13 ಆಗಸ್ಟ್ 2011

ಬೀಟ್ ರೂಟ್ ಬರ್ಫಿ

ಅಗತ್ಯ:
ತುರಿದ ಬೀಟ್ ರೂಟ್ ೧ ಕಪ್
ಸಕ್ಕರೆ ೧ ಕಪ್
ಏಲಕ್ಕಿ ೨
ಸ್ವಲ್ಪ ತುಪ್ಪ < ತಟ್ಟೆಗೆ ಹಚ್ಚಲು> 


ಸಕ್ಕರೆ ಬೀಟ್ ರೂಟ್ ತುರಿಯನ್ನು ಬಾಣಲೆಗೆ ಹಾಕಿ ಕಾಯಿಸಿ.... ಸಕ್ಕರೆ ನೀರಾಗ ತೊಡಗುತ್ತದೆ.... ಹಾಗೆ ಕಾಯಿಸಿ....
ಅದಕ್ಕೆ ಏಲಕ್ಕಿ ಹಾಕಿ.....ಬಾಣಲೆಯಿಂದ ಈ ಮಿಶ್ರಣ ಎದ್ದು ಬರುವ ವರೆಗೂ ಕಾಯಿಸಿ.... ನಂತರ.... ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ....! ಬಿಸಿ ಇರುವಾಗಲೇ ಕಟ್  ಮಾಡಿ....


ಸವಿ... ಸವಿಯೆಂದರೆ.....





ಚಂದ್ರಿಕಾ ಹೆಗಡೆ

12 ಆಗಸ್ಟ್ 2011

ಕ್ಯಾರೆಟ್ ಪಲ್ಯ



 ತುರಿದ ಕ್ಯಾರೆಟ್ ೧ ಬಟ್ಟಲು
 ೧ ಹೆಚ್ಚಿದ ಟಮೋಟೂ 
ಹೆಚ್ಚಿದ ಈರುಳ್ಳಿ  ೧ 
ಅರಿಸಿನ
ಮೆಣಸಿನ ಪುಡಿ - ೧ ಚಮಚ 
ಕರಿಬೇವು
ಹಸಿಮೆಣಸು ಹೆಚ್ಚಿದ್ದು ೧
ಒಗ್ಗರಣೆ ಸಾಮಗ್ರಿ


ಮಾಡುವ ವಿಧಾನ
   ಬಾಣಲೆಗೆ ೨ ಚಮಚ ಎಣ್ಣೆ ಹಾಕಿ ಬಿಸಿ ಆದ ಮೇಲೆ ಸಾಸಿವೆ ಹಸಿಮೆಣಸು, ಕರಿಬೇವು ಸೇರಿಸಿ.... ನಂತರ  ಈರುಳ್ಳಿ ಹಾಕಿ ಬೇಯಿಸಿ ಅರಿಸಿನ ಪುಡಿ ಸೇರಿಸಿ. ಟಮೆಟೂ  ಕ್ಯಾರೆಟ್ ತುರಿ ಸೇರಿಸಿ... ಬೇಯಿಸಿ...ಸಣ್ಣ ಉರಿಯಲ್ಲಿ ಇಡಿ ೫ ನಿಮಿಷ...
 ಚಪಾತಿ-ರೊಟ್ಟಿಗೆ ಒಳ್ಳೆ ಜೊತೆ...!


ಮನೆಯಲ್ಲೇ ಅಡಗಿದೆ ಮನಸುಗಳ ಶಕ್ತಿ.....



ಚಂದ್ರಿಕಾ ಹೆಗಡೆ 

ಬ್ರೆಡ್ ಚಾಟ್




ಬ್ರೆಡ್ ೪ ಸ್ಲೈಸ್ 
ಈರುಳ್ಳಿ ಹೆಚ್ಚಿದ್ದು< ೧>
ಕೊತ್ತಂಬರಿ ಸೊಪ್ಪು
ಹುಳಿಸೆ ಹಣ್ಣು ಕರ್ಜೂರ ಸೇರಿಸಿ ಮಾಡಿದ ರಸ
ಸೇವು- ಕಾಲು ಬಟ್ಟಲು 
ಎಣ್ಣೆ
ಚಾಟ್ ಮಸಾಲ೧/೨ ಚಮಚ 
ಪುರಿ <ಮಂಡಕ್ಕಿ>  ೧ ಬಟ್ಟಲು 


