07 ಜೂನ್ 2013

ಬಾಳೆ ಹಣ್ಣಿನ ಮುಳುಕ


ಅಗತ್ಯ:
ಹೆಚ್ಚಿದ ಬಾಳೆ  ಹಣ್ಣಿನ ತುಂಡು  ೧/೨ ಕಪ್ 
ಅಕ್ಕಿ ಹಿಟ್ಟು  ೧ ಕಪ್
ಬೆಲ್ಲ ೫-೬ ಚಮಚ 
ಕರಿಯಲು ಎಣ್ಣೆ

ಸೈ.... 
 ಅಕ್ಕಿಯನ್ನು ೨-೩ ಗಂಟೆಗಳ ಕಾಲ ನೆನಸಿ ಬಾಳೆ  ಹಣ್ಣಿನ ತುಂಡು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ  ರುಬ್ಬಿಕೊಳ್ಳಿ. ಅದಕ್ಕೆ ಬೆಲ್ಲ,   ಹಾಕಿ. ಚಿಟಿಕೆ ಉಪ್ಪನ್ನು ಹಾಕಿ.
ಎಣ್ಣೆ ಬಿಸಿ ಮಾಡಿ... ಕೈಯಿಂದ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದು...ಪಡ್ಡಿನ (ಗುಳಿ ಅಪ್ಪ)ಬಾಣಲೆಗೆ ಹಾಕಿ. 

ಇದರ ಜೊತೆ ಶುಂಟಿ ಚಟ್ನಿ... ತುಪ್ಪ...

ಇದು ಹಲಸಿನ ಹಣ್ಣಿನ ಮುಳುಕ ಮಾಡುವ ಹಾಗೆನೆ..... 
   ಸರಳವಾದರೂ... ಸವಿಹೆಚ್ಚು !!
ಚಂದ್ರಿಕಾ ಹೆಗಡೆ 

ಸಿಹಿ ಪುರಿ

ಗೋದಿ ಹಿಟ್ಟು - ೨ ಕಪ್
ತುಪ್ಪ ೧/೪ ಕಪ್
ಸಕ್ಕರೆ ಪಾಕ - ೨ ಕಪ್
ಏಲಕ್ಕಿ ಮಿಶ್ರಿತ ಸಕ್ಕರೆ ಪುಡಿ- ೧ ಕಪ್
ಚಿಟಿಕೆ ಉಪ್ಪು
ಎಣ್ಣೆ ಕರಿಯಲು
ನೀರು ಹಿಟ್ಟನ್ನು ಕಲೆಸಲು

ವಿಧಾನ:


ಗೋದಿ ಹಿಟ್ಟಿಗೆ  ಬಿಸಿ ಮಾಡಿದ ತುಪ್ಪವನ್ನು ಚಿಟಿಕೆ  ಉಪ್ಪು ನೀರನ್ನು ಸೇರಿಸಿ  ಪುರಿ ಹಿಟ್ಟಿನ ಹದಕ್ಕೆ ಕಲೆಸಿ.  ಪುರಿ ಲಟ್ಟಿಸಿದ ಹಾಗೆ ಲಟ್ಟಿಸಿ ಅದರ ಮೇಲೆ ಎಣ್ಣೆ ಹಚ್ಚಿ ೪ ಪದರುಗಳನ್ನಾಗಿ ಮಡಚಿ  ಸ್ವಲ್ಪ ಲಟ್ಟಿಸಿ .
ಹೀಗೆ ಎಲ್ಲವನ್ನೂ ಮಾಡಿ  ಬಿಸಿ ಎಣ್ಣೆಯಲ್ಲಿ  ಕರಿದು ಸಕ್ಕರೆ ಪಾಕದಲ್ಲಿ ಹಾಕಿ ತೆಗೆದು ಇದರ ಮೇಲೆ ಸಕ್ಕರೆ ಪುಡಿ ಉದುರಿಸಿ. ಇದನ್ನು ೧ ವಾರ ಇಡಬಹುದು .

ಸವಿಯಲ್ಲಿ ಏನಿದೆ?


.. . . . . . .
. . ........? ಸವಿಯೇ ಇದೆ.



