29 ಜೂನ್ 2013

ದೊಡ್ಡ ಪತ್ರೆ ತಂಬುಳಿ

ಅಗತ್ಯ:

ದೊಡ್ಡಪತ್ರೆ - ೧/೨ ಕಪ್
ಜೀರಿಗೆ- ೧ ಚಮಚ
ಬೆಲ್ಲ- ೧/೨ ಚಮಚ
ತೆಂಗಿನ ತುರಿ - ೧/೨ ಕಪ್
ಮಜ್ಜಿಗೆ- ೧ಕಪ್
ಉಪ್ಪು ರುಚಿಗೆ
ಎಣ್ಣೆ ೧ ಚಮಚ

ವಿಧಾನ:

ದೊಡ್ಡ ಪತ್ರೆ  , ಜೀರಿಗೆ ಯನ್ನು  ಎಣ್ಣೆಯಲ್ಲಿ ಹುರಿದು ತೆಂಗಿನ ತುರಿ , ಮಜ್ಜಿಗೆಯಲ್ಲಿ  ರುಬ್ಬಿ . ಮತ್ತೆ ಬೇಕಾದ್ರೆ ಮಜ್ಜಿಗೆ ಇನ್ನಷ್ಟು ಸೇರಿಸಿ . ಉಪ್ಪು, ಬೆಲ್ಲ ಹಾಕಿ.


ಸವಿ ನೆನಪು ಮಾತ್ರವಲ್ಲ  ಘಳಿಗೆಯೂ !!


ಚಂದ್ರಿಕಾ ಹೆಗಡೆ 

ಪಾಲಕ್ ತಂಬುಳಿ

ಅಗತ್ಯ:

ಪಾಲಕ್ ಸೊಪ್ಪು - ೧/೨ ಕಪ್ ( ತೊಳೆದು ಹೆಚ್ಚಿದ್ದು)
ತೆಂಗಿನ ತುರಿ - ೧/೪ ಕಪ್
ಮಜ್ಜಿಗೆ - ೧ ಕಪ್
 ಜೀರಿಗೆ- ೧/೨ ಚಮಚ
ಮೆಣಸಿನ ಕಾಳು - ೩-೪
ಎಣ್ಣೆ - ೧ ಚಮಚ
ಬೆಲ್ಲ ೧/೪ ಚಮಚ
ಉಪ್ಪು ರುಚಿಗೆ


ವಿಧಾನ:
ಎಣ್ಣೆಯಲ್ಲಿ ಜೀರಿಗೆ , ಮೆಣಸಿನ ಕಾಳು , ಸೊಪ್ಪನ್ನು ಹುರಿದು ತೆಂಗಿನ ತುರಿ ಹಾಗು ಮಜ್ಜಿಗೆಯಲ್ಲಿ ರುಬ್ಬಿ. ಅಗತ್ಯಕ್ಕೆ ತಕ್ಕ ಉಪ್ಪು, ೧/೪ ಚಮಚ ಬೆಲ್ಲವನ್ನು ಸೇರಿಸಿ .  







ಮನೆಯ ಶಕ್ತಿ  ಪಡೆದುಕೊಳ್ಳುವದು ಅಡುಗೆ ಮನೆಯಲ್ಲಿ.....!



ಚಂದ್ರಿಕಾ ಹೆಗಡೆ 

11 ಜೂನ್ 2013

ತಿಳಿ ಸಾರಿನ ಪುಡಿ

ಅಗತ್ಯ :
ತೊಗರಿಬೇಳೆ - ೧ ಕಪ್
ಮೆಣಸಿನ ಕಾಳು - ೧ ೧/೨ ಕಪ್
ಬ್ಯಾಡಗಿ ಮೆಣಸು - ೨ ೦
ಜೀರಿಗೆ - ೧ ೧/೪  ಕಪ್
ಕೊತ್ತಂಬರಿ - ೧ ಕಪ್
ಕರಿಬೇವಿನಎಲೆ - ೧ ಕಪ್
ಅರಿಸಿನ ಪುಡಿ - ೫ ಚಮಚ
ಇಂಗು  - ೨ ಚಮಚ


ವಿಧಾನ :
 ಎಲ್ಲವನ್ನು  ಸಣ್ಣ ಉರಿಯಲ್ಲಿ ಹುರಿದುಕೊಂಡು  ಚೆನ್ನಾಗಿ ಪುಡಿ ಮಾಡಿ ಗಾಳಿಯಾಡದ ಜಾರ್ ನಲ್ಲಿ ಇಡಿ .


