03 ಡಿಸೆಂಬರ್ 2011

ಬಸಳೆ ಭಜ್ಜಿ..

ಬಸಳೆ ಸೊಪ್ಪು- ೪ ದಂಟು.. ಸೊಪ್ಪು
ತೆಂಗಿನ ತುರಿ-೧ ಬಟ್ಟಲು
ಈರುಳ್ಳಿ- ೧
ಎಣ್ಣೆ-೧ ಚಮಚ ಬಸಳೆ ಸೊಪ್ಪು ಹುರಿಯಲು+ ೧ ಚಮಚ ಒಗ್ಗರಣೆಗೆ+ ಸಾಸಿವೆ
ಉಪ್ಪು
ಮಜ್ಜಿಗೆ- ೧ ಬಟ್ಟಲು
ನಾನೇ ಬೆಳೆಸಿದ ಬಸಳೆ ಗಿಡ... ಅದೆಂಥ ರುಚಿ....!

ಬಸಳೆ  ಸೊಪ್ಪನ್ನು ತೊಳೆದು ಹೆಚ್ಚಿ. ೧ ಚಮಚ    ಎಣ್ಣೆಯೊಂದಿಗೆ ೨ ನಿಮಿಷ ಹುರಿಯಿರಿ.  ಬಸಳೆ ಮೆತ್ತಗಿನ ಸೊಪ್ಪು . ಆದ್ದರಿಂದ ೨-೩ ನಿಮಿಷ ಬೇಯಿಸಲು ಸಾಕು.
ತೆಂಗಿನ ತುರಿಯನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿ.
ರುಬ್ಬಿದ ಮಿಶ್ರಣಕ್ಕೆ   ಬೇಯಿಸಿದ ಸೊಪ್ಪು, ಉಪ್ಪು, ಮಜ್ಜಿಗೆ, ಹೆಚ್ಚಿದ ಈರುಳ್ಳಿ ಸೇರಿಸಿ.
ಇದಕ್ಕೆ ಸಾಸಿವೆ ಒಗ್ಗರಣೆ ನೀಡಿ.

ಯಾವುದೇ ಖಾರದ ಪದಾರ್ಥವನ್ನು ಬಳಸದೆ ಮಾಡುವ ಭಜ್ಜಿ.ತಿಂಗಳಿಗೆ  ಒಂದು ದಿನವಾದರೂ ಈ ತರಹದ ಆಹಾರವನ್ನ್ನು ಬಳಸಿ.


ಉತ್ತಮ ಆರೋಗ್ಯ ..ಆಹಾರದಲ್ಲೇ....

ಚಂದ್ರಿಕಾ ಹೆಗಡೆ


02 ಡಿಸೆಂಬರ್ 2011

ಟಮೇಟೋ ಸಾರು

ಟಮೇಟೋ - ೪ ಇದರಲ್ಲಿ ೩ ಬೇಯಿಸಿ
ತೊಗರಿ ಬೇಳೆ ಬೇಳೆ-೧/೪ ಕಪ್
ತೆಂಗಿನ ತುರಿ-೧/೨ ಕಪ್
ಕೊತ್ತಂಬರಿ ಬೀಜ- ೩ಚಮಚ 
ಜೀರಿಗೆ ೧/೨ ಚಮಚ
ಗುಂಟುರು  ಮೆಣಸಿನ ಕಾಯಿ-೨ 
ಬ್ಯಾಡಗಿ ಮೆಣಸಿನ ಕಾಯಿ-೨
ಇಂಗು
ಬೆಲ್ಲ ೧/೨ ಚಮಚ
ಉದ್ದಿನ ಬೇಳೆ ೧/೨ ಚಮಚ 
ಒಗ್ಗರಣೆಗೆ ಎಣ್ಣೆ, ಸಾಸಿವೆ, 
ಕರಿಬೇವು,ಅರಿಸಿನ 
ಹುಳಿಸೇ ರಸ ೨ ಚಮಚ 

ಬೇಳೆ ಯೊಂದಿಗೆ ೩ ಟಮೇಟೋ ಬೇಯಿಸಿ.

ಈಗ ಸಾರಿನ ಪುಡಿ ಮಾಡೋಣ:
ಜೀರಿಗೆ , ಕೊತ್ತಂಬರಿ ಬೀಜ, ಉದ್ದಿನ ಬೇಳೆ, ೨ ತರಹದ ಮೆಣಸಿನ ಕಾಯಿಗಳನ್ನು ತೆಂಗಿನ ತುರಿಯೊಂದಿಗೆ ಹುರಿದು ಪುಡಿ ಮಾಡಿ.  

ಬೇಯಿಸಿದ ಬೇಳೆ + ಟಮೇಟೋ  ಜೊತೆ ಈ ಪುಡಿಯನ್ನು ಹಾಕಿ. ಬೆಲ್ಲ, ಉಪ್ಪು, ಇಂಗು, ಹುಳಿಸೇ ರಸ ಮಿಕ್ಸ್ ಮಾಡಿ. ಇದಕ್ಕೆ ಕರಿಬೇವು, ಅರಿಸಿನ  ಸೇರಿಸಿ. ಸಾಸಿವೆ ಒಗ್ಗರಣೆ ಹಾಕಿ.

