08 ಡಿಸೆಂಬರ್ 2011

ಮೊಳಕೆ ಮೆಂತೆ ಪಲಾವ್

 ಅನ್ನ- ೨ ಕಪ್
ಮೊಳಕೆ ಮೆಂತೆ- ೧ ಕಪ್
ಈರುಳ್ಳಿ-೨ ಹೆಚ್ಚಿದ್ದು
ಮೆಣಸಿನ ಪುಡಿ- ೨ ಚಮಚ
ಹಸಿಮೆಣಸು- ೨-೩ ಕತ್ತರಿಸಿದ್ದು
ಶುಂಟಿ- ಬೆಳ್ಳುಳ್ಳಿ ಪೇಸ್ಟ್- ೨ ಚಮಚ
ಕೊತ್ತಂಬರಿ ಸೊಪ್ಪು
ಚಕ್ಕೆ, ಲವಂಗ
ಸಾಸಿವೆ,
ನಿಂಬೆ ರಸ, ಉಪ್ಪು
ಎಣ್ಣೆ


ಬಾಣಲೆಯಲ್ಲಿ ಎಣ್ಣೆ ಸಾಸಿವೆ ಚಕ್ಕೆ ಲವಂಗ ಹುರಿಯಿರಿ. ಇದಕ್ಕೆ ಈರುಳ್ಳಿ+ಹಸಿಮೆಣಸು+ಶುಂಟಿ ಬೆಳ್ಳುಳ್ಳಿ ಪೇಸ್ಟ್  ಸೇರಿಸಿ ಹುರಿಯಿರಿ. ನಂತರ ಮೊಳಕೆ ಕಟ್ಟಿದ ಮೆಂತೆ ಸೇರಿಸಿ. ೫-೭ ನಿಮಿಷ ಬೇಯಿಸಿ.
ಇದಕ್ಕೆ ಮೆಣಸಿನ ಪುಡಿ+ ಅರಿಸಿನ ಸ್ವಲ್ಪ ಉಪ್ಪು ಹಾಕಿ. ಅನ್ನ ಸೇರಿಸಿ. ಕೊತ್ತಂಬರಿ ಸೊಪ್ಪು+  ರುಚಿಗೆ ತಕ್ಕಸ್ಟು ಇನ್ನಸ್ಟು ಉಪ್ಪು ಸೇರಿಸಿ ಚೆನ್ನಾಗಿ  ಮಿಕ್ಸ್ ಮಾಡಿ.
ಕೊನೆಯಲ್ಲಿ ನಿಂಬೆ ರಸ ಸೇರಿಸಿ.

ಕಹಿ ಇಲ್ಲದ ಮೆಂತೆ  ಪಲಾವ್.
ಕೇಳ್ಪಟ್ಟ ಮಾತು 
ಸ್ನೇಹಿತರೆ , ಮೆಂತೆ ತಂಪಿನ ಅಂಶ ಹೊಂದಿದೆ ಎಂಬುದು ಹಿರಿಯರ ಮಾತು. ನನ್ನ ಇದೆ ಬ್ಲಾಗ್ ನಲ್ಲಿ ಈ ಮೊದಲು ಮೆಂತೆ ಆಸರಿಗೆ ಎಂಬ ಪಾನೀಯವೊಂದನ್ನು ಪರಿಚಯಿಸಿದ್ದೇನೆ.    ದಿನಾಲು ಬೆಳ್ಳಿಗ್ಗೆ ನೆನಸಿದ ಮೆಂತೆಯನ್ನು  ತಿಂದರೆ ಮಹಿಳೆಯರನ್ನು ಕಾಡುವ ತಿಂಗಳಿನ ನೋವು ಕಡಿಮೆಯಾಗುವದು ಎಂಬುದು ಕೇಳ್ಪಟ್ಟ ಮಾತು.

ಮುಂಬರುವ ದಿನಗಳಲ್ಲಿ ಮೆಂತೆ ದೋಸೆ, ಚಟ್ನಿ , ಕಷಾಯವನ್ನು ಪರಿಚಯಿಸುತ್ತೇನೆ.

ಅಡುಗೆಯಲ್ಲಿ/ ಅಡುಗೆ ಬರೆಯುವಲ್ಲಿ ನನಗಂತೂ ಸಮಾಧಾನ....