ಚಂದ್ರಿಕಾ ಹೆಗಡೆ

ಅಮೃತ ಬಳ್ಳಿ ತಂಬುಳಿ

ಬೇಕಿರುವದು:
 ಅಮೃತ ಬಳ್ಳಿ ಎಲೆ- ೧ ೦ 
ಕಾಳು ಮೆಣಸು- ೪ 
ಜೀರಿಗೆ- ೧/೨ ಚಮಚ 
ಮಜ್ಜಿಗೆ- ೧ ಲೋಟ 
ತೆಂಗಿನ ತುರಿ - ೧/೪ ಕಪ್ 
ಉಪ್ಪು ರುಚಿಗೆ 
ಬೆಲ್ಲ ಚೂರು 
ಎಣ್ಣೆ- ೧ ಚಮಚ 

ವಿಧಾನ:
ಅಮೃತಬಳ್ಳಿ ಎಲೆಗಳು , ಜೀರಿಗೆ, ಮೆಣಸಿನ ಕಾಳು , ಎಣ್ಣೆ ಸೇರಿಸಿ ಹುರಿದುಕೊಳ್ಳಿ . ಆರಿದ ಮೇಲೆ ಬೆಲ್ಲ, ಹುರಿದಿಟ್ಟಿರುವ  ಎಲೆ ಇತ್ಯಾದಿ , ತೆಂಗಿನ ತುರಿ ಇವುಗಳನ್ನು ಮಜ್ಜಿಗೆಯಲ್ಲಿ ರುಬ್ಬಿ. ಉಪ್ಪು ಸೇರಿಸಿ . 



ಇದರ ಸಸ್ಯಶಾಸ್ತ್ರೀಯ ಹೆಸರು Tinospora cordifolia,. ಗುಡುಚಿ  ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ . ಹುಡುಕಿ google 

ಅಮೃತಬಳ್ಳಿ ನಿಮ್ಮ ಮನೆಯ ಅಲಂಕಾರಿಕ ಬಳ್ಳಿಯಾಗದಿರಲಿ .... ಅಥವಾ ... ಯಾವದೋ ಡಾಕ್ಟರ್  ಇದನ್ನು ಸೇವಿಸಿ ಎನ್ನುವಾಗ ಜ್ನಾನೋದಯವಾಗದಿರಲಿ ...... 

     ಸವಿಯ ಸೊಬಗಿನ ಒಡೆಯರು ನೀವೆ ಕಣ್ರೀ ...... 




ಚಂದ್ರಿಕಾ ಹೆಗಡೆ 

ಸುಟ್ಟ ಬದನೆ ಕಾಯಿ ಪಲ್ಯ

ಬದನೆ ಕಾಯಿ - ೧
ಈರುಳ್ಳಿ- ೨
ಹಸಿಮೆಣಸು-೨
 ಎಣ್ಣೆ - ೨ ಚಮಚ
ಸಾಸಿವೆ- ೧/೨ ಚಮಚ
ಅರಿಸಿನ - ೧/೪ ಚಮಚ
ಉಪ್ಪು ರುಚಿಗೆ ತಕ್ಕಷ್ಟು
  ಸಕ್ಕರೆ- ೧/೨ ಚಮಚ


ಬದನೇಕಾಯಿ ( ದೊಡ್ಡದು) ಗ್ಯಾಸ್ ನಲ್ಲಿ ಅಥವಾ ಕೆಂಡದಲ್ಲಿ ಸುಟ್ಟಿಡಿ .
ಈರುಳ್ಳಿ ಹೆಚ್ಚಿ.
ಕಾದ ಎಣ್ಣೆಗೆ ಸಾಸಿವೆ ಹಸಿಮೆಣಸು ಹಾಕಿ ಒಗ್ಗರಣೆ ಸಿದ್ಧಪಡಿಸಿ .
ಇದಕ್ಕೆ ಅರಿಸಿನ  ಉಪ್ಪು ಸಕ್ಕರೆ ಈರುಳ್ಳಿ ಹಾಕಿ ಸ್ವಲ್ಪ ಬಿಸಿ ಮಾಡಿ . ಉರಿಯಿಂದ ತೆಗೆದ ಮೇಲೆ ಸಿಪ್ಪೆ ತೆಗೆದು ಸ್ವಚ್ಚ ಮಾಡಿದ ಬದನೆಕಾಯಿಯ ತಿರುಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
ಚಪಾತಿ / ದೋಸೆ / ರೊಟ್ಟಿ ಜೊತೆಗೆ.... ಇದು ಚೆನ್ನಾಗಿರುವದು .


