20 ಫೆಬ್ರವರಿ 2012

ತೋಯಿಸಿದ ಮಂಡಕ್ಕಿ (ಕಳ್ಳೆಪುರಿ )

ಕಳ್ಳೆಪುರಿ - ೧ ಸೇರು
ಹುರಿಗಡಲೆ- ೧/೨ ಬಟ್ಟಲು
ಕಡ್ಲೆ ಬೀಜ - ೧ ಹಿಡಿ
ಹಸಿಮೆಣಸು- ೩
ಕರಿಬೇವು- ೧ ಎಳೆ
ಎಣ್ಣೆ- ೩ ಚಮಚ
ಸಾಸಿವೆ- ೧ ಚಮಚ
ಈರುಳ್ಳಿ- ೧ ಸಣ್ಣಗೆ ಹೆಚ್ಚ್ಚಿ
ಅರಿಸಿನ - ಚಿಟಿಕೆ
ಉಪ್ಪು
 ಸಕ್ಕರೆ- ೧/೨ ಚಮಚ



ಕಳ್ಳೆಪುರಿಯನ್ನು ನೀರಿನಲ್ಲಿ ಹಾಕಿ ತತಕ್ಷಣ ಹಿಂಡಿ ಇಡಿ. ಹುರಿಗದಲೆಯ್ಯನ್ನು ಪುಡಿ ಮಾಡಿ.

ಬಾಣಲೆಗೆ ಎಣ್ಣೆ, ಸಾಸಿವೆ, ಕಡಲೆ ಬೀಜ ಹಾಕಿ ಹುರಿಯಿರಿ. ಇದಕ್ಕೆ ಕರಿಬೇವು,ಈರುಳ್ಳಿ,ಹಸಿಮೆಣಸಿನ ಕಾಯಿ,ಅರಿಸಿನ , ಸಕ್ಕರೆ , ಉಪ್ಪು ಹಾಕಿ ಬೇಯಿಸಿ. ೩ ನಿಮಿಷದ ಮೇಲೆ ಹುರಿಗಡಲೆ ಪುಡಿ ಹಾಕಿ.
ಹಿಂಡಿ ಇಟ್ಟಿದ್ದ  ಕಳ್ಳೆಪುರಿಯನ್ನು ಹಾಕಿ- ೫ ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಇದರ ಜೊತೆ ಮೆಣಸಿನ ಕಾಯಿ ಭಜಿನೂ ಇದ್ರೆ....ಮ್......ಹಾ......



ಚಂದ್ರಿಕಾ ಹೆಗಡೆ

ಒಂದೆಲಗ ( ಬ್ರಾಹ್ಮೀ) ತಂಬುಳಿ

ಒಂದೆಲಗ- ೧ ಹಿಡಿ
ತೆಂಗಿನ ತುರಿ- ೧/೪ ಬಟ್ಟಲು
ಮಜ್ಜಿಗೆ - ೧ ಬಟ್ಟಲು
ಜೀರಿಗೆ- ೧ ಚಮಚ
ಎಣ್ಣೆ- ೧ ಚಮಚ
ಉಪ್ಪು - ರುಚಿಗೆ

ಒಂದೆಲಗವನ್ನು ಚೆನ್ನಾಗಿ ತೊಳೆದು  ಸಣ್ಣಗೆ ಹೆಚ್ಚಿ. ಜೀರಿಗೆ ಹಾಗು ಒಂದೆಲಗವನ್ನು ಹುರಿಯಿರಿ( ೧  ೧/೨ ನಿಮಿಷ)
ಇದಕ್ಕೆ  ತೆಂಗಿನ ತುರಿ ಹಾಕಿ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು ಹಾಕಿ. ಬೇಸಿಗೆಯಲ್ಲಿ ಬಿಸಿ ಅನ್ನ ತಂಬುಳಿ...ಬಲ್ಲವನೇ ಬಲ್ಲ.......