ಚಂದ್ರಿಕಾ ಹೆಗಡೆ

ಮೊಳಕೆ ಹುರುಳಿ ಕಾಳು ಸಾರು

ಮೊಳಕೆ ಕಟ್ಟಿದ ಹುರುಳಿ- ೧ ಕಪ್
ತೆಂಗಿನ ತುರಿ- ೧ ಕಪ್  
ಶುಂಟಿ ಬೆಳ್ಳುಳ್ಳಿ ಪೇಸ್ಟ್ - ೨ ಚಮಚ
ಹುಳಿಸೆ ಹಣ್ಣು- ಅಡಿಕೆ ಗಾತ್ರ
ಕರಿಬೇವು- ೪-೫ ಎಲೆ
ಕೆಂಪು ಮೆಣಸು- ೫-೬( ಬ್ಯಾಡಗಿ- ಗುಂಟುರ್)
ಕೊತ್ತಂಬರಿ ಬೀಜ- ೨ ಚಮಚ
ಅರಿಸಿನ, ಸಾಸಿವೆ, ೨ ಚಮಚ ಎಣ್ಣೆ-- ಒಗ್ಗರಣೆಗೆ
ಉಪ್ಪು
ಈರುಳ್ಳಿ-೧
ಚಕ್ಕೆ- ೧
ಬೆಲ್ಲ - ೧/೨ ಚಮಚ

ಹುರುಳಿಯನ್ನು ೧ ದಿನ ನೆನಸಿ- ಬಟ್ಟೆಯಲ್ಲಿ/ ಜಾಳಿಗೆಯಲ್ಲಿ ಇಡಿ. ಮೊಳಕೆ ಕಟ್ಟುವದು.
ಇದನ್ನು ಬೇಯಿಸಿಟ್ಟುಕೊಳ್ಳಿ.
ಚಕ್ಕೆ+ತೆಂಗಿನ ತುರಿ +ಮೆಣಸಿನ ಕಾಯಿ+ಕೊತ್ತಂಬರಿ ಬೀಜ+ಶುಂಟಿ- ಬೆಳ್ಳುಳ್ಳಿ ಪೇಸ್ಟ್ ರುಬ್ಬಿ.
ಬಾಣಲೆಗೆ ಎಣ್ಣೆ ಹಾಕಿ , ಸಾಸಿವೆ ಒಗ್ಗರಣೆ ಮಾಡಿ. ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ. ಹಸಿ ವಾಸನೆ ಹೋಗುವಂತೆ ಬೇಯಿಸಿ.
೫-೮ ನಿಮಿಷ ಸಣ್ಣ ಉರಿಯಲ್ಲೇ  ಇಡಿ.
ಇದಕ್ಕೆ ಬೇಯಿಸಿದ ಹುರುಳಿ, ಹುಳಿಸೆ ರಸ, ಬೆಲ್ಲ, ಉಪ್ಪು, ಕರಿಬೇವು,   ಅರಿಸಿನ ಹಾಕಿ.
೪-೫ ನಿಮಿಷ ಕುದಿಸಿ.

ಮೊಳಕೆ ಕಟ್ಟಿದ ಕಾಳು  ಆರೋಗ್ಯಕ್ಕೆ ಒಳ್ಳೇದು...


ಚಂದ್ರಿಕಾ ಹೆಗಡೆ

06 ಡಿಸೆಂಬರ್ 2011

ಸವತೆಕಾಯಿ ಪೂರಿ

ಅಕ್ಕಿ ಹಿಟ್ಟು- ೧ ಕಪ್
ಸವತೆಕಾಯಿ ೧/೨
ಗೋದಿ ಹಿಟ್ಟು ೧/೨ ಕಪ್
ಹಸಿಮೆಣಸಿನ ಕಾಯಿ-೨
ಕರಿಬೇವು-೩-೪
ಹಿಂಗು-ಚಿಟಿಕೆ
ಉಪ್ಪು
ಎಣ್ಣೆ

