02 ಡಿಸೆಂಬರ್ 2012

ನೆಲ್ಲಿ ಕಾಯಿ ಜಾಮ್

ನೆಲ್ಲಿಕಾಯಿ - ೨ ಬಟ್ಟಲು
ಸಕ್ಕರೆ - ೨ ಬಟ್ಟಲು
 ಏಲಕ್ಕಿ -೩/೪




ವಿಧಾನ :
           ನೆಲ್ಲಿಕಾಯನ್ನು ತುರಿದುಕೊಳ್ಳಿ. ಇಲ್ಲವೇ  ಹೆಚ್ಚಿ ರುಬ್ಬಿ.
 ಇದಕ್ಕೆ ಸಕ್ಕರೆ ಇಡೀ  ಏಲಕ್ಕಿ ಹಾಕಿ ಪಾಕ ಬರುವ ತನಕ  ಕಾಯಿಸಿ. ಸಣ್ಣ ಉರಿಯಲ್ಲೇ !


 ೨ ವರ್ಷವಾದರೂ .... ನಿನ್ನೆ ಮಾಡಿದ ಹಾಗೆ ಇರುವದು!   ಆದರೆ ನೀವು ಮಾಡಬೇಕಾಗಿದ್ದು ಇಷ್ಟೇ .... ಗಾಳಿಯಾಡದ ಡಬ್ಬದಲಿ ಸಂಗ್ರಹಿಸಿ.




ಊರಿಂದ ಬೆಟ್ಟದ ನೆಲ್ಲಿಕಾಯಿ   ದಬಾಯಿಸಿ ಬಂದಿದೆ...... ತರಾವರಿ  ನಡೆದಿದೆ...... ಫುಲ್  ಬ್ಯುಸಿ .......



ಉಪ್ಪಿನ ಕಾಯಿಗೆ ಇನ್ನೊಂದು ವಾರ ಕಾಯಲೇಬೇಕು......



ಚಂದ್ರಿಕಾ ಹೆಗಡೆ 

ಹಲಸಿನ ಹಣ್ಣಿನ ಪಾಯಸ -೨

ಅಗತ್ಯ:
           ಹಲಸಿನ ತೊಳೆ- ೧ ಬಟ್ಟಲು
           ಬೆಲ್ಲ- ೧/೨ ಬಟ್ಟಲು
            ತೆಂಗಿನ ಹಾಲು- ೨ ಬಟ್ಟಲು
           ಎಳ್ಳು- ೧ ಚಮಚ
            ತುಪ್ಪ - ೪ ಚಮಚ
           ಏಲಕ್ಕಿ- ೧/೨ಚಮಚ
            ಚಿಟಿಕೆ ಉಪ್ಪು




ವಿಧಾನ :
ಹಲಸಿನ ತೊಳೆಯಿಂದ ಬೀಜ ಬೇರ್ಪಡಿಸಿ. ಕುಕ್ಕರ್ನಲ್ಲಿ ೧ ವಿಷಲ್  ಮಾಡಿ.
ಆರಿದ ಮೇಲೆ  ರುಬ್ಬಿಕೊಳ್ಳಿ.
ತೆಂಗಿನ ಹಾಲನ್ನು ಸಿದ್ಧ ಮಾಡಿ.(  ೧ ೧/೨ ಬಟ್ಟಲು ತೆಂಗಿನ ತುರಿಯನ್ನು ಸ್ವಲ್ಪ ನೀರಿನಲ್ಲಿ ನುಣ್ಣನೆ ರುಬ್ಬಿ ಸೋಸಿಕೊಲ್ಲಿ.)
ತೆಂಗಿನ ಹಾಲಿಗೆ ರುಬ್ಬಿಟ್ಟ  ಹಲಸಿನ ಮಿಶ್ರಣ ಬೆಲ್ಲ ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕುದಿಸಿ .ಇದಕ್ಕೆ  ತುಪ್ಪದಲ್ಲಿ ಎಳ್ಳು ಹುರಿದು ಒಗ್ಗರಣೆ ಕೊಡಿ.