ಬ್ರಾಹ್ಮೀ  ಬುದ್ದಿ ಶಕ್ತಿಯನ್ನು ಚುರುಕು ಮಾಡುತ್ತದೆ.... ಕಣ್ಣಿಗೆ ಒಳ್ಳೇದು... ಮಕ್ಕಳು- ವಯೋವೃದ್ಧರ ತನಕ... ಸರ್ವ ರೋಗ ಪರಿಹಾರ ನೀಡುವ ಶಕ್ತಿ ಇದಕ್ಕಿದೆಯಂತೆ .... ಯಾಕಿನ್ನು ತಡ.... ತಂಬಳಿ  ಮಾಡಿ.
ವಿ. ಸೂ : ಈ ತಂಬಳಿ ಯನ್ನು ರಾತ್ರಿ ಸೇವಿಸಬಾರದಂತೆ ... ಕಾರಣ ಇನ್ನು ಸಿಕ್ಕಿಲ್ಲ..... 

25 ಜನವರಿ 2012

ಪುಳಿಯೋಗರೆ ಗೊಜ್ಜು

ಅಗತ್ಯಗಳು:

ಹುಳಿಸೆ ಹಣ್ಣು- ನಿಂಬೆ ಗಾತ್ರದ್ದು-೨ 
ಬೆಲ್ಲ- ೪-೫ ಚಮಚ
ಸಾರಿನ ಪುಡಿ- ೪-೫ ಚಮಚ
ಕೊಬ್ಬರಿ ತುರಿ - ೭-೮ ಚಮಚ
ಕಡಲೆ ಬೀಜ( ಶೇಂಗ)- ೧೦೦ ಗ್ರಾಂ 
ಎಳ್ಳು- ೩ ಚಮಚ 
ಕರಿಬೇವು- ೨ ಎಳೆ
ಎಣ್ಣೆ- ೭-೯ ಚಮಚ 
ಅರಿಸಿನ- ೧ ಚಮಚ 
ಸಾಸುವೆ- ೨ ಚಮಚ 
ಉಪ್ಪು ರುಚಿಗೆ 

ಮಾಡುವ ವಿಧಾನ:
 ಹುಳಿಸೆ ಹಣ್ಣಿಗೆ ಸ್ವಲ್ಪ ನೀರನ್ನು ಹಾಕಿ ನೆನಸಿ. ದಪ್ಪ ರಸ ತೆಗೆಯಿರಿ. 
ಎಳ್ಳನ್ನು ಹುರಿದು ತರಿ ತರಿಯಾಗಿ ಪುಡಿ ಮಾಡಿ.

ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ, ಸಾಸುವೆ, ಕರಿಬೇವು ಅರಿಸಿನ ಹಾಕಿ ಹುರಿದು ಕಡಲೆ ಬೀಜವನ್ನು ಇದರಲ್ಲಿ ಹುರಿಯಿರಿ. ಇದಕ್ಕೆ ಬೆಲ್ಲ , ಹುಳಿಸೆ ರಸವನ್ನು ಹಾಕಿ- ೫ ನಿಮಿಷ ಕುದಿಸಿ.
ನಂತರ ಸಾರಿನ ಪುಡಿಯನ್ನು, ಕೊಬ್ಬರಿ ತುರಿಯನ್ನು   ಹಾಕಿ ಚೆನ್ನಾಗಿ ಕುದಿಸಿ.
ಉಪ್ಪು ಸೇರಿಸಿ ದಪ್ಪ ಮಿಶ್ರಣ ಸಿದ್ಧಪಡಿಸಿ. ಇದನ್ನು ಬಿಸಿ ಅನ್ನ , ನೆನಸಿದ ಅವಲಕ್ಕಿಯ ಜೊತೆ ಸೇರಿಸಿದರೆ ಪುಳಿಯೋಗರೆ ಸಿದ್ಧವಾಗುತ್ತದೆ.



ಚಂದ್ರಿಕಾ ಹೆಗಡೆ






ಅವಲಕ್ಕಿ ಪುಳಿಯೋಗರೆ

ಅಗತ್ಯ ಸಾಮಗ್ರಿ :
ಗಟ್ಟಿ ಅವಲಕ್ಕಿ- ೨ ಕಪ್
ಪುಳಿಯೋಗರೆ ಗೊಜ್ಜು- ೨ ಚಮಚ (ದೊಡ್ಡ ಚಮಚ)
ಕಡಲೆ ಬೀಜ( ಶೇಂಗ)- ೧/೪ ಕಪ್
ಎಣ್ಣೆ- ೨ ಚಮಚ
ಕರಿಬೇವು- ೧ ಎಳೆ
ಉಪ್ಪು ರುಚಿಗೆ


ಮಾಡುವ ವಿಧಾನ:
ಗಟ್ಟಿ ಅವಲಕ್ಕಿಯನ್ನು ೫-೭ ನಿಮಿಷ ನೀರಿನಲ್ಲಿ ನೆನಸಿಡಿ. ಆಮೇಲೆ  ನೀರನ್ನು ಬಸಿಯಲು ಇಡಿ. ಇನ್ನು ೭-೮ ನಿಮಿಷದ ಮೇಲೆ  ಬಾಣಲೆಗೆ ಎಣ್ಣೆ ಹಾಕಿ ಕಡಲೆ ಬೀಜವನ್ನು ಹುರಿಯಿರಿ. ಇದಕ್ಕೆ ಕರಿಬೇವು, ಪುಳಿಯೋಗರೆ ಗೊಜ್ಜು ಅವಲಕ್ಕಿ ಹಾಕಿ. ಪುಳಿಯೋಗರೆ ಗೊಜ್ಜನ್ನು ಸಿದ್ಧಪಡಿಸುವಾಗಲೇ ಉಪ್ಪನ್ನು ಹಾಕಿರುವ ಕಾರಣ ಉಪ್ಪನ್ನು ನೋಡಿ ಮತ್ತೆ ಸೇರಿಸಿ. 




ಚಂದ್ರಿಕಾ ಹೆಗಡೆ


24 ಜನವರಿ 2012

ಬದನೇಕಾಯಿ ಮಸಾಲ ರೈಸ್

ಅಕ್ಕಿ- ೧ಕಪ್
ಬದನೇಕಾಯಿ-೪
ಈರುಳ್ಳಿ- ೧ 
ಹುಳಿಸೆ ರಸ- ೧ ೧/೨ ಚಮಚ
ಸಕ್ಕರೆ-೧/೨ ಚಮಚ
ಗರಂ ಮಸಾಲ- ೨ ಚಮಚ
ಅರಿಸಿನ- ೧/೨ ಚಮಚ 
ಉಪ್ಪು
ತುಪ್ಪ- ೨ ಚಮಚ 
ಮೆಣಸಿನ ಕಾಳು ಪುಡಿ- ೧/೨ ಚಮಚ
ಕರಿ ಬೇವು- ೧ ಎಳೆ
ತೆಂಗಿನ ತುರಿ- ೧/೪ ಬಟ್ಟಲು 
೧  ಚಮಚ  ಎಣ್ಣೆ , ಸಾಸುವೆ  


ಮಾಡುವ ವಿಧಾನ:
ತೆಂಗಿನ ತುರಿಯನ್ನು ರುಬ್ಬಿ. ಬದನೆ ಕಾಯಿ ಉದ್ದಗೆ ಹೆಚ್ಚಿ.ಈರುಳ್ಳಿಯನ್ನು ಹೆಚ್ಚಿ.. 
ಅಕ್ಕಿ ತೊಳೆದು ಎಲ್ಲವನ್ನು ಸೇರಿಸಿ, ನೀರನ್ನು ಹಾಕಿ  ಕುಕ್ಕರ್ನಲ್ಲಿ ೩ ಕೂಗು ಮಾಡಿ.
ಮೇಲಿಂದ ಬೇಕಾದ್ರೆ ಇನ್ನಸ್ಟು ತುಪ್ಪ ಸೇರಿಸಿ.
ನಂತರ ಸಾಸುವೆ ಒಗ್ಗರಣೆ ಮಾಡಿ. 
ಬದನೆ ಕಾಯಿ ಅನ್ನಕ್ಕೆ ಹೊಂದಿಕೊಂಡಿರುತ್ತದೆ. ನಿಮಗೆ ಹೋಳುಗಳಾಗಿ ಸಿಗುವದಿಲ್ಲ.
ಹೋಳು ಸಿಗಬೇಕಂದರೆ  ಅನ್ನ ಮಾಡಿದ ಮೇಲೆ ಎಲ್ಲವನ್ನು ಸೇರಿಸಬೇಕು. ಈ ಮೇಲೆ ನಾನು ಹೇಳಿದ ತರಹ ಮಾಡಿದರೆ ಸಮಯದ ಉಳಿತಾಯವಾಗುತ್ತದೆ.

