್ಚಿ.
  4. ೨ ಚಮಚ ಅಕ್ಕಿ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಕಲಸಿ... ಕುದಿಸಿ, ಗಂಜಿಯ ತರಹ ಮಾಡಿ. ಇದಕ್ಕೆ ಹೆಚ್ಚಿದ, ತುರಿದ ತರಕಾರಿ, ಉಪ್ಪು, ಉಳಿದ ಅಕ್ಕಿ ಹಿಟ್ಟನ್ನು ಸೇರಿಸಿ ಕಲಸಿ.
  5. ಜೀರಿಗೆ ,  ಮೆಣಸಿನ ಪುಡಿ  ಸೇರಿಸಿ ಕಲಸಿ.
  6. ಕಲಸಿಟ್ಟ ಗೋದಿ ಹಿಟ್ಟಿನಿಂದ ಚಿಕ್ಕ ಉಂಡೆಗಳನ್ನಾಗಿ  ಮಾಡಿ ಸ್ವಲ್ಪ ಲಟ್ಟಿಸಿ... ಅದರೊಳಗೆ ಹೋಳಿಗೆ ಹೂರಣ   ತುಂಬುವ ಹಾಗೆ  ಅಕ್ಕಿ ತರಕಾರಿ   ಮಿಶ್ರಣವನ್ನು ತುಂಬಿ ಲಟ್ಟಿಸಿ...
  7. ಎರಡು ಬದಿಯಲ್ಲಿ ಎಣ್ಣೆ ಹಾಕಿ ಬೇಯಿಸಿ..

ರುಚಿಗೆ... ರುಚಿಯೇ ಸಾಟಿ.....

ಚಂದ್ರಿಕಾ ಹೆಗಡೆ

ಹರಿವೇ ಸೊಪ್ಪಿನ ಫ್ರೈ

ಹರಿವೆ ಸೊಪ್ಪು- ೧ ಕಟ್ಟು
ಬೆಳ್ಳುಳ್ಳಿ-೬ (ಸಣ್ಣಗೆ ಕತ್ತರಿಸಿ)
ಹಸಿಮೆಣಸು-೧
ಎಣ್ಣೆ ೨ ಚಮಚ
ಉಪ್ಪು 

ಹರಿವೆ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ.....ಸೊಪ್ಪನ್ನು ಬಿಡಿಸಿ... ಆದ್ರೆ ಹೆಚ್ಚ ಬಾರದು....ಸೊಪ್ಪನ್ನು ಕೈಯಲ್ಲೇ ಎಲೆ ಎಳೆಯಾಗಿ  ಬಿಡಿಸಿ. ಬಾಣಲೆಗೆ ೨ ಚಮಚ ಎಣ್ಣೆ ಹಾಕಿ. ಬೆಳ್ಳುಳ್ಳಿ ಹುರಿದು, ಹಸಿಮೆಣಸಿನ ಕಾಯಿ , ಸೊಪ್ಪನ್ನು  ಸೇರಿಸಿ, ಸಣ್ಣ ಉರಿಯಲ್ಲಿ ೫-೬ ನಿಮಿಷ ಬೇಯಿಸಿ... ಉಪ್ಪು ಸೇರಿಸಿ....

ಸರಳವಾದರೂ.... ಒಮ್ಮೆ ಈ ಪಲ್ಯವನ್ನು ಮಾಡಿದವರು....ಇದನ್ನು ಮಾಡಲೆಂದೇ ಸೊಪ್ಪನ್ನು ತರುವದು ಸಹಜವೇ,,,,!

ಚಂದ್ರಿಕಾ ಹೆಗಡೆ

29 ನವೆಂಬರ್ 2011

ಆಲೂ- ಬೇಬಿ ಕಾರ್ನ್ ಮಸಾಲ..(ಖಾರ)

ಆಲೂ- ೩-೪ (ಬೇಯಿಸಿ ಹಿಸುಕಿದ್ದು)
ಈರುಳ್ಳಿ ೧ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು
ಎಣ್ಣೆ ೨ ಚಮಚ
ಅರಿಸಿನ - ಚಿಟಿಕೆ
ಟಮೇಟೋ- ೨ ಹೆಚ್ಚಿದ್ದು
ಬೇಬಿ ಕಾರ್ನ್-೪-೫ ಬೇಯಿಸಿ ಸಣ್ಣದಾಗಿ ಹೆಚ್ಚಿದ್ದು.
ಒಣ ಮೆಣಸಿನ ಕಾಯಿ- ೩-೪- ೧/೨ ಗಂಟೆ ನೆನಸಿ... ರುಬ್ಬಿ.
ಉಪ್ಪು ರುಚಿಗೆ 
ಕಿಚನ್ ಕಿಂಗ್ ಮಸಾಲ - ೨ ಚಮಚ 


ಎಣ್ಣೆಯಲ್ಲಿ ಈರುಳ್ಳಿ ಹುರಿದು... ಟೊಮೇಟೊ ಬೇಯಿಸಿ. ಅರಿಸಿನ ಪುಡಿ +  ರುಬ್ಬಿದ ಖಾರ + ಉಪ್ಪು+ ಕಿಚನ್ ಕಿಂಗ್ ಮಸಾಲ + ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೇಯಿಸಿ...ಅದಕ್ಕೆ ಬೇಬಿ ಕಾರ್ನ್ + ಆಲೂ + ಬೇಕಾದ್ರೆ ಇನ್ನು ಸ್ವಲ್ಪ ಉಪ್ಪು  ಹಾಕಿ ಸ್ವಲ್ಪ ನೀರು ಹಾಕಿ ೩ ನಿಮಿಷ ಬೇಯಿಸಿ,,,,

ಪಾಲಕ್ ಪರೋಟದ ಜೊತೆ  ....ಸವಿದ ಕ್ಷಣ 


ಚಂದ್ರಿಕಾ ಹೆಗಡೆ