* ಹಲಸಿನ ಹಣ್ಣಿನ ಕಾಲದಲ್ಲಿ ತೊಳೆಗಳನ್ನು ಬೀಜ ಬೇರ್ಪಡಿಸದೆ  ಗಾಳಿ ಆಡದ ಡಬ್ಬದಲ್ಲಿ ಫ್ರಿಜೆರ್  ನಲ್ಲಿ ಇಟ್ಟರೆ  ಬಹುಕಾಲ ..... ಬಳಸಬಹುದು. *




ಸಿಹಿತನ ದಲ್ಲಿ  ಸೊಗಸಿದೆ ........



ಚಂದ್ರಿಕಾ ಹೆಗಡೆ 

ಮೂಲಂಗಿ ಪಲ್ಯ

ಅಗತ್ಯ;
          ಮೂಲಂಗಿ ಸೊಪ್ಪು& ಗಡ್ಡೆ  - ೨
           ಬೆಳ್ಳುಳ್ಳಿ - ೫-೬
            ಹಸಿ ಮೆಣಸಿನ ಕಾಯಿ - ೨
             ಕರಿಬೇವು 
          ಉಪ್ಪು 
           ಎಣ್ಣೆ- ೨ ಚಮಚ 
           ತೆಂಗಿನ ತುರಿ  ಸ್ವಲ್ಪ 
             ಖಾರ ಪುಡಿ- ೧ ಚಮಚ 
            ಅರಿಸಿನ - ೧/೪ ಚಮಚ 

ವಿಧಾನ :
 ಮೂಲಂಗಿ ಸೊಪ್ಪು ತೊಳೆದು ಹೆಚ್ಚಿಟ್ಟುಕೊಳ್ಳಿ 
ಗಡ್ಡೆಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ 
ಬೆಳ್ಳುಳ್ಳಿ ಸಿಪ್ಪೆ ತೆಗೆಯಿರಿ 

 ಬಾಣಲೆಗೆ ಎಣ್ಣೆ ಹಾಕಿ.ಬೆಳ್ಳುಳ್ಳಿ ಹುರಿದುಕೊಳ್ಳಿ . ಅರ್ಧ ಹುರಿಯುತ್ತಿದ್ದಂತೆ 
ಹಸಿಮೆಣಸಿನ ಕಾಯಿ, ಕರಿಬೇವು, ಅರಿಸಿನ  ಪುಡಿ ಹಾಕಿ. ಇದಕ್ಕೆ ಹೆಚ್ಚಿಟ್ಟ ಮೂಲಂಗಿ ಗಡ್ಡೆ  ಹಾಕಿ ಸಣ್ಣ ಉರಿಯಲ್ಲಿ ೩-೪ ನಿಮಿಷ ಮುಚ್ಚಿ ಬೇಯಿಸಿ.
ನಂತರ ಸೊಪ್ಪು, ಉಪ್ಪು ಹಾಕಿ ೪-೫ ನಿಮಿಷ ಸಣ್ಣ ಉರಿಯಲ್ಲಿ ಮುಚ್ಚಿಡಿ 
ಒ ಲೆ ಆರಿಸಿದ ಮೇಲೆ ತೆಂಗಿನ ತುರಿ ಸೇರಿಸಿ.
 ಬೇಕಿದ್ದರೆ ನಿಂಬೆ ರಸ ಸೇರಿಸಿ.

ಚಪಾತಿ/ ರೊಟ್ಟಿ ಗೆ ಬಳಸಬಹುದು .