ಬ್ರೆಡ್ ಅನ್ನು ಸ್ವಲ್ಪ ಎಣ್ಣೆ  ಹಾಕಿ ತವಾ ದ  ಮೇಲೆ ಬಿಸಿ ಮಾಡಿ

ಈರುಳ್ಳಿ, ಹುಳಿಸೆ  ಖರ್ಜೂರ ರಸ, ಸ್ವಲ್ಪ ಉಪ್ಪು  ಸೇರಿಸಿ, ನಿಂಬೆ ರಸ ಮಿಕ್ಸ್ ಮಾಡಿ . ಚಾಟ್ ಮಸಾಲ ಹಾಕಿ. ಕೊತ್ತಂಬರಿ ಸೊಪ್ಪು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ.
ಇದಕ್ಕೆ ಗರಿ ಮಾಡಿದ ಬ್ರೆಡ್ ತುಂಡುಗಳನ್ನು , ಮಂಡಕ್ಕಿ ಸೇರಿಸಿ....ಪ್ಲೇಟ್ ಗೆ ಹಾಕಿ ಮೇಲಿಂದ ಸೇವು ಹಾಕಿ....

ಬ್ರೆಡ್ ಮಜಾ.......



ಚಂದ್ರಿಕಾ ಹೆಗಡೆ 

ಹಲಸಿನ ಬೇಳೆಯ ಹೋಳಿಗೆ....





ಅಗತ್ಯ:
ಹಲಸಿನ ಬೀಜ ೨೫( ೧೦ ಹೋಳಿಗೆಗೆ)
ಬೆಲ್ಲ ೩ ಸೌಟು
ಮೈದಾ ಹಿಟ್ಟು ೨ ಕಪ್
ರವೆ ೩-೪ ಚಮಚ 
ಏಲಕ್ಕಿ ಪುಡಿ
ಉಪ್ಪು
ಎಣ್ಣೆ 


ಹರಟೆಯಲ್ಲಿ  ಹೋಳಿಗೆ......

ಹಲಸಿನ ಬೀಜದ  ಕಾಲ ಮುಗಿಯುವದರಲ್ಲಿತ್ತು. ಸಿಪ್ಪೆಯೆಲ್ಲ ಕೊಟ್ಟಿಗೆ ಸೇರಿ ದನಗಳಿಗೆ ಮೇವು ಆಗಿತ್ತು . ಬೇಳೆಗಳು ಮಾತ್ರ ಅಂಗಳದ ಮೂಲೆಯಲ್ಲಿ ಬಿಸಿಲಿಗೆ ಒಣಗುತ್ತ ಸೊರಗುತ್ತಲಿದ್ದವು. ಮರುಕ ಪಟ್ಟು ಯಜಮಾನಿ ಅವುಗಳನ್ನೆಲ್ಲ ಹಳೆಯ ಬುಟ್ಟಿಗೆ ಹಾಕಿ ಬಚ್ಚಲಿನ ಮೂಲೆಯಲ್ಲಿ ಬಚ್ಚಿಟ್ಟಳು. 
                            ಮಳೆಗಾಲ ಜಡಿದು- ಬಡಿದು ... ಸ್ವಲ್ಪ ವಿರಾಮ ನೀಡುತ್ತಿತ್ತು. ನಾಗರ ಪಂಚಮಿ ಬಂದಿತು...! ಆದ್ರೆ  ೧ ವಾರದಿಂದ.... ಮಳೆರಾಯ ಆರ್ಭಟ ದಿಂದಲೇ  ಇದ್ದ....ಯಜಮಾನ  ನಾಗರ ಪಂಚಮಿಯ ಸಿಹಿಗೆ ಸಾಮಗ್ರಿ  ತರಲು...ಹೊರಗೆ ಹೋಗುವ ಹಾಗೆ ಇಲ್ಲ...  ಸಿಹಿಗೆ ಖೋತ!... ತಲೆಯ ಮೇಲೆ ಕೈ ಹಾಕಿ ಕೂತ. ಅವನ ಪರಿಹಾರ ..." ನಾಕು ಸಕ್ಕರೆ ನೇವೇದ್ಯ ಮಾಡಿ ಬಾಯಿಗೆ ಹಾಕ್ಕಂಬನ.... ಇದು ಯಜಮಾನಿಯ ದುಕ್ಖಕ್ಕೆ ಕಾರಣ...ಸೆರಗಿನ ಮೂಲೆಯನ್ನು ... ಕಣ್ಣಿಗೆ ಒತ್ತಿಕೊಳ್ಳುತ್ತ.... ಬಚ್ಚಲಿಗೆ ಬೆಂಕಿ ಹಾಕತೊಡಗಿದಳು....ಆಪ್ಪಯ್ಯ  ಬತ್ತ.... ಎಂತ ಮಾಡವನ.....

