12 ಜೂನ್ 2011

ಟೊಮೇಟೊ ಮಸಾಲ

ಅಗತ್ಯ:
೧.ಟೊಮೇಟೊ-೪
೨. ಬೆಳ್ಳುಳ್ಳಿ, ಶುಂಟಿ, ಕೊತ್ತಂಬರಿ ಸೊಪ್ಪು, ಜೀರಿಗೆ , ಹಸಿಮೆಣಸಿನ ಕಾಯಿ ಸೇರಿಸಿ ಮಾಡಿದ ಪೇಸ್ಟ್- ೨ ಚಮಚ
೩.ಗರಂ ಮಸಾಲ-೧ ಚಮಚ
೪. ಟೊಮೇಟೊ ಈರುಳ್ಳಿ  ಸೇರಿಸಿ ರುಬ್ಬಿದ ಚಟ್ನಿ-<ಟೊಮೇಟೊ  ೨  , ೨ ಈರುಳ್ಳಿ >
೫.ರುಚಿಗೆ ಉಪ್ಪು, ಅರಿಸಿನ ಪುಡಿ. ಸ್ವಲ್ಪ ಎಣ್ಣೆ 

ಟೊಮೇಟೊ ಈ ತರಹ ಕಟ್ ಮಾಡಿ... ಬೀಜ ತೆಗೆಯಿರಿ.

ಒಂದು ಪಾತ್ರೆಯಲ್ಲಿ ಎರಡೆನೇ ಮಿಶ್ರಣ, ೩ ಹಾಗು ೪ ಸೇರಿಸಿ. ಉಪ್ಪು ,ಅರಿಸಿನ ಪುಡಿ ಸೇರಿಸಿ... ಎಲ್ಲ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ... ಟೊಮೇಟೊ ದಲ್ಲಿ ಈ ಮಿಶ್ರಣವನ್ನು ತುಂಬಿ. ಟೊಮೇಟೊ ಬಾಯಿಯನ್ನು ಮುಚ್ಚಿ  :) ಕುಕ್ಕರನಲ್ಲಿ ೩ ಚಮಚ ಎಣ್ಣೆ ಹಾಕಿ.. ಈ ಟೊಮೇಟೊ ಹಾಕಿ ೧ ಕೂಗು ಮಾಡಿ....




ಚಪಾತಿ, ದೋಸೆ, ಅಕ್ಕಿ ರೊಟ್ಟಿ, ತಾಲಿ ಪಿಟ್ಟು ಜೊತೆಗೆ.... ಒಳ್ಳೆ....ಜೊತೆ!


ಮನೆಯ ಶಕ್ತಿ... ಮನೆಯಲ್ಲೇ ಅಡಗಿದೆ....


ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