02 ಡಿಸೆಂಬರ್ 2012

ಹಲಸಿನ ಹಣ್ಣಿನ ಪಾಯಸ -೨

ಅಗತ್ಯ:
           ಹಲಸಿನ ತೊಳೆ- ೧ ಬಟ್ಟಲು
           ಬೆಲ್ಲ- ೧/೨ ಬಟ್ಟಲು
            ತೆಂಗಿನ ಹಾಲು- ೨ ಬಟ್ಟಲು
           ಎಳ್ಳು- ೧ ಚಮಚ
            ತುಪ್ಪ - ೪ ಚಮಚ
           ಏಲಕ್ಕಿ- ೧/೨ಚಮಚ
            ಚಿಟಿಕೆ ಉಪ್ಪು




ವಿಧಾನ :
ಹಲಸಿನ ತೊಳೆಯಿಂದ ಬೀಜ ಬೇರ್ಪಡಿಸಿ. ಕುಕ್ಕರ್ನಲ್ಲಿ ೧ ವಿಷಲ್  ಮಾಡಿ.
ಆರಿದ ಮೇಲೆ  ರುಬ್ಬಿಕೊಳ್ಳಿ.
ತೆಂಗಿನ ಹಾಲನ್ನು ಸಿದ್ಧ ಮಾಡಿ.(  ೧ ೧/೨ ಬಟ್ಟಲು ತೆಂಗಿನ ತುರಿಯನ್ನು ಸ್ವಲ್ಪ ನೀರಿನಲ್ಲಿ ನುಣ್ಣನೆ ರುಬ್ಬಿ ಸೋಸಿಕೊಲ್ಲಿ.)
ತೆಂಗಿನ ಹಾಲಿಗೆ ರುಬ್ಬಿಟ್ಟ  ಹಲಸಿನ ಮಿಶ್ರಣ ಬೆಲ್ಲ ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕುದಿಸಿ .ಇದಕ್ಕೆ  ತುಪ್ಪದಲ್ಲಿ ಎಳ್ಳು ಹುರಿದು ಒಗ್ಗರಣೆ ಕೊಡಿ.




* ಹಲಸಿನ ಹಣ್ಣಿನ ಕಾಲದಲ್ಲಿ ತೊಳೆಗಳನ್ನು ಬೀಜ ಬೇರ್ಪಡಿಸದೆ  ಗಾಳಿ ಆಡದ ಡಬ್ಬದಲ್ಲಿ ಫ್ರಿಜೆರ್  ನಲ್ಲಿ ಇಟ್ಟರೆ  ಬಹುಕಾಲ ..... ಬಳಸಬಹುದು. *




ಸಿಹಿತನ ದಲ್ಲಿ  ಸೊಗಸಿದೆ ........



ಚಂದ್ರಿಕಾ ಹೆಗಡೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