ಮಾರ್ಕೆಟ್ ಪುಡಿ ಇಂದಿನಿಂದ  ಪುಡಿ ಪುಡಿ .......:)



ಚಂದ್ರಿಕಾ ಹೆಗಡೆ

07 ಜೂನ್ 2013

ದಾಳಿಂಬೆ ಚಿಗುರಿನ ತಂಬುಳಿ

ದಾಳಿಂಬೆ ಚಿಗುರು -೪
ಜೀರಿಗೆ- ೧/೨ ಚಮಚ 
ತೆಂಗಿನ ತುರಿ - ೧/೨ ಬಟ್ಟಲು 
ಮಜ್ಜಿಗೆ- ೨ ಲೋಟ 
ಉಪ್ಪು ಸಕ್ಕರೆ ೧/೨ ಚಮಚ 
ಎಣ್ಣೆ ೧/೨ ಚಮಚ 
ಒಗ್ಗರಣೆಗೆ: ೧ ಚಮಚ ಎಣ್ಣೆ, ೧/೪ ಚಮಚ ಸಾಸಿವೆ 

ವಿಧಾನ:
ದಾಳಿಂಬೆ ಚಿಗುರು ಜೀರಿಗೆ ( ಬೇಕಿದ್ದರೆ ಹಸಿಮೆಣಸಿನ ಕಾಯಿ) ಎಣ್ಣೆಯಲ್ಲಿ ಹುರಿದುಕೊಂಡು  ತೆಂಗಿನ ತೂರಿ, ಮಜ್ಜಿಗೆ, ಸಕ್ಕರೆ ಜೊತೆ ರುಬ್ಬಿ. ಇನ್ನುಳಿದ ಮಜ್ಜಿಗೆ ಉಪ್ಪು ಸೇರಿಸಿ . ಇದಕ್ಕೆ ಮೇಲೆ ಸೂಚಿಸಿದ ಸಾಮಗ್ರಿಗಳ ಒಗ್ಗರಣೆ ಹಾಕಿ. 




ಅರೋಗ್ಯ ಸಲಹೆ:!!!!!

ದಾಳಿಂಬೆ ಎಲೆಗಳಲ್ಲಿ ದೇಹದ ತೂಕ ಇಳಿಸುವ ಗುಣವಿದೆಯಂತೆ . 
ಇದು ಹಲವಾರು infection  ಗಳನ್ನೂ ಕಡಿಮೆ ಮಾಡುವದಂತೆ . 
ಇದನ್ನು ಜ್ಯೂಸ್ , ಚಹಾದ ರೂಪದಲ್ಲಿ ಸೇವಿಸಬಹುದಂತೆ . 
ಇದರ ಬಳಕೆಯಿಂದ ಒಳ್ಳೆಯ ಜೀರ್ಣ ಶಕ್ತಿ  ಪಡೆಯಬಹುದಂತೆ . 
ಅತಿಸಾರದಲ್ಲಿ ಇದನ್ನು ಪರಿಹಾರವನ್ನಾಗಿ  ಬಳಕೆ ಮಾಡುವದನ್ನು ಕೇಳಿರುವೆ . 

ಯಾವುದಕ್ಕೂ ಒಮ್ಮೆ ಏನಾದರೂ ಆರೋಗ್ಯ ವ್ಯತ್ಯಾಸವಾದಲ್ಲಿ  ಸಮೀಪದ ವೈದ್ಯರನ್ನು ಸಂಪರ್ಕಿಸಿ ಈ ತರಹದ ಮನೆ ಮದ್ದು ಮಾಡಿ . 


ಬಾಳೆ ಹಣ್ಣಿನ ಮುಳುಕ


ಅಗತ್ಯ:
ಹೆಚ್ಚಿದ ಬಾಳೆ  ಹಣ್ಣಿನ ತುಂಡು  ೧/೨ ಕಪ್ 
ಅಕ್ಕಿ ಹಿಟ್ಟು  ೧ ಕಪ್
ಬೆಲ್ಲ ೫-೬ ಚಮಚ 
ಕರಿಯಲು ಎಣ್ಣೆ

ಸೈ.... 
 ಅಕ್ಕಿಯನ್ನು ೨-೩ ಗಂಟೆಗಳ ಕಾಲ ನೆನಸಿ ಬಾಳೆ  ಹಣ್ಣಿನ ತುಂಡು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ  ರುಬ್ಬಿಕೊಳ್ಳಿ. ಅದಕ್ಕೆ ಬೆಲ್ಲ,   ಹಾಕಿ. ಚಿಟಿಕೆ ಉಪ್ಪನ್ನು ಹಾಕಿ.
ಎಣ್ಣೆ ಬಿಸಿ ಮಾಡಿ... ಕೈಯಿಂದ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದು...ಪಡ್ಡಿನ (ಗುಳಿ ಅಪ್ಪ)ಬಾಣಲೆಗೆ ಹಾಕಿ. 

ಇದರ ಜೊತೆ ಶುಂಟಿ ಚಟ್ನಿ... ತುಪ್ಪ...