ಅಲ್ಲೇ ಬೇಳೆ.... ಬುಟ್ಟಿ... ಪರಿಹಾರ ಎಂಬಂತೆ... ಕಾಣಿಸಿತ್ತು....
ಮೈದಾ ಇದೇ ಮನೇಲಿ.... ಬೇಳೆ ಬೇಯಿಸಿ.... ಎಂತಾದರು ಮಾಡಣ.... ಸೆರಗಿನ ಮೂಲೆಯಲ್ಲಿ ೨೫ ಬೇಳೆ ಹಾಕಿ.... ಅಲ್ಲೇ ಅದ್ರ ಸಿಪ್ಪೆ ಬಿಡಿಸಿದಳು....




""" ಕುಕ್ಕರ್ನಲ್ಲಿ ಹಾಕಿ ೩ ವಿಸಿಲ್ ಮಾಡಿ.....ಬಿಸಿ ಆರುದ್ರೊಳಗೆ... ಉಳಿದ ತಯಾರಿ... ಮಾಡಿದಳು....
ಮೈದಾ ಹಿಟ್ಟಿಗೆ ೩-೪ ಚಮಚ ಎಣ್ಣೆ ಹಾಕಿ  ಸ್ವಲ್ಪ ನೀರು ಸೇರಿಸಿ.. ರುಚಿಗೆ ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ....ಇಟ್ಟಳು...
ಈ ಕಡೆ ಕುಕ್ಕರ್  ತಣಿದಿತ್ತು. ಹಲಸಿನ ಬೀಜ ತೆಗೆದು  ಮೇಲಿರುವ ಕಪ್ಪು ಸಿಪ್ಪೆಯನ್ನು ಚಾಕುವಿನಿಂದ ತೆಗೆದು... ಬೀಜವನ್ನೆಲ್ಲ  ಮಿಕ್ಸಿಗೆ ಹಾಕಿ ನುಣ್ಣನೆ ರುಬ್ಬಿಕೊಂಡಳು. ಅದಕ್ಕೆ ಬೆಲ್ಲ ಏಲಕ್ಕಿ ರವೆ ಸೇರಿಸಿ... ಗಟ್ಟಿ ಆಗುವ ತನಕ ಕಲೆಸಿದಳು. ಆರಿದ ಮೇಲೆ ಉಂಡೆ ಮಾಡಿ ಇಟ್ಟಳು. 

 ಕಲೆಸಿಟ್ಟ ಮೈದಾ ಹಿಟ್ಟನ್ನು ಸ್ವಲ್ಪ  ತೆಗೆದು ಉಂಡೆ ಮಾಡಿ ಸ್ವಲ್ಪಾನೆ ಲಟ್ಟಿಸಿ...ಮಧ್ಯದಲ್ಲಿ ಕಣಕ<ಬೀಜದ ಕಣಕ > ಇಟ್ಟು ಎಣ್ಣೆಹಾಕಿ  ಕೈಯಲ್ಲೇ ತಟ್ಟಿ ತಟ್ಟಿ ಅಗಲ ಮಾಡಿದಳು...ಲಟ್ಟಣಿಗೆ ಅಗತ್ಯ ಅವಳಿಗೆ ಬೇಕೆನಿಸಲಿಲ್ಲ....ಕಾದ ಕಾವಲಿಗೆ ಎಣ್ಣೆ ಹಾಕಿ ನಿಧಾನಕ್ಕೆ ಬೇಯಿಸಿದಳು....

