02 ಡಿಸೆಂಬರ್ 2012

ಮೂಲಂಗಿ ಪಲ್ಯ

ಅಗತ್ಯ;
          ಮೂಲಂಗಿ ಸೊಪ್ಪು& ಗಡ್ಡೆ  - ೨
           ಬೆಳ್ಳುಳ್ಳಿ - ೫-೬
            ಹಸಿ ಮೆಣಸಿನ ಕಾಯಿ - ೨
             ಕರಿಬೇವು 
          ಉಪ್ಪು 
           ಎಣ್ಣೆ- ೨ ಚಮಚ 
           ತೆಂಗಿನ ತುರಿ  ಸ್ವಲ್ಪ 
             ಖಾರ ಪುಡಿ- ೧ ಚಮಚ 
            ಅರಿಸಿನ - ೧/೪ ಚಮಚ 

ವಿಧಾನ :
 ಮೂಲಂಗಿ ಸೊಪ್ಪು ತೊಳೆದು ಹೆಚ್ಚಿಟ್ಟುಕೊಳ್ಳಿ 
ಗಡ್ಡೆಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ 
ಬೆಳ್ಳುಳ್ಳಿ ಸಿಪ್ಪೆ ತೆಗೆಯಿರಿ 

 ಬಾಣಲೆಗೆ ಎಣ್ಣೆ ಹಾಕಿ.ಬೆಳ್ಳುಳ್ಳಿ ಹುರಿದುಕೊಳ್ಳಿ . ಅರ್ಧ ಹುರಿಯುತ್ತಿದ್ದಂತೆ 
ಹಸಿಮೆಣಸಿನ ಕಾಯಿ, ಕರಿಬೇವು, ಅರಿಸಿನ  ಪುಡಿ ಹಾಕಿ. ಇದಕ್ಕೆ ಹೆಚ್ಚಿಟ್ಟ ಮೂಲಂಗಿ ಗಡ್ಡೆ  ಹಾಕಿ ಸಣ್ಣ ಉರಿಯಲ್ಲಿ ೩-೪ ನಿಮಿಷ ಮುಚ್ಚಿ ಬೇಯಿಸಿ.
ನಂತರ ಸೊಪ್ಪು, ಉಪ್ಪು ಹಾಕಿ ೪-೫ ನಿಮಿಷ ಸಣ್ಣ ಉರಿಯಲ್ಲಿ ಮುಚ್ಚಿಡಿ 
ಒ ಲೆ ಆರಿಸಿದ ಮೇಲೆ ತೆಂಗಿನ ತುರಿ ಸೇರಿಸಿ.
 ಬೇಕಿದ್ದರೆ ನಿಂಬೆ ರಸ ಸೇರಿಸಿ.

ಚಪಾತಿ/ ರೊಟ್ಟಿ ಗೆ ಬಳಸಬಹುದು .


ಸೊಪ್ಪು ಸಹಿತ ಅಡುಗೆ...... ಸ್ವಾದಿಷ್ಟ 


ಚಂದ್ರಿಕಾ ಹೆಗಡೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