ಸವತೆಕಾಯಿಯೊಂದಿಗೆ  ಹಸಿಮೆಣಸು, ಕರಿಬೇವು, ಹಿಂಗು, ಉಪ್ಪು ಹಾಕಿ ರುಬ್ಬಿ.ಅಕ್ಕಿ ಹಿಟ್ಟು, ಗೋದಿ ಹಿಟ್ಟಿನಲ್ಲಿ ಈ ಮಿಶ್ರಣವನ್ನು ಸೇರಿಸಿ, ಪೂರಿ ಲಟ್ಟಿಸಿ ಕರಿಯಿರಿ,,

ಎಣ್ಣೆ ಮಯ.... ಆದರು ತಿನ್ನುವಲ್ಲಿ... ಅದೇನೋ...ಸಂತೋಷ....

ಚಂದ್ರಿಕಾ ಹೆಗಡೆ

ಸವತೆ ಕಾಯಿ ನೀರ್ ದೋಸೆ

ಅಕ್ಕಿ- ನೆನಸಿದ್ದು- ೨ ಕಪ್
ಸವತೆ ಕಾಯಿ- ಸಿಪ್ಪೆ ಸಮೇತ-೧
ಉಪ್ಪು


ಅಕ್ಕಿಯನ್ನು ೩-೪ ಘಂಟೆ ಕಾಲ ನೆನಸಿ. ಸವತೆ ಕಾಯಿಯೊಂದಿಗೆ  ರುಬ್ಬಿ. ಮಿಶ್ರಣ ನೀರು ನೀರಾಗಿರಲಿ.  ಅದನ್ನು ದೋಸೆ ತವದಲ್ಲಿ ಹುಯ್ಯಿರಿ.
 ಸ್ವಾದಿಷ್ಟ  ಸವತೆ ಕಾಯಿ ದೋಸೆ....
ಹೀಗೇನೆ  ಮಂಗಳೂರ್  ಸವತೆ ಕಾಯಿ/ ಮಗೆ ಕಾಯಿ ದೋಸೆ ಮಾಡಬಹುದು.


ರಜಾದ ಮಜಾ ಅಡುಗೆ ಮನೆಯಲ್ಲಿ.....

ಚಂದ್ರಿಕಾ ಹೆಗಡೆ

ಹುಳಸೆ ಕಾಯಿ ಅಪ್ಪೆ ಹುಳಿ

ಹುಳಸೆ ಕಾಯಿ -೩
ಬೆಳ್ಳುಳ್ಳಿ 3 -೪ ಎಸಳು  
ಬೆಲ್ಲ- ಅಡಿಕೆ ಗಾತ್ರ
ಎಣ್ಣೆ ೧ ಚಮಚ   
ಉಪ್ಪು
ಹಸಿಮೆಣಸು-೨
ಸಾಸಿವೆ ೧/೨ ಚಮಚ




ಹುಳಿಸೇ ಕಾಯಿಯನ್ನು ಬೇಯಿಸಿ. ಹುಸುಕಿಡಿ. ಸೋಸಿ. 


ಎಣ್ಣೆ ಸಾಸಿವೆ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಒಗ್ಗರಣೆ ತಯಾರಿಸಿ. ಸೂಸಿದ 


ರಸಕ್ಕೆ ಸೇರಿಸಿ. ಉಪ್ಪು ಬೆಲ್ಲ ಹಾಕಿ.


ಬಿಸಿ ಬಿಸಿ ಅನ್ನಕ್ಕಾಗಿ.. ಹುಳಿ ಖಾರದ... ಬಾಯಲ್ಲಿ ನೀರೂರಿಸುವ ಅಪ್ಪೆಹುಳಿ 


ಇಷ್ಟವಾಗದವರು   ಇದ್ದಾರ....ಅಯ್ಯೋ....ಅನ್ನುವ ಆಶ್ಚರ್ಯ ವಾಗುವ ಸರದಿ  


ಮಲೆನಾಡಿಗರದು.






