29 ನವೆಂಬರ್ 2011

ಬೇಲದ ಹಣ್ಣಿನ ಪಾನಕ

ಬೇಲದ ಹಣ್ಣು-೧
ಬೆಲ್ಲ - ೧ ಕಪ್(ಬೇಕೆನಿಸಿದರೆ ಇನ್ನು ಸ್ವಲ್ಪ )
ಚಿಟಿಕೆ ಉಪ್ಪು
ಏಲಕ್ಕಿ-೨-೩
ನೀರು-೩ ಕಪ್


ಬೇಲದ ಹಣ್ಣನ್ನು ಒಡೆದು ಅದರೊಳಗಿರುವ ತಿರುಳಿಗೆ ಬೆಲ್ಲ, ಏಲಕ್ಕಿ, ಚಿಟಿಕೆ ಉಪ್ಪು , ಸ್ವಲ್ಪ ನೀರು  ಹಾಕಿ ಮಿಕ್ಸಿಯಲ್ಲಿ  ೧ ಸಲ ತಿರುವಿ. ಆಮೇಲೆ ಸೋಸಿ. ಉಳಿದ ನೀರನ್ನು ಮಿಕ್ಸ್ ಮಾಡಿ....

ಆರೋಗ್ಯಕರ ಪೇಯ....

ಆದರೆ  ಕೆಲವೊಬ್ಬರಿಗೆ ಇಷ್ಟ ಆಗೋಲ್ಲ.... ಅದರ (ಸು)ವಾಸನೆಯೇ  ಕಾರಣ....
ನನ್ನ ಮಗ, ಹಾಗು ಉದಯ್ ಬೇಡ ಅಂತ ತಿರಸ್ಕರಿಸಿದರು.... ಆದ್ರೆ ನಿಜಕ್ಕೂ ಉತ್ತಮ ಪೇಯ. ನಾನಂತೂ   ಇದನ್ನು ಇಷ್ಟ ಪಟ್ಟೆ. ನಿಮಗಿಷ್ಟವಾಗುತ್ತೋ   ಇಲ್ಲವೋ ತಿಳಿಬೇಕಾದ್ರೆ  ನೀವ್ ಮಾಡಿ ನೋಡಬೇಕಲ್ಲ....


ಚಂದ್ರಿಕಾ ಹೆಗಡೆ

28 ನವೆಂಬರ್ 2011

ಹರಿವೆ ಸೊಪ್ಪಿನ ಚಟ್ನಿ

ಹರಿವೆ ಸೊಪ್ಪು ೨ ಕಟ್ಟು
ತೆಂಗಿನ ತುರಿ- ೧ ಕಪ್
ಮೊಸರು ಕಾಲು ಕಪ್
ಹಸಿಮೆಣಸಿನ ಕಾಯಿ-೨ 
ಈರುಳ್ಳಿ- ೨ ( ಸಣ್ಣದಾಗಿ ಹೆಚ್ಚಿ/)
ಸಾಸಿವೆ,೨ ಚಮಚ ಎಣ್ಣೆ, ಕರಿಬೇವಿನ ಸೊಪ್ಪು, ಉಪ್ಪು, ಸ್ವಲ್ಪ ಸಕ್ಕರೆ , ಚಿಟಿಕೆ ಇಂಗು, ಚಿಟಿಕೆ ಅರಿಸಿನ

೧ ಚಮಚ ಎಣ್ಣೆ ಹಾಕಿ. ಹಸಿಮೆಣಸಿನ ಕಾಯಿ ಹಾಕಿ ಬಾಡಿಸಿ.
ಇದಕ್ಕೆ ತೊಳೆದು ಹೆಚ್ಚಿದ ಸೊಪ್ಪನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಅರಿಸಿನ ಹಾಕಿ. (ಸೊಪ್ಪನ್ನು ಮುಚ್ಚಿ ಬೇಯಿಸಿ.....)
ಆರಿದ ಮೇಲೆ ತೆಂಗಿನ ತುರಿ+ಬೇಯಿಸಿದ ಸೊಪ್ಪು+ಉಪ್ಪ್ಪು + ಸ್ವಲ್ಪ ಸಕ್ಕರೆ=ನೀರು ಇಲ್ಲದೆಯೇ ರುಬ್ಬಿ.

