ಅಗತ್ಯ:
          ಮಾವಿನಕಾಯಿ ಹೋಳುಗಳು
           ತೆಂಗಿನತುರಿ
           ಹಸಿಮೆಣಸಿನ ಕಾಯಿ
           ಮಜ್ಜಿಗೆ
          ಕರಿಬೇವು
           ಒಗ್ಗರಣೆಗೆ ಸ್ವಲ್ಪ ಎಣ್ಣೆ, ಸಾಸಿವೆ ಇಂಗು
          ಸ್ವಲ್ಪ ಸಕ್ಕರೆ. ರುಚಿಗೆ ಅಗತ್ಯದ   ಉಪ್ಪು.
ಸರಿ ತಯಾರಿ: 
                    ಮಾವಿನಕಾಯಿ ಹೋಳುಗಳು, ಹಸಿಮೆಣಸು , ತೆಂಗಿನ ತುರಿ ಎಲ್ಲವನ್ನು ಸೇರಿಸಿ ರುಬ್ಬಿ. ಪಾತ್ರೆಯಲ್ಲಿ ಹಾಕಿ ಮಜ್ಜಿಗೆ ಸೇರಿಸಿ , ಉಪ್ಪು ,ಸಕ್ಕರೆ ಸೇರಿಸಿ.
 ಒಗ್ಗರಣೆಯನ್ನು ಸೇರಿಸಿ.( ಸ್ವಲ್ಪ ಎಣ್ಣೆ ಬಿಸಿ ಆದ ಮೇಲೆ ಸಾಸಿವೆ . ಚಟಪಟ ಅನ್ನುವಾಗ ಓಲೆ off  ಮಾಡಿ ಕರಿಬೇವು ಇಂಗು ಸೇರಿಸಿ..)
         ಬೇಸಿಗೆಯಲ್ಲಿ ಊಟಕ್ಕೊಂದು ರುಚಿ ನೀಡುವ ಮಾವಿನ ಕಾಯಿ ತಂಬುಳಿ ರೆಡಿ!
ತಂಬುಳಿ ಯ ಸವಿಯಲ್ಲಿ:
                                 ಚಂದ್ರಿಕಾ ಹೆಗಡೆ