ಅಕ್ಕಿ ರೊಟ್ಟಿಯೂ ... ಈ ಪಲ್ಯವೂ   ...... ಸಾಟಿ ಯಾವುದು?

ಇದಕ್ಕೆ ಮೊಸರು ಸೇರಿಸಿ ಸೇವಿಸಬಹುದು.

ಚಂದ್ರಿಕಾ ಹೆಗಡೆ 

ನಿಂಬೆ ಹುಲ್ಲಿನ ತಂಬುಳಿ

 
 ಅಗತ್ಯ:

ನಿಂಬೆ ಹುಲ್ಲು - ೨ ಕಡ್ಡಿ
ಜೀರಿಗೆ- ೧ ಚಮಚ 
ಮಜ್ಜಿಗೆ - ೧ ಲೋಟ 
ಉಪ್ಪು ರುಚಿಗೆ 
ಸಕ್ಕರೆ ೧/೨ ಚಮಚ 
ಎಣ್ಣೆ ೧/೨ ಚಮಚ 
ತೆಂಗಿನ ತುರಿ - ೧/೪ ಕಪ್ 

ವಿಧಾನ:


ನಿಂಬೆ ಹುಲ್ಲನ್ನು ಸಣ್ಣಗೆ ಹೆಚ್ಚಿ 
ಎಣ್ಣೆಯಲ್ಲಿ ಜೀರಿಗೆ ನಿಂಬೆ ಹುಲ್ಲು ಹುರಿದುಕೊಳ್ಳಿ . 
ತೆಂಗಿನ ತುರಿಯೊಂದಿಗೆ ಹುರಿದ ನಿಂಬೆ ಹುಲ್ಲು ಜೀರಿಗೆ , ಸ್ವಲ್ಪ ಮಜ್ಜಿಗೆ,  ಸಕ್ಕರೆ ಸೇರಿಸಿ ರುಬ್ಬಿ. 
ಇದನ್ನು ಅಗತ್ಯವಾಗಿ ಸೋಸಿ ಕೊಳ್ಳಿ . ಇಲ್ಲವಾದರೆ ಹುಹ್ಹು ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳುವದು :(
ಇದಕ್ಕೆ ಮತ್ತೆ ಮಜ್ಜಿಗೆ ಉಪ್ಪು ಸೇರಿಸಿ . 

ನಿಂಬೆ ಹುಲ್ಲನ್ನು  ಅನೇಕ ರೋಗಗಳಿಗೆ ಮೂಲಿಕೆಯಾಗಿ ಬಳಸುವರು . 

ಇದನ್ನು ಒಣಗಿಸಿ ಪುಡಿಮಾಡಿ ಇಟ್ಟು  ಬೇಕಾದಾಗ ಬಳಸಬಹುದು . ಇದರ ಕಷಾಯ superb  ಮಾಡುವ ವಿಧಾನ ಹೇಳುತ್ತೇನೆ .  ಸಾರಿನಲ್ಲಿ ಸುವಾಸನೆಗಾಗಿ , ಚಹಾದಲ್ಲಿ , ಸೂಪ್ .... ಹೀಗೆ ಬಳಕೆ ಇದೆ. 
ಇದರಲ್ಲಿರುವ ವಿಶೇಷ ಸುವಾಸನೆ ನಮ್ಮಲ್ಲಿ ಕಟ್ಟಿದ ಮೂಗನ್ನು ಸರಾಗವಾಗಿ ಉಸಿರಾಡುವಂತೆ ಮಾಡುವದು . ಇದರ ಕಷಾಯ ಜ್ವರ ನಿರ್ಮೂಲನೆಗೆ ಸಹಾಯಕಾರಿ ಎನ್ನುವದು .... ನಮ್ಮ.... google .... ತಿಳಿ  ಹೇಳಿದೆ :)
ನಿಮ್ಮ ಮನೆಯಲ್ಲಿ ಸುಲಭವಾಗಿ ಬೆಳೆಸಿ .... ನಾನಂತೂ ಬೆಳೆಸಿದ್ದೇನೆ .... 


