ಅಗತ್ಯ:
           ಮಾವಿನ ಹಣ್ಣಿನ ಹೋಳುಗಳು- ೧ ಬಟ್ಟಲು
           ತೆಂಗಿನ ಹಾಲು-೧ ಬಟ್ಟಲು
           ಸಕ್ಕರೆ ಅಥವಾ ಬೆಲ್ಲ ರುಚಿಗೆ ತಕ್ಕಸ್ಟು
           ಏಲಕ್ಕಿ ಪುಡಿ 
           ಚಿಟಿಕೆ ಉಪ್ಪು<ಸವುಳು ಮುರಿಯಲು!>
ತೆಂಗಿನ ತುರಿಯನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿ. ಅದನ್ನು ಸೋಸಿಕೊಳ್ಳಿ. ಈ ಹಾಲಿಗೆ ಮಾವಿನ ಹಣ್ಣಿನ ಚೂರುಗಳನ್ನು ಏಲಕ್ಕಿ ಪುಡಿ ಸಕ್ಕರೆ ಅಥವಾ ಬೆಲ್ಲ ಸೇರಿಸಿ. ಚಿಟಿಕೆ ಉಪ್ಪನ್ನು ಹಾಕಲು ಮರೆಯದಿರಿ.. 
ಚಪಾತಿ, ದೋಸೆ ಜೊತೆ ಒಳ್ಳೆ ಜೋಡಿ.
ಈ ಪಾಯಸಕ್ಕೆ ಬಾಳೆ ಹಣ್ಣನ್ನು ಸೇರಿಸಬಹುದು .
ಕರಿ ಈಶಾಡು ಮಾವಿನ ಹಣ್ಣಿನ ರುಚಿ....ಸದಾ.....
ಚಂದ್ರಿಕಾ ಹೆಗಡೆ