ಚಂದ್ರಿಕಾ ಹೆಗಡೆ

03 ಡಿಸೆಂಬರ್ 2011

ಟೋಮೇಟೋ ತಿಳಿ ಸಾರು

ಟೋಮೇಟೋ -೫-೬
ತೊಗರಿಬೇಳೆ-೨ ಚಮಚ
ಕಾಳು ಮೆಣಸು- ೧೦
ಮೆಣಸಿನ ಪುಡಿ- ೧ ಚಮಚ
ಜೀರಿಗೆ- ೧ ಚಮಚ
ಲವಂಗ- ೩
ಮೆಂತೆ ೧/೪ ಚಮಚ
ಅರಿಸಿನ 
ಉಪ್ಪು
ಹಿಂಗು
ಬೆಲ್ಲ-೧/೨ ಚಮಮ್ಚ
ಅಡಿಕೆ ಗಾತ್ರದ ಹುಳಿಸೇ ಹಣ್ಣು
ಕರಿಬೇವು
ಒಗ್ಗರಣೆಗೆ - ಸಾಸಿವೆ ,ಜೀರಿಗೆ,  ಎಣ್ಣೆ 
ಟೊಮೇಟೊ- ಹೆಚ್ಚಿದ್ದು- ೧
ಕೊತ್ತಂಬರಿ ಸೊಪ್ಪು 

ಮೊದಲು ತಿಳಿ ಸಾರಿನ ಪುಡಿ:   
ತೊಗರಿ ಬೇಳೆ + ಕರಿಬೇವು +ಮೆಂತೆ+ಲವಂಗ+ಜೀರಿಗೆ+ ಕಾಳು ಮೆಣಸು ಹುರಿದು ಪುಡಿ ಮಾಡಿ
ಟೊಮೇಟೊ ಬೇಯಿಸಿ.. ಇಡಿಯಾಗಿ.  ನಂತರ  ಜಾಳಿಗೆಯಲ್ಲಿ ಟೊಮೇಟೊ ಹಾಕಿ. ಚೆನ್ನಾಗಿ ಹಿಸುಕಿ. ಟೊಮೇಟೊ ರಸ ಬೀಳಲು ಕೆಳಗೊಂದು ಪಾತ್ರೆ ಇಡಿ...!
ಆ ಟೊಮೇಟೊ ರಸಕ್ಕೆ, ಹೆಚ್ಚಿದ ಟೊಮೇಟೊ+ ಕೊತ್ತಂಬರಿ ಸೊಪ್ಪು + ತಿಳಿ ಸಾರಿನ ಪುಡಿ+ ಬೆಲ್ಲ+ ಹಿಂಗು+ ಉಪ್ಪು+ಅರಿಸಿನ  ಹಾಕಿ.
ಸಾಸಿವೆ , ಜೀರಿಗೆ ಒಗ್ಗರಣೆ ನೀಡಿ.

ಬಿಸಿ ಬಿಸಿ ಅನ್ನ-- ಘಮ ಘಮ ಸಾರು....

ಚಂದ್ರಿಕಾ ಹೆಗಡೆ

ಕ್ಯಾಪ್ಸಿಕಂ- ಈರುಳ್ಳಿ ಪಲ್ಯ

ಕ್ಯಾಪ್ಸಿಕಂ- ೧ ದೊಡ್ಡದು
ಈರುಳ್ಳಿ-೨ 
ಮೆಣಸಿನ ಪುಡಿ-೧ ಚಮಚ
ಎಣ್ಣೆ- ೧ ೧/೨ ಚಮಚ
ಸಾಸಿವೆ-೧/೨ ಚಮಚ
ಉಪ್ಪು 

ಕ್ಯಾಪ್ಸಿಕಂ+ಈರುಳ್ಳಿಯನ್ನು ಹೆಚ್ಚಿ. ಬಾಣಲೆಗೆ ಎಣ್ಣೆ ಸಾಸಿವೆ ಹಾಕಿ. ನಂತರ ಕ್ಯಾಪ್ಸಿಕಂ+ ಈರುಳ್ಳಿಯನ್ನು ಸೇರಿಸಿ ಹುರಿಯಿರಿ. ಮೆಣಸಿನ ಪುಡಿ ಸೇರಿಸಿ. ಉಪ್ಪು ಹಾಕಿ. 
ಸರಳವಾದರೂ... ಹುರಿದ    ಕ್ಯಾಪ್ಸಿಕಂ... ಜೊತೆ ಈರುಳ್ಳಿ... ವಾಹ್

ಚಂದ್ರಿಕಾ ಹೆಗಡೆ