ಅಸ್ಟರಲ್ಲೇ ಬಂದ ಅವಳ ಮಗಳು ಅಮ್ಮಾ ಅದೆಂಥ ಸಣ್ಣಗೆ  ಮಾಡಿ ಇಡುತ್ತ ಇದ್ದೆ... ಅನ್ನುತ್ತ... ಸಹಾಯಕ್ಕೆ ನಿತ್ತಳು.

ದೊಡ್ಡ ಪ್ಲೇಟ್ ತಂದು ಅದನ್ನು ಬೋರಲು ಹಾಕಿ ಎಣ್ಣೆ ಹಾಕಿ ಅದರ ಮೇಲೆ ಪಟಾ ಪಟ್  ಹೋಳಿಗೆ ತಯಾರಿಸಿ ಬೇಯಿಸಿ...ಅಮ್ಮನಿಂದ ಶಭಾಸ್  ಸಿಕ್ಕಿತ್ತು...

ನಾಗರ ಪಂಚಮಿಗೆ ಬಂದ ಯಜಮಾನಿಯ  ಅಪ್ಪ  "ಇದೆಂಥಾ ಹೋಳಿಗೆನೆ ಮಗಾ...ಕಡ್ಲೆ ಬೇಳೆದೆಯಾ? ಎಂದು ಪ್ರಶ್ನಿಸುತ್ತ... ತುಪ್ಪದ ಹೊಂಡದಲ್ಲಿ ಹೋಳಿಗೆ ಅದ್ದುತ್ತ.... ಪ್ರಶಂಸಿಸುತ್ತಿದ್ದ...ಇತ್ತ ಯಜಮಾನ...ಮೀಸೆಗೆ ಹತ್ತಿದ್ದ ಹೋಳಿಗೆಯ ಚೂರನ್ನು ಟವೆಲ್ಲಿನಿಂದ  ಒರೆಸಿಕೊಳ್ಳುತ್ತಾ... ತನ್ನ ಹೆಂಡತಿಯ ಗುಣಗಾನವನ್ನು ಮನಸ್ಸಿನಲ್ಲೇ ಮಾಡುತ್ತಿದ್ದ......!!




ಹೋಳಿಗೆಯ ಹಬ್ಬ.....



ಚಂದ್ರಿಕಾ ಹೆಗಡೆ 

24 ಜುಲೈ 2011

ಗಡಿಬಿಡಿ ದೋಸೆ ....?

ಅಗತ್ಯ:
         ಚಿರೋಟಿ ರವೆ -೧ ಬಟ್ಟಲು
         ಗೋದಿ ಹಿಟ್ಟು  ೧/೨ ಬಟ್ಟಲು
         ಅಕ್ಕಿ ಹಿಟ್ಟು ೧/೨ ಬಟ್ಟಲು
          ರುಚಿಗೆ ತಕ್ಕಸ್ಟು ಉಪ್ಪು
         ಚಿಟಿಕೆ ಸೋಡಾ
.......



ಈ ಮೇಲಿನ ಎಲ್ಲ ಸಾಮಗ್ರಿಗಳನ್ನು ನೀರಿನಲ್ಲಿ ಕಲಸಿ... ಚಿಟಿಕೆ ಸೋಡಾ ಸೇರಿಸಿ... ಚಟ್ನಿ ಮಾಡುವಷ್ಟು  ವೇಳೆ ನೆನಸಿದರೂ 
ಸಾಕು 

ತಿನ್ನುವಾಗ ಗಡಿಬಿಡಿ ಮಾಡಬೇಕು ಅಂತ ಅನ್ನಿಸುವದೆ ಇಲ್ಲ....!