ಇಡ್ಲಿ/ ದೋಸೇಗೆಂದೇ .... ಬಂದಿದೆ...
ಸಾರು ಎಂದೆ.....

ಚಂದ್ರಿಕಾ ಹೆಗಡೆ



ಕ್ಯಾಬೇಜ್ ದೋಸೆ


ದೋಸೆ ಹಿಟ್ಟು- ೨ ಕಪ್
ಕ್ಯಾಬೇಜ್- ಹೆಚ್ಚಿದ್ದು೧/೨ ಕಪ್
ಈರುಳ್ಳಿ-೧ (ಹೆಚ್ಚಿ)
ಹಸಿಮೆಣಸಿನ ಕಾಯಿ-೨ ಹೆಚ್ಚಿ.
ಅರಿಸಿನ- ಚಿಟಿಕೆ
ಇಂಗು ಸ್ವಲ್ಪ
ಖಾರ ಪುಡಿ ೧/೨ ಚಮಚ
ಎಣ್ಣೆ

ದೋಸೆ ಹಿಟ್ಟಿಗೆ  ಎಣ್ಣೆ ಹೊರತು ಪಡಿಸಿ  ಎಲ್ಲವನ್ನು ಸೇರಿಸಿ... ದೋಸೆ ಮಾಡಿ....








ಮಲೆನಾಡಿಗರ  ಹೆಮ್ಮೆಯ.....ದೋಸೆ....!


ಚಂದ್ರಿಕಾ ಹೆಗಡೆ

ಮೆಂತೆ ಸೊಪ್ಪಿನ - ದಾಲ್

ಮೆಂತೆ ಸೊಪ್ಪು- ೧ ಕಟ್ಟು ( ಸ್ವಚ್ಛ ಮಾಡಿದ್ದು)
ಹೆಸರುಬೇಳೆ - ೧ ಕಪ್(ಬೇಯಿಸಿಕೊಳ್ಳಿ)
ಹಸಿಮೆಣಸು-೨ (ಖಾರವಿರುವದು)
ಕಸೂರಿ ಮೇತಿ..೨ ಚಮಚ...!
ಜೀರಿಗೆ-೧ ಚಮಚ 
ಎಣ್ಣೆ-೨ ಚಮಚ
ಉಪ್ಪು
ನಿಂಬೆರಸ-೧ ಚಮಚ 
ಸಾಸಿವೆ-೧/೨ ಚಮಚ 


ಬಾಣಲೆಗೆ ೨ ಚಮಚ ಎಣ್ಣೆ ಹಾಕಿ. ಇದಕ್ಕೆ ಸಾಸಿವೆ ಜೀರಿಗೆ , ಹಸಿಮೆಣಸಿನ ಕಾಯಿ ಕಸೂರಿ ಮೇತಿ  ಹಾಕಿ ಫ್ರೈ ಮಾಡಿ. ಹಸಿ ಮೆಂತೆ ಸೊಪ್ಪನ್ನು ಹಾಕಿ ಬೇಯುತ್ತಿದ್ದ ಹಾಗೆ ... ಬೇಯಿಸಿಟ್ಟ ಹೆಸರು ಬೇಳೆಯನ್ನು ಹಾಕಿ. ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ..ಸ್ವಲ್ಪ ಗಟ್ಟಿಯಾಗುವ ತನಕ.  ನಂತರ    ನಿಂಬೆರಸ ಸೇರಿಸಿ.

ಅನ್ನ/ ಚಪಾತಿ ಜೊತೆ.... ದಾಲ್...!

ಚಂದ್ರಿಕಾ ಹೆಗಡೆ

ಚಾಕ್ಲೆಟ್ ಬಾಲ್ಸ್

 ಕೋಕೋ ಪೌಡರ್-೩ ಚಮಚ
sweetened  condensed  milk -- ೩ ಚಮಚ 
ಬಿಸ್ಕಿಟ್ ಪುಡಿ- ೪ ಚಮಚ

೩ ಚಮಚ ಬಿಸ್ಕಿಟ್ ಪುಡಿಯೊಂದಿಗೆ ಹಾಲು( ಮೇಲೆ ಸೂಚಿಸಿದ್ದು ) ಕೋಕೋ ಪೌಡರ್ ಹಾಕಿ.. ಸಣ್ಣ ಉರಿಯಲ್ಲಿ ೫-೬ ನಿಮಿಷ ಇಡಿ. 
ಚೆನ್ನಾಗಿ ಮಿಕ್ಸ್  ಆಗಲಿ. ಅದು ಆರಿದ ಮೇಲೆ  ಚಿಕ್ಕ ಉಂಡೆಗಳನ್ನಾಗಿ ಮಾಡಿ ಉಳಿದ ೨ ಚಮಚ ಬಿಸ್ಕಿಟ್ ಪುಡಿಯಲ್ಲಿ ಹೊರಳಾಡಿಸಿ.
ಇದಕ್ಕೆ ಬೇಕಾದ್ರೆ ಒಣ ಹಣ್ಣು ಸೇರಿಸಬಹುದು....   ಒಣ ಹಣ್ಣು ಸೇರಿಸುವಾಗ ಮಾಡುವ ವಿಧಾನ ಬೇರೆ.... ಮುಂದಿನ ದಿನಗಳಲ್ಲಿ.....ಬರೆಯುವೆ....