ಸೊಪ್ಪು ಸಹಿತ ಅಡುಗೆ...... ಸ್ವಾದಿಷ್ಟ 


ಚಂದ್ರಿಕಾ ಹೆಗಡೆ 

30 ನವೆಂಬರ್ 2012

ಸಿಂಪಲ್ ಬೆಳ್ಳುಳ್ಳಿ ತೊವ್ವೆ



ಅಗತ್ಯ :


ಹೆಸರು ಬೇಳೆ - ೧ ಕಪ್
ತೊಗರಿ ಬೇಳೆ - ೧/೪ ಕಪ್
ಬೆಳ್ಳುಳ್ಳಿ- ೫-೬
ಹಸಿಮೆಣಸು- ೨
ಕರಿಬೇವು
 ಅರಿಸಿನ  ಚಿಟಿಕೆ
ಉಪ್ಪು ರುಚಿಗೆ ತಕ್ಕಷ್ಟು
 ನಿಂಬೆ ರಸ - ೧ ಚಮಚ
ಸಕ್ಕರೆ ೧/೪ ಚಮಚ
ಒಗ್ಗರಣೆಗೆ-೩  ಚಮಚ ಎಣ್ಣೆ, ೧/೨ ಚಮಚ ಸಾಸಿವೆ

ವಿಧಾನ :


  •            ಬೇಳೆಯನ್ನು  ಬೇಯಿಸಿಟ್ಟುಕೊಳ್ಳಿ . ಕುದಿಯುತ್ತಿದ್ದಾಗ ....
  • ಒಗ್ಗರಣೆಗೆ  ಎಣ್ಣೆ ಸಾಸಿವೆ , ಬೆಳ್ಳುಳ್ಳಿ , ಕರಿಬೇವು, ಅರಿಸಿನ ಹಸಿಮೆಣಸು ,  ಹುರಿದು ಬೇಳೆಗೆ  ಹಾಕಿ .
  • ಉಪ್ಪು , ಸಕ್ಕರೆ ಹಾಕಿ.
  • ಒಲೆಯಿಂದ ಇಳಿಸಿಟ್ಟ  ಮೇಲೆ  ನಿಂಬೆರಸ ಸೇರಿಸಿ. 


ಸಿಂಪಲ್.... ಆದರೂ ... ಸೂಪರ್ .....



ಸರಳತೆ...... ಸುಲಭತೆ......




ಚಂದ್ರಿಕಾ ಹೆಗಡೆ 


19 ನವೆಂಬರ್ 2012

ಅಕ್ಕಿ ತರಿ ಮಸಾಲಾ ಉಪ್ಪಿಟ್ಟು

                                                      ಅಕ್ಕಿ ತರಿ ಮಸಾಲಾ ಉಪ್ಪಿಟ್ಟು 


ಅಗತ್ಯ:

ಅಕ್ಕಿ ತರಿ- 2 ಬೌಲ್
ಈರುಳ್ಳಿ- 2
ಹಸಿ ಮೆಣಸು -2
ಕರಿಬೇವು
ಸಾಂಬಾರ್ ಪುಡಿ-1 ಚಮಚ
ಮೆಣಸಿನ ಪುಡಿ- 1 ಚಮಚ
1ಬೆಲ್ಲ - 1/2 ಚಮಚ ( ಜೋನಿ  ಬೆಲ್ಲ)
ಹುಳಿಸೆ  ರಸ- 1/2 ಚಮಚ
ಎಣ್ಣೆ- 4 ಚಮಚ
ಸಾಸಿವೆ- 1 ಚಮಚ
ಆರಿಸಿನ ಪುಡಿ - 1/2 ಚಮಚ
ತೆಂಗಿನ ತುರಿ - 1 ಬೌಲ್
ಉಪ್ಪು  ರುಚಿಗೆ ತಕ್ಕಸ್ಟು .