ಈ ಮಿಶ್ರಣವನ್ನು  ಒಂದು ಪಾತ್ರೆಗೆ ಹಾಕಿ. ಇದಕ್ಕೊಂದು ಒಗ್ಗರಣೆ ಕೊಡಬೇಕಲ್ಲಾ......

ಒಗ್ಗರಣೆ: ೧ ಚಮಚ ಎಣ್ಣೆ ಬಿಸಿ ಮಾಡಿ, ಸಾಸಿವೆ ಸಿಡಿಸಿ, ಕರಿಬೇವು ಇಂಗು ಹಾಕಿ . ಒಗ್ಗರಣೆ ಬಿಸಿಯಾಗಿರುವಾಗಲೇ ಅದಕ್ಕೆ ಹೆಚ್ಚಿಟ್ಟ ಈರುಳ್ಳಿ   ಸೇರಿಸಿ... ಮೊದಲಿನ ಮಿಶ್ರಣಕ್ಕೆ ಸೇರಿಸಿ. ಇಲ್ಲಿ ಯಾಕೆ ಬಿಸಿ ಒಗ್ಗರಣೆಗೆ ಹಸಿ ಈರುಳ್ಳಿ  ಹಾಕಿದ್ದು ಎಂದರೆ..... ಈರುಳ್ಳಿ ಸ್ವಲ್ಪ ಬೆಂದ ಹಾಗೆ ಆಗಿ ಹಸಿವಾಸನೆ ಹೋಗಿರಲಿ ಅಂತ....
ಕೊನೆಯಲ್ಲಿ ಮೊಸರು ಸೇರಿಸಿ....ಮೊಸರು ಸೇರಿಸಿದ ಮೇಲೆ ಇನ್ನಸ್ಟು ಉಪ್ಪು ಅಗತ್ಯವೆನಿಸಿದರೆ ಸೇರಿಸಿ.

ಅನ್ನ, ಚಪಾತಿ, ರೊಟ್ಟಿ....ಜೊತೆ...ಚಟ್ನಿ 


ಚಂದ್ರಿಕಾ ಹೆಗಡೆ


26 ನವೆಂಬರ್ 2011

ಕೆಂಪು ಕ್ಯಾಬೇಜ್ ರೈಸ್- (ಕಾಳು ಮೆಣಸು ಶುಂಟಿ. ಸ್ಪೆಷಲ್ )

ಕೆಂಪು ಕ್ಯಾಬೇಜ್ ಚಿಕ್ಕದು -೧
ಶುಂಟಿ(ಹಸಿ)  ಹೆಬ್ಬರಳಿನ  ಗಾತ್ರ...!!
ಕಾಳು ಮೆಣಸು- ೧೦-೧೨
ಹಸಿಮೆಣಸು-೧
ಅರಿಸಿನ ಚಿಟಿಕೆ
ಉಪ್ಪು ರುಚಿಗೆ ತಕ್ಕಸ್ಟು
ಗ್ರೀನ್ ಚಿಲ್ಲಿ ಸಾಸ್- ೨ ಚಮಚ
ಟಮೇಟೋ ಸಾಸ್ ೧ ಚಮಚ 
ತುಪ್ಪ ೩ ಚಮಚ 
ಅನ್ನ ೨ ಬೌಲ್ 
ಜೀರಿಗೆ ೧ ಚಮಚ


ಮೊದಲು ಜೀರಿಗೆ ಶುಂಟಿ,ಕಾಳುಮೆಣಸು  ಸೇರಿಸಿ ಪುಡಿ ಮಾಡಿ. ತುಪ್ಪ ದೊಂದಿಗೆ ಕ್ಯಾಬೇಜ್ ಹಾಕಿ ಬೇಯಿಸಿ... ಹಾಗೆ ಪುಡಿ ಮಾಡಿದ ಶುಂಟಿ ಜೀರಿಗೆ,ಕಾಳುಮೆಣಸು ಸೇರಿಸಿ , ಸಾಸ್ ಎರಡನ್ನು ಹಾಕಿ, ಅರಿಸಿನ ಹಸಿಮೆಣಸು ಹೆಚ್ಚಿ ಹಾಕಿ. ಉಪ್ಪು ಹಾಕಿ....ಕೊನೆಯಲ್ಲಿ ಅನ್ನ ಮಿಶ್ರಣ ಮಾಡಿ.....



