ಸ್ವಲ್ಪ ಈ ಹೆಸರಿನ ಬಗ್ಗೆ ... ಸಿರ್ಸಿ ಸಿದ್ದಾಪುರ ಕಡೆಯಲ್ಲಿ ಹಶಿ ಎಂದು ಕರೆಸಿಕೊಳ್ಳುತ್ತದೆ. ಯೆಲ್ಲಾಪುರ್ ದಲ್ಲಿ ಬಜ್ಜಿ ಎಂದು ಕರೆಯಲಾಗುತ್ತದೆ. ಬಜ್ಜಿ ಎಂದ ಮಾತ್ರಕ್ಕೆ ಕರಿದ ಪದಾರ್ಥವೆಂದು ಓದಿ ಹೋಗಬೇಕಾದ ಅಗತ್ಯವಿಲ್ಲ!
ಅಗತ್ಯಗಳು : ಹಿರೇಕಾಯಿ ಮಧ್ಯಮ ಗಾತ್ರ ೧
ತೆಂಗಿನ ತುರಿ ೧ ಬಟ್ಟಲು
ಮೊಸರು ಅಥವಾ ಮಜ್ಜಿಗೆ ೧ ಬಟ್ಟಲು
ಸ್ವಲ್ಪ ಎಣ್ಣೆ ೩-೪ ಚಮಚ
ಒಗ್ಗರಣೆಗೆ ಸಾಸಿವೆ. ಮೆಣಸು. <ಹಸಿಮೆಣಸು ಬೇಕಾದರೆ.>
ರುಚಿಗೆ ಉಪ್ಪು.
ಶುರು ಮಾಡೋಣ?:
ಹಿರೇಕಾಯಿ ಸಣ್ಣಗೆ ಹೆಚ್ಚಿ.
೨ ಚಮಚ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿ .
ತೆಂಗಿನಕಾಯಿ ತುರಿಯನ್ನು ರುಬ್ಬಿಟ್ಟುಕೊಳ್ಳಿ
ನಂತರ ಬೇಯಿಸಿಟ್ಟ ಹಿರೇಕಾಯಿ ಹೋಳುಗಳ ಜೊತೆಯಲ್ಲಿ ತೆಂಗಿನ ಕಾಯಿ ಮಿಕ್ಸ್ ಹಾಕಿ.
ಮಜ್ಜಿಗೆ ಸೇರಿಸಿ. ರುಚಿಗೆ ಅಗತ್ಯದ ಉಪ್ಪು ಸೇರಿಸಿ.
ಸಾಸಿವೆ ಒಗ್ಗರಣೆ ನೀಡಿ.
(ಇದನ್ನೇ ತಂಬಳಿ ಮಾಡಬಯಸುವವರು ಹಿರೇಕಾಯಿ ಹೋಳುಗಳನ್ನು ತೆಂಗಿನ ಕಾಯಿ ತುರಿಗಳ ಜೊತೆಯಲ್ಲಿ ರುಬ್ಬಬೇಕು. )
ತಡವಿನ್ನೇಕೆ ಸಿದ್ಧವಿದೆಯಲ್ಲ!
ಅಡುಗೆ ಮನೆಯ ಹೋರಾಟದಲ್ಲಿ ....
ಚಂದ್ರಿಕಾ ಹೆಗಡೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