ಮಾಡುವ ವಿಧಾನ :

  • ಅಕ್ಕಿ ತರಿಯನ್ನುಹೊಂಬಣ್ಣ  ಬರುವ ತನಕ ಹುರಿದುಕೊಳ್ಳಿ. ಎಣ್ಣೆ  ಹಾಕದೆಯೇ!
  • 5 ಬೌಲ್ ನೀರನ್ನು ಕುದಿಸಿಟ್ಟುಕೊಳ್ಳಿ .
  • ತೆಂಗಿನ ತುರಿ,  ಸಾಂಬಾರ್ ಪುಡಿ , ಬೆಲ್ಲ, ಅರಿಸಿನ , ಹುಳಿಸೆ  ರಸ,  ಸೇರಿಸಿ  ರುಬ್ಬಿಡಿ .
  • ಈರುಳ್ಳಿ, ಹಸಿಮೆಣಸನ್ನು  ಹೆಚ್ಚಿ.
  • ಬಾಣಲೆಗೆ  ಎಣ್ಣೆ, ಸಾಸಿವೆ, ಕರಿಬೇವು, ಹಸಿಮೆಣಸು  ಹಾಕಿ ಒಗ್ಗರಣೆ  ಮಾಡಿ , ಕುದಿಯುತ್ತಿರುವ ನೀರನ್ನು ಸೇರಿಸಿ- ಅಗತ್ಯ ಉಪ್ಪಿನೊಂದಿಗೆ.
  • ಇದಕ್ಕೆ ರುಬ್ಬಿಟ್ಟ  ಮಿಶ್ರಣ ಸೇರಿಸಿ- 1 ನಿಮಿಷ ಕುದಿಯಲು  ಬಿಡಿ.
  • ನಂತರ ಅಕ್ಕಿ ತರಿಯನ್ನು ಗಂಟಾಗದಂತೆ  ಹಾಕಿ . ಉರಿಯನ್ನು  ಸಣ್ಣಗೆ ಮಾಡಿ 5 ರಿಂದ- 7 ನಿಮಿಷ ಸಣ್ಣ ಉರಿಯಲ್ಲೇ ಇಡಿ.



ತಡವೇಕೆ ... ತಗೊಳ್ಳಿ ಎಂತೀರೋ ... ನಾನೇ  ತಿಂತೀನಿ ಎಂತೀರೋ.... ಯುವರ್ ಚಾಯ್ಸ್ .....:)



ರಜದಲ್ಲೇ     ಬ್ಲಾಗ್ ಪ್ರವೇಶಿಸಲು ಸುಸಮಯ ಎಂಬ  ಜ್ಞಾನೋದಯದಲ್ಲಿ ..

ಚಂದ್ರಿಕಾ  ಹೆಗಡೆ 







20 ಏಪ್ರಿಲ್ 2012

ಕೊಬ್ಬರಿ ಮಿಠಾಯಿ

ಕೊಬ್ಬರಿ ತುರಿ- ೨ ಕಪ್
ಸಕ್ಕರೆ- ೨ಕಪ್
ಎಲೆಕ್ಕಿ ಪುಡಿ- ೧ ಚಮಚ 
ತುಪ್ಪ- ೨ ಚಮಚ 



ಸಕ್ಕರೆಗೆ ಸ್ವಲ್ಪ ನೀರು( ಈ ಪ್ರಮಾಣಕ್ಕೆ ೧ ಕಪ್ ನೀರು )ಹಾಕಿ ಪಾಕ ಮಾಡಿ .
ಅಂಟು ಪಾಕ ಬಂದ ಮೇಲೆ( ಸುಮಾರು ೬-೮ ನಿಮಿಷ ಕುದಿಸಿದ ಮೇಲೆ) ಕೊಬ್ಬರಿ ಏಲಕ್ಕಿ  ಪುಡಿ ಹಾಕಿ  ಹೊಂದುವಂತೆ  ಸೌಟಿನಲ್ಲಿ ತಿರುವಿ.
೩-೪ ನಿಮಿಷ ಹಾಗೆ ತಿರುವಿ
ತುಪ್ಪ ಸವರಿದ  ಪ್ಲೇಟ್  ಗೆ  ವರ್ಗಾಯಿಸಿ. 
ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿ.



ತೆಂಗು - ತರಾವರಿ 

ಚಂದ್ರಿಕಾ ಹೆಗಡೆ