ಪುದಿನ ಸೊಪ್ಪು ೧ ಕಟ್ಟು
ಚಕ್ಕೆ ೧ ತುಂಡು
ಪಲಾವ್ ಎಲೆ-೧
ಕಾಳು ಮೆಣಸು- ೪-೫
ಹಸಿಮೆಣಸು-೨
ಲವಂಗ-೪-೫
ಅಕ್ಕಿ ೩ ಬಟ್ಟಲು
ಬಟಾಟೆ-೨-೩ <ಉದ್ದಕ್ಕೆ ಹೆಚ್ಚಬೇಕು>
ಎಣ್ಣೆ ೪-೫ ಚಮಚ
ಹುಳಿಸೆ ರಸ ೧ ಚಮಚ
ಚಟ್ ಪಟ್:
ಪುದಿನ ಸೊಪ್ಪು,ಹಸಿಮೆಣಸು, ಚಕ್ಕೆ , ಲವಂಗ,ಕಾಳು ಮೆಣಸು, ಎಲ್ಲವನ್ನು ರುಬ್ಬಿ.
ಕುಕ್ಕರ್ ನಲ್ಲಿ, ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಬಟಾಟೆ ಹಾಕಿ, ಆಮೇಲೆ ರುಬ್ಬಿದ ಮಿಶ್ರಣ ಸೇರಿಸಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ . ಅಕ್ಕಿಯ ಎರಡರಸ್ಟು ನೀರು ಹಾಕಿ, ಹುಳಿಸೆ ರಸ ಸೇರಿಸಿ. ಉಪ್ಪು ಹಾಕಿ. ಅಕ್ಕಿ ಹಾಕಿ ೩ ಕೂಗು ಮಾಡಿ.
ಇದರ ಜೊತೆ ಮೊಸರು ಸವತೆಕಾಯಿ ಮೊಸರು ಬಜ್ಜಿ...
ಭಾನುವಾರದ ಭೋಜನ...
ಚಂದ್ರಿಕಾ ಹೆಗಡೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