ಇದು ಹಲಸಿನ ಹಣ್ಣಿನ ಮುಳುಕ ಮಾಡುವ ಹಾಗೆನೆ..... 
   ಸರಳವಾದರೂ... ಸವಿಹೆಚ್ಚು !!
ಚಂದ್ರಿಕಾ ಹೆಗಡೆ 

ಸಿಹಿ ಪುರಿ

ಗೋದಿ ಹಿಟ್ಟು - ೨ ಕಪ್
ತುಪ್ಪ ೧/೪ ಕಪ್
ಸಕ್ಕರೆ ಪಾಕ - ೨ ಕಪ್
ಏಲಕ್ಕಿ ಮಿಶ್ರಿತ ಸಕ್ಕರೆ ಪುಡಿ- ೧ ಕಪ್
ಚಿಟಿಕೆ ಉಪ್ಪು
ಎಣ್ಣೆ ಕರಿಯಲು
ನೀರು ಹಿಟ್ಟನ್ನು ಕಲೆಸಲು

ವಿಧಾನ:


ಗೋದಿ ಹಿಟ್ಟಿಗೆ  ಬಿಸಿ ಮಾಡಿದ ತುಪ್ಪವನ್ನು ಚಿಟಿಕೆ  ಉಪ್ಪು ನೀರನ್ನು ಸೇರಿಸಿ  ಪುರಿ ಹಿಟ್ಟಿನ ಹದಕ್ಕೆ ಕಲೆಸಿ.  ಪುರಿ ಲಟ್ಟಿಸಿದ ಹಾಗೆ ಲಟ್ಟಿಸಿ ಅದರ ಮೇಲೆ ಎಣ್ಣೆ ಹಚ್ಚಿ ೪ ಪದರುಗಳನ್ನಾಗಿ ಮಡಚಿ  ಸ್ವಲ್ಪ ಲಟ್ಟಿಸಿ .
ಹೀಗೆ ಎಲ್ಲವನ್ನೂ ಮಾಡಿ  ಬಿಸಿ ಎಣ್ಣೆಯಲ್ಲಿ  ಕರಿದು ಸಕ್ಕರೆ ಪಾಕದಲ್ಲಿ ಹಾಕಿ ತೆಗೆದು ಇದರ ಮೇಲೆ ಸಕ್ಕರೆ ಪುಡಿ ಉದುರಿಸಿ. ಇದನ್ನು ೧ ವಾರ ಇಡಬಹುದು .

ಸವಿಯಲ್ಲಿ ಏನಿದೆ?


.. . . . . . .
. . ........? ಸವಿಯೇ ಇದೆ.



ಚಂದ್ರಿಕಾ ಹೆಗಡೆ

ಅಮೃತ ಬಳ್ಳಿ ತಂಬುಳಿ

ಬೇಕಿರುವದು:
 ಅಮೃತ ಬಳ್ಳಿ ಎಲೆ- ೧ ೦ 
ಕಾಳು ಮೆಣಸು- ೪ 
ಜೀರಿಗೆ- ೧/೨ ಚಮಚ 
ಮಜ್ಜಿಗೆ- ೧ ಲೋಟ 
ತೆಂಗಿನ ತುರಿ - ೧/೪ ಕಪ್ 
ಉಪ್ಪು ರುಚಿಗೆ 
ಬೆಲ್ಲ ಚೂರು 
ಎಣ್ಣೆ- ೧ ಚಮಚ 

ವಿಧಾನ:
ಅಮೃತಬಳ್ಳಿ ಎಲೆಗಳು , ಜೀರಿಗೆ, ಮೆಣಸಿನ ಕಾಳು , ಎಣ್ಣೆ ಸೇರಿಸಿ ಹುರಿದುಕೊಳ್ಳಿ . ಆರಿದ ಮೇಲೆ ಬೆಲ್ಲ, ಹುರಿದಿಟ್ಟಿರುವ  ಎಲೆ ಇತ್ಯಾದಿ , ತೆಂಗಿನ ತುರಿ ಇವುಗಳನ್ನು ಮಜ್ಜಿಗೆಯಲ್ಲಿ ರುಬ್ಬಿ. ಉಪ್ಪು ಸೇರಿಸಿ . 



ಇದರ ಸಸ್ಯಶಾಸ್ತ್ರೀಯ ಹೆಸರು Tinospora cordifolia,. ಗುಡುಚಿ  ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ . ಹುಡುಕಿ google 

ಅಮೃತಬಳ್ಳಿ ನಿಮ್ಮ ಮನೆಯ ಅಲಂಕಾರಿಕ ಬಳ್ಳಿಯಾಗದಿರಲಿ .... ಅಥವಾ ... ಯಾವದೋ ಡಾಕ್ಟರ್  ಇದನ್ನು ಸೇವಿಸಿ ಎನ್ನುವಾಗ ಜ್ನಾನೋದಯವಾಗದಿರಲಿ ...... 

     ಸವಿಯ ಸೊಬಗಿನ ಒಡೆಯರು ನೀವೆ ಕಣ್ರೀ ...... 




ಚಂದ್ರಿಕಾ ಹೆಗಡೆ