ವಿಶೇಷ : ನೀವು ಮಾಡುವ ಸಾಮಾನ್ಯ ಚಹಾಕ್ಕೆ ಇದನ್ನು ಹಾಕಿದರೆ ವಿಶೇಷ ಪರಿಮಳವನ್ನು ಪಡೆಯಬಹುದು . ಚಹಾ ಪುಡಿ ಹಾಕಬೇಕಾದರೆ ಈ ಹುಲ್ಲನ್ನು ಹೆಚ್ಚಿ ಹಾಕಿ. 

ಬಸಳೆ ತಂಬುಳಿ

ಬೇಕಿರುವದು :
 ಬಸಳೆ ಸೊಪ್ಪು - ೧೦ ಎಲೆ ( ದಂಟನ್ನು  ಸೇರಿಸಬಹುದು )
ಜೀರಿಗೆ :೧ ಚಮಚ
ಎಣ್ಣೆ- ೧ ಚಮಚ
ಮಜ್ಜಿಗೆ - ೧ ಲೋಟ
ತೆಂಗಿನ ತುರಿ - ೧/೪ ಕಪ್
ಉಪ್ಪು ರುಚಿಗೆ
ಬಸಳೆ ಸೊಪ್ಪನ್ನು ತೊಳೆದು ಹೆಚ್ಚಿ .
ಕಾದ ಎಣ್ಣೆಗೆ ಜೀರಿಗೆ ಬಸಳೆ ಸೊಪ್ಪನ್ನು ಹಾಕಿ ಹುರಿಯಿರಿ.
ಆರಿದ ಮೇಲೆ ತೆಂಗಿನ ತುರಿ  ಮಜ್ಜಿಗೆ ( ರುಬ್ಬಲು ಅಗತ್ಯವಿದ್ದಸ್ಟು ) ಸೇರಿಸಿ ರುಬ್ಬಿ.
ಇದನ್ನು ಸೋಸಿಕೊಳ್ಳಿ .  ಉಪ್ಪು  ಹಾಕಿ . ಅಗತ್ಯವಿದ್ದಲ್ಲಿ  ನೀರಿನ ಬದಲು ಮಜ್ಜಿಗೆನೆ ಶ್ರೇಷ್ಠ !!

ಬಿಸಿಲೇರಿದಾಗ  ಸಮಾಧಾನ ನೀಡುವವರು  "" one  ಅಂಡ್  only  ತಂಬುಳಿ '".


ಬಸಲೆಗೆ ಸಸ್ಯಶಾಸ್ತ್ರೀಯ ಹೆಸರು Basella alba, or Malabar spinach.... ಬಾಯಿ ಹುಣ್ಣು 
ಆದಾಗ ಬಸಳೆ ಎಲೆ ಮಧ್ಯ ಸ್ವಲ್ಪ ಉಪ್ಪು ಹಾಕಿ( ಕಲ್ಲುಪ್ಪು) ಸೇವಿಸುವದು ಮಲೆನಾಡಿನಲ್ಲಿ ಕಾಣಬಹುದು . 
ಇನ್ನೊಂದು ವಿಚಾರ ಹೇಳಲೋಬೇಡವೋ ಎಂಬ ಹಿಂಜರಿಕೆಯಿದ್ದರೂ  ವೈಜ್ಞಾನಿಕ ಮನಸಿಗರು ಇದ್ದೆ 
ಇರುತ್ತಾರೆನ್ನುವ ವಿಶ್ವಾಸದಲ್ಲಿ  ಪ್ರಸ್ತಾಪಿಸುತ್ತಿರುವೆ . ಚಿಕ್ಕ ಮಕ್ಕಳಿಗೆ ಮಲಬದ್ಧತೆ ಆದಾಗ ಹಿಂದೆ  ಮಕ್ಕಳ 
ಹಿಂದೆ:) ಬಸಳೆ ದಂಟನ್ನು ಹಾಕಿ ಸರಾಗವಾಗುವ ಹಾಗೆ ಮಾಡುತ್ತಿದ್ದರಂತೆ . ಬಸಳೆ ಸೊ ಪ್ಪ್ಪು/ ದಂಟು ... 
ಇವುಗಳಿಂದ ತಂಬುಳಿ ಅಷ್ಟೇ ಅಲ್ಲ .... ದೋಸೆ, ಬಜ್ಜಿ, ಸೂಪ್ , ಪಲ್ಯ... ಹೀಗೆ ತರಾವರಿ ಅಡುಗೆ 
ಮಾಡಬಹುದು . ನಿಮ್ಮ ಮನೆಯ ಹಿತ್ತಿಲಲ್ಲಿ , ಟೆರೆಸ್ ನಲ್ಲಿ , ಕುಂಡದಲ್ಲಿ  ಸುಲಭವಾಗಿ ಬೆಳೆಸಬಹುದು 
.ನಮ್ಮ  ಮನೆಯ ಕುಂಡದಲ್ಲಿ ಬೆಳೆದ ಬಸಲೆ..... ಬೆಳೆಸಲು ಗಿಡ ಸಿಗದೇ  ಹೋದರೆ  ಮಾರ್ಕೆಟ್ ನಿಂದ 
ತಂದ  ಬಸಳೆ ದಂಟನ್ನು  ಕುಂಡದಲ್ಲಿ ನೆಡಿ . ಸೊಂಪಾಗಿ ಬೆಳೆಯುತ್ತದೆ. 