ಸರಳ ಆಹಾರ ...ಸುಲಭ ಜೀರ್ಣ....!


ಚಂದ್ರಿಕಾ ಹೆಗಡೆ

25 ನವೆಂಬರ್ 2011

ಬೆಳ್ಳುಳ್ಳಿ ರೈಸ್


ಅನ್ನ- ೧ ಕಪ್
ಬೆಳ್ಳುಳ್ಳಿ ೫-೬ ಎಸಳು
ಕರಿಬೇವು ೪-೫ ಎಲೆ
ಉಪ್ಪು
ಅರಿಸಿನ
ಎಣ್ಣೆ ೨ ಚಮಚ
ಸಾಸಿವೆ
ಹಸಿಮೆಣಸು ೨
ಸ್ವಲ್ಪ ಸಕ್ಕರೆ
ನಿಂಬೆ ರಸ ೧/೨ ಚಮಚ


ಒಗ್ಗರಣೆ ತಯಾರಿಸಿ.... ಎಣ್ಣೆಗೆ ಸಾಸಿವೆ  ಬೆಳ್ಳುಳ್ಳಿ ಹಾಕಿ ಹುರಿಯಿರಿ, ಬೆಳ್ಳುಳ್ಳಿ ರೋಸ್ಟ್  ಆಗುತ್ತಿದ್ದ ಹಾಗೆ ಹಸಿಮೆಣಸು, ಕರಿಬೇವು, ಅರಿಸಿನ ಹಾಕಿ, ಉಪ್ಪು ಸಕ್ಕರೆ ಸೇರಿಸಿ. ಅನ್ನ ಮಿಕ್ಸ್ ಮಾಡಿ. ೨ ನಿಮಿಷ ಸಣ್ಣ ಉರಿಯಲ್ಲೇ ಇಡಿ. ಸ್ವಲ್ಪ ಸಮಯದ ನಂತರ ನಿಂಬೆ ರಸ ಸೇರಿಸಿ.....

ಬಿಸಿಯಿರುವಾಗ ತಿನ್ನಲು  ರುಚಿ.... ಆಹಾ

ಬೆಳ್ಳುಳ್ಳಿ ಆರೋಗ್ಯದ ದೃಷ್ಟಿಯಿಂದ ಒಳ್ಳೇದು.....



ಚಂದ್ರಿಕಾ ಹೆಗಡೆ

ಗೋರಿ ಕಾಯಿ (ಚಿಟ್ ಮಿಟ್ಕಿ) ರೈಸ್

ಗೋರಿಕಾಯಿ ೧೦ ( ಸಣ್ಣಗೆ ಹೆಚ್ಚಿ)
ಸಾಂಬಾರ್ ಪೌಡರ್ ೨ ಚಮಚ
ಕರಿಬೇವು
ಹುಳಿಸೆ ರಸ ಕಾಲು ಚಮಚ
ಒಗ್ಗರಣೆಗೆ- ಎಣ್ಣೆ ೨ ಚಮಚ. ಸಾಸಿವೆ ೧/೨ ಚಮಚ, ಜೀರಿಗೆ ೧/೨ ಚಮಚ
ಅರಿಸಿನ ಚಿಟಿಕೆ
ಬೆಳ್ಳುಳ್ಳಿ ೩ ಎಸಳು ಸಣ್ಣಗೆ ಹೆಚ್ಚಿ< ಇಷ್ಟವಾದರೆ)
ಅನ್ನ ೨ ಕಪ್
ಹಸಿಮೆಣಸು- ೨ 
ಉಪ್ಪು 
  

ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಜೀರಿಗೆ ಕರಿಬೇವು ಅರಿಸಿನ ಹಾಕಿ , ಹಸಿಮೆಣಸು, ಗೋರಿಕಾಯಿ ಹಾಕಿ ಸ್ವಲ್ಪ ನೀರು ಚುಮುಕಿಸಿ ಬೇಯಿಸಿ. ಅದಕ್ಕೆ ಹುಳಿಸೆ ರಸ ಸಾಂಬಾರ್ ಪೌಡರ್ , ಉಪ್ಪು ಹಾಕಿ ೫ ನಿಮಿಷ ಹೊಂದಿಕೊಳ್ಳಲು ಸಣ್ಣ ಉರಿಯಲ್ಲೇ ಬಿಡಿ. ಕೊನೆಯಲ್ಲಿ ಅನ್ನ ಸೇರಿಸಿ.....

ಚಟ್ನಿ... ಮೊಸರಿನ ಸಲಾಡ್ ಜೊತೆಯಿರಲಿ.....

ಚಂದ್ರಿಕಾ ಹೆಗಡೆ

ಉಪ್ಪಿನ ಕಾಯಿ ದೋಸೆ

ದೋಸೆ ಹಿಟ್ಟು- ೨ ಕಪ್
ಉಪ್ಪಿನ ಕಾಯಿ - ೩ ಚಮಚ

ಹಿಟ್ಟಿಗೆ ಉಪ್ಪಿನ ಕಾಯಿ ಸೇರಿಸಿ ದೋಸೆ ಹುಯ್ಯೋದು......! ನಿಜವಾಗಲು ನಿಮಗೆ ಇಷ್ಟ ಆಗೇ ಆಗುತ್ತೆ.......
ಜೊತೆಗೆ ಮೊಸರು.....

ಚಂದ್ರಿಕಾ ಹೆಗಡೆ

ತೆಂಗಿನಕಾಯಿ ಅನ್ನ- (ಖಾರ)

ಅನ್ನ - ೧ ಕಪ್
ತೆಂಗಿನ ಕಾಯಿ  ತುರಿದು ರುಬ್ಬಿದ್ದು ೧/೨ ಕಪ್
ಸಾಂಬಾರ್ ಪುಡಿ- ೨ ಚಮಚ
ಹುಳಿಸೆ ರಸ
ಬೀನ್ಸ್ - ೧೦-೧೨ ಹೆಚ್ಚಿದ್ದು
ಮೊಳಕೆ ಕಟ್ಟಿದ ಕಡಲೆ ಕಾಳು - ಕಾಲು ಕಪ್
ಅರಿಸಿನ ಪುಡಿ
ಎಣ್ಣೆ ೨ ಚಮಚ
ಉಪ್ಪು
ಕರಿಬೇವು
  ಈರುಳ್ಳಿ ೧ ಹೆಚ್ಚಿದ್ದು


ಚಿತ್ರಾನ್ನದ ಒಗ್ಗರಣೆಯ ತರಹವೇ ಹಾಕಿ... ಇದಕ್ಕೆ ಕಡಲೆ ಕಾಳು, ಬೀನ್ಸ್ , ಈರುಳ್ಳಿ... ಬಾಡಿಸಿ. ಅರಿಸಿನ ಸಾಂಬಾರ್ ಪುಡಿ, ಹುಳಿಸೆ ರಸ ಉಪ್ಪು ಕರಿಬೇವು, ಹಾಕಿ... ರುಬ್ಬಿದ ತೆಂಗಿನ ಕಾಯಿ ಹಾಕಿ ಹಸಿ ವಾಸನೆ ಹೋಗುವ ತನಕ  ಬಿಸಿ ಮಾಡಿ... ನಂತರ ಅನ್ನ ಹಾಕಿ.... ಮೊಸರಿನ ಜೊತೆ  ಸವಿಯುವ  .... ಸಮಯ....


ಚಂದ್ರಿಕಾ ಹೆಗಡೆ