13 ಜೂನ್ 2011

ಹಲಸಿನ ಬೇಳೆ ಪಲ್ಯ

ಅಗತ್ಯ:
           ಹಲಸಿನ ಬೇಳೆ ೧ ಬಟ್ಟಲು
           ಹಸಿಮೆಣಸು. ಒಣ ಮೆಣಸು ಸೇರಿ  ೪-೫
           ಎಣ್ಣೆ, ಕಾಯಿ ತುರಿ, ಕರಿ ಬೇವು , ಅರಿಸಿನ, ಒಗ್ಗರಣೆಗೆ ಸಾಸಿವೆ, ಉದ್ದಿನ ಬೇಳೆ....
 ಹಲಸಿನ ಬೇಳೆ ಯ ಸಿಪ್ಪೆಯನ್ನು ತೆಗೆದು... ಅದರ ಕಪ್ಪನೆಯ ಭಾಗವನ್ನು ತೆಗೆದು... ಬೆಳ್ಳಗೆ ಮಾಡಿ... ಒಬ್ಬಟ್ಟಿಗೆ ಮಾಡಿಕೊಳ್ಳುವ ತರಹ.... ನಂತರ ಚೂರು... ೧/೨ ಮಾಡಿದರೂ ಸಾಕು... ಕುಕ್ಕರ್ ನಲ್ಲಿ  ಬೇಯಿಸಿ. 

ಬಾಣಲೆಗೆ ಎಣ್ಣೆ ಸಾಸಿವೆ ಉದ್ದಿನ ಬೇಳೆ ಒಗ್ಗರಣೆ ಹಾಕಿ. ಕರಿಬೇವು ಹಸಿಮೆಣಸು ಒಣ ಮೆಣಸು  ಹಾಕಿ ಅರಿಸಿನ ಸೇರಿಸಿ. ಇದಕ್ಕೆ ಉಪ್ಪು ಮಿಕ್ಸ್ ಮಾಡಿ... ಬೇಯಿಸಿದ ಬೇಳೆ ಹಾಕಿ ... ೫ ನಿಮಿಷ ಬೇಯಿಸಿ... ತೆಂಗಿನ ತುರಿ ಸೇರಿಸಿ...


ಒಂದು ಕಿವಿ ಮಾತು:)


ಈ ಪಲ್ಯವನ್ನು ಮಾಡಿದ ದಿನ ಶುಂಟಿ  ಚಟ್ನಿ ಯನ್ನೂ ಮಾಡಿ... ಅಧಿಕ ವಾಯು ತೊಂದರೆ ಕಾಡಿದರೂ ಕಾಡಬಹುದು....
ಅದಕ್ಕಾಗಿ ಶುಂಟಿ ಜೊತೆ ಇದ್ದರೆ  ಸೇಫ್        !


ಮಳೆಗಾಲದ ಮೋಜು.....


ಚಂದ್ರಿಕಾ ಹೆಗಡೆ

2 ಕಾಮೆಂಟ್‌ಗಳು: