ಬೇಕಿರುವದು :
ಬಸಳೆ ಸೊಪ್ಪು - ೧೦ ಎಲೆ ( ದಂಟನ್ನು ಸೇರಿಸಬಹುದು )
ಜೀರಿಗೆ :೧ ಚಮಚ
ಎಣ್ಣೆ- ೧ ಚಮಚ
ಮಜ್ಜಿಗೆ - ೧ ಲೋಟ
ತೆಂಗಿನ ತುರಿ - ೧/೪ ಕಪ್
ಉಪ್ಪು ರುಚಿಗೆ
ಬಸಳೆ ಸೊಪ್ಪನ್ನು ತೊಳೆದು ಹೆಚ್ಚಿ .
ಕಾದ ಎಣ್ಣೆಗೆ ಜೀರಿಗೆ ಬಸಳೆ ಸೊಪ್ಪನ್ನು ಹಾಕಿ ಹುರಿಯಿರಿ.
ಆರಿದ ಮೇಲೆ ತೆಂಗಿನ ತುರಿ ಮಜ್ಜಿಗೆ ( ರುಬ್ಬಲು ಅಗತ್ಯವಿದ್ದಸ್ಟು ) ಸೇರಿಸಿ ರುಬ್ಬಿ.
ಇದನ್ನು ಸೋಸಿಕೊಳ್ಳಿ . ಉಪ್ಪು ಹಾಕಿ . ಅಗತ್ಯವಿದ್ದಲ್ಲಿ ನೀರಿನ ಬದಲು ಮಜ್ಜಿಗೆನೆ ಶ್ರೇಷ್ಠ !!
ಬಿಸಿಲೇರಿದಾಗ ಸಮಾಧಾನ ನೀಡುವವರು "" one ಅಂಡ್ only ತಂಬುಳಿ '".
ಬಸಲೆಗೆ ಸಸ್ಯಶಾಸ್ತ್ರೀಯ ಹೆಸರು Basella alba, or Malabar spinach.... ಬಾಯಿ ಹುಣ್ಣು
ಆದಾಗ ಬಸಳೆ ಎಲೆ ಮಧ್ಯ ಸ್ವಲ್ಪ ಉಪ್ಪು ಹಾಕಿ( ಕಲ್ಲುಪ್ಪು) ಸೇವಿಸುವದು ಮಲೆನಾಡಿನಲ್ಲಿ ಕಾಣಬಹುದು .
ಇನ್ನೊಂದು ವಿಚಾರ ಹೇಳಲೋಬೇಡವೋ ಎಂಬ ಹಿಂಜರಿಕೆಯಿದ್ದರೂ ವೈಜ್ಞಾನಿಕ ಮನಸಿಗರು ಇದ್ದೆ
ಇರುತ್ತಾರೆನ್ನುವ ವಿಶ್ವಾಸದಲ್ಲಿ ಪ್ರಸ್ತಾಪಿಸುತ್ತಿರುವೆ . ಚಿಕ್ಕ ಮಕ್ಕಳಿಗೆ ಮಲಬದ್ಧತೆ ಆದಾಗ ಹಿಂದೆ ಮಕ್ಕಳ
ಹಿಂದೆ:) ಬಸಳೆ ದಂಟನ್ನು ಹಾಕಿ ಸರಾಗವಾಗುವ ಹಾಗೆ ಮಾಡುತ್ತಿದ್ದರಂತೆ . ಬಸಳೆ ಸೊ ಪ್ಪ್ಪು/ ದಂಟು ...
ಇವುಗಳಿಂದ ತಂಬುಳಿ ಅಷ್ಟೇ ಅಲ್ಲ .... ದೋಸೆ, ಬಜ್ಜಿ, ಸೂಪ್ , ಪಲ್ಯ... ಹೀಗೆ ತರಾವರಿ ಅಡುಗೆ
ಮಾಡಬಹುದು . ನಿಮ್ಮ ಮನೆಯ ಹಿತ್ತಿಲಲ್ಲಿ , ಟೆರೆಸ್ ನಲ್ಲಿ , ಕುಂಡದಲ್ಲಿ ಸುಲಭವಾಗಿ ಬೆಳೆಸಬಹುದು
.ನಮ್ಮ ಮನೆಯ ಕುಂಡದಲ್ಲಿ ಬೆಳೆದ ಬಸಲೆ..... ಬೆಳೆಸಲು ಗಿಡ ಸಿಗದೇ ಹೋದರೆ ಮಾರ್ಕೆಟ್ ನಿಂದ
ತಂದ ಬಸಳೆ ದಂಟನ್ನು ಕುಂಡದಲ್ಲಿ ನೆಡಿ . ಸೊಂಪಾಗಿ ಬೆಳೆಯುತ್ತದೆ.
ಬಸಳೆ ....ಸೊಬಗೆ.... ಚಂದ್ರಿಕಾ ಹೆಗಡೆ