ಆರಾಮದಾಯಕ ಅಡಿಗೆ....ಮನಸ್ಸಿಗೂ... ಉದರಕ್ಕೂ.....


ಚಂದ್ರಿಕಾ ಹೆಗಡೆ

ಕಡಲೆ ಬೀಜ ( ಶೇಂಗ) ಕೆಂಪು ಚಟ್ನಿ

ಕಡಲೆ ಬೀಜ- ೧/೨ ಕಪ್
ತೆಂಗಿನ ತುರಿ- ೧/೪ ಕಪ್ 
ಕೆಂಪು ಮೆಣಸಿನ ಕಾಯಿ- ೩ 
ಉಪ್ಪು
ಸಕ್ಕರೆ- ೧/೪ ಚಮಚ
ಇಂಗು, ೧ ಚಮಚ ಎಣ್ಣೆ, ಸಾಸುವೆ - ಒಗ್ಗರಣೆಗೆ 


ಕಡಲೆ ಬೀಜ, ಕೆಂಪು ಮೆಣಸಿನ ಕಾಯಿಗಳನ್ನು   ೧/೨ ಚಮಚ  ಎಣ್ಣೆಯಲ್ಲಿ ಹುರಿಯಿರಿ.
ಇದಕ್ಕೆ ತೆಂಗಿನ ತುರಿ, ಸ್ವಲ್ಪ ನೀರು ಸೇರಿಸಿ, ಉಪ್ಪು ಸಕ್ಕರೆ ಹಾಕಿ ರುಬ್ಬಿ.
 ರುಬ್ಬಿದ ಮಿಶ್ರಣಕ್ಕೆ, ಇಂಗು ಸಾಸುವೆ ಒಗ್ಗರಣೆ ನೀಡಿ.
ಸಕಾಲಕ್ಕೆ ಸಿಗಲಿ ಸವಿ ಭೋಜನ.....


ಚಂದ್ರಿಕಾ ಹೆಗಡೆ

ಪಪಾಯ ಜ್ಯೂಸ್

ಪಪಾಯ- ೧ ಚಿಕ್ಕದು 
ಸಕ್ಕರೆ- ೩ ಚಮಚ
ಚಿಟಿಕೆ ಉಪ್ಪು
ನೀರು.


ಪಪಾಯವನ್ನು ಸಿಪ್ಪೆ , ಬೀಜಗಳಿಂದ ಬೇರ್ಪಡಿಸಿ, ಇದಕ್ಕೆ ಸಕ್ಕರೆ, ಉಪ್ಪು, ನೀರು ಸೇರಿಸಿ ಜ್ಯುಸೆರ್ನಲ್ಲಿ  ಹಾಕಿ ಪಾನೀಯ ಸಿದ್ಧಪಡಿಸಿ.
                                         

ಸವಿಯೇ....!
ಪಪಾಯ ಒಳ್ಳೆಯ ಸ್ವಾದಿಷ್ಟ , ಆರೋಗ್ಯಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುವ ಫಲ...
ಇದರ ಸುವಾಸನೆ ಕೆಲವೊಬ್ಬರಿಗೆ ವಾಸನೆ!
ಆ ಕಾರಣ ಹಣ್ಣು ಹಾಗೆ ತಿಂದರೆ ಈ ತೊಂದರೆ... ಬೇರೆ ರೂಪದಲ್ಲಿ ನೀಡುವ ಯತ್ನ ಫಲಕಾರಿಯಾಗಿದೆ. 
   
ಚಂದ್ರಿಕಾ  ಹೆಗಡೆ