ಬಸಳೆ ....ಸೊಬಗೆ.... ಚಂದ್ರಿಕಾ ಹೆಗಡೆ 

ಹೊನಗೊನೆ ಸೊಪ್ಪಿನ ಪಲ್ಯ

ಬೇಕಿರುವದು:
ಹೊನಗೊನೆ  ಸೊಪ್ಪು - ೧ ಕಪ್
ಈರುಳ್ಳಿ -೧
ಹಸಿಮೆಣಸು -೧
ಎಣ್ಣೆ - ೨ ಚಮಚ
ತೆಂಗಿನ ತುರಿ - ೩ ಚಮಚ
ಸಾಸಿವೆ ೧/೨ ಚಮಚ

ಮಾಡುವ ವಿಧಾನ :
 ಹೊನಗೊನೆ ಸೊಪ್ಪನ್ನು  ಸ್ವಚ್ಛ  ಮಾಡಿ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ . ಈರುಳ್ಳಿಯನ್ನು ಹೆಚ್ಚಿ .
ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಸಾಸಿವೆ ಹಸಿಮೆಣಸು ಹಾಕಿ ಹುರಿಯುತ್ತಿದ್ದ ಹಾಗೆ ಈರುಳ್ಳಿ ಸೇರಿಸಿ ಹುರಿಯಿರಿ . ೨ ನಿಮಿಷದ ಮೇಲೆ ಹೊನಗೊನೆ ಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ೭ ರಿಂದ ೯ -೧೦  ನಿಮಿಷ ಬೇಯಿಸಿ. ಉಪ್ಪು  ಹಾಕಿ .
ಉರಿಯಿಂದ ತೆಗೆದ ಮೇಲೆ ತೆಂಗಿನ ತುರಿ  ಸೇರಿಸಿ .

ಪಲ್ಯ ಸವಿದ ಮೇಲೆ ಮಾತಾಡಿ ಅನ್ನುವಸ್ಟು  ಆತ್ಮವಿಶ್ವಾಸ ಇಲ್ಲಿದೆ. 


ಹೊನಗೊನೆ ಸೊಪ್ಪಿಗೆ ಸಸ್ಯಶಾಸ್ತ್ರೀಯ  ಹೆಸರು sessile  joyweed . ಕಣ್ಣಿನ ತೊಂದರೆಗೆ ಪ್ರಾಚೀನ ಕಾಲದಿಂದಲೂ ಇದನ್ನು ಮೂಲಿಕೆಯನ್ನಾಗಿ ಬಳಸುತ್ತಿದ್ದಾರೆ .  ನೀವು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನಮ್ಮ ಮಾವನ ಮನೆಯಂತಿರುವ google  ಗೆ ಪ್ರಯಾಣ ಬೆಳಸಿ .