ಗಡಿಬಿಡಿಯ ಸವಿಯಲ್ಲಿ

ಚಂದ್ರಿಕಾ ಹೆಗಡೆ

ಹಲಸಿನ ಹಣ್ಣಿನ ಕಡುಬು <ಇಡ್ಲಿ>

ಅಗತ್ಯ:
ಹಲಸಿನ ಹಣ್ಣಿನ ತೊಳೆ ೨ ಬಟ್ಟಲು<ಹೆಚ್ಚಿದ್ದು>
ಅಕ್ಕಿ-೨ ಬಟ್ಟಲು
ಬೆಲ್ಲಾ <ಜೋನಿ> ೧ ಬಟ್ಟಲು< ರುಚಿಗೆ ಇನ್ನು ಹೆಚ್ಚು ಹಾಕಬಹುದು>
ಚಿಟಿಕೆ ಉಪ್ಪು


ಅಕ್ಕಿಯನ್ನು ೩-೪ ಗಂಟೆ ನೆನಸಿ. ಅದರ ಜೊತೆ ಹೆಚ್ಚಿದ ೨ ಬಟ್ಟಲು ತೊಳೆಗಳಲ್ಲಿ ೧ ಬಟ್ಟಲನ್ನು ಅಕ್ಕಿ ಜೊತೆ ಹಾಕಿ ರುಬ್ಬಿ. ಆ ಮಿಶ್ರಣಕ್ಕೆ ಬೆಲ್ಲ, ಚಿಟಿಕೆ ಉಪ್ಪು ಸೇರಿಸಿ. ಅಕ್ಕಿ ರುಬ್ಬುವದು: ಸ್ವಲ್ಪ ತರಿ ತರಿಯಾಗಿರಲಿ... ಹಾಂ!
 ಇಡ್ಲಿ ಪ್ಲೇಟ್ ನಲ್ಲಿ  ಹಾಕಿ ಬೇಯಿಸಿ.
ತುಪ್ಪ... ಇಲ್ಲವೇ ಮೊಸರಿನ ಜೊತೆ....

ಮಳೆಗಾಲದ  ಮಲೆನಾಡಿನ ಸವಿ....

ಬೆಂಗಳೂರಿನಲ್ಲೂ....







ಚಂದ್ರಿಕಾ ಹೆಗಡೆ

17 ಜುಲೈ 2011

ಪುದಿನ ರೈಸ್ :



                 ಪುದಿನ ಸೊಪ್ಪು  ೧ ಕಟ್ಟು
                  ಚಕ್ಕೆ ೧ ತುಂಡು
                 ಪಲಾವ್ ಎಲೆ-೧
                 ಕಾಳು ಮೆಣಸು- ೪-೫
                 ಹಸಿಮೆಣಸು-೨
                 ಲವಂಗ-೪-೫
                 ಅಕ್ಕಿ ೩ ಬಟ್ಟಲು
                 ಬಟಾಟೆ-೨-೩ <ಉದ್ದಕ್ಕೆ ಹೆಚ್ಚಬೇಕು>
                   ಎಣ್ಣೆ ೪-೫ ಚಮಚ 
                  ಹುಳಿಸೆ ರಸ ೧ ಚಮಚ 
ಚಟ್ ಪಟ್:
             ಪುದಿನ  ಸೊಪ್ಪು,ಹಸಿಮೆಣಸು, ಚಕ್ಕೆ , ಲವಂಗ,ಕಾಳು ಮೆಣಸು, ಎಲ್ಲವನ್ನು ರುಬ್ಬಿ.
              ಕುಕ್ಕರ್ ನಲ್ಲಿ, ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಬಟಾಟೆ ಹಾಕಿ, ಆಮೇಲೆ ರುಬ್ಬಿದ ಮಿಶ್ರಣ ಸೇರಿಸಿ ಹಸಿ ವಾಸನೆ ಹೋಗುವ ತನಕ  ಹುರಿಯಿರಿ . ಅಕ್ಕಿಯ ಎರಡರಸ್ಟು  ನೀರು ಹಾಕಿ, ಹುಳಿಸೆ ರಸ ಸೇರಿಸಿ. ಉಪ್ಪು ಹಾಕಿ. ಅಕ್ಕಿ ಹಾಕಿ ೩ ಕೂಗು ಮಾಡಿ. 
ಇದರ ಜೊತೆ ಮೊಸರು ಸವತೆಕಾಯಿ ಮೊಸರು ಬಜ್ಜಿ... 
ಭಾನುವಾರದ ಭೋಜನ...

ಚಂದ್ರಿಕಾ ಹೆಗಡೆ