ಮಗುವಿಗೆ ಅದೆಷ್ಟು ದಿನ  ಚಾಕಲೇಟ್  ಮರೆಯಲ್ಲಿ... ಎಂದು ನನ್ನ ಸ್ನೇಹಿತರು ಇಟ್ಟ ಪ್ರಶ್ನೆಗೆ ಉತ್ತರಿಸುವ  ವಿಧಾನ ಹೀಗೂ...... 

ನಿಮಗೂ ಮಗುವಿನ ಹೆಸರಿನಲ್ಲಿ ಸವಿಯುವ ಭಾಗ್ಯ.....


ಚಂದ್ರಿಕಾ ಹೆಗಡೆ

ಚೈನೀಸ್ ಕ್ಯಾಬೇಜ್ ಪಲ್ಯ...

ಚೈನೀಸ್ ಕ್ಯಾಬೇಜ್ ೧/೨
ಈರುಳ್ಳಿ-೨
ಕ್ಯಾರೆಟ್-೧
ಸಾಂಬಾರ್ ಪುಡಿ-೧/೨ ಚಮಚ 
ಉಪ್ಪು, ನಿಂಬೆರಸ 

 ಬಾಣಲೆಗೆ  ೨ ಚಮಚ ಎಣ್ಣೆ ಹಾಕಿ, ...ಈರುಳ್ಳಿಯನ್ನು ಕತ್ತರಿಸಿ...ಹುರಿಯಿರಿ..ಸಾಂಬಾರ್ ಪುಡಿ ಹಾಕಿ.. ಇದಕ್ಕೆ ಕ್ಯಾರೆಟ್ ತುರಿದು ಹಾಕಿ. ಸಣ್ಣದಾಗಿ ಕತ್ತರಿಸಿದ ಚೈನೀಸ್   ಕ್ಯಾಬೇಜ್ ಹಾಕಿ. ಎಲ್ಲವು ಅರ್ಧ ಬೆಂದಿರಲಿ. ನಿಂಬೆರಸ ಸೇರಿಸಿ ಉಪ್ಪು ಹಾಕಿ. 

ಅರ್ಧ ಬೆಂದಿರುವದರಲ್ಲೂ ಮಜವೇ.... ಹಿತವೇ...!

ಚಂದ್ರಿಕಾ ಹೆಗಡೆ

01 ಡಿಸೆಂಬರ್ 2011

ರವೆ ಸಿಹಿ ಬಾತ್( ಸಿರ- ಕೇಸರಿಬಾತ್ )

ರವೆ ೧ ಕಪ್
ಹಾಲು ೩ ಕಪ್
ತುಪ್ಪ- ಸ್ವಲ್ಪ ಧಾರಾಳ ಬಳಸಿ...! ---೧ ಕಪ್...!
ಸಕ್ಕರೆ ೧ ೧/೨ ಕಪ್ 
ಏಲಕ್ಕಿ
ಒಣ ದ್ರಾಕ್ಷಿ
ಗೋಡಂಬಿ...

ರವೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ.... ಘಮ ಬರುವ ತನಕ..... ಇದಕ್ಕೆ ಕಾಯಿಸಿದ ಹಾಲನ್ನು ಹಾಕಿ ಬೇಯಿಸಿ.... ಗಟ್ಟಿಯಾಗುವ ತನಕ. ನಂತರ ಸಕ್ಕರೆ ಸೇರಿಸಿ   ಬೇಯಿಸಿ,.... ತುಪ್ಪ ಮರಳುವ ತನಕ....

ತುಪ್ಪ ಮರಳುವದು ಎಂದರೆ---ರವೆಗೆ ಹಾಲು ಹಾಕಿ ಬೇಯಿಸುವಾಗ ತುಪ್ಪವನ್ನು ರವೆಯೇ ಹೀರಿಕೊಂಡಿರುತ್ತದೆ., ನಿಮಗೆ ತುಪ್ಪ ಎಲ್ಲಿ ಹೋಯ್ತು ಎಂದು ಚಿಂತಿಸುವ ತನಕ!  ಸಕ್ಕರೆ ಹಾಕಿ ಚೆನ್ನಾಗಿ ಕಾಯಿಸಿದಾಗ ಮತ್ತೆ ಮರಳುತ್ತದೆ.... ನೋಡಿ .... ಅಡುಗೆಯ ಚಮತ್ಕಾರ....!
ನಂತರ  ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಹಾಕಿ...


ಮತ್ತೆ ಮತ್ತೆ .... ಬಾತ್....! ಕೇಸರಿ ಬಾತ್...


ಚಂದ್ರಿಕಾ ಹೆಗಡೆ